Makeup to Shampoo: ಮಹಿಳೆಯರೇ ಎಚ್ಚರ... ವರ್ಷಕ್ಕೆ ಇದರಿಂದ 1 ಲಕ್ಷ ಜನರು ಸಾಯುತ್ತಿದ್ದಾರಂತೆ!

Phthalate: ನ್ಯೂಯಾರ್ಕ್ ವಿಶ್ವವಿದ್ಯಾಲಯ ಅಧ್ಯಯನವೊಂದನ್ನು ನಡೆಸಿದ್ದು, ಪ್ರತಿದಿನ ಪ್ಲಾಸ್ಟಿಕ್​ ವಸ್ತುಗಳನ್ನು ಬಳಕೆ ಮಾಡುತ್ತೇವೆ. ಅದರಲ್ಲೂ ಆಟಿಕೆ, ಬಟ್ಟೆ ಮತ್ತು ಶಾಂಪೂಗಳಂತ ನೂರಾರು ಉತ್ಪನ್ನಗಳಲ್ಲಿ ಕಂಡುಬರುವ ರಾಸಾಯನಿಕಗಳು ಹಾರ್ಮೋನಿಗೆ ತೊಂದರೆ ನೀಡುತ್ತಿದೆ. ಮಾತ್ರವಲ್ಲದೆ ಇದು ವ್ಯಕ್ತಿಯ ಜೀವದ ಮೇಲೆ ಪರಿಣಾಮ ಬೀರುತ್ತಿದೆ ಎಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Phthalates products: ದೈನಂದಿನ ದಿನಚರಿಯನ್ನು ಗಮನಿಸಿದಾಗ ಪ್ಲಾಸ್ಟಿಕ್​ ಬಳಕೆ ವಿಪರೀತವಾಗುತ್ತಿದೆ. ಅದರಲ್ಲೂ ಸ್ನಾನ ಮಾಡಲು ಬಳಸುವ ಶಾಂಪೂ,  ಮುಖದ ಸೌಂದರ್ಯ ಹೆಚ್ಚಿಸಲು ಬಳಸುವ ಮೇಕಪ್​ಗಳಿಗೆ ಬಳಸುವ ರಾಸಾಯನಿಕ ಥಾಲೇಟ್ಸ್​​ಗಳು ಮಾನವರ ದೇಹದ ಮೇಲೆ ಪರಿಣಾಮ ಬೀರುತ್ತಿದೆ. ಮಾತ್ರವಲ್ಲದೆ, ಈ ವಸ್ತುಗಳ ಮೇಲೆ ಪ್ರತಿದಿನ ಗೊತ್ತಿಲ್ಲದೆ ಒಗ್ಗಿಕೊಳ್ಳುತ್ತಾ ಬಂದಿದ್ದೇವೆ. ಆದರೆ ವಾರ್ಷಿಕವಾಗಿ ಇದರಿಂದ ಅಮೆರಿಕದಲ್ಲಿ ಸುಮಾರು 1 ಲಕ್ಷ ಜನರು ಸಾಯುತ್ತಿದ್ದಾರೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ.

  ನ್ಯೂಯಾರ್ಕ್ ವಿಶ್ವವಿದ್ಯಾಲಯ ಅಧ್ಯಯನವೊಂದನ್ನು ನಡೆಸಿದ್ದು, ಪ್ರತಿದಿನ ಪ್ಲಾಸ್ಟಿಕ್​ ವಸ್ತುಗಳನ್ನು ಬಳಕೆ ಮಾಡುತ್ತೇವೆ. ಅದರಲ್ಲೂ ಆಟಿಕೆ, ಬಟ್ಟೆ ಮತ್ತು ಶಾಂಪೂಗಳಂತ ನೂರಾರು ಉತ್ಪನ್ನಗಳಲ್ಲಿ ಕಂಡುಬರುವ ರಾಸಾಯನಿಕಗಳು ಹಾರ್ಮೋನಿಗೆ ತೊಂದರೆ ನೀಡುತ್ತಿದೆ. ಮಾತ್ರವಲ್ಲದೆ ಇದು ವ್ಯಕ್ತಿಯ ಜೀವದ ಮೇಲೆ ಪರಿಣಾಮ ಬೀರುತ್ತಿದೆ ಎಂದಿದೆ.

  ಜೀವಾಣುಗಳು ಇಂತಹ ವಸ್ತುಗಳ ಮೂಲಕ ದೇಹವನ್ನು ಪ್ರವೇಶಿಸಬಹುದು ಮತ್ತು ಬೊಜ್ಜು, ಮಧುಮೇಹ ಮತ್ತು ಹೃದಯ ರೋಗಗಳಿಗೆ ಸಂಬಂಧಿಸಿವೆ ಎಂದು ಪರಿಸರ ಮಾಲಿನ್ಯ ಕುರಿತಾಗಿ ಮಾಹಿತಿ ಪಸರಿಸುವ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ಹೇಳಿದೆ.

  ನ್ಯೂಯಾರ್ಕ್ ಯೂನಿವರ್ಸಿಟಿಯ ಗ್ರಾಸ್ಮನ್ ಸ್ಕೂಲ್ ಆಫ್ ಮೆಡಿಸಿನ್ ನಡೆಸಿದ ಸಂಶೋಧನೆ ನಡೆಸಿದ್ದು, ಅದರಲ್ಲಿ 55 ರಿಂದ 64 ವರ್ಷ ವಯಸ್ಸಿನ ಸುಮಾರು 5,000 ವಯಸ್ಕರ ಮೇಲೆ ಸಂಶೋಧನೆ ನಡೆಸಲಾಯಿತು. ಸಂಶೋಧನೆಯ ಫಲವಾಗಿ ಮೂತ್ರದಲ್ಲಿ ಥಾಲೇಟ್ ಅಧಿಕ ಸಾಂದ್ರತೆ ಹೊಂದಿರುವವರು ಹೃದಯ ಕಾಯಿಲೆಯಿಂದ ಸಾಯುವ ಸಾಧ್ಯತೆ ಹೆಚ್ಚು ಎಂದು ತಿಳಿದುಬಂದಿದೆ.

  ಅಧ್ಯಯನದ ಪ್ರಮುಖ ಲೇಖಕ ಲಿಯೊನಾರ್ಡೊ ಟ್ರಾಸಾಂಡೆ ಈ ಬಗ್ಗೆ ಮಾತನಾಡಿದ್ದು, "ನಮ್ಮ ಸಂಶೋಧನೆ ಮೂಲಕ ಥಾಲೇಟ್ಸ್ ಮಾನವನ ಸಾವಿಗೆ ಕಾರಣವಾಗುತ್ತಿದೆ, ವಿಶೇಷವಾಗಿ ಹೃದಯ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ" ಎಂದರು.

  "ಇಲ್ಲಿಯವರೆಗೆ, ಥಾಲೇಟ್ಸ್​ನಿಂದ ಸಾವು ಸಂಭವಿಸುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ  ಹೃದಯ ಸಂಬಂಧಿಸಿದ ಕಾಯಿಲೆ ಮತ್ತು ಸಾವಿಗೆ ಪ್ರಮುಖ ಕಾರಣವಾಗಿದೆ ಎಂದು ಅಂದುಕೊಂಡಿರಲಿಲ್ಲ‘‘ ಎಂದು ಲಿಯೊನಾರ್ಡೊ ಟ್ರಾಸಾಂಡೆ ಹೇಳಿದರು.

  "ನಮ್ಮ ಸಂಶೋಧನೆಯ ಮೂಲಕ ಸಮಾಜದ ಮೇಲೆ ಈ ರಾಸಾಯನಿಕದ ಪ್ರಮಾಣವು ನಾವು ಮೊದಲು ಯೋಚಿಸಿದ್ದಕ್ಕಿಂತ ಹೆಚ್ಚಾಗಿದೆ ಎಂದು ಸೂಚಿಸುತ್ತದೆ. ವಿಷಕಾರಿ ಥಾಲೇಟ್ಸ್‌ಗಳಿಗೆ ಒಗ್ಗಿಕೊಳ್ಳುವುದನ್ನು  ತಡೆಯುವುದರಿಂದ ಅಮೆರಿಕನ್ನರ ದೈಹಿಕ ಮತ್ತು ಆರ್ಥಿಕ ಯೋಗಕ್ಷೇಮವನ್ನು ರಕ್ಷಿಸಲು ಸಹಾಯ ಮಾಡಬಹುದು‘‘ ಎಂದಿದ್ದಾರೆ.

  ಇದನ್ನು ಓದಿ: Secret Career: ಸುಸಂಸ್ಕೃತ ಕುಟುಂಬದ ಹೆಣ್ಣು ಮಗಳು ಪೋರ್ನ್ ಸ್ಟಾರ್ ಆಗಿದ್ದು ಹೇಗೆ? ಅದರ ಹಿಂದಿದೆ ಬಲು ರೋಚಕ ಕಥೆ..!

  ಇತರ ಅಧ್ಯಯನಗಳು ಈಗಾಗಲೇ ವಯಸ್ಕ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆಗೊಳಿಸುವುದರೊಂದಿಗೆ ವರ್ಷಕ್ಕೆ 10,000 ಕ್ಕೂ ಹೆಚ್ಚು ಸಾವುಗಳಿಗೆ ಥಾಲೇಟ್ಸ್ ‌ಗಳನ್ನು ಕಾರಣವಾಗಿದೆ.

  ಥಾಲೇಟ್ಸ್‌ಗಳಿಂದ ಉಂಟಾಗುವ ಆರ್ಥಿಕ ನಷ್ಟವು 40 ಶತಕೋಟಿ ಮತ್ತು 47 ಶತಕೋಟಿಗಳ ನಡುವೆ ಇದೆ ಎಂದು ಹೇಳಲಾಗುತ್ತಿದೆ. ಅಂದರೆ ಈ ಹಿಂದೆ ಅಂದಾಜಿಸಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ತಿಳಿದಬಂದಿದೆ. ಒಟ್ಟಿನಲ್ಲಿ ದೈನಂದಿನ ದಿನಚರಯಲ್ಲಿ ಪ್ಲಾಸ್ಟಿಕ್​ ಬಳಕೆ ವಿಪರೀತವಾಗುತ್ತಿದೆ.

  ಶಾಂಪೂ, ಮೇಕಪ್​, ಪಾತ್ರೆಗಳು, ಬಾಟಲಿಗಳು ಹೀಗೆ ಎಲ್ಲಾ ವಸ್ತುಗಳು ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್​ ಕಂಟೆಂಟ್​ಗಳನ್ನು ಒಳಗೊಂಡಿದೆ. ಇದರಿಂದಾಗಿ ಜನರಿಗೆ ನೇರವಾಗಿ ಅಲ್ಲದೆ ಇದ್ದರೆ ಗೊತ್ತಿಲ್ಲದೆ ಸಮಸ್ಯೆಗೆ ಕಾರಣವಾಗುತ್ತಿದೆ.

  ಪ್ಲಾಸ್ಟಿಕ್​ ಬಳಕೆಯಿಂದ ಪ್ರಕೃತಿಯ ಮೇಲೂ ಪರಿಣಾಮ ಬೀರುತ್ತಿದೆ. ಕರಗದ ಪ್ಲಾಸ್ಟಿಕ್​ ಭೂಮಿಗೆ ಮಾರಕ ಎಂಬುದು ಗೊತ್ತಿದ್ದರು ಅದರ ಬಳಕೆ ಮಾತ್ರ ಕಡಿಮೆಯಾಗಿಲ್ಲ. ಹೆಚ್ಚಿನ ಜನರು ಅಂಗಡಿಗಳಲ್ಲಿ ಸಾಮಾಗ್ರಿಗಳನ್ನು ನೀಡಲು ಪ್ಲಾಸ್ಟಿಕ್​ ನೀಡುತ್ತಿದ್ದಾರೆ. ಆದರೆ ಇದರಿಂದ ಸಮಸ್ಯೆಯಾಗುತ್ತಿದೆ.

  ಇದನ್ನು ಓದಿ: Airtel ಬಳಕೆದಾರರಿಗೆ 6 ಸಾವಿರ ರೂ.ಗಳ ಕ್ಯಾಶ್‌ಬ್ಯಾಕ್ ಆಫರ್: ಇಲ್ಲಿದೆ ಸಂಪೂರ್ಣ ವಿವರ

  ನೆಲ, ಅರಣ್ಯ, ಸಮುದ್ರದಲ್ಲೂ ಪ್ಲಾಸ್ಟಿಕ್​ಗಳೆ ಸಿಗುತ್ತಿದೆ. ಇದರಿಂದ ಜೀವಿಗಳ ಜೀವನಕ್ಕೆ ತೊಂದರೆಯಾಗುತ್ತಿದೆ ಮತ್ತೊಂದೆಡೆ ಮಾನವನ ಅಳಿವಿಗೂ ಪ್ಲಾಸ್ಟಿಕ್​ ಮಾರಕವಾಗಿದೆ ಎಂದು ತಿಳಿದಿದ್ದರು ಇದರ ಬಳಕೆ ಮಾತ್ರ ಕಡಿಮೆಯಾಗುತ್ತಿರುವುದು ಕಂಡುಬಂದಿಲ್ಲ.
  Published by:Harshith AS
  First published: