ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ನಾನಾ ಪೋಸ್ಟ್‌ಗಳು, ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇದೇ ರೀತಿ ಅಮೆರಿಕದ ನ್ಯೂಯಾರ್ಕ್ ಪೊಲೀಸರ ಕೆಲಸಕ್ಕೆ ತೀವ್ರ ಶ್ಲಾಘನೆ ವ್ಯಕ್ತವಾಗುತ್ತಿದೆ. ಹಾಗಂತ ದೊಡ್ಡ ಕಳ್ಳನನ್ನೋ, ಅತ್ಯಾಚಾರಿಯನ್ನೋ ಹಿಡಿದುಹಾಕಿದ್ದಾರೆ ಅನ್ಕೋಬೇಡಿ. ಅವರು ಬಾತುಕೋಳಿಗಳನ್ನು ರಕ್ಷಿಸಿದ್ದಾರೆ.
ಹೌದು, ನ್ಯೂಯಾರ್ಕ್‌ನ ಪೊಲೀಸ್ ಅಧಿಕಾರಿಗಳು ಕಳೆದುಹೋದ ಒಂದು ಡಜನ್ ಬಾತುಕೋಳಿಗಳನ್ನು ರಕ್ಷಿಸಿ ಮತ್ತು ಅವರ ತಾಯಿಯೊಂದಿಗೆ ಮತ್ತೆ ಒಂದಾಗುವುದನ್ನು ತೋರಿಸುತ್ತದೆ. ಮ್ಯಾನ್‌ಹಟ್ಟನ್ ಬರ್ಡ್ ಅಲರ್ಟ್ ಇದನ್ನು ಕ್ಯಾಪ್ಷನ್ ಮತ್ತು ವಿಡಿಯೋಗಳೊಂದಿಗೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ನಂತರ ವಾರಾಂತ್ಯದಲ್ಲಿ ನಡೆದ ಘಟನೆ ವೈರಲ್ ಆಗಿದ್ದು, ನೆಟ್ಟಿಗರ ಹೃದಯವನ್ನು ಗೆದ್ದಿದೆ.
ಮ್ಯಾನ್‌ಹಟ್ಟನ್ ಬರ್ಡ್ ಅಲರ್ಟ್‌ನ ಸಂಸ್ಥಾಪಕ ಡೇವಿಡ್ ಬ್ಯಾರೆಟ್ ಚಿತ್ರೀಕರಿಸಿದ ದೃಶ್ಯಗಳ ಮೂಲಕ, ಬಾತುಕೋಳಿಗಳು ತಮ್ಮ ತಾಯಿಯಿಂದ ದೂರವಾಗಿ ಸೆಂಟ್ರಲ್ ಪಾರ್ಕ್ ಅನ್ನು ತೊರೆದು ಮ್ಯಾನ್‌ಹಟ್ಟನ್‌ನ ಅಪ್ಪರ್ ಈಸ್ಟ್ ಸೈಡ್‌ನ ಭಾಗಕ್ಕೆ ಹೋಗಿ ಅಮ್ಮನಿಗಾಗಿ ಅಲೆದಾಡಿವೆ. ಲೆಕ್ಸಿಂಗ್ಟನ್ ಅವೆನ್ಯೂದಲ್ಲಿ ಈ ರೀತಿ ಡಜನ್‌ಗಟ್ಟಲೆ ಬಾತುಕೋಳಿ ಮರಿಗಳು ಕಾಣಿಸಿಕೊಂಡವು.
ಅಧಿಕಾರಿಗಳಲ್ಲಿ ಒಬ್ಬರು ಬೀದಿಯಲ್ಲಿ ಕ್ಯಾರಿಯರ್‌ನಲ್ಲಿ ಮರಿ ಬಾತುಕೋಳಿಗಳನ್ನು ತುಂಬಿಕೊಂಡು ನಡೆದುಕೊಂಡು ಹೋಗುವುದನ್ನು ಮೈಕ್ರೋಬ್ಲಾಗಿಂಗ್ ತಾಣದಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ನೋಡಬಹುದು. ಅಲ್ಲಿ ತಾಯಿ ಬಾತುಕೋಳಿಯೂ ಮರಿಗಳ ಶಬ್ದ ಕೇಳಿಸಿಕೊಂಡು ಅಧಿಕಾರಿಯ ಹಿಂದೆಯೇ ಹೋಗುತ್ತಿರುತ್ತದೆ. ಅಧಿಕಾರಿಯು ರಸ್ತೆಗಳನ್ನು ದಾಟಿ ನಂತರ ಸೆಂಟ್ರಲ್ ಪಾರ್ಕ್‌ನಲ್ಲಿರುವ ಕನ್ಸರ್ವೇಟರಿ ವಾಟರ್‌ನಲ್ಲಿ ಮರಿಗಳನ್ನು ಬಿಡಲಾಗುತ್ತದೆ. ಈ ಮೂಲಕ ನ್ಯೂಯಾರ್ಕ್ ಪೊಲೀಸರು ಕುಟುಂಬವನ್ನು ಮತ್ತೆ ಒಂದುಗೂಡಿಸಿದರು. ಆದರೆ, ಬಾತುಕೋಳಿಗಳ ಕುಟುಂಬವು ಉದ್ಯಾನದ ಹೊರಗೆ ಎಷ್ಟು ಸಮಯದವರೆಗೆ ಅಲೆದಾಡುತ್ತಿತ್ತು ಎಂಬುದು ಸ್ಪಷ್ಟವಾಗಿಲ್ಲ.
ಮತ್ತೊಂದು ವೀಡಿಯೊದಲ್ಲಿ, ತಾಯಿ ಮಲ್ಲಾರ್ಡ್ ಮತ್ತು ರಕ್ಷಿಸಿದ ಅವರ ಮರಿಗಳು ಸೆಂಟ್ರಲ್ ಪಾರ್ಕ್‌ನ ಕನ್ಸರ್‌ವೇಟರಿ ವಾಟರ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮ್ಯಾನ್‌ಹಟ್ಟನ್ ಬರ್ಡ್ ಅಲರ್ಟ್ ತಿಳಿಸಿದೆ.
Officers from the @NYPD19Pct rescued a family of a dozen ducklings this morning that had wandered past Lexington Avenue. They put the ducklings in a carrier and mom heard 🔊 their peeps and followed them back to Central Park, by Conservatory Water! pic.twitter.com/MJmr7lK5Og
— Manhattan Bird Alert (@BirdCentralPark) May 9, 2021
ಸಾಮಾಜಿಕ ಬಳಕೆದಾರರೊಬ್ಬರು ಬಾತುಕೋಳಿಗಳಿಗೆ ತಾಯಿಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.
Another heartwarming #MothersDay story!
— David Lei (@davidlei) May 9, 2021
ಮೂರನೆಯ ಬಳಕೆದಾರರು ತಾಯಿ ಬಾತುಕೋಳಿ ತಮ್ಮ ಪುನರೇಕೀಕರಣದ ನಂತರ “ತನ್ನ ಕಿಡ್ಡೋಸ್‌ನೊಂದಿಗೆ” ತನ್ನ ದಿನವನ್ನು ಆನಂದಿಸುತ್ತಿದೆ ಎಂದು ಆಶಿಸಿದರು. ಅಲ್ಲದೆ, NYPD ಯನ್ನು ಶ್ಲಾಘಿಸಿದರು ಮತ್ತು “ಗ್ರೇಟ್ ಜಾಬ್'' ಎಂದು ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ