Pig Love: ಹಂದಿ ನನ್ನ ಜೊತೆಗೆ ಇರಬೇಕು ಎಂದು ಕೋರ್ಟ್​ ಮೆಟ್ಟಿಲು ಹತ್ತಿದ; ಏನಿದು ವಿಚಿತ್ರ ಪ್ರಕರಣ...

50 ಕೆಜಿ ತೂಕದ ಡೊಳ್ಳು ಹೊಟ್ಟೆಯ ಹಂದಿಯನ್ನು ಜೊತೆಗೆ ಇರಿಸಿಕೊಳ್ಳಲು ಕಾನೂನು ಹೋರಾಟ (Legal Battle) ನಡೆಸುತ್ತಿದ್ದಾರೆ

ಪಾಟ್‍ಬೆಲ್ಲಿಡ್ ಹಂದಿ

ಪಾಟ್‍ಬೆಲ್ಲಿಡ್ ಹಂದಿ

  • Share this:
ಜನ ಆಸ್ತಿಗಾಗಿ, ಹಣಕ್ಕಾಗಿ, ಅಧಿಕಾರಕ್ಕಾಗಿ. . . ಇನ್ನೂ ಏನೇನಕ್ಕೋ ಕಾನೂನು ಹೋರಾಟ ನಡೆಸುತ್ತಾರೆ. ಆದರೆ ಇಲ್ಲೊಬ್ಬರು ಹಂದಿಗಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಹಂದಿಯ (Pig) ಕುರಿತ ಪ್ರಕರಣ ಅಂದರೆ ಇದ್ಯಾವುದೋ ಕಸಾಯಿ ಖಾನೆಯವರ ನಡುವಿನ ಜಗಳ ಎಂದು ಉಡಾಫೆಯಿಂದ ನೋಡಬೇಡಿ. ಇದು ಹಂದಿ ವ್ಯಾಪಾರದ ಜಗಳವಲ್ಲ, ಹಂದಿಯ ಮೇಲಿನ ಪ್ರೀತಿಗಾಗಿ ನಡೆಸುತ್ತಿರುವ, ಭಾವನೆ ಮತ್ತು ಮಾನವೀಯತೆಗೆ (Humanity) ಸಂಬಂಧಿಸಿದ ಹೋರಾಟ. ಅಮೆರಿಕದ ನ್ಯೂಯಾರ್ಕ್ (New York )  ವ್ಯಕ್ತಿಯೊಬ್ಬರು ತಮ್ಮ 50 ಕೆಜಿ ತೂಕದ ಡೊಳ್ಳು ಹೊಟ್ಟೆಯ ಹಂದಿಯನ್ನು ಜೊತೆಗೆ ಇರಿಸಿಕೊಳ್ಳಲು ಕಾನೂನು ಹೋರಾಟ (Legal Battle) ನಡೆಸುತ್ತಿದ್ದಾರೆ. ಅದನ್ನು ತನ್ನ ಜೊತೆ ಭಾವನಾತ್ಮಕ ಪ್ರಾಣಿಯನ್ನಾಗಿ ಇಟ್ಟುಕೊಳ್ಳಬೇಕು ಎಂಬುವುದು ಅವರ ಆಸೆಯಂತೆ.

ಹಂದಿಗಾಗಿ ಕಾನೂನು ಹೋರಾಟ

ಪ್ರೀತಿಯ ಹಂದಿಗಾಗಿ ಕಾನೂನು ಸಮರ ಸಾರಿರುವ ಆ ವ್ಯಕ್ತಿಯ ಹೆಸರು ವೈವನ್ ಫ್ಲಾಟ್. ಯಕಶ್ಚಿತ್ ಹಂದಿಗಾಗಿ, ಕೋರ್ಟು ಕಚೇರಿಗೆ ದುಡ್ಡು ದಂಡ ಮಾಡುವ ಖಯಾಲಿ ಈ ಮನುಷ್ಯನಿಗೇಕೆ ಅನ್ನುತ್ತೀರಾ? ವೈವನ್ ಪಾಲಿಗೆ ಅದು ಯಕಶ್ಚಿತ್ ಹಂದಿಯಲ್ಲ, ಅದು ಅವರಕುಟುಂಬ! ವಿಚ್ಚೇದನ ಮತ್ತು ತಾಯಿಯ ಮರಣದ ನೋವಿನಿಂದ ಹೊರಬರಲು ಸಹಕರಿಸಿದ ಮೂಕ ಸಂಗಾತಿ. ಆ ವಿಯೆಟ್ನಾಮೀಸ್ ಪಾಟ್ ಬೆಲ್ಲೀಡ್ ಹಂದಿಯ ಹೆಸರು ಎಲ್ಲಿ.

ಅಕ್ರಮವಾಗಿ ಹಂದಿ ಸಾಕಿದ ಮಹಿಳೆ

ಆದರೆ, ಫಾರ್ಮ್‍ನಲ್ಲಿ ಸಾಕುವಂತ ಪ್ರಾಣಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಆ ಪ್ರಾಂತ್ಯದ ಕಾನೂನಿಗೆ ವಿರುದ್ಧವಂತೆ. ಹಾಗಾಗಿ, ಪ್ಲಾಟ್ ತಮ್ಮೊಂದಿಗೆ ಅಕ್ರಮವಾಗಿ ಫಾರ್ಮ್ ಪ್ರಾಣಿಯನ್ನು ಇಟ್ಟುಕೊಂಡಿದ್ದಾರೆ ಎಂದು, ಅವರು ವಾಸಿಸುತ್ತಿರುವ ಕ್ಯಾನ್‍ಜೊಹರಿ ಎಂಬ ಹಳ್ಳಿಯ ಅಧಿಕಾರಿಗಳು ದೂರಿದ್ದಾರೆ. ಈ ಕಾರಣಕ್ಕಾಗಿ, ಇದೀಗ ಆ ಹಂದಿಯ ಸ್ವಾಧೀನಕ್ಕಾಗಿ ಕಾನೂನು ಹೋರಾಟ ನಡೆಯುತ್ತಿದೆ. 54 ವರ್ಷದ ಫ್ಲಾಟ್ , 2019ರಿಂದ ಆ ಹಂದಿಯನ್ನು ತಮ್ಮ ಜಾಗದಲ್ಲಿ ಕಾನೂನು ಬಾಹಿರವಾಗಿ ಸಾಕುತ್ತಿದ್ದಾರೆ ಎಂದು ಹಳ್ಳಿಯ ಕೋಡ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನು ಓದಿ: ಬಸ್​​ ಮೂಲಕವೇ Delhi to London ಪ್ರವಾಸ ನಡೆಸಿ ; ಹೇಗಿರತ್ತೆ ಗೊತ್ತಾ ಈ ರೋಚಕ Road Trip

ಫ್ಲಾಟ್ , ಹಂದಿಯನ್ನು ಸಾಕುತ್ತಿದ್ದದ್ದನ್ನು ಗಮನಿಸಿದ ಆ ಅಧಿಕಾರಿ, ಮರಳಿ ಆರು ತಿಂಗಳ ಬಳಿಕ ನೋಡಿದಾಗಲೂ ಹಂದಿ ಫ್ಲಾಟ್ ವಶದಲ್ಲೇ ಇತ್ತಂತೆ. ಹಾಗಾಗಿ, ಗ್ರಾಮದಲ್ಲಿನ ಕೃಷಿ ಪ್ರಾಣಿಗಳನ್ನು ಹೊರತು ಪಡಿಸಿ, ಫಾರ್ಮ್ ಪ್ರಾಣಿ ಹಂದಿಯನ್ನು ಸಾಕುವುದು ಕಾನೂನು ಬಾಹಿರ ಎಂದು ಆ ಅಧಿಕಾರಿ ಫ್ಲಾಟ್‍ಗೆ ಔಪಚಾರಿಕ ನೋಟೀಸ್ ನೀಡಿದರು.

ಗಂಭೀರ ತಿರುವು ಪಡೆದ ಪ್ರಕರಣ

ಎರಡು ವರ್ಷಗಳ ಬಳಿಕ ಈಗ ಫ್ಲಾಟ್ ನ್ಯಾಯಾಲಯಕ್ಕೆ ಹೋಗಲು ಸಿದ್ಧವಾಗಿದ್ದಾರೆ. ತನ್ನ ಹಂದಿ ಸ್ವಚ್ಚವಾಗಿದೆ ಮತ್ತು ಜಾಣೆ ಕೂಡ, ಹಾಗಾಗಿ ಗ್ರಾಮಸ್ಥರು ಅದನ್ನು ಇಷ್ಟಪಡುತ್ತಿದ್ದಾರೆ ಎಂಬುವುದು ಅವರ ಅನಿಸಿಕೆ. ಹಲವಾರು ಮಂದಿ ನೆರೆಹೊರೆಯವರು ಕೂಡ , ಎಲ್ಲಿ ತಮಗೆ ಇಷ್ಟ ಎಂಬ ಅಫಿಡವಿಟ್‍ಗೆ ಸಹಿ ಹಾಕಿದ ಬಳಿಕ, ಈ ವಿಷಯ ಗಂಭೀರ ತಿರುವುದು ಪಡೆದುಕೊಂಡಿತು. ಈ ಪ್ರಕರಣ ಕ್ರಿಮಿನಲ್ ವಿಚಾರಣೆಗೆ ಹೋಗಬಹುದು. ಆದರೆ ಈಗಾಗಲೇ ಇದು ಹಂದಿ ಸಮರ್ಥಕರ ಗಮನವನ್ನು ಕೂಡ ಸೆಳೆದಿದೆ.

ಇದನ್ನು ಓದಿ: ಈ ಕಾರಣಕ್ಕೆ Biscuit​ನಲ್ಲಿ ಈ ರೀತಿ ಚುಕ್ಕಿ ಚುಕ್ಕಿ ರಂಧ್ರ ಇರತ್ತಂತೆ!

“ಯಾವತ್ತೂ ನನ್ನ ಕುಟುಂಬದ ಭಾಗವಾಗಿರುವ ಯಾರನ್ನಾದರೂ ಬಿಟ್ಟುಕೊಡುವ ಕನಸನ್ನೂ ಕೂಡ ಕಾಣಲಾರೆ. ಅವಳು ತುಂಬಾ ಜಾಣೆ. ಅವಳು ನನ್ನ ನಾಯಿಗಳಿಗಿಂತಲೂ ಹೆಚ್ಚು ಬುದ್ಧಿವಂತಳು. ನೀವು ಬೇಸರದಲ್ಲಿದ್ದಾಗ ಅವಳು ಸಮಾಧಾನ ಮಾಡಬಲ್ಲಳು ಎಂದು ನನಗೆ ಅನಿಸುತ್ತದೆ, ಏಕೆಂದರೆ ಅವಳು ನಿಮ್ಮ ಬಳಿಗೆ ಬಂದು ಅಂಟಿಕೊಂಡಿರಲು ಬಯಸುತ್ತಾಳೆ” ಎಂದು ಫ್ಲಾಟ್ ಹೇಳಿದ್ದಾರೆ.

ಹಂದಿಯೊಂದಿಗೆ ಭಾವನಾತ್ಮಕ ನಂಟು

ಫ್ಲಾಟ್ ಅವರು ದಕ್ಷಿಣ ಕೆರೋಲಿನಾದಲ್ಲಿ ವಾಸಿಸುತ್ತಿದ್ದಾಗ , 2018ರಲ್ಲಿ ಎಲ್ಲಿಯನ್ನು ಪಡೆದರು. ಆ ಬಳಿಕ ಅವರು ಕ್ಯಾನ್‍ಜೊಹರಿಗೆ ವಾಸ್ತವ್ಯ ಬದಲಾಯಿಸಿದರು. ಎಲ್ಲಿ , ಕಪ್ಪು ಮೈಗೂದಲು ಮತ್ತು ಗೊರಸುಗಳನ್ನು ಹೊಂದಿರುವ ಡೊಳ್ಳು ಹೊಟ್ಟೆ ತಳಿಯ ಹಂದಿ.

ವಿಶ್ವಾದ್ಯಂತ ಹೆಚ್ಚಿನ ಜನರು, ತಮ್ಮ ಮನೆಯಲ್ಲಿ ವಿವಿಧ ರೀತಿಯ ಪ್ರಾಣಿಗಳನ್ನು ಭಾವನಾತ್ಮಕ ಬೆಂಬಲದ ಪ್ರಾಣಿಗಳನ್ನಾಗಿ ಇಟ್ಟುಕೊಳ್ಳುತ್ತಾರೆ. ಅಂತವರಲ್ಲಿ ಕೆಲವರು ತಮ್ಮ ಪ್ರಾಣಿಗಳನ್ನು ಸಾರ್ವಜನಿಕ ಸ್ಥಳಗಳಿಗೆ ಕರೆದುಕೊಂಡು ಹೋದಾಗ, ನಗರಗಳಲ್ಲಿ ಅಥವಾ ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳಿಂದ ತಡೆಯಲ್ಪಟ್ಟಿದ್ದೂ ಉಂಟು.
Published by:Seema R
First published: