ಈ ಜನವರಿಯಲ್ಲಿ, #BYJUSYoungGenius2 ಸಂಪೂರ್ಣ-ಹೊಸ ಸೀಸನ್‌ನೊಂದಿಗೆ ಮರಳುತ್ತಿರುವುದರಿಂದ ಇನ್ನಷ್ಟು ರೋಮಾಂಚನ ಮತ್ತು ರೋಚಕತೆ ಕಾದಿದೆ

ಸೀಸನ್ 2, ಒಲಿಂಪಿಕ್ ಚಾಂಪಿಯನ್‌ಗಳು, ಚಿತಪರಿಚಿತ ನಟ/ನಟಿಯರು ಹಾಗೂ ಮಾಜಿ ಕ್ರೀಡಾ ಸಾಧಕರನ್ನು ಒಳಗೊಂಡ ಅತಿಥಿ ಸೆಲೆಬ್ರಿಟಿಗಳೊಂದಿಗೆ ಬೃಹತ್ ಸ್ವರೂಪದಲ್ಲಿ ಸಜ್ಜಾಗುತ್ತಿದೆ.

ಬೈಜೂಸ್ ಯಂಗ್ ಜೀನಿಯಸ್

ಬೈಜೂಸ್ ಯಂಗ್ ಜೀನಿಯಸ್

  • Share this:
    ತನ್ನ ಮೊದಲ ಸೀಸನ್‌ನಲ್ಲಿ ದೊರೆತ ಅಭೂತಪೂರ್ವ ಯಶಸ್ಸು ಹಾಗೂ ಹಲವಾರು ಪುರಸ್ಕಾರಗಳ ನಂತರ, ನಿಮ್ಮನ್ನು ಹಿಂದೆಂದಿಗಿಂತಲೂ ಹೆಚ್ಚು ರೋಮಾಂಚನಗೊಳಿಸಲು, News 18, ಅಸಾಧಾರಣ ಪ್ರತಿಭೆಯ ಮಕ್ಕಳನ್ನು ಒಳಗೊಂಡಿರುವ BYJU'S Young Genius ಸೀಸನ್2 ಅನ್ನು ಮರಳಿ ತರುತ್ತಿದೆ.

    ನೀವು ರೋಮಾಂಚನ, ಉತ್ಸಾಹ, ಸಾಧನೆಗಳು ಮತ್ತು ಅಗಾಧ ಪ್ರಮಾಣದ ಶಕ್ತಿಯನ್ನು ವೇದಿಕೆಯ ಮೇಲೆ ತಂದರೆ ಏನಾಗುತ್ತದೆ? ಮಕ್ಕಳು ಎಂದು ನೀವು ಊಹಿಸಿದ್ದರೆ, ಅದು ಸರಿಯಾಗಿದೆ ಹಾಗೂ ಒಂದು ವೇಳೆ ನೀವು ಯುವ ಮೇಧಾವಿಗಳ ಕುರಿತು ಯೋಚಿಸಿದ್ದರೆ ನೀವು ಖಂಡಿತಾ ಹಣದ ಬಗ್ಗೆಯೂ ಊಹಿಸಿರುತ್ತೀರಿ. ಇದೆಲ್ಲದರ ನಂತರ, ಏಷ್ಯಾದ ಅತ್ಯುತ್ತಮ ಮಕ್ಕಳ ಕಾರ್ಯಕ್ರಮವಾದ BYJU'S Young Genius ನ ಮೊದಲ ಸೀಸನ್, ಭಾರತದ ಯುವ ಪೀಳಿಗೆಯ ಹಿಂದೆಂದೂ ಕಂಡಿರದ ಮುಂದೆ ಕಾಣಲಾಗದಂತಹ ಅವತಾರದಲ್ಲಿ ಆಳವಾದ ಕೌಶಲಗಳನ್ನು ಪ್ರದರ್ಶಿಸಿತ್ತು.

    ಸಂಕೀರ್ಣ ಸಂಖ್ಯೆಗಳನ್ನು ಕ್ಷಣಾರ್ಧದಲ್ಲಿ ಲೆಕ್ಕ ಮಾಡುವ ತನ್ನ ಅಸಾಧಾರಣ ಸಾಮರ್ಥ್ಯದಿಂದಾಗಿ ಅವನನ್ನು ಶ್ರೇಷ್ಠ ಗಣಿತಜ್ಞರಾದ ಶಕುಂತಲಾ ದೇವಿ ಅವರೊಂದಿಗೆ ಹೋಲಿಸಲಾಗಿರುವ 15 ವರ್ಷ ವಯಸ್ಸಿನ ಚಿರಾಗ್ ರಾಠಿ ಅಥವಾ 180 IQ ಸ್ಕೋರ್ ಇರುವ, ಮೆನ್ಸಾ ಕ್ಲಬ್‌ನ ಭಾಗವಾಗಿರುವ ಅತ್ಯಂತ ಕಿರಿಯ ಭಾರತೀಯ ಎಂಬ ಕೀರ್ತಿಗೆ ಪಾತ್ರವಾಗಿರುವ, ಹೆಚ್ಚೆಂದರೆ ಆರು ವರ್ಷ ಆಗಿರುವ ರಿಷಿ ಶಿವ್ ಪ್ರಸನ್ನ, ಪುಸ್ತಕವೊಂದನ್ನು ಬರೆದಿದ್ದಾನೆ ಹಾಗೂ ತನ್ನದೇ ಆದ ಒಂದು ಯೂಟ್ಯೂಬ್ ಚಾನಲ್ ಕೂಡ ಹೊಂದಿದ್ದಾನೆ ಎಂಬುದನ್ನು ನೆನಪಿಡಿ. ಸೀಸನ್ 1 ರಲ್ಲಿ BYJU'S Young Genius ಲೈಮ್‌ಲೈಟ್‌ಗೆ ತಂದ ಹಲವು ಮಕ್ಕಳಲ್ಲಿ ಇವರು ಕೆಲವು ಉದಾಹರಣೆ ಮಾತ್ರ.

     BYJU'S Young Genius ಬಗ್ಗೆ ಎಲ್ಲವೂ ಇಲ್ಲಿದೆ – 

    ಒಂದು ನಿರ್ದಿಷ್ಟ ಕೌಶಲವನ್ನು ಕರಗತ ಮಾಡಿಕೊಂಡಿರುವ ಅಸಾಧಾರಣ ಮಕ್ಕಳ ಪ್ರತಿಭೆಯನ್ನು BYJU'S Young Genius ಒಳಗೊಳ್ಳುತ್ತದೆ. ಅಂತಿಮವಾಗಿ, ಈ ಪ್ರತಿಭೆಗಳು ತಮ್ಮ ಅಸಾಧಾರಣ ಸಾಧನೆಯನ್ನು ನಿರೂಪಿಸಲು - BYJU'S Young Genius ವೇದಿಕೆಯನ್ನು ಪಡೆಯುತ್ತಾರೆ, ಆ ಮೂಲಕ ಸೆಲೆಬ್ರಿಟಿ ಅತಿಥಿಗಳು ಹಾಗೂ ಪ್ರೇಕ್ಷಕರನ್ನು ತಮ್ಮ ಸಾಧನೆ ಮತ್ತು ಕೌಶಲಗಳಿಂದ ಬೆರಗಾಗಿಸುತ್ತಾರೆ.

    ಈ ಶೋ ಹಲವಾರು ಮಕ್ಕಳು ಉತ್ತೇಜನ ಪಡೆದುಕೊಳ್ಳಲು ಹಾಗೂ ತಮ್ಮದೇ ಆಯ್ಕೆಯ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಲು ಪ್ರಯತ್ನಿಸುವಾಗ ಅಸಾಧಾರಣ ಸಾಮರ್ಥ್ಯ ಪ್ರದರ್ಶಿಸಲು ಪ್ರೇರೇಪಿಸಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಇಂತಹ ಅದ್ಭುತ ಸಾಧಕರು ತಮ್ಮ ವಿಶಿಷ್ಟ ಕೌಶಲಗಳನ್ನು ಪ್ರದರ್ಶಿಸಲು ಈ ಶೋ ಒಂದು ಅತ್ಯುತ್ತಮ ವೇದಿಕೆಯಾಗಿದೆ. 

    ಸೀಸನ್ 2 ಬಗ್ಗೆ ನಾವೇಕೆ ಉತ್ಸಾಹಿತರಾಗಿದ್ದೇವೆ – 

    ಸೀಸನ್ 1 ರ ಅಸಾಧಾರಣ ಪ್ರತಿಭೆಯ ಮಕ್ಕಳು ಈಗಾಗಲೇ ಮನೆಮಾತಾಗಿದ್ದಾರೆ ಹಾಗೂ ಯುವ ಅಭಿಮಾನಿಗಳ ಇಡೀ ಸಮೂಹವನ್ನೇ ಉತ್ತೇಜಿಸುವ ವ್ಯಕ್ತಿತ್ವಗಳಾಗಿರುವಾಗ, ಅನ್ವೇಷಣೆ ಮಾಡುವುದು ಮತ್ತು ದೇಶದ ಅಸಾಧಾರಣ ಮೇಧಾವಿಗಳಿಗೆ ವೇದಿಕೆ ಒದಗಿಸುವ ಕೆಲಸವು News18 Network ನ ಉಪಕ್ರಮವಾಗಿರುವ BYJU'S Young Genius ಸೀಸನ್ 2 ದೊಂದಿಗೆ ಮುಂದುವರಿಯಲಿದೆ. 

    ಸೀಸನ್ 2, ಒಲಿಂಪಿಕ್ ಚಾಂಪಿಯನ್‌ಗಳು, ಚಿತಪರಿಚಿತ ನಟ/ನಟಿಯರು ಹಾಗೂ ಮಾಜಿ ಕ್ರೀಡಾ ಸಾಧಕರನ್ನು ಒಳಗೊಂಡ ಅತಿಥಿ ಸೆಲೆಬ್ರಿಟಿಗಳೊಂದಿಗೆ ಬೃಹತ್ ಸ್ವರೂಪದಲ್ಲಿ ಸಜ್ಜಾಗುತ್ತಿದೆ. ಯುವ ಅನ್ವೇಷಕರು, ಒಲಿಂಪಿಯಾಡ್ ಚಾಂಪಿಯನ್‌ಗಳು, ಇಕೊ-ವಾರಿಯರ್‌ಗಳು ಹಾಗೂ ಇನ್ನಷ್ಟು ಸಾಧಕರನ್ನು ಒಳಗೊಂಡ BYJU'S Young Genius, ಜೀನಿಯಸ್ ಆಗುವುದು ಎಂದರೆ ಏನು ಎಂಬುದಕ್ಕೆ ಇರುವ ಗಡಿರೇಖೆಗಳನ್ನು ಮೀರುತ್ತದೆ

    ಬೃಹತ್ ಮತ್ತು ಅತ್ಯುತ್ತಮ ಆವೃತ್ತಿಯನ್ನು ಇದು ಒಳಗೊಂಡಿದ್ದು, ಮೈನವಿರೇಳಿಸುವ ಕೌಶಲಗಳು ಮತ್ತು ಬೆರಗಾಗಿಸುವ ಉತ್ತೇಜಕ ಸಾಧನೆಗಳನ್ನು ಮಾಡಿರುವ ದೇಶದಾದ್ಯಂತದ ಅಸಾಧಾರಣ ಪ್ರತಿಭಾನ್ವಿತರನ್ನು ಪ್ರದರ್ಶಿಸಲು BYJU'S Young Genius ನ ಸೀಸನ್ 2 ಸಿದ್ಧವಾಗಿದೆ. 

    ಇನ್ನಷ್ಟು ತಿಳಿಯಲು BYJUS Young Genius ಗೆ ಲಾಗ್ ಆನ್ ಆಗಿ.
    Published by:Soumya KN
    First published: