• Home
  • »
  • News
  • »
  • trend
  • »
  • ಹೊಸ Income Tax E-Filing Portal‌ಗೆ ಇಂದು ಚಾಲನೆ; ಟ್ಯಾಕ್ಸ್​​ ಕಟ್ಟೋರಿಗೆ ಏನೆಲ್ಲಾ ಲಾಭ?

ಹೊಸ Income Tax E-Filing Portal‌ಗೆ ಇಂದು ಚಾಲನೆ; ಟ್ಯಾಕ್ಸ್​​ ಕಟ್ಟೋರಿಗೆ ಏನೆಲ್ಲಾ ಲಾಭ?

ಆದಾಯ ತೆರಿಗೆ

ಆದಾಯ ತೆರಿಗೆ

ತೆರಿಗೆ ಪಾವತಿದಾರನು ತಾವು ಮುಂಗಡವಾಗಿ ಸಲ್ಲಿಸಿದ ಐಟಿಆರ್ನಲ್ಲಿ ಬಳಸಿದ ಸಂಬಳ, ಮನೆ ಆಸ್ತಿ, ವಹಿವಾಟು/ವೃತ್ತಿ ಮತ್ತಿತರ ವಿವರಗಳ ಪ್ರೊಫೈಲ್ ಅನ್ನು ಆತ ಪೂರ್ವಭಾವಿಯಾಗಿ ನವೀಕರಿಸಬಹುದು.

  • Share this:

    ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಅಪ್ ಡೇಟ್ ಆಗುತ್ತಿರುವ ದೇಶದ ಆದಾಯ ತೆರಿಗೆ ಇಲಾಖೆಯು ಇಂದು, ಅಂದರೆ ಜೂನ್ 7ರಂದು ನೂತನ ತೆರಿಗೆ ಪಾವತಿದಾರ ಸ್ನೇಹಿ ಇ-ಫಿಲ್ಲಿಂಗ್ ಪೋರ್ಟಲ್ www.incometax.gov.in ಗೆ ಚಾಲನೆ ನೀಡಲಿದೆ.ಈ ಪೋರ್ಟಲ್ ನ ವಿಶೇಷತೆಯೆಂದರೆ, ಇದು ಐಟಿಆರ್ -1, ಐಟಿಆರ್ -2 ಹಾಗೂ 4 ಇದಕ್ಕಾಗಿ ಆದಾಯ ತೆರಿಗೆ ಸಲ್ಲಿಕೆಗೆ (ಐಟಿಆರ್) ಸಿದ್ಧತೆ ನಡೆಸಲು ನೆರವಾಗುವ ಸಂವಾದಾತ್ಮಕ ತಂತ್ರಾಂಶವನ್ನು ಉಚಿತವಾಗಿ ಒದಗಿಸಲಿದೆ ಹಾಗೂ ತೆರಿಗೆ ಪಾವತಿದಾರರ ಸಹಾಯ ಮಾಡಲು ಕಾಲ್ ಸೆಂಟರ್ ಅನ್ನು ಈ ಪೋರ್ಟಲ್ ಒಳಗೊಂಡಿರುತ್ತದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.


    ಸದ್ಯ ಆದಾಯ ತೆರಿಗೆ ಸಲ್ಲಿಕೆಗೆ (ಐಟಿಆರ್) ಸಿದ್ಧತೆ ನಡೆಸಲು ನೆರವಾಗುವ ಸಂವಾದಾತ್ಮಕ ಪ್ರಶ್ನಾವಳಿಗಳನ್ನು ಐಟಿಆರ್ -1 ಹಾಗೂ 4 (ಆನ್ ಲೈನ್ ಹಾಗೂ ಆಫ್‍ ಲೈನ್) ಮತ್ತು ಐಟಿಆರ್ -2 (ಆಫ್ ಲೈನ್) ಪೋರ್ಟಲ್ನಲ್ಲಿ ಲಭ್ಯವಿದ್ದು, ಮುಂದೆ ಐಟಿಆರ್ - 3, 5, 6, 7 ಕ್ಕೂ ಅದನ್ನು ಶೀಘ್ರವಾಗಿ ಒದಗಿಸಲಾಗುವುದು ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ವಿವರಿಸಿದೆ.


    ಇದನ್ನೂ ಓದಿ:Rohini Sindhuri: ತವರು ಮನೆ ತೊರೆದು ಹೋಗ್ತಿದ್ದೀನಿ: ಮೈಸೂರಿಗೆ ಭಾವುಕ ವಿದಾಯ ಹೇಳಿದ ರೋಹಿಣಿ ಸಿಂಧೂರಿ

    ನೂತನ ಇ-ಫೈಲಿಂಗ್ ಪೋರ್ಟಲ್ ತೆರಿಗೆ ಪಾವತಿದಾರ ಸ್ನೇಹಿಯಾಗಿರಲಿದ್ದು, ಆದಾಯ ತೆರಿಗೆ ಸಲ್ಲಿಕೆ (ಐಟಿಆರ್) ಪ್ರಕ್ರಿಯೆಯನ್ನು ಸರಳಗೊಳಿಸಲಿದೆ ಹಾಗೂ ತೆರಿಗೆ ಪಾವತಿದಾರರಗಿ ತ್ವರಿತವಾಗಿ ಮರುಪಾವತಿ (ರೀಫಂಡ್) ವ್ಯವಸ್ಥೆಗೆ ಅನುವು ಮಾಡಿಕೊಡುವುದು ಇತ್ಯಾದಿ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.



    ತೆರಿಗೆ ಪಾವತಿದಾರರಿಗೆ ಲಾಭ ಮಾಡಿಕೊಡುವ ಹೊಸ ವೈಶಿಷ್ಟ್ಯಗಳು:




    • ತೆರಿಗೆ ಪಾವತಿದಾರರಿಗೆ ತ್ವರಿತ ಮರುಪಾವತಿ ಮಾಡಲು ಆದಾಯ ತೆರಿಗೆ ಸಲ್ಲಿಕೆಯ (ಐಟಿಆರ್) ತ್ವರಿತ ಪ್ರಕ್ರಿಯೆ

    • ಎಲ್ಲ ಸಂವಾದಗಳನ್ನು ಹಾಗೂ ಫಾಲೋ ಅಪ್ ಕ್ರಿಯೆಗಾಗಿ ತೆರಿಗೆ ಪಾವತಿದಾರನು ಅಪ್ಲೋಡ್ ಮಾಡಿದ ಅಥವಾ ಬಾಕಿ ಇರುವ ಪ್ರಕ್ರಿಯೆಗಳನ್ನು ಪ್ರದರ್ಶಿಸಲು ಒಂದೇ ಡ್ಯಾಶ್ ಬೋರ್ಡ್

    • ತೆರಿಗೆ ಪಾವತಿದಾರನು ತಾವು ಮುಂಗಡವಾಗಿ ಸಲ್ಲಿಸಿದ ಐಟಿಆರ್ನಲ್ಲಿ ಬಳಸಿದ ಸಂಬಳ, ಮನೆ ಆಸ್ತಿ, ವಹಿವಾಟು/ವೃತ್ತಿ ಮತ್ತಿತರ ವಿವರಗಳ ಪ್ರೊಫೈಲ್ ಅನ್ನು ಆತ ಪೂರ್ವಭಾವಿಯಾಗಿ ನವೀಕರಿಸಬಹುದು.

    • ಟಿಡಿಎಸ್ ಮತ್ತು ಎಸ್‌ಎಫ್‌ಟಿ ಸ್ಟೇಟ್ಮೆಂಟ್ (ನಿಗದಿತ ದಿನಾಂಕ ಜೂನ್ 30, 2021) ಅನ್ನು ಅಪ್‌ಲೋಡ್ ಮಾಡಿದ ನಂತರ ಸಂಬಳದ ಆದಾಯ, ಬಡ್ಡಿ, ಲಾಭಾಂಶ ಮತ್ತು ಬಂಡವಾಳ ಲಾಭಗಳೊಂದಿಗೆ ಪೂರ್ವ ಭರ್ತಿಯ ವಿವರವು ಸಕ್ರಿಯವಾಗಿ ಲಭ್ಯವಿರುತ್ತದೆ.


    ಇದನ್ನೂ ಓದಿ:ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ; ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ; ನಳಿನ್​ಕುಮಾರ ಕಟೀಲ್


    • ತೆರಿಗೆ ಪಾವತಿದಾರರ ಪ್ರಶ್ನೆಗಳಿಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡುವ ನೆರವಿಗಾಗಿ ನೂತನ ಕಾಲ್ ಸೆಂಟರ್ ಲಭ್ಯವಾಗಲಿದೆ

    • ವಿವರವಾದ FAQ ಗಳು, ಬಳಕೆದಾರರ ಕೈಪಿಡಿಗಳು, ವಿಡಿಯೋಗಳು ಹಾಗೂ ಚಾಟ್‌ಬಾಟ್ / ಲೈವ್ ಏಜೆಂಟ್ ಅನ್ನೂ ಒದಗಿಸಲಾಗುತ್ತದೆ.

    • ಆದಾಯ ತೆರಿಗೆ ಅರ್ಜಿಗಳನ್ನು ಭರ್ತಿಗೊಳಿಸುವುದು, ವೃತ್ತಿಪರ ತೆರಿಗೆದಾರರ ಸೇರ್ಪಡೆ, ಪರೋಕ್ಷವಾದ ಪರಿಶೀಲನೆ ಅಥವಾ ಮೇಲ್ಮನವಿಗಳಿಗೆ ಸಂಬಂಧಿಸಿದ ನೋಟಿಸ್ ಗಳಿಗೆ ಪ್ರತಿಕ್ರಿಯೆಯನ್ನು ಸಲ್ಲಿಸುವುದಕ್ಕೆ ಪೂರಕವಾದ ಕ್ರಿಯಾತ್ಮಕತೆಗಳು ಲಭ್ಯವಾಗಲಿವೆ.



    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:Latha CG
    First published: