ಈಗಂತೂ ದಿನ ಬೆಳಗಾದರೆ ಸಾಕು ಟಿವಿಯಲ್ಲಿ (Television) ಮತ್ತು ದಿನಪತ್ರಿಕೆಯಲ್ಲಿ (Newspapers) ಬೀದಿ ನಾಯಿಗಳ(Stray Dogs) ಹಾವಳಿಯ ಬಗ್ಗೆ ಒಂದಾದರೂ ಪ್ರಕರಣವನ್ನು ಓದಲು ಮತ್ತು ನೋಡಲು ಸಿಗುತ್ತದೆ. ಹೌದು.. ಇತ್ತೀಚೆಗಂತೂ ಈ ಬೀದಿ ನಾಯಿಗಳ ಹಾವಳಿ ತುಂಬಾನೇ ಜಾಸ್ತಿಯಾಗಿದೆ. ಎಷ್ಟೋ ಬಾರಿ ಈ ನಾಯಿಗಳು ಬೈಕ್ (Bike) ಓಡಿಸಿಕೊಂಡು, ಸೈಕಲ್ (Cycle) ಓಡಿಸಿಕೊಂಡು ಹೋಗುವವರನ್ನು ಹಿಗ್ಗಾಮುಗ್ಗಾ ಬೊಗಳುತ್ತಾ ಅವರ ಹಿಂದೆ ಹಿಂಬಾಲಿಸಿಕೊಂಡು ಹೋಗಿ ಅವರ ಮೇಲೆ ದಾಳಿ (Attack) ಮಾಡುವಂತೆ ಹೆದರಿಸುತ್ತವೆ.
ಒಮ್ಮೊಮ್ಮೆ ಅಂತೂ ನಾಯಿಗಳ ದಾಳಿಗೆ ಎಷ್ಟೋ ಜನರು ತಮ್ಮ ಬೈಕ್ ಮೇಲಿಂದ ಕೆಳಕ್ಕೆ ಬಿದ್ದು ಕಾಲು, ಕೈ ಮುರಿದುಕೊಂಡ ಉದಾಹರಣೆಗಳು ಇವೆ. ಅದರಲ್ಲೂ ನಸುಕಿನ ಜಾವದಲ್ಲಿ ಮತ್ತು ತಡರಾತ್ರಿ ಹೊತ್ತಿನಲ್ಲಿ ಬೈಕ್ ಓಡಿಸಿಕೊಂಡು ಹೋಗುವವರಿಗೆ ಸದಾ ‘ಎಲ್ಲಿ ಯಾವ ನಾಯಿ ಬಂದು ಅವರ ಮೇಲೆ ದಾಳಿ ಮಾಡುತ್ತದೆಯೋ’ ಅನ್ನೋ ಭಯ ಮತ್ತು ಆತಂಕವೇ ಕಾಡುತ್ತಿರುತ್ತದೆ.
ಇದನ್ನೂ ಓದಿ: Bengaluru Viral News: 58 ಲಕ್ಷ ಸಂಬಳ ಇದ್ರೂ ಈ ಇಂಜಿನಿಯರ್ಗೆ ಗರ್ಲ್ ಫ್ರೆಂಡ್ ಸಿಕ್ಕಿಲ್ಲ!
ಹೀಗೆ ತಾವು ಬೈಕ್ ಓಡಿಸಿಕೊಂಡು ಹೋಗುವಾಗ ಈ ರೀತಿಯ ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ಮತ್ತು ಅವುಗಳಿಂದ ಸುರಕ್ಷಿತವಾಗಿರಲು ಇಲ್ಲೊಬ್ಬ ವ್ಯಕ್ತಿ ವಿನೂತನವಾದ ಐಡಿಯಾವನ್ನು ಮಾಡಿದ್ದಾನೆ ನೋಡಿ.
ಬೀದಿ ನಾಯಿಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ವಿನೂತನವಾದ ಐಡಿಯಾ ಮಾಡಿದ ವ್ಯಕ್ತಿ..
ಇಲ್ಲೊಬ್ಬ ವ್ಯಕ್ತಿ ತಾನು ಬೈಕ್ ಓಡಿಸಿಕೊಂಡು ಹೋಗುವಾಗ, ಬೀದಿ ನಾಯಿಗಳು ಅವರನ್ನು ಬೆನ್ನಟ್ಟಿಕ್ಕೊಂಡು ಬರಬಾರದು ಅಂತ ಅವರ ಬೈಕ್ ಗೆ ಒಂದು ಅಲ್ಟ್ರಾಸಾನಿಕ್ ಡಾಗ್ ರೆಪೆಲ್ಲಂಟ್ ಅನ್ನು ಅಳವಡಿಸಿಕೊಂಡಿದ್ದಾನೆ.
ಯಾವುದಾದರೂ ನಾಯಿ ಈ ಬೈಕ್ ನೋಡಿದ ತಕ್ಷಣ ದಾಳಿ ಮಾಡಲು ಬೊಗಳುತ್ತಾ ಓಡಿ ಬಂದರೆ ಸಾಕು ಬೈಕ್ ನ ಹಿಂದೆ ಅಳವಡಿಸಿರುವ ಆ ಅಲ್ಟ್ರಾಸಾನಿಕ್ ಡಾಗ್ ರೆಪೆಲ್ಲಂಟ್ ಜೋರಾಗಿ ಶಬ್ದ ಮಾಡುತ್ತದೆ ಮತ್ತು ಈ ಶಬ್ದಕ್ಕೆ ನಾಯಿಗಳು ಹೆದರಿಕೊಂಡು ಅಲ್ಲಿಯೇ ಸುಮ್ಮನೆ ನಿಲ್ಲುತ್ತವೆ.
ಒಟ್ಟಿನಲ್ಲಿ ಹೇಳುವುದಾದರೆ ಈ ಸಾಧನವು ಪ್ರತಿಬಂಧಕವಾಗಿ ಕಾರ್ಯ ನಿರ್ವಹಿಸುತ್ತದೆ, ನಾಯಿಗಳನ್ನು ಬೈಕ್ ನಿಂದ ದೂರವಿರಿಸುತ್ತದೆ ಮತ್ತು ಬೈಕ್ ಸವಾರನನ್ನು ಬೆನ್ನಟ್ಟುವುದನ್ನು ತಡೆಯುತ್ತದೆ. ಈ ಸಾಧನವನ್ನು ತಯಾರಿಸುವ ಮೂಲಕ, ವ್ಯಕ್ತಿ ತನ್ನ ಬೈಕ್ ಸವಾರಿಯನ್ನು ತುಂಬಾನೇ ಸುರಕ್ಷಿತ ಮತ್ತು ಹೆಚ್ಚು ಆನಂದ ದಾಯಕವಾಗಿಸಿಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಪ್ರಾಣಿಗಳಿಗೂ ಹಾನಿಯಾಗುವುದಿಲ್ಲ ಅಂತ ಹೇಳಲಾಗುತ್ತಿದೆ.
ಈ ಸಾಧನವನ್ನು ಬಳಸಿದ ಬೈಕ್ ಸವಾರನ ವೀಡಿಯೋ ಸಿಕ್ಕಾಪಟ್ಟೆ ವೈರಲ್
ಆ ವ್ಯಕ್ತಿಯು ತಾನು ತಯಾರಿಸಿದ ವಿನೂತನವಾದ ಸಾಧನದ ಕ್ರಿಯೆಯ ವೀಡಿಯೋವನ್ನು ಪೋಸ್ಟ್ ಮಾಡಿದ್ದಾನೆ. ವೀಡಿಯೋದಲ್ಲಿ, ವೃತ್ತಾಕಾರದ ಮೋಡೆಮ್ ಕಾಣಿಸುತ್ತದೆ ಮತ್ತು ಅವನ ಬೈಕಿನ ಹಿಂಭಾಗಕ್ಕೆ ಅದನ್ನು ಜೋಡಿಸಲಾಗಿದೆ. ನಾಯಿ ಬೈಕ್ ಸವಾರನ ಮೇಲೆ ಬೊಗಳಲು ಬಂದಾಗಲೆಲ್ಲಾ, ಸಿಸ್ಟಮ್ ಮೇಲೆ ನೀಲಿ ಬೆಳಕು ಹೊಳೆಯುತ್ತದೆ ಮತ್ತು ದೀರ್ಘವಾದ ಶಬ್ದ ಹೊರ ಬರುತ್ತದೆ.
ಇದನ್ನೂ ಓದಿ:Indian Railway: ಭಾರತದ ಕೊನೆಯ ರೈಲು ನಿಲ್ದಾಣ, ನೀವು ಇಲ್ಲಿಂದ ಇಳಿದು ಬೇರೆ ದೇಶಕ್ಕೆ ಹೋಗಬಹುದು!
ನಾಯಿಗಳು ಮೊದಲಿಗೆ ಆ ವ್ಯಕ್ತಿಯನ್ನು ಬೆನ್ನಟ್ಟಿದಾಗ, ಆ ಅಲಾರಂ ಆನ್ ಆಗುತ್ತದೆ ಮತ್ತು ಅದರಿಂದ ಬರುವ ಶಬ್ದ ಕೇಳಿ ನಾಯಿಗಳು ಬೆನ್ನಟ್ಟುವುದನ್ನು ನಿಲ್ಲಿಸುತ್ತವೆ. ಎಲ್ಲಾ ದ್ವಿಚಕ್ರ ವಾಹನ ಸವಾರರಿಗೆ ಪ್ರಯಾಣವನ್ನು ಕಷ್ಟಕರವಾಗಿಸುವ ಬೀದಿ ನಾಯಿಗಳನ್ನು ತೊಡೆದು ಹಾಕಲು ಜನರು ಆನ್ಲೈನ್ ನಲ್ಲಿ ಈ ವ್ಯಕ್ತಿಯ ಐಡಿಯಾವನ್ನು ತುಂಬಾನೇ ಮೆಚ್ಚಿಕೊಂಡರು.
ರೆಡ್ಡಿಟ್ ನಲ್ಲಿ ಒಬ್ಬ ಬಳಕೆದಾರರು "ನಾನು ಅಂಚೆ ಸೇವೆಯಲ್ಲಿ ಕೆಲಸ ಮಾಡುತ್ತೇನೆ ಮತ್ತು ಈ ಸಾಧನ ನನಗೆ ತುಂಬಾನೇ ಸಹಾಯಕ್ಕೆ ಬರುತ್ತದೆ, ಇದು ನನ್ನ ಜೀವ ಉಳಿಸುತ್ತದೆ" ಎಂದು ಹೇಳಿದರು. ಇನ್ನೊಬ್ಬ ಬಳಕೆದಾರರು "ನಾನು ಥೈಲ್ಯಾಂಡ್ ನಲ್ಲಿ ವಾಸಿಸುತ್ತಿದ್ದೇನೆ, ಇಂತಹ ಒಂದು ಸಾಧನವನ್ನು ಹೊಂದಬೇಕೆಂದು ನಾನು ಬಯಸುತ್ತೇನೆ. ಅಪರಿಚಿತ ರಸ್ತೆಯಲ್ಲಿ ಮ್ಯಾಂಜಿ ನಾಯಿಗಳು ಬೆನ್ನಟ್ಟುವುದಕ್ಕಿಂತ ಭಯಾನಕವಾದುದು ಯಾವುದೂ ಇಲ್ಲ" ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ