HOME » NEWS » Trend » NEW FINANCIAL YEAR BEGINS CHANGES THAT MAY AFFECT YOUR PERSONAL FINANCES STG MAK

ಇಂದಿನಿಂದ ನೂತನ ಆರ್ಥಿಕ ವರ್ಷ ಪ್ರಾರಂಭ: ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪರಿಣಾಮ ಬೀರುವ ಬದಲಾವಣೆಗಳೇನು?

ಹೊಸ ಹಣಕಾಸು ವರ್ಷಕ್ಕೆ ಪ್ರವೇಶಿಸಿರುವ ಈ ಹೊತ್ತಲ್ಲಿ ಜನರು ತಿಳಿದುಕೊಳ್ಳಬೇಕಾದ ಕೆಲವು ಬದಲಾವಣೆಗಳು ಇಲ್ಲಿವೆ.

news18-kannada
Updated:April 1, 2021, 6:21 PM IST
ಇಂದಿನಿಂದ ನೂತನ ಆರ್ಥಿಕ ವರ್ಷ ಪ್ರಾರಂಭ: ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪರಿಣಾಮ ಬೀರುವ ಬದಲಾವಣೆಗಳೇನು?
ಪ್ರಾತಿನಿಧಿಕ ಚಿತ್ರ.
  • Share this:
2021 ರ ಏಪ್ರಿಲ್ 1 ರ ಗುರುವಾರದಿಂದ, ಹೊಸ ಹಣಕಾಸು ವರ್ಷ ಪ್ರಾರಂಭವಾಗಿದ್ದು, ಇಂದಿನಿಂದ ಕೆಲ ಬದಲಾವಣೆಗಳೂ ಆಗಲಿದ್ದು, ನಿಮ್ಮ ಜೇಬಿಗೆ ಹೆಚ್ಚು ಹೊರೆಯಾಗುವ ಸಾಧ್ಯತೆ ಇದೆ. ಆದಾಯ ತೆರಿಗೆಗೆ ಸಂಬಂಧಿಸಿದ ಬದಲಾವಣೆಗಳ ಜೊತೆಗೆ ಇತರ ನಿಯಮಗಳ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 2021 ರಲ್ಲಿ ನಡೆದ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದರು. ಐಟಿ ರಿಟರ್ನ್ಸ್‌ ಫೈಲ್‌ ಮಾಡುವ ನಿಯಮದಲ್ಲಿ ಬದಲಾವಣೆಗಳು, ಟಿಡಿಎಸ್ / ಟಿಸಿಎಸ್ ಕಡಿತ, ಎಲ್‌ಟಿಸಿ ನಗದು ಚೀಟಿ ಯೋಜನೆ ಏಪ್ರಿಲ್ 1, 2021 ರಿಂದ ಜಾರಿಗೆ ಬರಲಿದೆ.

ಹೊಸ ಹಣಕಾಸು ವರ್ಷಕ್ಕೆ ಪ್ರವೇಶಿಸಿರುವ ಈ ಹೊತ್ತಲ್ಲಿ ಜನರು ತಿಳಿದುಕೊಳ್ಳಬೇಕಾದ ಕೆಲವು ಬದಲಾವಣೆಗಳು ಇಲ್ಲಿವೆ:

1. ಹೊಸ ತೆರಿಗೆ ಆಡಳಿತವನ್ನು ಆಯ್ಕೆ ಮಾಡಬಹುದು: ಕೇಂದ್ರ ಬಜೆಟ್ 2020 ರಲ್ಲಿ ಹೊಸ ತೆರಿಗೆ ಆಡಳಿತದ ಅನುಷ್ಠಾನವನ್ನು ಘೋಷಿಸಿತ್ತು. ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಸಮಯದಲ್ಲಿ ಹಳೆಯ ತೆರಿಗೆ ಆಡಳಿತದ ಬದಲು ಹೊಸ ತೆರಿಗೆ ಆಡಳಿತವನ್ನು ಆಯ್ಕೆ ಮಾಡುವ ಅವಕಾಶವನ್ನು ಹೊಂದಿರುತ್ತಾರೆ.

2. ಇಪಿಎಫ್ ಹೂಡಿಕೆಗಳು ಇಪಿಎಫ್ ಖಾತೆಯಲ್ಲಿ ವೈಯಕ್ತಿಕ ಹೂಡಿಕೆ 2021 ರ ಏಪ್ರಿಲ್ 1 ರಿಂದ ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತದೆ. 2021 ರ ಬಜೆಟ್‌ನಲ್ಲಿ ಈ ಸಂಬಂಧ ಪ್ರಸ್ತಾವನೆ ನೀಡಿದ್ದ ಹಣಕಾಸು ಸಚಿವೆ ಪಿಎಫ್‌ ನಿಧಿಗೆ ನೌಕರರ ಕೊಡುಗೆಯಲ್ಲಿ ಗರಿಷ್ಠ ರೂ. 2.5 ಲಕ್ಷ ರೂ. ಮಿತಿಗಿಂತ ಹೆಚ್ಚಿನ ಕೊಡುಗೆಯಿಂದ ಬರುವ ಯಾವುದೇ ಆದಾಯಕ್ಕೆ ನೌಕರನ ಕೈಯಿಂದ ತೆರಿಗೆ ವಿಧಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದರು.

3. ಟಿಡಿಎಸ್ ಮೇಲಿನ ಆದಾಯ ತೆರಿಗೆ ನಿಯಮಹೆಚ್ಚಿನ ಜನರು ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವಂತೆ ಮಾಡಲು ಹೆಚ್ಚಿನ ಟಿಡಿಎಸ್ (ಮೂಲದಲ್ಲಿ ತೆರಿಗೆ ಕಡಿತ) ಅಥವಾ ಟಿಸಿಎಸ್ (ಮೂಲದಲ್ಲಿ ಸಂಗ್ರಹಿಸಿದ ತೆರಿಗೆ) ದರಗಳನ್ನು ಹಣಕಾಸು ಸಚಿವರು 2021 ರ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

4. ಎಲ್‌ಟಿಸಿ ಯೋಜನೆಯಲ್ಲಿ ಬದಲಾವಣೆ ರಜೆ ಪ್ರಯಾಣ ರಿಯಾಯಿತಿ (ಎಲ್‌ಟಿಸಿ) ಬದಲಿಗೆ ನಗದು ಭತ್ಯೆ ಪಡೆಯುವ ನೌಕರನಿಗೆ ತೆರಿಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿತ್ತು. ಪ್ರಯಾಣಕ್ಕೆ ಕೋವಿಡ್-ಸಂಬಂಧಿತ ನಿರ್ಬಂಧಗಳಿಂದಾಗಿ ತಮ್ಮ ಎಲ್‌ಟಿಸಿ ತೆರಿಗೆ ಪ್ರಯೋಜನವನ್ನು ಪಡೆಯಲು ಸಾಧ್ಯವಾಗದ ವ್ಯಕ್ತಿಗಳಿಗೆ ಈ ಯೋಜನೆಯನ್ನು ಕಳೆದ ವರ್ಷ ಘೋಷಿಸಲಾಯಿತು. ಈ ಯೋಜನೆ ಮಾರ್ಚ್ 31, 2021 ರವರೆಗೆ ಮಾತ್ರ ಲಭ್ಯವಿತ್ತು ಎಂದು ಜನರು ಗಮನಿಸಬೇಕು.

5. ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ರಿಟರ್ನ್ಸ್75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರ ಮೇಲೆ ತೆರಿಗೆ ಭಾರದ ಹೊರೆ ಸರಾಗಗೊಳಿಸುವ ಸಲುವಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗುತ್ತದೆ. ಪಿಂಚಣಿ ಮತ್ತು ಬಡ್ಡಿ ಆದಾಯವನ್ನು ಹೊರತುಪಡಿಸಿ ಬೇರೆ ಯಾವುದೇ ಆದಾಯದ ಮೂಲವನ್ನು ಹೊಂದಿರದ ಹಿರಿಯ ನಾಗರಿಕರು ಮಾತ್ರ ಈ ಸೌಲಭ್ಯವನ್ನು ಪಡೆಯಬಹುದು. ಅಲ್ಲದೆ, ಪಿಂಚಣಿಯನ್ನು ಠೇವಣಿ ಇರಿಸಿದ ಬ್ಯಾಂಕಿನಲ್ಲೇ ಬಡ್ಡಿ ಆದಾಯವನ್ನು ಗಳಿಸಿದ ಸಂದರ್ಭದಲ್ಲಿ ಮಾತ್ರ ಐಟಿಆರ್ ಸಲ್ಲಿಸುವುದರಿಂದ ವಿನಾಯಿತಿ ಲಭ್ಯವಿರುತ್ತದೆ ಎಂಬುದನ್ನು ಅವರು ಗಮನಿಸಬೇಕು.ಇದನ್ನೂ ಓದಿ: West Bengal Assembly Election2021: ಬಿಜೆಪಿ ಕಾರ್ಯಕರ್ತರಿಂದ ನಂದಿಗ್ರಾಮ ಬೂತ್​ ವಶ: ಚುನಾವಣಾ ಆಯೋಗಕ್ಕೆ ಮಮತಾ ಬ್ಯಾನರ್ಜಿ ದೂರು!

6. ಐಟಿಆರ್ ಫಾರ್ಮ್‌ಗಳಲ್ಲಿ ಮೊದಲೇ ಭರ್ತಿ ಮಾಡಿದ ಡೇಟಾಪಟ್ಟಿ ಮಾಡಿದ ಸೆಕ್ಯೂರಿಟಿಗಳ ಮಾರಾಟದಿಂದ ಉಂಟಾಗುವ ಬಂಡವಾಳ ಲಾಭ, ಲಾಭಾಂಶದ ಆದಾಯ, ಬ್ಯಾಂಕ್ ಅಥವಾ ಅಂಚೆ ಕಚೇರಿಯಿಂದ ಪಡೆದ ಬಡ್ಡಿ ಆದಾಯ ಸೇರಿದಂತೆ ಕೆಲವು ವಿವರಗಳನ್ನು ಆದಾಯ ತೆರಿಗೆ ರಿಟರ್ನ್‌ನಲ್ಲಿ ಮೊದಲೇ ಭರ್ತಿ ಮಾಡಲಾಗುತ್ತದೆ.
Youtube Video

2021 ರ ಬಜೆಟ್‌ನ ಪ್ರಕಟಣೆಯ ಪ್ರಕಾರ ವೈಯಕ್ತಿಕ ಮಾಹಿತಿ, ಬ್ಯಾಂಕ್ ವಿವರಗಳು, ಫಾರ್ಮ್ 16 ರ ಪ್ರಕಾರ ಸಂಬಳದ ಆದಾಯದ ವಿವರಗಳು, ಟಿಡಿಎಸ್, ಟಿಸಿಎಸ್, ಮುಂಗಡ ತೆರಿಗೆಯಾಗಿ ಪಾವತಿಸಿದ ತೆರಿಗೆಗಳ ಜತೆಗೆ ಆ ಮಾಹಿತಿಗಳನ್ನು ಭರ್ತಿ ಮಾಡಲಾಗುತ್ತದೆ. ಪೂರ್ವ-ಭರ್ತಿ ಮಾಡಿದ ಡೇಟಾ ಅಂದರೆ ಐಟಿಆರ್‌ನಲ್ಲಿ ಬಾಹ್ಯ ಮೂಲಗಳಿಂದ ದೊರೆಯುವ ಸ್ವಯಂ-ಪಾಪುಲೇಟೆಡ್‌ ಮಾಹಿತಿಯಾಗಿದೆ.
Published by: MAshok Kumar
First published: April 1, 2021, 6:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories