HOME » NEWS » Trend » NEW FASHION SLASHED JEANS ARE THE TREND IN TOWN AND THEY ARE REMINDING TWITTER OF FRUIT NINJA STG HG

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕತ್ತರಿಸಿದ ಜೀನ್ಸ್ ಪ್ಯಾಂಟ್‌: ನೆಟ್ಟಿಗರು ಏನಂದ್ರು ಗೊತ್ತಾ?

ಲೆಜೆ (LEJE) ಎಂಬ ಬ್ರ್ಯಾಂಡಿನ ಪ್ಯಾಂಟ್ ತುಂಡುಗಳಾಗಿ ಕತ್ತರಿಸಿದ ಜೀನ್ಸ್ ಪ್ಯಾಂಟ್ ಇದಾಗಿದೆ. ಈ ಪ್ಯಾಂಟ್‌ ಫ್ರೂಟ್ ನಿಂಜಾ ಮೊಬೈಲ್ ಗೇಮ್‌ನ ಅಂತರ್ಜಾಲದಲ್ಲಿ ಅನೇಕ ಬಳಕೆದಾರರನ್ನು ನೆನಪಿಸಿದೆ. ಈ ಕತ್ತರಿಸಿದ ‘ಸ್ಲ್ಯಾಷ್ ಜೀನ್ಸ್’ ಒಂದರ ಬೆಲೆ $397 ಅಂದರೆ ಸುಮಾರು 29,000 ರೂ. ಎಂದು ಹೇಳಲಾಗುತ್ತಿದೆ.

news18-kannada
Updated:May 18, 2021, 2:12 PM IST
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕತ್ತರಿಸಿದ ಜೀನ್ಸ್ ಪ್ಯಾಂಟ್‌: ನೆಟ್ಟಿಗರು ಏನಂದ್ರು ಗೊತ್ತಾ?
Slash jeans.
  • Share this:
ಏನು ಕಾಲ ಬಂತು ಗುರು..! ಈಗ ಏನು ಮಾಡಿದರು ಫ್ಯಾಷನ್ ಅಂತಾರೆ. ಅದರಲ್ಲೂ ಈ ಜೀನ್ಸ್ ನಮ್ಮ ಭಾರತಕ್ಕೆ ಕಾಲಿಟ್ಟ ಮೇಲಂತೂ ನಮ್ಮ ಸಂಸ್ಕೃತಿ ಸಂಪ್ರದಾಯವು ಹದಗೆಟ್ಟು ಹೋಗಿದೆ. ಯುವ ಜನಾಂಗವು ಜೀನ್ಸ್‌ಗೆ ಮಾರುಹೋಗಿದ್ದು, ದುಪ್ಪಟ್ಟು ಹಣ ಕೊಟ್ಟು ಹರಿದ ಜೀನ್ಸ್ ಪ್ಯಾಂಟ್‌ ಮತ್ತು ನಿಕ್ಕರ್ ತೊಟ್ಟು ಹಾದಿ ಬೀದಿಯಲ್ಲಿ ಅಲೆದಾಡುತ್ತಿದ್ದಾರೆ. ಈಗ ಇದಕ್ಕೂ ತೃಪ್ತಿಯಾಗದ ಫ್ಯಾಷನ್ ಲೋಕ ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ.

ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ಜೀನ್ಸ್ ಪ್ಯಾಂಟಿನ ಪೋಸ್ಟ್ ಸಖತ್ತಾಗಿ ಸದ್ದು ಮಾಡುತ್ತಿದೆ. ವೈರಲ್ ಆಗಿರುವ ಪೋಸ್ಟ್ ನೋಡಿರುವ ನೆಟ್ಟಿಗರಿಂದ ವಿಭಿನ್ನ ಕಮೆಂಟ್‌ಗಳು ಹರಿದು ಬಂದಿವೆ. ಅಷ್ಟಕ್ಕೂ ಟ್ವಿಟ್ಟರ್‌ನಲ್ಲಿ ವೈರಲ್ ಆದ ಪೋಸ್ಟ್ ಏನೆಂದರೆ ಸ್ಲ್ಯಾಷ್ ಜೀನ್ಸ್ ಎಂದು ಕರೆಯಲ್ಪಡುವ ಈ ಇತ್ತೀಚಿನ ಉನ್ನತ ಮಟ್ಟದ ಫ್ಯಾಷನ್ ಪ್ರವೃತ್ತಿಯನ್ನು ಪ್ಯಾರಿಸ್ ಮೂಲದ ಇಬ್ಬರು ಕೊರಿಯಾದ ವಿನ್ಯಾಸಕರು ರಚಿಸಿದ್ದಾರೆ. ಫ್ಯಾಂಟಿನ ಫೋಟೋವನ್ನ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ನೆಟ್ಟಿಗರ ಹುಬ್ಬೆರಿಸುತ್ತಿದೆ.

ಲೆಜೆ (LEJE) ಎಂಬ ಬ್ರ್ಯಾಂಡಿನ ಪ್ಯಾಂಟ್ ತುಂಡುಗಳಾಗಿ ಕತ್ತರಿಸಿದ ಜೀನ್ಸ್ ಪ್ಯಾಂಟ್ ಇದಾಗಿದೆ. ಈ ಪ್ಯಾಂಟ್‌ ಫ್ರೂಟ್ ನಿಂಜಾ ಮೊಬೈಲ್ ಗೇಮ್‌ನ ಅಂತರ್ಜಾಲದಲ್ಲಿ ಅನೇಕ ಬಳಕೆದಾರರನ್ನು ನೆನಪಿಸಿದೆ. ಈ ಕತ್ತರಿಸಿದ ‘ಸ್ಲ್ಯಾಷ್ ಜೀನ್ಸ್’ ಒಂದರ ಬೆಲೆ $397 ಅಂದರೆ ಸುಮಾರು 29,000 ರೂ. ಎಂದು ಹೇಳಲಾಗುತ್ತಿದೆ.

ಅನೇಕ ಟ್ವಿಟ್ಟರ್‌ ಬಳಕೆದಾರರಿಗೆ ಈ ಪ್ಯಾಂಟ್‌ ಗೇಮ್ ಫ್ರೂಟ್ ನಿಂಜಾವನ್ನು ನೆನಪಾಗುತ್ತಿದೆ ಮತ್ತು ಹಣ್ಣುಗಳನ್ನು ಕತ್ತರಿಸುತ್ತಿರುವಂತೆ ತೋರುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.

ಒಬ್ಬ ಬಳಕೆದಾರರು ಕ್ರೇಜಿ, ಸ್ಟುಪಿಡ್ ಲವ್ ಚಿತ್ರದಿಂದ ನಿರಾಶೆಗೊಂಡ ರಿಯಾನ್ ಗೊಸ್ಲಿಂಗ್ ಅವರ ಉಡುಗೊರೆಯಯಂತಿದೆ ಮತ್ತು ಪ್ಯಾಂಟ್ ಫೈನಲ್ ಡೆಸ್ಟಿನೇಶನ್ 2 ರ ಈ ದೃಶ್ಯವನ್ನು ನೆನಪಿಸಿದೆ ಎಂದು ಕಮೆಂಟ್ ಮಾಡಿದ್ದಾರೆ.

ಕೆಲವು ನೆಟ್ಟಿಗರು ಇದು ಪ್ಯಾಂಟ್ ಎಂದು ನಂಬಲು ಸಿದ್ಧರಿರಲಿಲ್ಲ ಮತ್ತು ಇದು ಒಂದು ರೀತಿಯ ತಮಾಷೆ ಎಂದು ಭಾವಿಸಿದ್ದರು ಎಂದು ಕಮೆಂಟ್ ಮಾಡಿದ್ದರು.

ಇನ್ನೂ ಕೆಲವರು ಪ್ಯಾಂಟ್ ಧರಿಸಿದ ಮಾದರಿಯನ್ನು ಕಂಡು ಆ್ಯಕ್ಷನ್ ವಿಡಿಯೋ ಗೇಮ್ ಮಾರ್ಟಲ್ ಕಾಂಬ್ಯಾಟ್‌ ಚಿತ್ರದಲ್ಲಿ ತೋರಿಸಿದಂತೆ ಕತ್ತರಿಸಿದ ಹಾಗೆ ಈ ಪ್ಯಾಂಟ್ ಕಾಣಿಸುತ್ತಿದೆ ಎಂದು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಈ ಮಧ್ಯೆ, ಪ್ಯಾಂಟ್ ನ ಬಗ್ಗೆ ಕೆಲವು ವೀಕ್ಷಕರಿಗೆ ಅದರ ವಿನ್ಯಾಸವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದ್ದು, ಅದರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಪಡುತ್ತಿದ್ದಾರೆ.


View this post on Instagram


A post shared by LEJE (@leje.official)


ಕೆಲವರಿಗೆ, ಈ ಮಾದರಿಯು ಸಮುರಾಯ್ ಕತ್ತಿಯಿಂದ ಕತ್ತರಿಸಿದಂತೆ ಕಾಣಿಸಿದ್ದು, ಇನ್ನು ಕೆಲವರಿಗೆ ಈ ಉನ್ನತ ಮಟ್ಟದ ಫ್ಯಾಷನ್ ಮಾದರಿಯ ಪರಿಕಲ್ಪನೆಯೊಂದಿಗೆ ತುಂಬಾ ಮಗ್ನರಾಗಿದ್ದಾರೆ.

'ಎಲ್' ಜೀನ್ಸ್ ಹೆಸರಿನ ಉತ್ಪನ್ನದಂತಹ ಕೆಲವು ಕತ್ತರಿಸಿದ ಪ್ಯಾಂಟ್‌ಗಳು, ಲೆಜೆಯ ಅಧಿಕೃತ ವೆಬ್‌ಸೈಟ್‌ನಲ್ಲಿ 38,670 ರೂ. ದರ ನಿಗದಿಪಡಿಸಲಾಗಿದ್ದು, ಈ ಉತ್ಪನ್ನಕ್ಕೆ ಕೆಲವರು ಅಭಿಮಾನಿಗಳು ಇದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ, ಒಬ್ಬ ಬಳಕೆದಾರನು ಈ ಪ್ಯಾಂಟಿನ ವಿನ್ಯಾಸವನ್ನು ಶ್ಲಾಘಿಸಿದ್ದಾನೆ ಮತ್ತು "ಇದು ತುಂಬಾ ಆಮೂಲಾಗ್ರವಾಗಿ ಸೃಜನಶೀಲವಾಗಿದ್ದು, ನಾನು ಈ ಪ್ಯಾಂಟಿನ ವಿನ್ಯಾಸವನ್ನು ಪ್ರೀತಿಸುತ್ತೇನೆ" ಎಂದು ಬರೆದಿದ್ದಾನೆ.

ಇನ್‌ಸ್ಟಾಗ್ರಾಮ್‌ನಲ್ಲಿ LEJE ಜೀನ್ಸ್ ಅನ್ನು ಹೊಗಳಿದ ಬಳಕೆದಾರೊಬ್ಬರು ಉತ್ಪನ್ನ ಯಾವಾಗ ಮಾರುಕಟ್ಟೆಗೆ ಬರುತ್ತದೆ ಎಂದು ಕೇಳಿದ್ದಾರೆ. ಅಧಿಕೃತ ವೆಬ್‌ಸೈಟ್‌ನಲ್ಲಿ LEJE ಜೀನ್ಸ್ ಲಭ್ಯವಿದೆ. ಇನ್ನೊಬ್ಬ ಬಳಕೆದಾರರು "ಇದು ಹುಚ್ಚುತನದ್ದಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ.

ಹೀಗೆ ಈ ವಿಚಿತ್ರವಾದ ಪ್ಯಾಂಟಿನ ವಿನ್ಯಾಸವನ್ನು ನೋಡಿದ ನೆಟ್ಟಿಗರು ತಮ್ಮ ಕಮೆಂಟ್ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
First published: May 18, 2021, 2:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories