• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral News: ತಮ್ಮ ರಿಸಪ್ಷನ್​ ಮಿಸ್​ ಮಾಡಿಕೊಂಡ ನವ ದಂಪತಿಗಳು! ಕಾರಣ ಕೇಳಿ ಶಾಕ್ ಆದ ನೆಟ್ಟಿಗರು

Viral News: ತಮ್ಮ ರಿಸಪ್ಷನ್​ ಮಿಸ್​ ಮಾಡಿಕೊಂಡ ನವ ದಂಪತಿಗಳು! ಕಾರಣ ಕೇಳಿ ಶಾಕ್ ಆದ ನೆಟ್ಟಿಗರು

ವೈರಲ್ ಫೋಟೋ

ವೈರಲ್ ಫೋಟೋ

Viral News: ಇಲ್ಲಿ ವಧು-ವರರು ತಮ್ಮ ಆರತಕ್ಷತೆ ಸಮಾರಂಭವನ್ನು ತಾವೇ ಮಿಸ್ ಮಾಡಿಕೊಂಡಿದ್ದಾರೆ. ಆದರೆ ಇದು ಆಗಿದ್ದು ಟ್ರಾಫಿಕ್ ಸಮಸ್ಯೆಯಿಂದಲ್ಲ ಬಿಡಿ, ಇದು ಆಗಿದ್ದು ದಂಪತಿಗಳು ಲಿಫ್ಟ್ ನಲ್ಲಿ ಬರುವಾಗ ಅಕಸ್ಮಾತ್ ಆಗಿ ಸಿಲುಕಿ ಕೊಂಡಿರುವುದರಿಂದ. 

  • Trending Desk
  • 2-MIN READ
  • Last Updated :
  • Share this:

ಕೆಲವೊಮ್ಮೆ ಈ ಮದುವೆ ಸಮಾರಂಭಗಳು, ಹುಟ್ಟುಹಬ್ಬದ ಪಾರ್ಟಿಗಳು (Birthday Party) ಇದ್ದಾಗ ನಾವು ಸ್ವಲ್ಪ ಮನೆಯಿಂದ ಬೇಗನೆ ಹೊರಡುತ್ತೇವೆ, ಏಕೆಂದರೆ ಈ ರಸ್ತೆಗಳಲ್ಲಿ ಟ್ರಾಫಿಕ್ (Traffic) ತುಂಬಾ ಇರುತ್ತದೆ ಮತ್ತು ಹೋಗೋದಕ್ಕೆ ತಡ ಆಗುತ್ತೆ ಅಂತ ಮನೆಯಿಂದ ಸ್ವಲ್ಪ ಮುಂಚಿತವಾಗಿಯೇ ಹೊರಡುತ್ತೇವೆ. ಎಷ್ಟೋ ಸಲ ಹೋಗಬೇಕಿದ್ದ ಮದುವೆ (Marriage) ಸಮಾರಂಭಗಳಿಗೆ ಟ್ರಾಫಿಕ್ ಸಮಸ್ಯೆಯಿಂದ ತಡವಾಗಿ ಬರುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ. ಹೀಗಾಗಿಯೇ ಈ ವಧು-ವರರು ಕೆಲವು ಗಂಟೆಗಳ ಮೊದಲೇ ಮದುವೆ ಸಮಾರಂಭ ನಡೆಯುವ ಸ್ಥಳವನ್ನು ತಲುಪಿರುತ್ತಾರೆ. ಏಕೆಂದರೆ ನಂತರ ಮುಹೂರ್ತಕ್ಕೆ ತಡವಾಗಬಾರದು ಎಂಬ ಉದ್ದೇಶದಿಂದ. 


ದಂಪತಿಗಳಿಗೆ ಆರತಕ್ಷತೆ ಮಿಸ್:


ಆದರೆ ಇಲ್ಲಿ ವಧು-ವರರು ತಮ್ಮ ಆರತಕ್ಷತೆ ಸಮಾರಂಭವನ್ನು ತಾವೇ ಮಿಸ್ ಮಾಡಿಕೊಂಡಿದ್ದಾರೆ. ಆದರೆ ಇದು ಆಗಿದ್ದು ಟ್ರಾಫಿಕ್ ಸಮಸ್ಯೆಯಿಂದಲ್ಲ ಬಿಡಿ, ಇದು ಆಗಿದ್ದು ದಂಪತಿಗಳು ಲಿಫ್ಟ್ ನಲ್ಲಿ ಬರುವಾಗ ಅಕಸ್ಮಾತ್ ಆಗಿ ಸಿಲುಕಿ ಕೊಂಡಿರುವುದರಿಂದ.


ಪನವ್ ಮತ್ತು ವಿಕ್ಟೋರಿಯಾ ಝಾ ಅವರ ವಿವಾಹ ಆರತಕ್ಷತೆಯು ಅವರು ಪ್ಲ್ಯಾನ್ ಮಾಡಿದಂತೆ ನಡೆಯಲಿಲ್ಲ. ಏಕೆಂದರೆ ಅವರು ಎಲಿವೇಟರ್ ನಲ್ಲಿ ಸಿಲುಕಿದ್ದರಿಂದ ಹೀಗಾಯಿತು. ನವವಿವಾಹಿತರು ಶನಿವಾರ ರಾತ್ರಿ ತಮ್ಮ ಮದುವೆಯ ನಂತರ ಪಾರ್ಟಿಗಾಗಿ ಷಾರ್ಲೆಟ್ ನ ಗ್ರ್ಯಾಂಡ್ ಬೋಹೀಮಿಯನ್ ಹೋಟೆಲ್ ನ 16ನೇ ಮಹಡಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ವಿಕ್ಟೋರಿಯಾ ಸಹೋದರಿ ಸೇರಿದಂತೆ ಇನ್ನೂ ನಾಲ್ವರು ಅತಿಥಿಗಳು ವಧು ಮತ್ತು ವರನೊಂದಿಗೆ ಲಿಫ್ಟ್ ನಲ್ಲಿ ಸಿಲುಕಿಕೊಂಡಿದ್ದರು.


ಇದನ್ನೂ ಓದಿ: Japan Airlines: ಲ್ಯಾಂಡ್ ಮಾಡೋಕೆ ಜಾಗ ಸಿಗದೇ ಆಕಾಶದಲ್ಲೇ 7 ಗಂಟೆ ಸುತ್ತು ಹೊಡೆದ ವಿಮಾನ!


ಲಿಫ್ಟ್ ನಲ್ಲಿ ಸಿಲುಕಿಕೊಂಡವರ ರಕ್ಷಣೆ:


ರಕ್ಷಣಾ ಸಿಬ್ಬಂದಿ ಆ ಲಿಫ್ಟ್ ಅನ್ನು ಸರಿಪಡಿಸಲು ಪ್ರಯತ್ನಿಸಿದರು, ಆದರೆ ಅದು ಸರಿ ಹೋಗಲಿಲ್ಲ. ನಂತರ ಅದನ್ನು ಸರಿಪಡಿಸಲು ಅಗ್ನಿಶಾಮಕ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಯಿಸಬೇಕಾಯಿತು. ಇದು ಸಾಮಾನ್ಯವಾದ ಲಿಫ್ಟ್ ನಲ್ಲಿ ಸಿಲುಕಿ ಹಾಕಿಕೊಂಡಿರುವ ಘಟನೆ ಅಲ್ಲ ಅಂತ ಅಗ್ನಿಶಾಮಕ ಸಿಬ್ಬಂದಿಗಳಿಗೆ ಅರ್ಥವಾಯಿತಂತೆ. ನಾವು ಬಹುಶಃ ಐದು ಅಡಿ ಎತ್ತರಕ್ಕೆ ಏರಿದ್ದೇವೆ ಅಂತ ಅನ್ಸುತ್ತೆ, ನಂತರ ಆ ಲಿಫ್ಟ್ ನ ಬಾಗಿಲುಗಳು ಸಿಕ್ಕಿಹಾಕಿಕೊಂಡಿವೆ. ನಾವು ಆ ಬಾಗಿಲುಗಳನ್ನು ತೆರೆಯಲು ಪ್ರಾರಂಭಿಸಿದೆವು, ಆದರೆ ನನಗೆ ಅದು ಸಾಧ್ಯವಾಗಲಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿಗಳು ತಿಳಿಸಿದ್ದಾರೆ.
ನಂತರದಲ್ಲಿ ಷಾರ್ಲೆಟ್ ಅಗ್ನಿಶಾಮಕ ಇಲಾಖೆಯು ನಡೆದ ಈ ಘಟನೆಯನ್ನು ನವವಿವಾಹಿತರೊಂದಿಗೆ ತೆಗೆಸಿಕೊಂಡ ಫೋಟೋವೊಂದಿಗೆ ತನ್ನ ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದೆ.


ಘಟನೆಯ ಬಗ್ಗೆ ಇಲ್ಲಿದೆ ಮಾಹಿತಿ:


ಘಟನೆ ಬಗ್ಗೆ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ವಿವರಿಸಿದ ಅಗ್ನಿಶಾಮಕ ಇಲಾಖೆ, "ದಂಪತಿಗಳಿಗೆ ಅಭಿನಂದನೆಗಳು. ನಮ್ಮನ್ನು ಔಪಚಾರಿಕವಾಗಿ ಮದುವೆಗೆ ಆಹ್ವಾನಿಸಲಾಗಿಲ್ಲವಾದರೂ, ನಾವು ಆ ಸಮಾರಂಭಕ್ಕೆ ಹೋಗಬೇಕಾಯಿತು. ಇಂದು ಮುಂಜಾನೆ ನಮಗೆ ಕರೆ ಬಂತು. ಷಾರ್ಲೆಟ್ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ, ಮೊದಲ ಮತ್ತು ಎರಡನೇ ಮಹಡಿಯ ನಡುವಿನ ಹೋಟೆಲ್ ಎಲಿವೇಟರ್ ನಲ್ಲಿ 6 ಜನರು ಸಿಕ್ಕಿಬಿದಿದ್ದರು. ಎಲಿವೇಟರ್ ನಿಂದ ಹೊರಗೆ ಸಿಕ್ಕಿಬಿದ್ದವರನ್ನು ನಾಲ್ಕನೇ ಮಹಡಿಯಲ್ಲಿರುವ ಸುರಕ್ಷಿತ ಪ್ರವೇಶ ಸ್ಥಳಕ್ಕೆ ಕರೆದೊಯ್ಯಲು ಹರ ಸಾಹಸ ಪಡಬೇಕಾಯಿತು.


ಹೀಗೆ ಸುರಕ್ಷಿತವಾಗಿ ರಕ್ಷಿಸಿದವರಲ್ಲಿ ಮದುವೆ ಆರಕ್ಷತೆಗೆ ಹೋಗಬೇಕಾಗಿದ್ದ ವಧು-ವರರು ಸೇರಿ ಆರು ಮಂದಿ ಒಳಗೆ ಇದ್ದರು. ಅದೃಷ್ಟವಶಾತ್, ಯಾರಿಗೂ ವೈದ್ಯಕೀಯ ಆರೈಕೆಯ ಅಗತ್ಯವಿರಲಿಲ್ಲ ಎಂದು ತಿಳಿಸಿದೆ. ಈ ಪೋಸ್ಟ್ ಅನ್ನು ಫೆಬ್ರವರಿ 19 ರಂದು ಹಂಚಿಕೊಳ್ಳಲಾಗಿದೆ. ಶೇರ್ ಮಾಡಿದಾಗಿನಿಂದ, ಇದನ್ನು 1000ಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ. ಈ ಪೋಸ್ಟ್ ಗೆ ಕಾಮೆಂಟ್ ಮಾಡುತ್ತಾ ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರ "ಎಂತಹ ಸುಂದರ ಜೋಡಿ.. ಸಂತೋಷದ ವಿವಾಹಕ್ಕೆ ಶುಭ ಹಾರೈಕೆಗಳು! ಅಗ್ನಿಶಾಮಕ ಸಿಬ್ಬಂದಿಯವರು ಒಳ್ಳೆಯ ಕೆಲಸ ಮಾಡಿದ್ದಾರೆ” ಎಂದು ಹೇಳಿದ್ದಾರೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು