• Home
  • »
  • News
  • »
  • trend
  • »
  • ಶಾನೇ ಟಾಪ್​​ ಆಗ್ವಳೆ ನಮ್​ ಹುಡ್ಗಿ.. ಹೆಣ್ಣು ಮಗು ಹುಟ್ಟಿದ್ದಕ್ಕೆ ಹೆಲಿಕಾಪ್ಟರ್​ನಲ್ಲಿ ವೆಲ್​ಕಮ್​..!

ಶಾನೇ ಟಾಪ್​​ ಆಗ್ವಳೆ ನಮ್​ ಹುಡ್ಗಿ.. ಹೆಣ್ಣು ಮಗು ಹುಟ್ಟಿದ್ದಕ್ಕೆ ಹೆಲಿಕಾಪ್ಟರ್​ನಲ್ಲಿ ವೆಲ್​ಕಮ್​..!

New born daughter brought home in chopper in Rajasthan village

New born daughter brought home in chopper in Rajasthan village

  • Share this:

ಜೈಪುರ (ಏ.22) : ಗಂಡು ಮಗುವಿನ ವ್ಯಾಮೋಹ, ಹೆಣ್ಣೆಂದರೆ ತಾತ್ಸಾರ ಇಂದಿಗೂ ನಮ್ಮ ಸಮಾಜದಲ್ಲಿ ಕೊನೆಯಾಗಿಲ್ಲ. ತಾಯಿಯಾಗಿ, ಪತ್ನಿಯಾಗಿ, ಸೋದರಿಯಾಗಿ ಬೇಕಿರುವ ಹೆಣ್ಣು ಮಗಳಾಗಿ ಮಾತ್ರ ಬೇಡ ಎನ್ನುವವರು ಇಂದಿಗೂ ಇದ್ದಾರೆ. ಆದರೆ ಈ ಮಾತಿಗೆ ಅಪವಾದ ಎಂಬಂತೆ ರಾಜಸ್ಥಾನದ ಕುಟುಂಬವೊಂದು ಹೆಣ್ಣು ಮಗು ಹುಟ್ಟಿದಕ್ಕೆ ಯಾರೂ ಊಹಿಸದ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಪುಟ್​ ಲಕ್ಷ್ಮಿಯನ್ನು ಹೆಲಿಕಾಪ್ಟರ್​ ಮೂಲಕ ಮನೆಗೆ ಕರೆ ತಂದಿದ್ದಾರೆ. 1 ತಿಂಗಳ ಹೆಣ್ಣು ಮಗು ಹಾಗೂ ತಾಯಿಯನ್ನು ತವರು ಮನೆಯಿಂದ ಹೆಲಿಕಾಪ್ಟರ್​ ಮೂಲಕ ಕರೆ ತಂದಿದ್ದಾರೆ. ಇದಕ್ಕೆ ವಿಶೇಷ ಕಾರಣವೂ ಇದೆ.


ರಾಜಸ್ಥಾನದ ನಗೂರ್​ ಜಿಲ್ಲೆಯ ನಿಂಬ್ಡಿ ಚಂದವಾತ್​ ಎಂಬ ಗ್ರಾಮದ ಮದನ್​​ಲಾಲ್​ ಕುಟುಂಬದಲ್ಲಿ ಕಳೆದ 35 ವರ್ಷಗಳಿಂದ ಹೆಣ್ಣು ಮಗು ಜನಿಸಿರಲಿಲ್ಲ. ಗಂಡು ಸಂತಾನವನ್ನೇ ನೋಡಿದ್ದ ಕುಟುಂಬ ಹೆಣ್ಣು ಮಗುವಿಗಾಗಿ ಹಂಬಲಿಸಿತ್ತು. ಇಡೀ ಕುಟುಂಬದ ಮೊರೆ ಫಲಿಸಿ ತಿಂಗಳ ಹಿಂದೆ ಮದನ್​ಲಾಲ್​ ಅವರ ಪುತ್ರ ಹನುಮಾನ್​ ರಾಮ್​ ಪ್ರಜಾಪತ್​​ ಅವರಿಗೆ ಹೆಣ್ಣು ಮಗು ಜನಿಸಿತ್ತು. 35 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದ್ದಕ್ಕೆ ಎಲ್ಲರೂ ಸಂಭ್ರಮಿಸಿದ್ದರು.


ತಾಯಿಯ ತವರು ಮನೆಯಲ್ಲಿ ಜನಿಸಿದ್ದ ಮಗುವನ್ನು ವಿಶೇಷವಾಗಿ ಮನೆಗೆ ಕರೆತರಬೇಕೆಂದು ಅಜ್ಜ ಮದನ್​ಲಾಲ್​ ನಿರ್ಧರಿಸಿದ್ದರು. ಹೆಲಿಕಾಪ್ಟರ್​ ಮೂಲಕ ಮನೆಗೆ ಲಕ್ಷ್ಮಿ ಬರಲೆಂದು 4.5 ಲಕ್ಷ ಖರ್ಚು ಮಾಡಿ ಕಾಪ್ಟರ್​ ಬುಕ್​ ಮಾಡಿದ್ದರು. ಇದಕ್ಕಾಗಿ 2 ಕಡೆ ಹೆಲಿಪ್ಯಾಡ್​ ನಿರ್ಮಿಸಲು ಜಿಲ್ಲಾಧಿಕಾರಿಗಳಿಂದ ಅನುಮತಿಯನ್ನು ಪಡೆದುಕೊಂಡಿದ್ದರು. ನಿಂಬ್ಡಿ ಚಂದವಾತ್ ಗ್ರಾಮದಿಂದ 30 ಕಿಲೋ ಮೀಟರ್​ ದೂರವಿರುವ ತವರು ಮನೆಯಿಂದ ಹೆಲಿಕಾಪ್ಟರ್​ ಮೂಲಕ ತಾಯಿ-ಮಗುವನ್ನು ಕರೆತರಲಾಗಿದೆ.


ಇದನ್ನು ಓದಿ: Viral Video : ಜಾರಿ ಬೀಳುತ್ತಿದ್ದ ವ್ಹೀಲ್​​ಚೇರ್​ನಲ್ಲಿದ್ದ ವೃದ್ಧನನ್ನು ಅಚ್ಚರಿಯ ರೀತಿಯಲ್ಲಿ ಕಾಪಾಡಿದ ಮಹಿಳೆ!


ನಿನ್ನೆ ರಾಮನವಮಿಯಾದ ಶುಭದಿನದಂದು ಹೆಲಿಕಾಪ್ಟರ್​ ಮೂಲಕ ಪುಟ್ಟ ಕಂದಮ್ಮ ತಂದೆಯ ಮನೆಗೆ ಬಂದಿದ್ದಾಳೆ. ಹೆಲಿಕಾಪ್ಟರ್​ ಗ್ರಾಮಕ್ಕೆ ಬಂದಿಳಿಯುತ್ತಿದಂತೆ ಇಡೀ ಗ್ರಾಮದ ಜನತೆ ಒಂದೆಡೆ ಸೇರಿ ಸಂಭ್ರಮಿಸಿದ್ದಾರೆ. ತಾಯಿ-ಮಗುವಿನ ಮೇಲೆ ಗುಲಾಬಿ ಹೂವಿನ ಎಸಳುಗಳನ್ನು ಎಸೆದು ಶುಭ ಕೋರಿದ್ದಾರೆ. ದಾರಿಯುದ್ದಕ್ಕೂ ಗ್ರಾಮಸ್ಥರು ಭಜನೆ ಮಾಡಿ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.


ಮಗುವಿನ ತಂದೆ ಪುತ್ರ ಹನುಮಾನ್​ ರಾಮ್​ ಪ್ರಜಾಪತ್ ಮಾತನಾಡಿ, ಈ ಮೂಲಕ ನಾನು ಸಮಾಜಕ್ಕೆ ಸಂದೇಶ ನೀಡಲು ಬಯಸುತ್ತೇನೆ. ಗಂಡು ಮಗು ಹುಟ್ಟಿದಾಗ ಮಾತ್ರವಲ್ಲ ಹೆಣ್ಣು ಮಗು ಜನಿಸಿದಾಗಲು ಸಂಭ್ರಮಿಸಬೇಕು. ಹೆಣ್ಣು ಮಗು ಎಂದು ತಾತ್ಸಾರ ಮಾಡಬಾರದು ಎಂದಿದ್ದಾರೆ. ಹೆಲಿಪ್ಯಾಡ್​​ ನಿರ್ಮಾಣಕ್ಕೆ ಅನುಮತಿ ನೀಡಿದ ಜಿಲ್ಲಾಡಳಿತವೂ ಇದೊಂದು ಜಾಗೃತಿ ಕೆಲಸವಾಗಬೇಕು. ಎಲ್ಲಾ ಕುಟುಂಬಗಳೂ ಇವರಂತೆ ಹೆಣ್ಣು ಮಗು ಜನಿಸಿದಾಗ ಸಂಭ್ರಮಿಸಬೇಕು ಎಂದಿದ್ದಾರೆ. ಪುಟ್​​ ಲಕ್ಷ್ಮಿಯನ್ನು ರಾಯಲ್​​ ಆಗಿ ಅಪ್ಪನ ಮನೆ ಸೇರಿದ್ದಾಳೆ.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು