ವೈರಲ್​ ಆಯ್ತು ಹೃತಿಕ್​ ರೋಷನ್​​ ಮೇಮ್​; ಈ ಫನ್ನಿ ಮಾತಿಗೆ ನೆಟ್ಟಿಗರು ಫಿದಾ

ಈ ಎರಡು ಪದಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಸುವಂತಹ ಮೇಮ್ ಆಗಿದೆ.

ಹೃತಿಕ್​ ರೋಷನ್

ಹೃತಿಕ್​ ರೋಷನ್

  • Share this:

ಇತ್ತೀಚೆಗೆ ನಾವು ಚಿತ್ರರಂಗದ ನಾಯಕ ನಟರ, ನಟಿಯರ, ಹಾಸ್ಯ ಕಲಾವಿದರ ಮತ್ತು ಖಳನಾಯಕರ ಯಾವುದೋ ಚಿತ್ರದ ದೃಶ್ಯವನ್ನು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಮೇಮ್‌ಗಳಾಗಿ ಉಪಯೋಗಿಸುತ್ತಿರುವುದನ್ನು ನಾವು ನೋಡುತ್ತೇವೆ.ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಹಂಚಿಕೊಳ್ಳುವಂತಹ ಫೋಟೋ ಅಥವಾ ವೀಡಿಯೋ ಗಳಿಗೆ ಪ್ರತಿಕ್ರಿಯಿಸಲು ಈ ದೃಶ್ಯಗಳನ್ನು ಮೇಮ್ ಗಳಾಗಿ ಹೆಚ್ಚಾಗಿ ಬಳಸುತ್ತಿರುವುದನ್ನು ನಾವು ನೋಡುತ್ತೇವೆ.


ಜೋಯಾ ಅಖ್ತರ್ ಅವರ 'ಜಿಂದಗಿ ನಾ ಮಿಲೇಗಿ ದುಬಾರ' ಚಿತ್ರದಲ್ಲಿ ನಾಯಕ ನಟರಾಗಿರುವ ಹೃತಿಕ್ ರೋಷನ್ ಮತ್ತು ಫರ್ಹಾನ್ ಅಖ್ತರ್ ಪಾತ್ರಗಳ ನಡುವೆ ಬಿಸಿ ಬಿಸಿ ಸಂಭಾಷಣೆಯನ್ನು ಒಳಗೊಂಡಿರುವ ದೃಶ್ಯವನ್ನು ಒಮ್ಮೆ ನೆನಪಿಸಿಕೊಳ್ಳಿ.ಅಲ್ಲಿ ಒಂದು ಚಿತ್ರದ ಸನ್ನಿವೇಶದಲ್ಲಿ ಇಬ್ಬರು ತುಂಬಾ ಗಂಭೀರವಾಗಿ ವಿಷಯವನ್ನು ಚರ್ಚಿಸುವಾಗ “ಇದು ತಮಾಷೆಯಲ್ಲ” (IS NOT FUNNY) ಎಂದು ಹೇಳಿದರು. ಈ ಎರಡು ಪದಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಸುವಂತಹ ಮೇಮ್ ಆಗಿದೆ.


ನೆಟ್ಟಿಗರು ಇದನ್ನು ತಮ್ಮ ದೈನಂದಿನ ಜೀವನದಲ್ಲಿ ವಿವಿಧ ಸನ್ನಿವೇಶಗಳಿಗೆ ಪ್ರತಿಕ್ರಿಯಿಸಲು ಇದನ್ನು ಬಳಸುತ್ತಿದ್ದಾರೆ. ಜಿಂದಗಿ ನಾ ಮಿಲೇಗಿ ದೊಬಾರಾ ಚಿತ್ರದಲ್ಲಿ ಫರ್ಹಾನ್ ಅವರು ಇಮ್ರಾನ್ ಪಾತ್ರದಲ್ಲಿದ್ದು, ಹೃತಿಕ್ ಅವರು ಅರ್ಜುನ್ ಪಾತ್ರವನ್ನು ನಿರ್ವಹಿಸಿದ್ದರು. ಅವರ ಮೊಬೈಲ್ ಫೋನ್ ಅನ್ನು ಕಾರಿನಿಂದ ಹೊರಗೆ ಎಸೆಯುತ್ತಾರೆ, ಇದರ ನಂತರ "ಇದು ತಮಾಷೆಯಲ್ಲ" ದೃಶ್ಯವು ನಡೆಯುತ್ತದೆ.

ಮೂವರು ಸ್ನೇಹಿತರು ಸ್ಪೇನ್ ಗೆ ಪ್ರವಾಸಕ್ಕೆಂದು ತೆರಳುತ್ತಿರುವ ಸಂದರ್ಭದಲ್ಲಿ ಈ ಸನ್ನಿವೇಶ ನಡೆಯುತ್ತದೆ. ಇದೆಲ್ಲವೂ ಶುರುವಾಗಿದ್ದು ನೆಟ್ ಫ್ಲಿಕ್ಸ್ ಅವರು ಹೃತಿಕ್ ಅವರ ಅರ್ಜುನ್ ಪಾತ್ರದ ಫೋಟೋ ಹಾಕಿ ಇದಕ್ಕೆ ಶೀರ್ಷಿಕೆ ಬರೆಯಿರಿ ಎಂದು ಟ್ವಿಟರ್‌ನಲ್ಲಿ ನೆಟ್ಟಿಗರನ್ನು ಕೇಳಿತ್ತು. ಆಗಲೇ ಇದು ತುಂಬಾ ಜನರ ಕಣ್ಣಿಗೆ ಬಿದ್ದಿದ್ದು ಮತ್ತು ಟ್ರೆಂಡಿಂಗ್ ಮೇಮ್ ಆಗಿದ್ದು ಎಂದು ಹೇಳಲಾಗುತ್ತಿದೆ.


ಒಬ್ಬ ಬಳಕೆದಾರರು ಇದಕ್ಕೆ ಪ್ರತಿಕ್ರಿಯಿಸಿ “ನೆಟ್‌ಫ್ಲಿಕ್ಸ್ ಕಂಪೆನಿಯ ಸಾಮಾಜಿಕ ಮಾಧ್ಯಮಕ್ಕಾಗಿ ಕೆಲಸ ಮಾಡುವಂತೆ ಮಾಡುವುದು ತಮಾಷೆಯಲ್ಲ” ಎಂದು ಹಾಸ್ಯ ಮಾಡಿದ್ದಾರೆ.


ಪೆಟ್ರೋಲ್ ಬೆಲೆ ಏರಿಕೆಯಿಂದ ಹಿಡಿದು, ದುಃಖದ ಹಾಡುಗಳನ್ನು ಪೋಸ್ಟ್ ಮಾಡುವ ಜನರು, ಸುದೀರ್ಘವಾದ ಲಾಕ್‌ಡೌನ್‌ನ ನಂತರ ಕಾಲೇಜುಗಳನ್ನು ಪುನಃ ತೆರೆಯುವ ಎಲ್ಲಾ ವಿಷಯಗಳಿಗೂ “ಇದು ತಮಾಷೆಯಲ್ಲ” ಎಂದು ಹೇಳಿ ಈ ಮೇಮ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿಕೊಂಡಿದ್ದಾರೆ.

ಜೋಯಾ ಅಖ್ತರ್ ಅವರ ಈ ಚಿತ್ರವು ಸ್ನೇಹದ ಕುರಿತಾದ ಚಲನಚಿತ್ರಗಳಲ್ಲಿ ಒಂದಾಗಿದ್ದು, ಫರ್ಹಾನ್ ಅಖ್ತರ್, ಹೃತಿಕ್ ರೋಷನ್, ಅಭಯ್ ಡಿಯೋಲ್, ಕತ್ರಿನಾ ಕೈಫ್ ಮತ್ತು ಕಲ್ಕಿ ಕೊಚ್ಲಿನ್ ನಟಿಸಿದ ಸಿನಿಮಾವು ನಮಗೆ ಕೆಲವು ಸ್ಮರಣೀಯ ಮತ್ತು ಉಲ್ಲಾಸದ ದೃಶ್ಯಗಳನ್ನು ನೀಡಿದೆ.


ಜೋಯಾ ಅವರ ಟೈಗರ್ ಬೇಬಿ ಪ್ರೊಡಕ್ಷನ್ಸ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಚಿತ್ರೀಕರಣದ ಸಮಯದಲ್ಲಿ ತೆರೆಮರೆಯಲ್ಲಿ ಏನಾಯಿತು ಎಂಬುದನ್ನು ಹಂಚಿಕೊಂಡಿದ್ದಾರೆ.


ತನ್ನ ಶೂಟಿಂಗ್ ಅನುಭವವನ್ನು ಹೇಳುತ್ತಾ, ಡಿಯೋಲ್ "ಇದು ತಮಾಷೆಯಲ್ಲ" ದೃಶ್ಯದ ಬಗ್ಗೆ ಆಸಕ್ತಿದಾಯಕ ಕಥೆಯನ್ನು ಹಂಚಿಕೊಂಡರು. ವೀಡಿಯೊದಲ್ಲಿ ಹೃತಿಕ್ ತನ್ನ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸುತ್ತಿದ್ದಂತೆ ಅವರು ಎಂಜಿನ್ ಸ್ವಿಚ್ ಆಫ್ ಮಾಡಲು ಮರೆತು ಹೊರಬಂದರು ಕಾರು ಹಾಗೆಯೇ ಸ್ವಲ್ಪ ಮುಂದಕ್ಕೆ ಚಲಿಸಿತು. ಫರ್ಹಾನ್ ಮತ್ತು ನಾನು ಕಾರಿನಿಂದ ಕೂಡಲೇ ಗಾಬರಿಗೊಂಡು ಹೊರಗೆ ಓಡಿ ಬಂದೆವು ಎಂದು ಹೇಳಿದ್ದಾರೆ.


First published: