ಸ್ಟ್ರೀಮಿಂಗ್ (Streaming) ದೈತ್ಯ ನೆಟ್ಫ್ಲಿಕ್ಸ್ (Netflix) ಭಾರತದಲ್ಲಿ ತನ್ನ ಸಬ್ಸ್ಕ್ರಿಪ್ಶನ್ (Subscription ) ಬೆಲೆಗಳನ್ನು ಕಡಿಮೆ ಮಾಡಿದೆ. ದೇಶದಲ್ಲಿ ತನ್ನ ಹೊಸ ಬೆಲೆಗಳನ್ನು ಕಂಪನಿಯು ಇದೀಗ ಘೋಷಿಸಿದ್ದು, (Announced) ಈ ಹಿಂದೆ ತಿಂಗಳಿಗೆ 199 ರೂಗಳ ಬದಲಿಗೆ 149 ರೂಗಳ ಯೋಜನೆಯನ್ನು ( Introduced ) ಪರಿಚಯಿಸಿದೆ. ಎಲ್ಲಾ ಕಸ್ಟಮರ್ಗಳಿಗೆ ಈ ಹೊಸ ಯೋಜನೆಯು ಅನ್ವಯವಾಗಲಿದ್ದು, ಭಾರತೀಯ ಬಳಕೆದಾರರಿಗೆ (Indian users) ಇದು ಹೆಚ್ಚು ದುಬಾರಿ ಸ್ಟ್ರೀಮಿಂಗ್ ಸೇವೆಯಾಗಿರುವುದರಿಂದ ದೇಶದಲ್ಲಿ ಹೆಚ್ಚಿನ ಸಬ್ಸ್ಕ್ರೈಬರ್ಗಳನ್ನು ಪಡೆಯುವ ನಿಟ್ಟಿನಲ್ಲಿ ನೆಟ್ಫ್ಲಿಕ್ಸ್ ಯೋಜನೆಗಳ ದರವನ್ನು ಕಡಿಮೆ ಮಾಡಿದೆ.
ಹೊಸ ಪ್ಲಾನ್
ಹೊಸ ಪ್ಲಾನ್ಗಳ ಮೂಲಕ ಹೆಚ್ಚಿನ ಶ್ರೇಣಿಯಲ್ಲಿ ತನ್ನ ಸೇವೆಗಳ ಲಭ್ಯತೆಯನ್ನು ದೇಶದಲ್ಲಿ ಒದಗಿಸುವ ನಿರ್ಧಾರವನ್ನು ಅಮೆರಿಕಾದ ಸ್ಟ್ರೀಮಿಂಗ್ ದೈತ್ಯ ಮಾಡಿದೆ.
ಇದನ್ನೂ ಓದಿ: Hayu: ಭಾರತದಿಂದ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ಅನ್ನು ದೂರ ಸರಿಸಲು ಬಂದಿದೆ ಹೊಸ OTT ಸೇವೆ!
ಹೊಸ ಬೆಲೆಗಳೊಂದಿಗೆ ಈ ಹಿಂದೆ ಇದ್ದ 199 ರೂ.ಗಳ ಮೊಬೈಲ್ ಯೋಜನೆಯು ಇದೀಗ ಪ್ರತಿ ತಿಂಗಳಿಗೆ 149 ರೂಗಳಲ್ಲಿ ದೊರೆಯಲಿದೆ. 499 ರೂಗಳ ಬೇಸಿಕ್ ಪ್ಲಾನ್ ಇದೀಗ 199 ರೂ ಗಳ ಬೆಲೆಯಲ್ಲಿ ದೊರೆಯಲಿದ್ದು ಇದು ಬೆಲೆ ಇಳಿಕೆಯಾಗಿ ಪರಿಗಣಿತವಾಗಿದೆ.
ಪ್ರತಿ ತಿಂಗಳ 649 ರೂ ಗಳ (ಸ್ಟ್ಯಾಂಡರ್ಡ್) ಪ್ಲಾನ್ ಇದೀಗ 499 ರೂಗಳಲ್ಲಿ ಲಭ್ಯವಿದ್ದು, 799 ರೂಗಳ (ಪ್ರೀಮಿಯಮ್) ಯೋಜನೆಯು ಇದೀಗ 649 ರೂಗಳಲ್ಲಿ ಬಳಕೆದಾರರಿಗೆ ದೊರೆಯಲಿದೆ. ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ಹಾಟ್ಸ್ಟಾರ್ ಹಾಗೂ ಇನ್ನಷ್ಟು ಸ್ಟ್ರೀಮಿಂಗ್ ಸೇವೆಗಳಿಗೆ ನೆಟ್ಫ್ಲಿಕ್ಸ್ನ ಈ ಹೊಸ ಬೆಲೆಗಳು ಕಠಿಣ ಪೈಪೋಟಿಯನ್ನು ನೀಡಲಿವೆ.
149 ರೂಗಳ ಬೆಲೆಯಲ್ಲಿ ಆರಂಭ
ಈ ಯೋಜನೆಗಳ ಬೆಲೆ ಕಡಿಮೆಯಾಗಿದ್ದರೂ ಈ ಯೋಜನೆಗಳ ಪ್ರಯೋಜನಗಳು ಹಾಗೆಯೇ ಇದ್ದು ಈ ವಿಷಯದಲ್ಲಿ ಯಾವುದೇ ಮಾರ್ಪಾಡುಗಳಿಲ್ಲ. ನೆಟ್ಫ್ಲಿಕ್ಸ್ ಮೊಬೈಲ್ ಪ್ಲಾನ್ ಇದೀಗ 149 ರೂಗಳ ಬೆಲೆಯಲ್ಲಿ ಆರಂಭಗೊಂಡಿದ್ದು ಇದು ನೆಟ್ಫ್ಲಿಕ್ಸ್ ಅನ್ನು ಮೊಬೈಲ್ ಇಲ್ಲವೇ ಟ್ಯಾಬ್ಲೆಟ್ನಲ್ಲಿ 480ಪಿ ರೆಸಲ್ಯೂಶನ್ನಲ್ಲಿ ಚಲಾಯಿಸಲಿದೆ. ಈ ಪ್ಲಾನ್ನಲ್ಲಿ ಒಂದೇ ಡಿವೈಸ್ನಲ್ಲಿ ಒಂದು ಬಾರಿಗೆ ಮಾತ್ರವೇ ಖಾತೆಯನ್ನು ಪ್ರವೇಶಿಸಬಹುದಾಗಿದೆ.
480ಪಿ ರೆಸಲ್ಯೂಶನ್
199 ರೂಗಳ ಬೇಸಿಕ್ ಪ್ಲಾನ್ ಕೂಡ 480ಪಿ ರೆಸಲ್ಯೂಶನ್ಗೆ ಸೀಮಿತವಾಗಿದ್ದು ಬಳಕೆದಾರರು ಖಾತೆಯನ್ನು ಕಂಪ್ಯೂಟರ್ ಅಥವಾ ಟಿವಿಯಲ್ಲಿ ಪ್ರವೇಶಿಸಬಹುದಾಗಿದೆ. ಡಿವೈಸ್ ಮಿತಿ ಇಲ್ಲಿ ಕೂಡ ಒಂದೇ ಬಾರಿಗೆ ಮಾತ್ರ ಸೀಮಿತವಾಗಿದೆ. ಸ್ಟ್ಯಾಂಡರ್ಡ್ ಪ್ಲಾನ್ ಬೆಲೆ ಇದೀಗ 499 ರೂಗಳಲ್ಲಿ ದೊರೆಯುತ್ತಿದ್ದು ಒಂದು ಬಾರಿಗೆ ಎರಡು ಡಿವೈಸ್ಗಳ ಬೆಂಬಲವನ್ನು ನೀಡಲಿದೆ ಹಾಗೂ ರೆಸಲ್ಯೂಶನ್ 1080ಪಿ ಆಗಿದೆ. ಈ ಪ್ಲಾನ್ನ ಸಬ್ಸ್ಕ್ರೈಬರ್ಗಳು ಯಾವುದೇ ಡಿವೈಸ್ನಲ್ಲಿ ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರ್ ಅಥವಾ ಟಿವಿಯಲ್ಲಿ ವಿಷಯಗಳನ್ನು ವೀಕ್ಷಿಸಬಹುದಾಗಿದೆ.
ನಾಲ್ಕು ಡಿವೈಸ್ ಬಳಕೆ
ಪ್ರೀಮಿಯಮ್ ನೆಟ್ಫ್ಲಿಕ್ಸ್ ಪ್ಲಾನ್ ಇದೀಗ 649 ರೂಗಳಲ್ಲಿ ಲಭ್ಯವಿದ್ದು, ಒಮ್ಮೆಗೆ ನಾಲ್ಕು ಡಿವೈಸ್ಗಳಲ್ಲಿ ಬಳಕೆದಾರರು ಕಂಟೆಂಟ್ ವೀಕ್ಷಿಸಬಹುದಾಗಿದೆ. ಈ ಪ್ಲಾನ್ನ ಸಬ್ಸ್ಕ್ರೈಬರ್ಗಳು 4ಕೆ ರೆಸಲ್ಯೂಶನ್ ಕಂಟೆಂಟ್ ಅನ್ನು ವೀಕ್ಷಿಸಬಹುದಾಗಿದ್ದು ಎಲ್ಲಾ ಡಿವೈಸ್ಗಳಲ್ಲಿ ಅಂದರೆ ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರ್ ಟಿವಿಗಳಲ್ಲಿ ತಮ್ಮ ಮೆಚ್ಚಿನ ನೆಟ್ಫ್ಲಿಕ್ಸ್ ಮನರಂಜನಾ ಕಂಟೆಂಟ್ಗಳನ್ನು ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ: Netflix : ನೆಟ್ಫ್ಲಿಕ್ಸ್ನಲ್ಲಿ ಅತಿಹೆಚ್ಚು ವೀಕ್ಷಿಸಿದ ಸಿನಿಮಾ `ರೆಡ್ ನೋಟಿಸ್‘, ಸೀರಿಸ್ `ಸ್ಕ್ವಿಡ್ ಗೇಮ್’ !
ಒಟಿಟಿ ಫ್ಲಾಟ್ಫಾರ್ಮ್
ನೆಟ್ಫ್ಲಿಕ್ಸ್ , ಅಮೆಜಾನ್ ಪ್ರೈಮ್, ಡಿಸ್ನಿ+ಹಾಟ್ಸ್ಟಾರ್ ಹೀಗೆ ಒಟಿಟಿ ಜನರ ನೆಚ್ಚಿನ ತಾಣವಾಗಿದೆ. ಇದರ ಮೂಲಕ ಸಿನಿಮಾ , ಸಿರೀಸ್ ಹಾಗೂ ಕೆಲವೊಂದು ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ. ಟೆಲಿಕಾಂ ಕಂಪನಿಗಳು ಕೂಡ ಒಟಿಟಿ ಫ್ಲಾಟ್ಫಾರ್ಮ್ಗಳನ್ನು ಬಳಸಲು ಉಚಿತ ಚಂದದಾದಾರಿಕೆ ಸೇರಿದಂತೆ, ತಿಂಗಳ ಅಥವಾ ವಾರ್ಷಿಕ ಪ್ಲಾನ್ ಪರಿಚಯಿಸುತ್ತಿರುತ್ತದೆ. ಏರ್ಟೆಲ್ , ರಿಲಯನ್ಸ್ ಜಿಯೋ (Reliance Jio) ಮತ್ತು ವೊಡಾಫೋನ್ ಐಡಿಯಾಗಳ (Vi) ಪೋಸ್ಟ್ಪೇಯ್ಡ್ ಯೋಜನೆಗಳ ಮೂಲಕ OTT ಅಪ್ಲಿಕೇಶನ್ಗಳನ್ನು ಬಳಸುವ ಮತ್ತು ಉಚಿತ ಚಂದಾದಾರಿಕೆಯನ್ನು ನೀಡುತ್ತಾ ಬಂದಿದೆ. ಏರ್ಟೆಲ್ 999 ರೂ. ಪೋಸ್ಟ್ಪೇಯ್ಡ್ ಯೋಜನೆ ಹಾಗೂ ಜಿಯೋದ 999 ರೂ. ಪೋಸ್ಟ್ಪೇಯ್ಡ್ ಯೋಜನೆ ಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ