UAE Flight Fare: ದುಬೈಗೆ ಹೋಗಲು ಈಗ ಹೇಳಿ ಮಾಡಿಸಿದ ಸಮಯ.. ವಿಮಾನ ಟಿಕೆಟ್ ದರ ಫುಲ್ ಕಮ್ಮಿ!

ದೆಹಲಿ ಮಾರ್ಗವಾಗಿ ದುಬೈಗೆ ತೆರಳುವ ಒನ್-ವೇ ಟಿಕೆಟ್‌ ದರ ಇದೀಗ 14 ಸಾವಿರ ರೂ.ಗಳಿಂತ ಕಡಿಮೆಯಾಗಿದ್ದು, ಒಂದು ತಿಂಗಳ ಹಿಂದೆ ಇದೇ ಟಿಕೆಟ್‌ ದರ 40 ಸಾವಿರ ರೂ.ಗಳಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೇಶದ ಪ್ರಮುಖ ನಗರಗಳಿಂದ ಯುಎಇಗೆ (UAE) ಪ್ರಯಾಣಿಸುವ ವಿಮಾನ ಟಿಕೆಟ್‌ ದರ (Flight Fare) ಐದು ತಿಂಗಳ ನಂತರ ಭಾರಿ ಕುಸಿತ ಕಂಡಿದೆ. ದೆಹಲಿ (Delhi) ಮಾರ್ಗವಾಗಿ ದುಬೈಗೆ ತೆರಳುವ ಒನ್-ವೇ ಟಿಕೆಟ್‌ ದರ ಇದೀಗ 14 ಸಾವಿರ ರೂ.ಗಳಿಂತ ಕಡಿಮೆಯಾಗಿದ್ದು, ಒಂದು ತಿಂಗಳ ಹಿಂದೆ ಇದೇ ಟಿಕೆಟ್‌ ದರ 40 ಸಾವಿರ ರೂ.ಗಳಿತ್ತು. ಈ ಬಗ್ಗೆ ಮಾಹಿತಿ ನೀಡಿರುವ ಹೈದರಾಬಾದ್‌ನ ಮುಜಾ಼ಫಿರ್‌ ಸರ್ವೀಸಸ್‌ ವ್ಯವಸ್ಥಾಪಕ ಮೊಹಮ್ಮದ್‌ ಒಮರ್‌ ಅಲಿ, ಭಾರತದಿಂದ ಯುಎಇಗೆ ಪ್ರಯಾಣಿಸುವ ವಿಮಾನಗಳ ಟಿಕೆಟ್‌ ದರಗಳು ಅರ್ಧದಷ್ಟು ಕಡಿಮೆಯಾಗಿದೆ. ಕಳೆದ 2021ರ ಡಿಸೆಂಬರ್‌ ವೇಳೆಯಲ್ಲಿ ಭಾರತ-ಯುಎಇ ನಡುವಿನ ವಿಮಾನ ಟಿಕೆಟ್‌ ದರ 37 ಸಾವಿರ (1,814 ದಿರ್ಹಮ್)‌ ರೂ.ಗಳಿತ್ತು. ಆದರೆ ಇದೀಗ ಭಾರತದಿಂದ ಯುಎಇಗೆ ತೆರಳುವ ವಿಮಾನದ ಒನ್‌-ವೇ ಟಿಕೆಟ್‌ ದರ 13,660 ರೂ. (665 ದಿರ್ಹಮ್)‌ ಆಗಿದೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: Elon musk ಹಿಂದಿಕ್ಕಿ 7 ನಿಮಿಷಗಳ ಕಾಲ ವಿಶ್ವದ ಶ್ರೀಮಂತನಾದ UK ಮೂಲದ ಯೂಟ್ಯೂಬರ್!

    ಇನ್ನು ಡಿಸೆಂಬರ್‌ ತಿಂಗಳಲ್ಲಿ ಯುಎಇಗೆ ತೆರಳಿ ಇದೀಗ ಭಾರತಕ್ಕೆ ಹಿಂದಿರುಗಿದ ಪ್ರಯಾಣಿಕರಾದ ಹೀನಾ ಫಾತಿಮಾ ಅವರು, ಕಳೆದ ಅಕ್ಟೋಬರ್‌ನಲ್ಲಿ ನಾನು ಮತ್ತು ನನ್ನ ಮಗು ಇಬ್ಬರಿಂದ 45 ಸಾವಿರ ರೂ.ಗಳನ್ನು ಪಾವತಿಸಿದ್ದೆ. ಆದರೆ ಇದೀಗ ಟಿಕೆಟ್‌ ದರ ಕಡಿಮೆ ಆಗಿರುವುದು ಸಂತೋಷವಾಗಿದೆ ಎಂದು ವಿಮಾನ ಟಿಕೆಟ್‌ ದರ ಇಳಿಕೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

    ಗಗನಕ್ಕೇರಿದ್ದ ಟಿಕೆಟ್​ ದರಗಳು 

    ವಿಮಾನ ಟಿಕೆಟ್‌ ದರ ಇಳಿಕೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಾವೆಲ್‌ ಏಜೆಂಟ್‌ ಸಫಿಯಾ ಎಂಬುವವರು, ವಿಮಾನಯಾನ ಸಂಸ್ಥೆಗಳು ಅಕ್ಟೋಬರ್‌ ಹಾಗೂ ಜನವರಿ ತಿಂಗಳಲ್ಲಿ ದುಬೈಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರಲಿದ್ದು, ಹೀಗಾಗಿ ಈ ಅವಧಿಯಲ್ಲಿ ಟಿಕೆಟ್‌ ದರವು ಹೆಚ್ಚಾಗಿರುತ್ತದೆ. ಅಲ್ಲದೆ 2021ರ ಅಕ್ಟೋಬರ್‌ ವೇಳೆಯಲ್ಲಿ ನಡೆದ ದುಬೈ ಎಕ್ಸ್‌-ಪೋ 2020ಗೆ ಹೆಚ್ಚಿನ ಜನರನ್ನು ಆಹ್ವಾನಿಸುವ ಸಲುವಾಗಿ ಕೋವಿಡ್‌-19 ಮೊದಲ ಡೋಸ್‌ ಲಸಿಕೆ ಪಡೆದ ದುಬೈ ನಿವಾಸಿಗಳು ಹಾಗೂ ಪ್ರವಾಸಿಗರಿಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಈ ಅವಧಿಯಲ್ಲಿ ಭಾರತದಿಂದ ಯುಎಇಗೆ ತೆರಳುವ ವಿಮಾನದ ಟಿಕೆಟ್‌ ದರಗಳು ಗಗನಕ್ಕೇರಿತ್ತು.

    40 ಸಾವಿರ ರೂ.ಗಳಿಗಿಂತ ಹೆಚ್ಚಾಗಿತ್ತು

    ಈ ಅವಧಿಯಲ್ಲಿ ಭಾರತದ ಪ್ರಮುಖ ನಗರಗಳಾದ ಹೈದರಾಬಾದ್‌, ಕೊಚ್ಚಿ, ಕೋಯಿಕ್ಕೋಡ್‌, ದೆಹಲಿ ಮುಂತಾದ ನಗರಗಳಿಂದ ಯುಎಇಗೆ ತೆರಳುವ ವಿಮಾನದ ಟಿಕೆಟ್‌ ದರ 40 ಸಾವಿರ ರೂ.ಗಳಿಗಿಂತ ಹೆಚ್ಚಾಗಿತ್ತು. ಇದರ ನಡುವೆ ಕ್ರಿಸ್‌ಮಸ್‌ ಹಾಗೂ ಹೊಸ ವರ್ಷ ರಜೆಯ ಸಂದರ್ಭದಲ್ಲಿ ಅನೇಕರು ಭಾರತದಿಂದ ಯುಎಇಗೆ ತೆರಳಿದ್ದ ಪರಿಣಾಮವಾಗಿ ಈ ಮಾರ್ಗದ ವಿಮಾನ ಟಿಕೆಟ್‌ ದರದಲ್ಲಿ ಭಾರಿ ಏರಿಕೆಯಾಗಿತ್ತು ಎಂದು ಟ್ರಾವೆಲ್‌ ಏಜೆಂಟ್‌ ವಿವರಿಸಿದರು.

    ಫೆ.28ರವರೆಗೆ ವಿಸ್ತರಣೆ 

    ಈ ನಡುವೆ ಕೇಂದ್ರ ಸರ್ಕಾರವು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಈ ಹಿಂದೆ ಇದ್ದಂತಹ ಏಳು ದಿನಗಳ ಕ್ವಾರೆಂಟೈನ್‌ ಅವಧಿಯನ್ನ ಫೆ.14ರಿಂದ ವಿನಾಯಿತಿ ನೀಡಿದೆ. ಆದರೆ ಎಲ್ಲಾ ವಿದೇಶಿ ಪ್ರಯಾಣಿಕರಿಗೆ 72 ಗಂಟೆಗಳ RT-PCR ಪರೀಕ್ಷೆ ರಿಪೋರ್ಟ್‌ ಕಡ್ಡಾಯಗೊಳಿಸಿರುವ ನಿಯಮವನ್ನು ಮುಂದುವರಿಸಲಾಗಿದೆ. ಇನ್ನು ಭಾರತದಲ್ಲಿ ವಿಧಿಸಲಾಗಿರುವ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ಸೇವೆಗಳ ಅಮಾನತು ಅವಧಿಯನ್ನು ಫೆ.28ರವರೆಗೆ ವಿಸ್ತರಿಸಲಾಗಿದೆ.

    ಇದನ್ನೂ ಓದಿ: Railway Alert: ಮಂಗಳೂರು -ಮಡ್ಗಾವ್ ಸೇರಿದಂತೆ ಅನೇಕ ರೈಲು ಸಂಚಾರದಲ್ಲಿ ವ್ಯತ್ಯಾಯ; ಇಲ್ಲಿದೆ ವಿವರ

    ದೇಶದಲ್ಲಿ ಕೋವಿಡ್-‌19 ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಭಾರತ, 2020ರಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ನಂತರ ಏರ್‌ ಬಬಲ್‌ ಒಪ್ಪಂದದ ಆಧಾರದಲ್ಲಿ ಕೆಲವು ರಾಷ್ಟ್ರಗಳ ನಡುವೆ ಈ ನಿರ್ಬಂಧವನ್ನು ಸಡಿಲಗೊಳಿಸಲಾಗಿತ್ತು. ಅಲ್ಲದೇ ಕೋವಿಡ್‌-19 ಆತಂಕದ ನಡುವೆಯೂ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಬೇಡಿಕೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ವಿಮಾನಯಾನ ಸಂಸ್ಥೆಗಳು ಹೊಸ ಮಾರ್ಗಗಳ ನಡುವೆ ಸೇವೆಯನ್ನು ಆರಂಭಿಸಿವೆ. ಏರ್‌ ಅರೇಬಿಯಾ ವಿಮಾನಯಾನ ಸಂಸ್ಥೆಯು ಅಬುಧಾಬಿ-ಕೊಚ್ಚಿ, ಕೋಯಿಕ್ಕೋಡ್‌-ತಿರುವನಂತಪುರ ನಡುವೆ ನೇರ ವಿಮಾನಯಾನ ಸೇವೆಗಳನ್ನು ಆರಂಭಿಸಿವೆ. ಈ ನಡುವೆ ಭಾರತದಲ್ಲಿರುವ ಕಡಿಮೆ ವೆಚ್ಚದ ಏರ್‌ಲೈನ್ಸ್‌ ಎನಿಸಿರುವ ಗೋ-ಫಸ್ಟ್‌ ವಿಮಾನಯಾನ ಸಂಸ್ಥೆಯು ಶ್ರೀನಗರ-ಶಾರ್ಜಾ ನಡುವೆ ವಾರದಲ್ಲಿ ನಾಲ್ಕು ಬಾರಿ ವಿಮಾನಯಾನ ಸೇವೆಯನ್ನು ನೀಡುತ್ತಿದೆ.
    Published by:Kavya V
    First published: