• Home
  • »
  • News
  • »
  • trend
  • »
  • Navratri 2022: ನವರಾತ್ರಿ, 9 ದಿನಗಳ ವಿಶೇಷ ಹಬ್ಬದ ಬಗ್ಗೆ ತಿಳಿದುಕೊಳ್ಳಬೇಕಾದ ವಿಚಾರಗಳಿವು

Navratri 2022: ನವರಾತ್ರಿ, 9 ದಿನಗಳ ವಿಶೇಷ ಹಬ್ಬದ ಬಗ್ಗೆ ತಿಳಿದುಕೊಳ್ಳಬೇಕಾದ ವಿಚಾರಗಳಿವು

ನವರಾತ್ರಿ 2022

ನವರಾತ್ರಿ 2022

ನವದುರ್ಗೆಯರು ಅಂದರೆ ದುರ್ಗೆಯ ಒಂಭತ್ತು ಅವತಾರಗಳಿಗೆ ಪೂಜೆ ಎಂದಾಗಿದೆ. ಸಂಸ್ಕೃತದಲ್ಲಿ ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳೆಂದು ಉಲ್ಲೇಖಿಸಲಾಗಿದೆ. ವರ್ಷಪೂರ್ತಿ ಹಿಂದೂಗಳು ನಾಲ್ಕು ನವರಾತ್ರಿಗಳನ್ನು ಆಚರಿಸುತ್ತಾರೆ. ಈ ಒಂಭತ್ತು ದಿನಗಳ ಹಬ್ಬ ನವರಾತ್ರಿ ಆಚರಣೆ ಏಕೆ ವಿಶಿಷ್ಟವಾದುದು ಇಲ್ಲಿದೆ ನೋಡಿ

ಮುಂದೆ ಓದಿ ...
  • Share this:

ಒಂಭತ್ತು ದಿನಗಳ ಕಾಲ ವಿದ್ಯುಕ್ತವಾಗಿ ಆಚರಿಸಲಾಗುವ ನವರಾತ್ರಿ (Navratri) ಆರಂಭವಾಗಿ ಇಂದು ಎರಡನೇ ದಿನ. ಹಿಂದೂಗಳಿಗೆ ನವರಾತ್ರಿ ಎಂಬುದು ತುಂಬಾ ಪೂಜನೀಯವಾದುದು ಹಾಗೂ ವಿಶೇಷವಾಗಿ ದೇವಿಯ ಒಂಭತ್ತು ಅವತಾರಗಳಿಗೆ ಒಂಭತ್ತು ದಿನವೂ ಪೂಜೆಯನ್ನು (Pooja) ನಡೆಸಲಾಗುತ್ತದೆ. ಹಾಗಾಗಿಯೇ ನವದುರ್ಗೆಯರು ಅಂದರೆ ದುರ್ಗೆಯ ಒಂಭತ್ತು ಅವತಾರಗಳಿಗೆ ಪೂಜೆ ಎಂದಾಗಿದೆ. ಸಂಸ್ಕೃತದಲ್ಲಿ ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳೆಂದು ಉಲ್ಲೇಖಿಸಲಾಗಿದೆ. ವರ್ಷಪೂರ್ತಿ ಹಿಂದೂಗಳು (Hindus) ನಾಲ್ಕು ನವರಾತ್ರಿಗಳನ್ನು ಆಚರಿಸುತ್ತಾರೆ. ಅದರಲ್ಲಿ ಎರಡು ಅವೆಂದರೆ ಚೈತ್ರ ನವರಾತ್ರಿ ಹಾಗೂ ಶಾರದಿಯ ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಅಂತೆಯೇ ಇವುಗಳ ಆಚರಣೆಯು (Celebration) ಋತುಗಳ ಆರಂಭದೊಂದಿಗೆ ಸಂಭವಿಸುತ್ತದೆ.


ಶಾರದಿಯ ನವರಾತ್ರಿ ಇಲ್ಲವೇ ಶರನ್ನವರಾತ್ರಿಯನ್ನು ಆಶ್ವಿಜ ಶುಕ್ಲ ಪಕ್ಷದ ನವಮಿಯಿಂದ ಪ್ರತಿಪಾದದವರೆಗೆ ಆಚರಿಸಲಾಗುತ್ತದೆ. ಹಾಗೆಯೇ ನವರಾತ್ರಿ ಆಚರಣೆಗಳು ಕೂಡ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ರೀತಿ ಇರುತ್ತದೆ.


ನವರಾತ್ರಿ 2022 ಸಮಯ
ಈ ವರ್ಷ ನವರಾತ್ರಿಯ ಒಂಭತ್ತು ದಿನದ ಆಚಣೆಯು ಸಪ್ಟೆಂಬರ್ 26 ರಿಂದ ಆರಂಭಗೊಂಡು ಅಕ್ಟೋಬರ್ 5 ರವರೆಗೆ ಇರಲಿದೆ. ಒಂಭತ್ತು ದಿನಗಳ ಆಚರಣೆಯಲ್ಲಿ ಭಕ್ತರು ದೇವಿಯ ಒಂಭತ್ತು ಅವತಾರಗಳನ್ನು ಪೂಜಿಸಿ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಾರೆ.


ಒಂಭತ್ತು ದಿನವು ದೇವಿಯ ಒಂಭತ್ತು ರೂಪಗಳಿಗೆ ಪೂಜೆ ಮಾಡಲಾಗುತ್ತದೆ. ಭಕ್ತರು ಈ ದಿನಗಳಂದು ಉಪವಾಸವನ್ನು ಕೈಗೊಳ್ಳುತ್ತಾರೆ. ದೇವಿಯ ಮಂತ್ರವನ್ನು ಪಠಿಸುತ್ತಾರೆ ಹಾಗೂ ಪ್ರಸಾದವನ್ನು ಸಮರ್ಪಿಸುತ್ತಾರೆ. ದೇವಿಯ ಅನುಗ್ರಹವನ್ನು ಪಡೆಯಲು ದೇವರಿಗಾಗಿ ಹರಕೆಗಳನ್ನು ಹೊತ್ತುಕೊಳ್ಳುತ್ತಾರೆ.


ನವರಾತ್ರಿ 2022: ಆಚರಣೆ
ಭಾರತದಲ್ಲಿ ನವರಾತ್ರಿಯನ್ನು ತುಂಬಾ ವಿಶೇಷವಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ರಾಮ್‌ಲೀಲಾ, ರಾಮಯಣದ ದೃಶ್ಯಗಳನ್ನು ಪ್ರದರ್ಶಿಸುವ ಆಚರಣೆಗಳನ್ನು ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಾಂಡ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಆಯೋಜಿಸಲಾಗುತ್ತದೆ. ರಾವಣನ ಪ್ರತಿಕೃತಿ ದಹನವನ್ನು ನಡೆಸುವ ಮೂಲಕ ಕಥೆಯನ್ನು ಅಂತ್ಯಗೊಳಿಸಲಾಗುತ್ತದೆ.


ಇದನ್ನೂ ಓದಿ: Mysuru Dasara: ಮೈಸೂರು ರಾಜ ವಂಶಸ್ಥರ ಖಾಸಗಿ ದರ್ಬಾರ್; ಫೋಟೋ ನೋಡಿ


ನವರಾತ್ರಿಯ ಸಮಯದಲ್ಲಿ ಬಂಧು ಮಿತ್ರರು ಜೊತೆ ಸೇರಿ ಹಬ್ಬವನ್ನು ವಿಧಿವತ್ತಾಗಿ ಆಚರಿಸುತ್ತಾರೆ. ಗುಜರಾತ್‌ನಾದ್ಯಂತ ದಾಂಡಿಯಾವನ್ನು ಆಡಲಾಗುತ್ತದೆ. ಹಾಗೂ ಉಪವಾಸ ಕೂಡ ಈ ಸಮಯದಲ್ಲಿ ಮುಖ್ಯವಾಗುತ್ತದೆ.


ಮೈಸೂರಿನ ದಸರಾಗೆ ನಾಡ ಹಬ್ಬ ಎಂಬ ಹೆಸರೂ ಇದೆ. ಶೃಂಗಾರಗೊಂಡ ಮೈಸೂರು ನಗರವನ್ನು ಕಣ್ತುಂಬಿಕೊಳ್ಳಲು ವಿದೇಶಗಳಿಂದ ಕೂಡ ಪ್ರವಾಸಿಗರ ದಂಡೇ ಆಗಮಿಸುತ್ತದೆ. ವಿಜಯ ದಶಮಿಯ ವಿಜೃಂಭಣೆ, ಜಂಬೂ ಸವಾರಿ, ಝಗಮಗಿಸುವ ವಿದ್ಯುತ್‌ದೀಪಗಳಿಂದ ಹೊಳೆಯುವ ಮೈಸೂರು ಅರಮನೆ ಹೀಗೆ ನಾಡಹಬ್ಬ ದಸರಾವನ್ನು ಪ್ರತಿಯೊಂದು ಮನೆಯವರೂ ಹಬ್ಬದಂತೆಯೇ ಆಚರಿಸುತ್ತಾರೆ.


ಕೋಲ್ಕತ್ತಾದಲ್ಲಿ ದುರ್ಗಾಪೂಜೆ ಅತ್ಯಂತ ವಿಶೇಷ ಹಾಗೂ ಪೂಜನೀಯವಾದುದು. ಅತ್ಯಂತ ಸಡಗರದಿಂದ ದುರ್ಗಾಪೂಜೆಯನ್ನು ನೆರವೇರಿಸಲಾಗುತ್ತದೆ. ಕೋಲ್ಕತ್ತಾದ ದುರ್ಗಾಪೂಜೆಯ ಖ್ಯಾತಿ ಎಷ್ಟಿದೆ ಎಂದರೆ ನವರಾತ್ರಿ ಇಲ್ಲವೇ ದುರ್ಗಾಪೂಜೆ ಎಂದರೆ ಥಟ್ಟನೆ ಕೋಲ್ಕತ್ತಾದ ನೆನಪೇ ಮನದಲ್ಲಿ ಮೂಡುತ್ತದೆ.


ದೇವಿಯ ಒಂಭತ್ತು ಅವತಾರಗಳು
ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡ, ಸ್ಕಂದಮಾತೆ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ಹೀಗೆ ದೇವಿಯ ಒಂಭತ್ತು ಅವತಾರಗಳನ್ನು ಒಂಭತ್ತು ದಿನಗಳ ಕಾಲ ಪೂಜಿಸಲಾಗುತ್ತದೆ.


ನವರಾತ್ರಿ ವೃತಾಚರಣೆ
ನವರಾತ್ರಿಯ ಸಮಯದಲ್ಲಿ ಉಪವಾಸವನ್ನು ಕೈಗೊಳ್ಳುವವರು ಸಾತ್ವಿಕ ಆಹಾರವನ್ನೇ ಸೇವಿಸುತ್ತಾರೆ. ನೀರುಳ್ಳಿ, ಬೆಳ್ಳುಳ್ಳಿ ಸೇವನೆ ಈ ಸಮಯದಲ್ಲಿ ನಿಷಿದ್ಧ. ಅಂತೆಯೇ ವೃತಾಚರಣೆಯನ್ನು ಮಾಡುವವರು ಮಾಂಸಾಹಾರವನ್ನು ಸ್ಪರ್ಶಿಸುವಂತೆಯೇ ಇಲ್ಲ ಹಾಗೂ ವೃತಕೈಗೊಳ್ಳುವವರ ಮನೆಯಲ್ಲಿ ಕೂಡ ತಯಾರಿಸುವಂತಿಲ್ಲ. ಹಣ್ಣುಗಳು, ಹಾಲಿನಿಂದ ತಯಾರಿಸಿದ ಪದಾರ್ಥಗಳು, ಹಾಲು ಸೇವನೆಯನ್ನು ಮಾಡಬಹುದು.


ಇದನ್ನೂ ಓದಿ: Madikeri Dasara: ಶಕ್ತಿದೇವತೆಗಳ ಕರಗೋತ್ಸವದ ಮೂಲಕ ಮಡಿಕೇರಿ ದಸರಾ ಜನೋತ್ಸವಕ್ಕೆ ಚಾಲನೆ


ನವರಾತ್ರಿಯ ಒಂಭತ್ತು ದಿನಗಳ ಕಾಲ ಸ್ವಯಂ ಸಾಕ್ಷಾತ್ಕಾರ, ಸ್ವಯಂ ಶಿಸ್ತು, ಸ್ವಯಂ ನಿಯಂತ್ರಣವನ್ನು ಕೈಗೊಳ್ಳುವುದು ಮುಖ್ಯವಾಗಿದೆ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶುಚಿರ್ಭೂತರಾಗಿ ನಂತರವೇ ದೇವಿಯ ಉಪವಾಸ ಹಾಗೂ ಪೂಜೆಯನ್ನು ಕೈಗೊಳ್ಳಬೇಕು. ದಿನಕ್ಕೆ ಒಂದು ಬಾರಿ ಮಾತ್ರ ಆಹಾರ ಸೇವಿಸುವವರು ಸೂರ್ಯಾಸ್ತದ ನಂತರವೇ ಆಹಾರ ಸೇವಿಸಬೇಕು.

Published by:Ashwini Prabhu
First published: