National Space Day 2022: ಇದು ಅಚ್ಚರಿ ಮೂಡಿಸುವ ಬಾಹ್ಯಾಕಾಶ ಕುರಿತಾದ ಸಂಗತಿಗಳು! ಇದನ್ನು ತಿಳಿದರೆ ನೀವು ಬೆರಗಾಗೋದು ಗ್ಯಾರಂಟಿ

National Space Day: ಪ್ರತಿ ವರ್ಷದ ಮೇ ತಿಂಗಳ ಆರಂಭವಾದಾಗ ಬರುವ ಪ್ರಥಮ ಶುಕ್ರವಾರದಂದು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಆಚರಿಸುತ್ತ ಬರಲಾಗುತ್ತಿದೆ. 2022 ರಲ್ಲಿ ಇಂದು ಅಂದರೆ ಮೇ 6 ಅನ್ನು ಬಾಹ್ಯಾಕಾಶ ದಿಅನವನ್ನಾಗಿ ಆಚರಿಸಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹೇಗೆ ವಿಶಾಲ ಸಾಗರಗಳ ಕುರಿತಾದ ಸಂಗತಿಗಳು ಸಾಮಾನ್ಯವಾಗಿ ಕುತೂಹಲ ಕೆರಳಿಸುತ್ತವೆಯೋ ಅದೇ ರೀತಿ ಬಾಹ್ಯಾಕಾಶದ (Space) ವಿಷಯಗಳು ಸಾಮಾನ್ಯ ಜನರಲ್ಲಿ ಒಂದು ಬಗೆಯ ಆಸಕ್ತಿ ಹುಟ್ಟು ಹಾಕುತ್ತವೆ ಎಂದರೆ ತಪ್ಪಿಲ್ಲ. ಮುಂಚೆಯಿಂದಲೂ ಖಗೋಳ ವಿಜ್ಞಾನಿಗಳಿಗೆ (Astronomer) ಬಾಹ್ಯಾಕಾಶದ (Space) ಬಗ್ಗೆ ಏನಾದರೂ ತಿಳಿಯುತ್ತಿರಬೇಕೆಂಬ ಕುತೂಹಲ ಇದ್ದೆ ಇದೆ ಹಾಗೂ ಅದರ ಕಾರಣದಿಂದಾಗಿಯೇ ಇಂದು ನಾವು ಬಾಹ್ಯಾಕಾಶಕ್ಕೆ ಸಂಬಂಧಿಸಿದ ಕೆಲವು ದಿಗ್ಭ್ರಮೆ (Disorientation) ಮೂಡಿಸಬಹುದಾದ ಹಲವು ಸಂಗತಿಗಳನ್ನು (Fact) ಕಂಡುಕೊಂಡಿದ್ದೇವೆ.

  ಹೀಗೆ ಮನುಷ್ಯನ ಬಾಹ್ಯಾಕಾಶ ಕುರಿತು ಇನ್ನಷ್ಟು ತಿಳಿಯಬೇಕೆಂಬ ಜಿಜ್ಞಾಸೆ ಹಾಗೂ ಈ ನಿಟ್ಟಿನಲ್ಲಿ ಮತ್ತಷ್ಟು ಜ್ಞಾನ ಎಲ್ಲರಿಗೂ ಸಿಗುವಂತಾಗಲಿ ಎಂಬ ಉದ್ದೇಶವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಾಹ್ಯಾಕಾಶಕ್ಕೆಂದೇ ಮುಡಿಪಾದ ದಿನದ ಆಚರಣೆಯ ರೂಢಿಗೆ ಬಂತು. ಹಾಗಾಗಿ ಪ್ರತಿ ವರ್ಷದ ಮೇ ತಿಂಗಳ ಆರಂಭವಾದಾಗ ಬರುವ ಪ್ರಥಮ ಶುಕ್ರವಾರದಂದು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಆಚರಿಸುತ್ತ ಬರಲಾಗುತ್ತಿದೆ. 2022 ರಲ್ಲಿ ಇಂದು ಅಂದರೆ ಮೇ 6 ಅನ್ನು ಬಾಹ್ಯಾಕಾಶ ದಿಅನವನ್ನಾಗಿ ಆಚರಿಸಲಾಗುತ್ತಿದೆ.

  ಸಾಮಾನ್ಯವಾಗಿ ಈ ದಿನದಂದು ಜಗತ್ತಿನ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಯಾದ ಅಮೆರಿಕದ ನಾಸಾ ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಅಗಾಧವಾದ ಸತ್ಯಗಳನ್ನು ತಿಳಿಸುವ ಕಲ್ಪನೆಗೂ ಮೀರಿದ ದೃಶ್ಯಾವಳಿಗಳನ್ನು ಹೊಂದಿರುವ ನಭೋಮಂಡಲದ ವಿಶಾಲ ವ್ಯಾಪ್ತಿಯ ಬಗ್ಗೆ ಚಿಕ್ಕ ಅರಿವು ಮೂಡಿಸುವಂತಹ ನೇರವಾದ ತುಣುಕುಗಳನ್ನು ಬಿತ್ತರಿಸುತ್ತದೆ ಹಾಗೂ ವಿಶ್ವದಾದ್ಯಂತ ಬಾಹ್ಯಾಕಾಶ ಅಭಿಮಾನಿಗಳು, ವಿಜ್ಞಾನಿಗಳು ನಾಸಾದ ಈ ಲೈವ್ ಫೀಡ್ ಕಾರ್ಯಕ್ರಮವನ್ನು ಆಸ್ವಾದಿಸಲು ಕಾತುರರಾಗಿರುತ್ತಾರೆ.

  ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ನಮ್ಮ ಬಾಹ್ಯಾಕಾಶ ಹೊಂದಿರುವ ಕಲ್ಪನೆಗೂ ಮೀರಿದ ಅಗಾಧತೆಯ ಅರಿವು ನಮ್ಮಲ್ಲಿ ಮೂಡುವಂತೆ ಪ್ರೋತ್ಸಾಹಿಸಲು ಹಾಗೂ ಈಗಾಗಲೇ ದಶಕಗಳ ಅವಧಿಯಲ್ಲಿ ಅನೇಕ ವಿಜ್ಞಾನಿಗಳು ಬಾಹ್ಯಾಕಾಶದ ಬಗ್ಗೆ ಹಲವು ಆಸಕ್ತಿಕರ ಆವಿಷ್ಕಾರಗಳನ್ನು ಮಾಡಿ ಮನುಕುಲಕ್ಕೆ ಗೊತ್ತುಪಡಿಸಿರುವ ನಿಮಿತ್ತ ಅವರ ಸ್ಮರಣಾರ್ಥವಾಗಿ ಅವರಿಗೆ ಗೌರವ ಸಲ್ಲಿಸಲೂ ಸಹ ಈ ದಿನವನ್ನು ಆಚರಿಸಲಾಗುತ್ತದೆ. ಬಾಹ್ಯಾಕಾಶವು ನಮ್ಮ ಕಣ್ಣಿಗೆ ಕಾಣಿಸುವಷ್ಟು ಅರ್ಥ ಮಾಡಿಕೊಳ್ಳಲು ಸುಲಭವಾಗಿಲ್ಲ. ಇದು ತನ್ನದೆ ಆದ ಹಲವಾರು ರಹಸ್ಯಮಯ ಚಟುವಟಿಕೆಗಳನ್ನು ಹೊಂದಿದೆ, ಹಲವು ದಿಗ್ಭ್ರಮೆ ಮೂಡಿಸುವಂತಹ ಸಂಗತಿಗಳು ಇದರಲ್ಲಿ ಅಡಗಿವೆ. ಬನ್ನಿ, ಕೆಲವು ಅದ್ಭುತ ಸತ್ಯಗಳನ್ನು ಬಾಹ್ಯಾಕಾಶದ ಕುರಿತು ಇಲ್ಲಿ ತಿಳಿಯೋಣ.

  ಇದನ್ನೂ ಓದಿ: JioGames: ಜಿಯೋಗೇಮ್ಸ್‌ನಲ್ಲಿ ಬರಲಿದೆ ಛೋಟಾ ಭೀಮ್‌

  ನಿಮ್ಮನ್ನು ಅಕ್ಷರಶಃ ಚಕಿತಗೊಳಿಸುವ ಬಾಹ್ಯಾಕಾಶದ ಕೆಲವು ಅದ್ಭುತ ಸತ್ಯಗಳು

  * ಚಂದ್ರನ ಮೇಲೆ ಅಪೊಲೊ ಗಗನಯಾತ್ರಿಗಳ ಹೆಜ್ಜೆಗುರುತುಗಳು ಇರುವುದು ಈಗಾಗಲೇ ಗೊತ್ತಿರುವ ವಿಚಾರ. ಆಸಕ್ತಿಕರ ವಿಷಯವೆಂದರೆ ಆ ಗುರುತು ಬಹುಶಃ ಕನಿಷ್ಠ ಇನ್ನೂ 100 ಮಿಲಿಯನ್ ವರ್ಷಗಳವರೆಗೆ ಹಾಗೆ ಇರುತ್ತದೆ ಎನ್ನಲಾಗಿದೆ.

  * ನಮ್ಮ ಭೂಮಿ ಗ್ರಹವು ಒಂದು ವರ್ಷದಲ್ಲಿ ಬಳಸುವುದಕ್ಕಿಂತ ಹೆಚ್ಚಿನ ಶಕ್ತಿಯು ಪ್ರತಿ ಗಂಟೆಗೆ ಭೂಮಿಗೆ ಸೂರ್ಯನಿಂದ ಬಂದು ಅಪ್ಪಳಿಸುತ್ತದೆ

  * ಒಂದೇ ಪ್ರಕಾರದ ಎರಡು ಲೋಹದ ತುಂಡುಗಳು ಬಾಹ್ಯಾಕಾಶದಲ್ಲಿ ಒಂದಕ್ಕೊಂದು ಸ್ಪರ್ಶಿಸಿದರೆ ಅವು ಗಟ್ಟಿಯಾಗಿ ಹಾಗೂ ಶಾಶ್ವತವಾಗಿ ಒಂದಕ್ಕೊಂದು ಅಂಟಿಕೊಂಡು ಬಿಡುತ್ತವೆ.

  * ಶುಕ್ರ ಗ್ರಹದಲ್ಲಿನ ಒಂದು ದಿನವು ಭೂಮಿಯ ಒಂದು ವರ್ಷದ ಅವಧಿಗಿಂತಲೂ ಹೆಚ್ಚಾಗಿರುತ್ತದೆ.

  ಇದನ್ನೂ ಓದಿ: Facebook ಬಳಕೆದಾರರೇ ಎಚ್ಚರ! ಹ್ಯಾಕರ್‌ಗಳು ನಿಮ್ಮ ಖಾತೆಯನ್ನು ಈ ರೀತಿ ಹ್ಯಾಕ್​ ಮಾಡಬಹುದು

  * ಪ್ರಿಸೆಷನ್ (ಮೂಂಚೆಯೇ ನಿರ್ಧರಿತ) ನಿಂದಾಗಿ ಉತ್ತರ ನಕ್ಷತ್ರದ ಸ್ಥಾನವು ಕಾಲಾಂತರದಲ್ಲಿ ಬದಲಾವಣೆಯಾಗುತ್ತದೆ.

  * ನಡೆಯುತ್ತ ಸಾಗಿದರೆ ಚಂದ್ರನನ್ನು ಮುಟ್ಟಲು ಸರಿಯಾಗಿ 9.5 ವರ್ಷಗಳು ಬೇಕಾಗುತ್ತವೆ.

  * ಔಟರ್ ಸ್ಪೇಸ್ ನಲ್ಲಿ ತಾಪಮಾನವು ಪರಿಪೂರ್ಣವಾದ ಶೂನ್ಯಕ್ಕೆ ಹತ್ತಿರವಾಗಿದೆ

  * ಗುರು, ಶನಿ, ಯುರೇನಿಯಂ ಹಾಗೂ ನೆಪ್ಚ್ಯೂನ್ ಗಳಂತಹ ಗ್ರಹಗಳಲ್ಲಿ ಇಳಿಯಲು ಮೇಲ್ಮೈಗಳಿಲ್ಲ, ಏಕೆಂದರೆ ಇವು ಹೈಡ್ರೋಜನ್ ಮತ್ತು ಹೀಲಿಯಂ ಅನಿಲಗಳ ದೈತ್ಯ ಗೋಳಗಳಾಗಿವೆ.

  ಬಾಹ್ಯಾಕಾಶ ದಿನದ ಹಿನ್ನೆಲೆ : ಬ್ಯಾಹ್ಯಾಕಾಶದ ಅದ್ಭುತತೆ ಹಾಗೂ ಅದರ ಆಚೆಗೆ ಇರುವ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಗೌರವಾರ್ಥವಾಗಿ ಒಂದು ದಿನದ ಮಟ್ಟಿಗೆಂದು ಲಾಕ್ ಹೀಡ್ ಮಾರ್ಟಿನ್ ಕಾರ್ಪೊರೇಷನ್ ಅವರಿಂದ ಪ್ರಥಮ ಬಾರಿಗೆ 1997 ರಲ್ಲಿ ಬಾಹ್ಯಾಕಾಶ ದಿನವನ್ನು ಆಚರಿಸಲಾಯಿತು. ಇದು ಎಷ್ಟು ಜನಪ್ರೀಯತೆ ಪಡೆಯಿತೆಂದರೆ ಮಾಜಿ ಗಗನಯಾತ್ರಿ ಹಾಗೂ ಸೆನೆಟರ್ ಆಗಿದ್ದ ಜಾನ್ ಗ್ಲೆನ್ ಅವರು 2001 ರಲ್ಲಿ ಈ ದಿನವನ್ನು ಆಚರಣೆಯನ್ನು ಪುನರ್ಸ್ಥಾಪಿಸಿದರು.
  Published by:Harshith AS
  First published: