National Kissing Day 2021: ಮುತ್ತಿಗೂ ಒಂದು ದಿನ ಇದೆಯಂತೆ..!; ಇಂದು ನ್ಯಾಷನಲ್ ಕಿಸ್ಸಿಂಗ್ ಡೇ

ರಾಷ್ಟ್ರೀಯ ಚುಂಬನ ದಿನಾಚರಣೆಯನ್ನು ಮುಖ್ಯವಾಗಿ ಯುಎಸ್‌ಗೆ ಸೀಮಿತಗೊಳಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಇದೇನಿದು ಮುತ್ತಿಗೂ ಒಂದು ದಿನ ಇದೆ ಅಂತೀರಾ..? ಹೌದು, ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ರಾಷ್ಟ್ರೀಯ ಚುಂಬನ ದಿನವನ್ನು ಪ್ರತಿ ವರ್ಷ ಜೂನ್‌ 22 ರಂದು ಆಚರಿಸಲಾಗುತ್ತದೆ.ರಾಷ್ಟ್ರೀಯ ಚುಂಬನ ದಿನವನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾರ್ಷಿಕವಾಗಿ ಜೂನ್ 22 ರಂದು ಆಚರಿಸಲಾಗುತ್ತದೆ. ಈ ದಿನವನ್ನು ಹೆಚ್ಚಾಗಿ ಅಮೆರಿಕದಲ್ಲಿ ಆಚರಿಸಲಾಗುತ್ತದೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಈ ದಿನ ವಿಶ್ವಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಹಾಗೆ, ರಾಷ್ಟ್ರೀಯ ಚುಂಬನ ದಿನ ಬೇರೆ.. ಅಂತಾರಾಷ್ಟ್ರೀಯ ಚುಂಬನ ದಿನ ಬೇರೆ ಬೇರೆಯಾಗಿದ್ದು, ಅಂತಾರಾಷ್ಟ್ರೀಯ ಚುಂಬನ ದಿನ ಅಥವಾ ವಿಶ್ವ ಚುಂಬನ ದಿನ ಅನಧಿಕೃತ ರಜಾದಿನವಾಗಿದ್ದು, ಪ್ರತಿವರ್ಷ ಜುಲೈ 6 ರಂದು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಚುಂಬನ ದಿನ ಯುಕೆಯಲ್ಲಿ ಹುಟ್ಟಿಕೊಂಡಿತು ಮತ್ತು ಇದನ್ನು 2000 ರ ದಶಕದ ಆರಂಭದಲ್ಲಿ ವಿಶ್ವಾದ್ಯಂತ ಆಚರಿಸಲಾಗುತ್ತದೆ.


ನ್ಯಾಷನಲ್ ಕಿಸ್ಸಿಂಗ್ ಡೇ ಯಾವಾಗಿಂದ ಶುರುವಾಯಿತು?


ಸಕ್ಲಿಂಗ್ ಅಥವಾ ಹೀರುವಿಕೆ ಹಾಗೂ ಪ್ರೀಮ್ಯಾಸ್ಟಿಕೇಷನ್‌ ಮುಂತಾದ ಚಟುವಟಿಕೆಗಳಿಂದ ಮುತ್ತು ಅಥವಾ ಚುಂಬನವು ವಿಕಸನಗೊಂಡಿತು. ಇತರರು ತಮ್ಮ ಲಾಲಾರಸವನ್ನು ಪರೀಕ್ಷಿಸುವ ಮೂಲಕ ಸಂಭಾವ್ಯ ಸಂಗಾತಿಯ ಆರೋಗ್ಯವನ್ನು ಪರೀಕ್ಷಿಸುವುದರಿಂದ ಇದು ವಿಕಸನಗೊಂಡಿದೆ ಎಂದು ಅನೇಕ ಮಾನವಶಾಸ್ತ್ರಜ್ಞರು ಸೂಚಿಸಿದ್ದಾರೆ.


ಇದನ್ನೂ ಓದಿ:Delta Plus Variant in India: ಮೂರು ರಾಜ್ಯಗಳಲ್ಲಿ ಭಯಾನಕ ಡೆಲ್ಟಾ ಪ್ಲಸ್​ ರೂಪಾಂತರಿ ವೈರಸ್ ಪತ್ತೆ

ಇತಿಹಾಸದ ಪ್ರತಿಯೊಂದು ಅವಧಿಯಲ್ಲಿ ಚುಂಬನವನ್ನು ವಿವಿಧ ಸಂಸ್ಕೃತಿಗಳು ಮತ್ತು ಪ್ರದೇಶಗಳಲ್ಲಿ ಅನೇಕ ರೀತಿಯಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಇತಿಹಾಸಕಾರರು ಚುಂಬನದ ಆರಂಭಿಕ ಉಲ್ಲೇಖಗಳನ್ನು ಕ್ರಿ.ಪೂ 326 ರ ಸುಮಾರಿಗೆ ಅಲೆಕ್ಸಾಂಡರ್ ದಿ ಗ್ರೇಟ್‌ನ ಕಾಲದಲ್ಲಿ ಗುರುತಿಸಬಹುದು ಎಂದು ನಂಬುತ್ತಾರೆ.

ನಂತರ ಇತರ ಸಿದ್ಧಾಂತಿಗಳು ಮತ್ತು ತಜ್ಞರು ರೋಮನ್ನರಿಂದಾಗಿ ಚುಂಬನವು ಮುಖ್ಯವಾಹಿನಿಗೆ ಬಂತು. ಅವರು ಮುತ್ತಿನ ಬಗ್ಗೆ ತುಂಬಾ ಒಲವು ಹೊಂದಿದ್ದರು ಮತ್ತು ಹಲವಾರು ವಿಧದ ಚುಂಬನಗಳ ಬಗ್ಗೆ ಚರ್ಚೆ ನಡೆಸಿದ್ದರು.

ಇನ್ನು, ಕೆಲವರು ಚುಂಬನದ ಬಗ್ಗೆ ಮೊದಲಿನ ಉಲ್ಲೇಖಗಳು ಭಾರತದಿಂದ ಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ. ವೈದಿಕ ಸಂಸ್ಕೃತ ಸಾಹಿತ್ಯದಲ್ಲಿ ನಾಲ್ಕು ಪ್ರಮುಖ ಗ್ರಂಥಗಳು ಚುಂಬನದ ಆರಂಭಿಕ ಸ್ವರೂಪಗಳನ್ನು ಉಲ್ಲೇಖಿಸುತ್ತವೆ ಎಂದು NationalToday.com ವರದಿ ಮಾಡಿದೆ.


ಈ ಮುತ್ತಿನ ಚಾಲನೆಯಲ್ಲಿರುವ ಸಿದ್ಧಾಂತಗಳು ಯುಗಯುಗದಲ್ಲಿ ಮುಂದುವರಿದಿದ್ದು, ಚುಂಬನದ ಅಧ್ಯಯನವು 19 ನೇ ಶತಮಾನದಲ್ಲಿ ಪ್ರಾರಂಭವಾಯಿತು. ಇದನ್ನು ಫಿಲೆಮಾಟಾಲಜಿ ಎಂದು ಕರೆಯಲಾಗುತ್ತದೆ.


ಇದನ್ನೂ ಓದಿ:Home Remedies: ಹಿಮ್ಮಡಿ ಒಡೆದಿದ್ಯಾ? ಹೀಗೆ ಮಾಡಿ ನೋಡಿ...!

ಟೈಮ್‌ಲೈನ್


ಚುಂಬನದ ಟೈಮ್‌ಲೈನ್ ವಿವಿಧ ಆವೃತ್ತಿಗಳನ್ನು ಹೊಂದಿದೆ. ಹೆಚ್ಚು ಜನಪ್ರಿಯ ಸಂಶೋಧನೆ ಮತ್ತು ಸಿದ್ಧಾಂತಗಳು ಕ್ರಿ.ಪೂ 1500 ರ ಸುಮಾರಿಗೆ ಪ್ರಾರಂಭವಾಯಿತು ಮತ್ತು ನಂತರ ಕ್ರಿ.ಪೂ 326 ರಲ್ಲಿ ಅಲೆಕ್ಸಾಂಡರ್ ಸಮಯದಲ್ಲಿ ಇದು ವಿಸ್ತರಿಸಿತು.


ಆದರೆ, ಈ ಚುಂಬನವು ಮಧ್ಯಯುಗದಲ್ಲಿ ವಿಶ್ವದ ಕೆಲವು ಭಾಗಗಳಲ್ಲಿ ವಿವಾದಾಸ್ಪದವಾಯಿತು. ಪೋಪ್ ಕ್ಲೆಮೆಂಟ್ V 'ಪವಿತ್ರ ಕಿಸ್' ಅನ್ನು ಅಪವಿತ್ರ ಕೃತ್ಯಗಳಿಗೆ ಕಾರಣವಾಗಬಹುದೆಂಬ ಭಯದಿಂದ ನಿಷೇಧಿಸಿದ್ದಾರೆ ಎಂದು ನಂಬಲಾಗಿದೆ.


ಸಂಪ್ರದಾಯ


ರಾಷ್ಟ್ರೀಯ ಚುಂಬನ ದಿನಾಚರಣೆಯನ್ನು ಮುಖ್ಯವಾಗಿ ಯುಎಸ್‌ಗೆ ಸೀಮಿತಗೊಳಿಸಲಾಗಿದೆ. ಮತ್ತೊಂದೆಡೆ, ಅಂತಾರಾಷ್ಟ್ರೀಯ ಚುಂಬನ ದಿನ, ವ್ಯಾಪಕ ಪ್ರಾಮುಖ್ಯತೆ ಮತ್ತು ಅನುಸರಣೆಯನ್ನು ಹೊಂದಿದೆ. ಚುಂಬನ ದಿನವು ವಿವಿಧ ದೇಶಗಳಲ್ಲಿನ ಇತರ ವಿಶೇಷ ದಿನಗಳೊಂದಿಗೆ ಸೇರಿಕೊಳ್ಳುತ್ತದೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Latha CG
First published: