National Forest Martyrs Day: ಇವರು ಅರಣ್ಯ ಹುತಾತ್ಮರು; ಇಂದಿನ ಇತಿಹಾಸ, ಮಹತ್ವ ಗೊತ್ತೇ?

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಸೆಪ್ಟೆಂಬರ್ 11 ರಂದು ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸಲು ಆಚರಿಸಲಾಗುತ್ತದೆ.

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ

  • Share this:
    ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು (National Forest Martyrs Day) ಸೆಪ್ಟೆಂಬರ್ 11 ರಂದು ಅರಣ್ಯ ಮತ್ತು ವನ್ಯಜೀವಿಗಳ (Wildlife) ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸಲು ಆಚರಿಸಲಾಗುತ್ತದೆ. ದೇಶದ ಅನೇಕ ಭಾಗಗಳಲ್ಲಿ ಜೀವನೋಪಾಯಕ್ಕಾಗಿ ಅರಣ್ಯಗಳು ಎಷ್ಟು ಮುಖ್ಯವೆಂದು ಪರಿಗಣಿಸಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2013 ರಲ್ಲಿ ಅರಣ್ಯಗಳು ಮತ್ತು ಅವುಗಳನ್ನು ರಕ್ಷಿಸಲು ಕೆಲಸ ಮಾಡುವವರಿಗೆ ಗೌರವಾರ್ಥವಾಗಿ ಒಂದು ದಿನವನ್ನು ಮೀಸಲಿಡಬೇಕೆಂದು ಘೋಷಿಸಿತು. 1730 ರಲ್ಲಿ ಕುಖ್ಯಾತ ಖೇಜರ್ಲಿ ಹತ್ಯಾಕಾಂಡ (Massacre) ನಡೆದ ಈ ದಿನದಂದು, ಅಂದ್ರೆ ಸೆಪ್ಟೆಂಬರ್ 11 ಅನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನಾಗಿ ಆಚರಿಸಲು ಆಯ್ಕೆ ಮಾಡಲಾಯಿತು.

    350ಕ್ಕೂ ಹೆಚ್ಚು ಜನರ ಹತ್ಯೆ
    ರಾಜಸ್ಥಾನದ ಮಹಾರಾಜ ಅಭಯ್ ಸಿಂಗ್ ಕಾಡಿನಲ್ಲಿರುವ ಖೇಜರ್ಲಿ ಮರಗಳನ್ನು ಕಡಿಯಲು ಆದೇಶ ನೀಡಿದರು. ಬಿಷ್ಣೋಯ್ ಸಮುದಾಯದ ಜನರು ಖೇಜರ್ಲಿ ಮರಗಳನ್ನು ಪವಿತ್ರವೆಂದು ಪರಿಗಣಿಸಿ ಆದೇಶದ ವಿರುದ್ಧ ಪ್ರತಿಭಟಿಸಿದರು. ಪ್ರತಿಭಟನೆಯ ಸಂಕೇತವಾಗಿ, ಅಮೃತಾ ದೇವಿ ಎಂಬ ಮಹಿಳೆ ಖೇಜರ್ಲಿ ಮರಗಳನ್ನು ಕಡಿಯದಂತೆ ರಕ್ಷಿಸಲು ತನ್ನ ತಲೆಯನ್ನು ಅರ್ಪಿಸಿದಳು. ಆದರೂ ಏನೂ ಯೋಚಿಸದೇ, ಅಮೃತಾ ದೇವಿಯ ಶಿರಚ್ಛೇದ ಮಾಡಿದರು. ಆ ದಿನ ಅವರು ಅಮೃತಾ ದೇವಿಯ ಚಿಕ್ಕ ಮಕ್ಕಳು ಸೇರಿದಂತೆ 350 ಕ್ಕೂ ಹೆಚ್ಚು ಜನರನ್ನು ಕೊಂದರು.

    ವನ್ಯ ಜೀವಿಗಳ ಬೇಟೆ ನಿಷೇಧ
    ಹತ್ಯಾಕಾಂಡದ ಸುದ್ದಿ ಮಹಾರಾಜರಿಗೆ ತಲುಪಿದಾಗ, ಅವರು ಘಟನೆಯಿಂದ ನಡುಗಿದರು. ತಮ್ಮ ಆದೇಶವನ್ನು ಹಿಂತೆಗೆದುಕೊಂಡರು. ಅವರು ಜನರಲ್ಲಿ ಕ್ಷಮೆಯಾಚಿಸಿ ಅರಣ್ಯಗಳನ್ನು ರಕ್ಷಿಸುವ ಉದ್ದೇಶಕ್ಕಾಗಿ ಅವರ ಸಮರ್ಪಣೆಯನ್ನು ಶ್ಲಾಘಿಸಿದರು. ಮಹಾರಾಜ ಅಭಯ್ ಸಿಂಗ್ ಒಂದು ಹೆಜ್ಜೆ ಮುಂದೆ ಹೋಗಿ ಭವಿಷ್ಯದಲ್ಲಿ ಕಾಡಿನಲ್ಲಿ ಮರಗಳನ್ನು ಕಡಿಯುವುದನ್ನು ಮತ್ತು ವನ್ಯಜೀವಿಗಳನ್ನು ಬೇಟೆಯಾಡುವುದನ್ನು ನಿಷೇಧಿಸುವ ಆದೇಶವನ್ನು ಹೊರಡಿಸಿದರು.

    ಇದನ್ನೂ ಓದಿ: Grandparents Day: ಮೊಮ್ಮಕ್ಕಳ ಪ್ರೀತಿಯ ಅಜ್ಜ-ಅಜ್ಜಿಯರ ದಿನವಿಂದು! ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ?

    ಪ್ರಪಂಚದ ಮುಂದೆ ದೊಡ್ಡ ಸವಾಲು
    ರಾಷ್ಟ್ರೀಯ ಅರಣ್ಯ ಹುತಾತ್ಮರ ಆಚರಣೆಯು ಕಾಡುಗಳು ಮತ್ತು ಪರಿಸರವನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಲವಾರು ಘಟನೆಗಳಿಂದ ಗುರುತಿಸಲ್ಪಟ್ಟಿದೆ. ಈ ದಿನವು ಪ್ರಸ್ತುತ ಸನ್ನಿವೇಶದಲ್ಲಿ ಬಹಳಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಹಸಿರು ಹೊದಿಕೆಯನ್ನು ಕ್ಷೀಣಿಸುವುದು ಪ್ರಪಂಚದ ಮುಂದೆ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ.

    ಭಾರತದಲ್ಲಿ ಈಗಲೂ ಕಾಡುಗಳ್ಳರು ಅಮೂಲ್ಯ ಮರಗಳು ಮತ್ತು ವನ್ಯಜೀವಿಗಳ ಪಾಲಿಗೆ ಯಮಕಿಂಕರರಾಗುತ್ತಿದ್ದಾರೆ. ಅರಣ್ಯಗಳ ಅಮೂಲ್ಯ ವಸ್ತುಗಳನ್ನು ಸಂರಕ್ಷಣೆ ಮಾಡುವಲ್ಲಿ ನಮ್ಮ ವ್ಯವಸ್ಥೆಗಳು ಕೂಡ ವಿಫಲವಾಗುತ್ತಿವೆ. ಮಾನವನ ಅತಿಯಾಸೆ ನಮ್ಮ ಅರಣ್ಯಗಳನ್ನು ಅವಸಾನದತ್ತ ಕೊಂಡೊಯ್ಯುತ್ತಿದೆ.

    ಇಂತಹ ಸಂದರ್ಭದಲ್ಲೂ ಕೆಲವರು ವನ್ಯಜೀವಿಗಳ ಮತ್ತು ಅರಣ್ಯದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕರು ತಮ್ಮ ಸೇವೆಯ ಸಂದರ್ಭದಲ್ಲಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಅಂತಹ ವೀರರಿಗೆ ಅರಣ್ಯ ಹುತಾತ್ಮರ ದಿನಾಚರಣೆ ಗೌರವ ಸಲ್ಲಿಸುವ ದಿನವಾಗಿದೆ.

    ಇದನ್ನೂ ಓದಿ: Blood Cancer Awareness: ಬೆನ್ನು, ಮೂಳೆ ನೋವಿದ್ದರೆ ನಿರ್ಲಕ್ಷ್ಯ ಬೇಡ, ರಕ್ತ ಕ್ಯಾನ್ಸರ್ ಕುರಿತು ತಿಳ್ಕೊಳ್ಳಿ

     ಸೆಪ್ಟೆಂಬರ್ ತಿಂಗಳ ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು
    ಸೆಪ್ಟೆಂಬರ್ 1 ರಿಂದ 7 ರವರೆಗೆ ರಾಷ್ಟ್ರೀಯ ಪೌಷ್ಟಿಕಾಂಶ ವಾರ
    ಸೆಪ್ಟೆಂಬರ್ 2 - ವಿಶ್ವ ತೆಂಗಿನಕಾಯಿ ದಿನ
    ಸೆಪ್ಟೆಂಬರ್ 3 - ಗಗನಚುಂಬಿ ದಿನ
    ಸೆಪ್ಟೆಂಬರ್ 5- ಶಿಕ್ಷಕರ ದಿನ (ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನ), ಅಂತರಾಷ್ಟ್ರೀಯ ದತ್ತಿ ದಿನ
    ಸೆಪ್ಟೆಂಬರ್ 7 - ಬ್ರೆಜಿಲಿಯನ್ ಸ್ವಾತಂತ್ರ್ಯ ದಿನ
    ಸೆಪ್ಟೆಂಬರ್ 8- ಅಂತರಾಷ್ಟ್ರೀಯ ಸಾಕ್ಷರತಾ ದಿನ, ವಿಶ್ವ ದೈಹಿಕ ಚಿಕಿತ್ಸಾ ದಿನ
    ಸೆಪ್ಟೆಂಬರ್ 10 - ವಿಶ್ವ ಆತ್ಮಹತ್ಯೆ ತಡೆ ದಿನ
    ಸೆಪ್ಟೆಂಬರ್ 11 - ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ
    ಸೆಪ್ಟೆಂಬರ್ 14 - ಹಿಂದಿ ದಿವಸ್, ವಿಶ್ವ ಪ್ರಥಮ ಚಿಕಿತ್ಸಾ ದಿನ
    ಸೆಪ್ಟೆಂಬರ್ 15 - ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ, ಭಾರತದಲ್ಲಿ ಇಂಜಿನಿಯರ್ ದಿನ
    Published by:Savitha Savitha
    First published: