Peacock Dance Viral Video: ಇವಳ ಡ್ಯಾನ್ಸ್ ನೋಡಿ ನಾಚಿ ನೀರಾದ ಜನ! ಯಾರಿವಳು? ಇಲ್ಲಿದೆ ನೋಡಿ ವೀಡಿಯೋ

ಪ್ರಕೃತಿ ಸೌಂದರ್ಯಕ್ಕೆ ಸರಿಸಾಟಿಯಾದುದು ಯಾವುದೂ ಇಲ್ಲ. ಪ್ರತಿಯೊಂದು ಜೀವಿಯು ತನ್ನದೇ ವಿಶಿಷ್ಟವಾದ ಸೌಂದರ್ಯವನ್ನು ಹೊಂದಿದೆ. ಭಾರತದ ರಾಷ್ಟ್ರಪಕ್ಷಿ ನವಿಲಿನ ಸೌಂದರ್ಯವಂತು ಅದ್ಭುತ. ಗರಿಬಿಚ್ಚಿ ನೃತ್ಯ ಮಾಡುವ ನವಿಲಿನ ವೀಡಿಯೊ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ನವಿಲು

ನವಿಲು

  • Share this:
ಪ್ರಕೃತಿಯ ಸೌಂದರ್ಯಕ್ಕೆ ಮನಸೋಲದವರು ಯಾರಿದ್ದಾರೆ ಹೇಳಿ. ಪ್ರಕೃತಿಯ ಸೊಬಗು (Nature Beauty) ಎಂತಹ ಕಲ್ಲು ಹೃದಯದವರನ್ನು ಬೇಕಾದರೂ ಒಮ್ಮೆಗೆ ಕರಗಿಸಿ ಬಿಡುತ್ತದೆ. ಅದರಲ್ಲೂ ಪಕ್ಷಿಗಳ ಸೌಂದರ್ಯವಂತು ಕಣ್ಣಿಗೆ ಸ್ವರ್ಗ ನೋಡಿದಂತಾಗುತ್ತದೆ. ಮುಂಜಾನೇ (Morning), ಅವುಗಳ ಚಿಲಿಪಿಲಿ ಸದ್ದು, ನವಿರಾದ ಧ್ವನಿ, ಬೇರೆ ಬೇರೆ ಪ್ರಭೇದದ ಪಕ್ಷಿಗಳು (Birds), ಅವುಗಳ ಬಗೆ ಬಗೆಯ ಬಣ್ಣಗಳು ಆಹಾ ನೋಡೋದಕ್ಕೆ ತುಂಬಾನೇ ಚೆಂದ. ಅದರಲ್ಲೂ ನಮ್ಮ ದೇಶದ ರಾಷ್ಟ್ರಪಕ್ಷಿ (National Bird) ನವಿಲಿನ ಸೌಂದರ್ಯವಂತು ಅದ್ಭುತ. ಅದರ ಸುಂದರವಾದ ಗರಿಯ ಸೌಂದರ್ಯಕ್ಕೆ ಫಿದಾ ಆಗದವರು ಯಾರೂ ಇಲ್ಲ . ಇನ್ನೂ ನವಿಲು ಗರಿಬಿಚ್ಚಿ ನಾಟ್ಯ ಮಾಡಿದರಂತು ಹೇಳೋದೆ ಬೇಡ ಎಲ್ಲರೂ ಒಂದು ಕ್ಷಣ ಮಂತ್ರಮುಗ್ಧರಾಗುತ್ತಾರೆ.

ಇತ್ತೀಚಿಗೆ ನವಿಲೊಂದು ಗರಿಬಿಚ್ಚಿ ಕುಣಿದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ (Viral Video) ಆಗುತ್ತಿದ್ದು. ಜನ ನವಿಲಿನ ಕುಣಿತದ (Peacock Dance) ಸೌಂದರ್ಯವನ್ನು ನೋಡಿ ಬಹಳ ಖುಷಿ ಪಟ್ಟಿದ್ದಾರೆ.

ಗರಿಬಿಚ್ಚಿ ಮೋಡಿ ಮಾಡುವ ನವಿಲು
ಮಳೆಗಾಲ ಬಂತೆಂದರೆ ಪ್ರಕೃತಿಯಲ್ಲಿನ ಜೀವಿಗಳಲ್ಲಿ ಹೊಸತನದ ಛಾಯೆ ಹುಟ್ಟಿಕೊಳ್ಳುತ್ತದೆ. ಪ್ರತಿಯೊಂದು ಜೀವಿಗಳು ತನ್ನ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ನೀಡಲು ಮುಂದಾಗುತ್ತವೆ. ನವಿಲುಗಳಂತು ತನ್ನ ಗರಿಗಳನ್ನು ಬಿಚ್ಚಿ ಕುಣಿಯುವ ಮೂಲಕ ಪ್ರಕೃತಿಯ ಚಂದವನ್ನು ಇನ್ನಷ್ಟು ಹೆಚ್ಚು ಮಾಡುವುದಲ್ಲದೆ. ಮನುಷ್ಯರನ್ನು ತನ್ನ ನೃತ್ಯದ ಮೂಲಕ ಮೋಡಿ ಮಾಡುತ್ತದೆ.ಈ ಸೌಂದರ್ಯವನ್ನು ನಿಜಕ್ಕೂ ಯಾವ ಮನುಷ್ಯನು ಸೃಷ್ಥಿಸಲು ಸಾಧ್ಯವಿಲ್ಲ.

ಇದನ್ನೂ ಓದಿ: WonderFul Nature: ಪ್ರಕೃತಿಯಲ್ಲಿ ಪ್ರಾಣಿ-ಪಕ್ಷಿಗಳ ಕಲರವ ನೋಡೋದೇ ಚೆಂದ, ನೀವೂ ನೋಡಿ ಖುಷಿಪಡಿ

ವೈರಲ್ ಆದ ವೀಡಿಯೋ
ನವಿಲುಗಳನ್ನು ನೋಡಲು ಜನರು ಎಲ್ಲೆಲ್ಲಿಂದ ದೂರ ದೂರದ ಉದ್ಯಾನವನಗಳಿಗೆ, ಪಕ್ಷಿಧಾಮಗಳಿಗೆ ಹೋಗುತ್ತಾರೆ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ನವಿಲೊಂದು ಗರಿಬಿಚ್ಚಿ ಕುಣಿಯುವ ವೀಡಿಯೋ ಬಾರಿ ವೈರಲ್ ಆಗುತ್ತಿದ್ದು. ಇದನ್ನು ವೀಕ್ಷಿಸಿದ ಜನ ನವಿಲಿನ ನಾಟ್ಯಕ್ಕೆ ಮನಸೋತಿದ್ದಾರೆ.





ವೀಡಿಯೊವನ್ನು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಬುಟೆನಿಬಿಡೆನ್ ಹೆಸರಿನ ಖಾತೆಯೊಂದಿಗೆ ಪೋಸ್ಟ್ ಮಾಡಲಾಗಿದೆ. ಜುಲೈ 13 ರಂದು ಪೋಸ್ಟ್ ಮಾಡಲಾದ ಈ ವೀಡಿಯೊವನ್ನು ಇದುವರೆಗೆ 16 ಮಿಲಿಯನ್ಗಿಂತಲೂ ಅಧಿಕ ಜನರು ವೀಕ್ಷಿಸಿದ್ದಾರೆ. 5.24 ಲಕ್ಷ ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಅತೀ ಬೇಗನೆ ವೈರಲ್ ಆಗುತ್ತಿರುವ ವೀಡಿಯೋದಿಂದಲೆ ತಿಳಿಯುತ್ತಿದೆ ಜನ ಎಷ್ಟು ನವಿಲಿನ ಸೌಂದರ್ಯಕ್ಕೆ ಮನಸೋತಿದ್ದಾರೆ ಎಂಬುದು.

ಮೆಚ್ಚುಗೆ ವ್ಯಕ್ತಪಡಿಸಿದ ಜನ
ವೀಡೀಯೋಗೆ ಕಮೆಂಟ್ ಮಾಡಿದವರಲ್ಲಿ ಒಬ್ಬ,'ನಾನು ಇದನ್ನು ನೋಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ' ಎಂದು ಬರೆದಿದ್ದಾರೆ. ಇನ್ನೊಬ್ಬ ವ್ಯಕ್ತಿ , 'ಇದು ನಿಜವಾಗಿಯೂ ಅದ್ಭುತವಾಗಿದೆ' ಎಂದು ಹೇಳಿದರು. ಎಲ್ಲರೂ ನವಿಲಿನ ನಾಟ್ಯಕ್ಕೆ, ಗರಿಬಿಚ್ಚಿದ ನವಿಲ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಮೂಲಕ ಸಂತೋಷಪಟ್ಟಿದ್ದಾರೆ.

ಏಳು ಸೆಕೆಂಡುಗಳ ಅಪೂರ್ವ ದೃಶ್ಯ
ಏಳು ಸೆಕೆಂಡುಗಳ ಸಮಯವಿರುವ ಈ ವೀಡಿಯೋದಲ್ಲಿ ಉದ್ಯಾನವೊಂದರಲ್ಲಿ ನವಿಲು ತನ್ನ ಸುಂದರವಾದ ಗರಿಗಳನ್ನು ಅರಳಿಸುವ ಅದ್ಭುತ ದೃಶ್ಯ ಸರೆಯಾಗಿದೆ. ವೀಡಿಯೋ 'ನವಿಲು' ಎಂಬ ಶೀರ್ಷಿಕೆಯನ್ನು ಹೊಂದಿದ್ದು, ಜನರ ಮನಸ್ಸನ್ನು ನವಿಲಿನ ಸೌಂದರ್ಯಕ್ಕೆ ಸೋಲುವಂತೆ ಮಾಡಿದೆ.

ಇದನ್ನೂ ಓದಿ: Jog Falls Viral Video: ಇದು ನಯಾಗರ ಅಲ್ಲ, ಜೋಗ! ಅದ್ಭುತ ವೈರಲ್ ವಿಡಿಯೋ ನೋಡಿ

ನವಿಲಿನ ನಾಟ್ಯ ಸೌಂದರ್ಯದ ಮನಮೋಹಕ ದೃಶವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಪ್ರಕೃತಿ ಸೌಂದರ್ಯವು ಜನರ ಮನಸ್ಸನ್ನು ತಲುಪುತ್ತಿದೆ. ಅಲ್ಲದೆ ಇಂತಹ ಸುಂದರ ದೃಶ್ಯಗಳಿಂದಾಗಿ ಪ್ರಕೃತಿಯ ಮೇಲಿನ ಪ್ರೀತಿಯೂ ಜನರಲ್ಲಿ ಹೆಚ್ಚಾಗುತ್ತಿದೆ.
Published by:Nalini Nalini
First published: