ರಕ್ತ ಸಂಬಂಧಗಳ ಮೀರಿದ ಬಂಧವೇ ಸ್ನೇಹ. ಈ ಪವಿತ್ರ ಬಂಧ ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಸ್ನೇಹ ನಮ್ಮ ಜೀವನದ ಅವಿಭಾಜ್ಯ ಅಂಗ ಎಂದರೂ ತಪ್ಪಾಗಲಾರದು. ಈ ಗೆಳೆಯರ ಮಹತ್ವವನ್ನು ಸಾರಲು ಒಂದು ದಿನವನ್ನು ಮೀಸಲಿಡಲಾಗಿದೆ. ಪ್ರತೀ ವರ್ಷ ಜೂನ್ 8ನ್ನು ‘ನ್ಯಾಷನಲ್ ಬೆಸ್ಟ್ ಫ್ರೆಂಡ್ಸ್ ಡೇ‘(National Best Friends Day)ಯನ್ನಾಗಿ ಆಚರಿಸಲಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಇರುವ ವಿಶೇಷ ಬೆಸ್ಟ್ ಫ್ರೆಂಡ್ನ್ನು ಗೌರವಿಸುವ ದೃಷ್ಟಿಯಿಂದ ಈ ದಿನವನ್ನು ಆಚರಿಸಲಾಗುತ್ತದೆ.
ನೀವು ನಿಮ್ಮ ಬೆಸ್ಟ್ ಫ್ರೆಂಡ್ಸ್ನ್ನು ಪ್ರತಿದಿನ ಭೇಟಿಯಾಗಲು ಸಾಧ್ಯವಾಗದಿದ್ದರೂ, ಸಹ ನಿಮ್ಮ ಕಷ್ಟ ಕಾಲದಲ್ಲಿ ಕೈ ಹಿಡಿಯುವುದು ಇವರೇ. ಸಂಬಂಧಿಕರಿಗಿಂತ ಹೆಚ್ಚಿನ ಪಾತ್ರವನ್ನು ಗೆಳೆಯರು ವಹಿಸುತ್ತಾರೆ. ಪ್ರಸ್ತುತ ಕೊರೋನಾ ಇರುವ ಕಾರಣ ನಿಮ್ಮ ಬೆಸ್ಟ್ ಫ್ರೆಂಡ್ಸ್ನ್ನು ಭೇಟಿಯಾಗಲು ಸಾಧ್ಯವಾಗಲ್ಲ. ಹೀಗಾಗಿ ಅವರಿಗೆ ಬೆಸ್ಟ್ ಫ್ರೆಂಡ್ ಡೇ ಎಂದು ವಿಶ್ ಮಾಡಿ, ಫೋಟೋಗಳನ್ನು ಕಳುಹಿಸಿ ನಿಮ್ಮ ಖುಷಿಯನ್ನು ಹಂಚಿಕೊಳ್ಳಿ. ಈ ಸಂದರ್ಭದಲ್ಲಿ ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯುವುದು ಮುಖ್ಯವಾಗಿದೆ.
ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ
ನ್ಯಾಷನಲ್ ಬೆಸ್ಟ್ ಫ್ರೆಂಡ್ಸ್ ಡೇ ಇತಿಹಾಸ
ನ್ಯಾಷನಲ್ ಬೆಸ್ಟ್ ಫ್ರೆಂಡ್ಸ್ ಡೇ ಇತಿಹಾಸವನ್ನು ನೋಡಿದಾಗ, ಅಮೆರಿಕದಲ್ಲಿ 1935ರ ಜೂನ್ 8ರಂದು ನ್ಯಾಷನಲ್ ಬೆಸ್ಟ್ ಫ್ರೆಂಡ್ಸ್ ಡೇಯನ್ನು ಆಚರಿಸಲಾಯಿತು. ಬಳಿಕ ಇದು ಎಲ್ಲಾ ದೇಶಗಳಿಗೂ ವಿಸ್ತರಿಸಿತು. ಅಂದಿನಿಂದ ಪ್ರತೀ ವರ್ಷ ಜೂನ್ 8ನ್ನು ಬೆಸ್ಟ್ ಫ್ರೆಂಡ್ಸ್ ಡೇಯನ್ನಾಗಿ ಅಚರಿಸಿಕೊಂಡು ಬರಲಾಗುತ್ತಿದೆ. ಈ ಆಚರಣೆಯನ್ನು ಹೆಚ್ಚಾಗಿ ಯುವ ಜನಾಂಗ ಮಾಡುತ್ತದೆ.
ಇದನ್ನೂ ಓದಿ:World Oceans Day 2021: ಸಮುದ್ರವನ್ನು ಪ್ರೀತಿಸು, ಅದು ಯಾವತ್ತೂ ನಿನಗೆ ದ್ರೋಹ ಮಾಡಲ್ಲ...!
ನ್ಯಾಷನಲ್ ಬೆಸ್ಟ್ ಫ್ರೆಂಡ್ ಡೇ ಮಹತ್ವ
ಪ್ರತಿಯೊಬ್ಬರ ಜೀವನದಲ್ಲೂ ಬರುವ ಉತ್ತಮ ಸ್ನೇಹಿತರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಈ ನ್ಯಾಷನಲ್ ಬೆಸ್ಟ್ ಫ್ರೆಂಡ್ ಡೇಯನ್ನು ಆಚರಿಸಲಾಗುತ್ತದೆ. ಖುಷಿ ಹಂಚಿಕೊಳ್ಳಲು ಕೆಲವು ಸ್ನೇಹಿತರಿದ್ದರೆ, ನಮ್ಮ ಕಷ್ಟ ಹಂಚಿಕೊಳ್ಳಲು ಬೆಸ್ಟ್ ಫ್ರೆಂಡ್ಸ್ ಇದ್ದೇ ಇರುತ್ತಾರೆ.ಈ ದಿನವನ್ನು ಕೆಲವರು ಕೇಕ್ ಕಟ್ ಮಾಡುವ ಮೂಲಕ ಆಚರಿಸಿದರೆ, ಮತ್ತೆ ಕೆಲವರು ಸ್ಪೆಷಲ್ ಗಿಫ್ಟ್ಗಳನ್ನು ನೀಡುತ್ತಾರೆ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಈ ನ್ಯಾಷನಲ್ ಬೆಸ್ಟ್ ಫ್ರೆಂಡ್ ಡೇ ಅತ್ಯುತ್ತಮವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ