Viral video: ಹುಲಿಯ ಬಾಯಿಂದ ಕೂದಲೆಳೆ ಅಂತರದಲ್ಲಿ ಚಾಣಾಕ್ಷವಾಗಿ ತಪ್ಪಿಸಿಕೊಂಡ ನವಿಲು

ಹುಲಿಯು ಬಂದ ಸಮಯಕ್ಕೆ ಸರಿಯಾಗಿ ನವಿಲು ಇನ್ನೊಂದು ಬದಿಯಿಂದ ಚಂಗನೆ ಹಾರಿ ಕ್ಷಣಾರ್ಧದಲ್ಲಿ ಹುಲಿಯ ಬಾಯಿಗೆ ಆಹಾರವಾಗುವುದನ್ನು ತಪ್ಪಿಸಿಕೊಳ್ಳುತ್ತದೆ.

ವೈರಲ್​​ ವಿಡಿಯೋದ ಫೋಟೋ

ವೈರಲ್​​ ವಿಡಿಯೋದ ಫೋಟೋ

  • Share this:
    ಸಾಮಾನ್ಯವಾಗಿ ರಾಷ್ಟ್ರೀಯ ಪ್ರಾಣಿಯಾದ ಹುಲಿಯು ತನ್ನ ಬೇಟೆಗಾಗಿ ಗಂಟೆಗಳ ಕಾಲ ತುಂಬಾ ತಾಳ್ಮೆಯಿಂದ ಕಾದು ಕುಳಿತು ಯಾರು ನಿರೀಕ್ಷಿಸದ ಸಮಯದಲ್ಲಿ ಬೇರೆ ಪ್ರಾಣಿಗಳ ಮೇಲೆ ದಾಳಿ ಮಾಡಿ ತನ್ನ ಆಹಾರವನ್ನಾಗಿಸಿಕೊಳ್ಳುವ ತಂತ್ರ ಅವುಗಳಿಗೆ ತುಂಬಾ ಚೆನ್ನಾಗಿ ತಿಳಿದಿರುತ್ತದೆ. ಇದರ ಬಾಯಿಂದ ಕೆಲವು ಸಲ ಕೆಲವು ಪ್ರಾಣಿಗಳು ತಪ್ಪಿಸಿಕೊಂಡು ತುಂಬಾ ದೂರದವರೆಗೆ ಓಡಿಹೋಗುತ್ತವೆ ಅದನ್ನು ಅಟ್ಟಿಸಿಕೊಂಡು ಹೋಗಿ ಸುಮ್ಮನಾದ ಘಟನೆಯನ್ನು ನಾವು ನೋಡಿರುತ್ತೇವೆ. ಇಲ್ಲಿಯೂ ಅಂತಹದೇ ಒಂದು ಮೈ ಜುಂ ಎನ್ನಿಸುವಂತಹ ಘಟನೆಯಲ್ಲಿ ಹುಲಿಯ ಬಾಯಿಂದ ರಾಷ್ಟೀಯ ಪಕ್ಷಿ ನವಿಲು ಕ್ಷಣಾರ್ಧದಲ್ಲಿ ಪಾರಾಗಿದ್ದ ವಿಡಿಯೋ ತುಂಬಾ ವೈರಲ್ ಆಗಿದೆ.


    ಈ ವಿಡಿಯೋವನ್ನು ಚಾನೆಲ್ ಇಂಡಿಯನ್ ಬೀಕೀಪರ್ಸ್ ಅವರು ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದು, ಒಂದು ಕ್ಷಣದಲ್ಲಿ ಹೌಹಾರುವಂತಹ ಈ ವಿಡಿಯೋವನ್ನು ಇದುವರೆಗೂ 90,000 ಜನರು ನೋಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆದ 15 ಸೆಕೆಂಡುಗಳ ವಿಡಿಯೋದಲ್ಲಿ ಹುಲಿಯು ತುಂಬಾ ಸುಸ್ತಾಗಿ ಒಂದು ಕಡೆ ರಾಜನ ಗತ್ತಿನಲ್ಲಿ ವಿಶ್ರಾಂತಿ ಪಡೆಯುತ್ತಾ ಇರುತ್ತದೆ, ಅಲ್ಲೇ ಸಮೀಪದಲ್ಲಿ ಸುಂದರ ನವಿಲೊಂದು ತನ್ನ ಇಂಪಾದ ಧ್ವನಿಯಲ್ಲಿ ಹಾಡುತ್ತಿದ್ದಾಗ ಅದಕ್ಕೆ ಅರಿವಿಲ್ಲದೆಯೇ ಅಲ್ಲೇ ಹತ್ತಿರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಹುಲಿಯು ವಿಚಲಿತಗೊಂಡು ಠಕ್ಕನೆ ಎಚ್ಚರಗೊಳ್ಳುತ್ತದೆ.




    ಎಚ್ಚರಗೊಂಡ ಹುಲಿಯು ನವಿಲನ್ನು ತುಂಬಾ ಕೋಪದಿಂದ ನೋಡಿ ತಕ್ಷಣವೇ ನವಿಲಿನ ಮೇಲೆ ದಾಳಿ ಮಾಡಲು ತುಂಬಾ ದೂರದಿಂದ ನವಿಲು ಇದ್ದ ಜಾಗಕ್ಕೆ ಓಡಿ ಬರುತ್ತದೆ. ನವಿಲು ಹುಲಿಯನ್ನು ನೋಡದೆ ಬೇರೆ ಕಡೆಗೆ ತಿರುಗಿ ತನ್ನ ಸುಂದರವಾದ ರೆಕ್ಕೆಗಳನ್ನು ಬಿಚ್ಚಿ ಆಡುತ್ತಿರುತ್ತದೆ. ಆದರೆ ಹುಲಿಯು ಬಂದ ಸಮಯಕ್ಕೆ ಸರಿಯಾಗಿ ನವಿಲು ಇನ್ನೊಂದು ಬದಿಯಿಂದ ಚಂಗನೆ ಹಾರಿ ಕ್ಷಣಾರ್ಧದಲ್ಲಿ ಹುಲಿಯ ಬಾಯಿಗೆ ಆಹಾರವಾಗುವುದನ್ನು ತಪ್ಪಿಸಿಕೊಳ್ಳುತ್ತದೆ.


    ಹುಲಿ ತನ್ನ ಕಡೆಗೆ ವೇಗವಾಗಿ ಬರುತ್ತಿದೆ ಎಂಬ ಅರಿವು ನವಿಲಿಗೆ ಇತ್ತೋ ಇಲ್ಲವೋ ಅದು ಕಾಕತಾಳಿಯವೋ ಗೊತ್ತಿಲ್ಲ ಅದೇ ಸಮಯಕ್ಕೆ ನವಿಲು ಸಹ ಅಲ್ಲಿಂದ ಹಾರಿ ಬೇರೆಕಡೆಗೆ ಹೋಗಿದೆ. ಪಕ್ಕದಲ್ಲಿದ್ದ ನವಿಲುಗಳು ಸಹ ಅಲ್ಲಿಂದ ದೂರ ಓಡಿಹೋಗಿವೆ. ಈ ವಿಡಿಯೋ ನೋಡಿದ ಯಾರಿಗಾದರೂ ಸಹ ಅಬ್ಬಾ ಎಂತಹ ಅದೃಷ್ಟದ ನವಿಲು ಎಂದು ಅಂದುಕೊಳ್ಳುವುದಂತೂ ನಿಜ.





    ಈ ವೈರಲ್ ವಿಡಿಯೋ ನೋಡಿದ ಜನರು ನವಿಲು ಹಾರಿ ತನ್ನನ್ನು ಹುಲಿ ಬಾಯಿಂದ ರಕ್ಷಿಸಿಕೊಂಡಿತ್ತು ಇಲ್ಲವಾದರೆ ಹುಲಿ ರಾಜನಿಗೆ ಆಹಾರವಾಗುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವು ಜನರು ನವಿಲಿನ ಅದೃಷ್ಟದ ಬಗ್ಗೆ ವಿಸ್ಮಿತರಾಗಿದ್ದಾರೆ. ಹುಲಿ ರಾಜನ ಪರಾಕ್ರಮಕ್ಕೆ ಹೋಲಿಸಿದರೆ ನವಿಲು ಸರಿಸಾಟಿ ಇಲ್ಲದಿದ್ದರೂ ತನ್ನ ಜಾಗೂರಕತೆಯಿಂದ ಪ್ರಾಣಾಪಾಯದಿಂದ ಪಾರಾಗಿದೆ. ದಿ ವೈರಲ್ ಜನರೇಶನ್ ಮತ್ತು ಮೆಮ್ ಫ್ಯಾಕ್ಟರಿ ಅವರು ವಿಸ್ಮಿತ ಮತ್ತು ಮಂತ್ರಮುಗ್ದವಾಗುವಂತಹ ಪ್ರಾಣಿ ಜಗತ್ತಿನ ವಿಡಿಯೋಗಳಿಗೆ ಲೈಕ್ ಮಾಡುತ್ತ ಬಂದಿದ್ದು, ಇದು ಸಹ ವೈರಲ್ ವಿಡಿಯೋ ಆಗಿದ್ದು ಇದರಲ್ಲಿ ರಾಷ್ಟೀಯ ಪ್ರಾಣಿ ಹಾಗು ರಾಷ್ಟೀಯ ಪಕ್ಷಿ ನಡುವೆ ನಡೆದಂತಹ ಒಂದು ಎನ್ಕೌಂಟರ್ ಎಂದು ಹೇಳಬಹುದಾಗಿದೆ.
    Published by:Kavya V
    First published: