ಚೆನ್ನಾಗಿ ನಿದ್ದೆ ಮಾಡಿದ್ರೆ ಸಿಗುತ್ತೆ 13 ಲಕ್ಷ ರೂ. ಸಂಬಳ..!

ಜರ್ಮನಿಯ ಕೊಲೋನ್‌ನಲ್ಲಿರುವ ಏರೋಸ್ಪೇಸ್‌ ಸೆಂಟರ್‌ನಲ್ಲಿ ಈ ಅಧ್ಯಯನ ನಡೆಯಲಿದ್ದು, ಇಲ್ಲಿನ ಕೃತಕ ಗುರುತ್ವಾಕರ್ಷಣೆಯ ಹಾಸಿಗೆ ಮೇಲೆ ವಿಶ್ರಾಂತಿ ಪಡೆದುಕೊಂಡು ಕೈ ತುಂಬಾ ಸಂಬಳ ಪಡೆಯಬಹುದು.

zahir | news18
Updated:April 8, 2019, 11:51 PM IST
ಚೆನ್ನಾಗಿ ನಿದ್ದೆ ಮಾಡಿದ್ರೆ ಸಿಗುತ್ತೆ 13 ಲಕ್ಷ ರೂ. ಸಂಬಳ..!
ಸಾಂದರ್ಭಿಕ ಚಿತ್ರ
  • News18
  • Last Updated: April 8, 2019, 11:51 PM IST
  • Share this:
ಕೆಲಸ ಸಮಯದಲ್ಲಿ ನಿದ್ದೆ ಬರುವುದು ಸಾಮಾನ್ಯ. ಆದರೆ ನಿದ್ದೆ ಮಾಡುವುದೇ ಕೆಲಸವಾದರೆ? ಹೌದು, ಇಂತಹದೊಂದು ಕೆಲಸವನ್ನು ಪ್ರತಿಷ್ಠಿತ ವಿಜ್ಞಾನ ಸಂಸ್ಥೆ ನಾಸಾ ಮುಂದಿಟ್ಟಿದೆ. ನಾಸಾ ಸಂಸ್ಥೆಯು ನೀಡಿದ ಈ ಆಫರ್​ನಲ್ಲಿ ನೀವು 2 ತಿಂಗಳುಗಳ ಕಾಲ ನಿದ್ದೆ ಮಾಡಬೇಕು. ಹಾಗೆ ಮಾಡಿದ್ರೆ ಕೈ ತುಂಬಾ ಸಂಬಳ ಸಹ ನೀಡುತ್ತಾರೆ.

ಯೂರೋಪಿಯನ್‌ ಸ್ಪೇಸ್‌ ಏಜೆನ್ಸಿ ( ಇಎಸ್‌ಎ)ನ ಸಹಭಾಗಿತ್ವದಲ್ಲಿ ಅಮೆರಿಕದ ಸ್ಪೇಸ್‌ ಏಜೆನ್ಸಿ ನಾಸಾ ಕೃತಕ ಗುರುತ್ವಾಕರ್ಷಣೆಯಲ್ಲಿ ನಿದ್ರಿಸುವ ಬಗ್ಗೆ ಅಧ್ಯಯನ ನಡೆಸಲಿದೆ. ಗಗನಯಾತ್ರಿಗಳಿಗೆ ಕೃತಕ ಗುರುತ್ವಾಕರ್ಷಣೆಯಲ್ಲಿ ಎಷ್ಟು ಹೊತ್ತು ನಿದ್ದೆ ಮಾಡಲು ಸಹಾಯಕವಾಗುತ್ತದೆ ಎಂಬಿತ್ಯಾದಿ ಅಂಶಗಳನ್ನು ಈ ತಂಡ ಅಧ್ಯಯನ ಮಾಡಲಿದೆ.

ಇದಕ್ಕಾಗಿ 24 ವರ್ಷದಿಂದ 55 ವರ್ಷದವರೆಗಿನ 12 ಪುರುಷರು ಹಾಗೂ 12 ಮಹಿಳೆಯರನ್ನು ನಾಸಾ ಸಂಸ್ಥೆ ಆಯ್ಕೆ ಮಾಡಿಕೊಳ್ಳಲಿದ್ದು, ಇವರನ್ನು 60 ದಿನಗಳ ಕಾಲ ಪರೀಕ್ಷೆಗೆ ಒಳಪಡಿಸಲಿದೆ. ಅಷ್ಟೇ ಅಲ್ಲದೆ ಈ ನಿದ್ರಿಸುವ ಕೆಲಸಕ್ಕೆ ಆಯ್ಕೆಯಾದವರಿಗೆ 19 ಸಾವಿರ ಡಾಲರ್ ಅಂದರೆ ಸುಮಾರು 13 ಲಕ್ಷ ರೂ. ಸಂಬಳ ಕೂಡ ನೀಡಲಿದೆ.

ಜರ್ಮನಿಯ ಕೊಲೋನ್‌ನಲ್ಲಿರುವ ಏರೋಸ್ಪೇಸ್‌ ಸೆಂಟರ್‌ನಲ್ಲಿ ಈ ಅಧ್ಯಯನ ನಡೆಯಲಿದ್ದು, ಇಲ್ಲಿನ ಕೃತಕ ಗುರುತ್ವಾಕರ್ಷಣೆಯ ಹಾಸಿಗೆ ಮೇಲೆ ವಿಶ್ರಾಂತಿ ಪಡೆದುಕೊಂಡು ಕೈ ತುಂಬಾ ಸಂಬಳ ಪಡೆಯಬಹುದು. ಇಲ್ಲಿ ಕೇವಲ ನಿದ್ದೆಯಷ್ಟೇ ಅಲ್ಲದೆ, ಊಟ, ವಿರಾಮ ಮತ್ತು ಇತರೆ ಚಟುವಟಿಕೆಗಳ ಬಗ್ಗೆ ವಿಜ್ಞಾನಿಗಳು ಗಮನ ಹರಿಸಲಿದ್ದಾರೆ.

@ESA


ಈ ಅಧ್ಯಯನಕ್ಕೆ ಒಳಗಾದ ಎರಡೂ ತಂಡದವರ ದೈಹಿಕ ಕ್ಷೀಣತೆಯನ್ನು ಪರೀಕ್ಷಿಸಿ ಗಗನಯಾತ್ರಿಗಳಿಗೆ ಅನುಕೂಲಕ್ಕೆ ತಕ್ಕಂತೆ ಯೋಜನೆಗಳನ್ನು ವಿಜ್ಞಾನಿಗಳು ರೂಪಿಸಲಿದ್ದಾರೆ. ಈ ಅಧ್ಯಯನದಿಂದ ಬಾಹ್ಯಾಕಾಶಕ್ಕೆ ತೆರಳುವ ಗಗನಯಾತ್ರಿಗಳಿಗೆ ಹೆಚ್ಚಿನ ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಬಾಹ್ಯಾಕಾಶದಲ್ಲಿ ಹೆಚ್ಚು ಕಾಲ ತಂಗುವ ಗಗನಯಾತ್ರಿಗಳಿಗೆ ಹಲವು ರೀತಿಯ ದೈಹಿಕ ಸಮಸ್ಯೆಗಳು ಕಂಡು ಬರುತ್ತದೆ. ಈ ಅಧ್ಯಯನ ಯಶಸ್ವಿಯಾದರೆ ಇಂತಹ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.ಇದನ್ನೂ ಓದಿ: ವಿರಾಟ್ ಕೊಹ್ಲಿ ಅತ್ಯಂತ ಕಳಪೆ ಕಪ್ತಾನ, ವಿಶ್ವಕಪ್​ನಲ್ಲೂ ತಂಡ ಮಕಾಡೆ ಮಲಗಲಿದೆ: ಬಾಲಿವುಡ್​ ನಟ ಟ್ವೀಟ್

 
First published: April 4, 2019, 2:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading