NASA: ಏಲಿಯನ್‌ಗಳನ್ನು ಎದುರಿಸಲು ಮನುಷ್ಯರನ್ನು ರೆಡಿ ಮಾಡೋಕೆ ಅರ್ಚಕರನ್ನು ನೇಮಿಸಿದ ನಾಸಾ

ನಾಸಾದ ಅಡ್ಮಿನಿಸ್ಟ್ರೇಟರ್ ಆಗಿರುವ ಬಿಲ್ ನೆಲ್ಸನ್ ಅವರು ಅಧ್ಯಾತ್ಮಿಕ ಭಾವನೆಯಿಂದ ಬೈಬಲ್ ಉಲ್ಲೇಖ ಮಾಡುತ್ತ ಇದನ್ನು ಒಂದು ಟೈಮ್ ಮಶೀನ್ ಎಂದು ಕರೆದಿದ್ದಾರೆ. ಅಷ್ಟೆ ಅಲ್ಲದೆ ಇದರಿಂದ ಸೃಷ್ಟಿಯ ರಹಸ್ಯದ ಬಗ್ಗೆ ಉತ್ತರ ದೊರಕುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದು ವಿಜ್ಞಾನವು (Science) ಸಾಕಷ್ಟು ಅಭಿವೃದ್ಧಿಯಾಗುತ್ತಿದೆ.( Developing ) ಅದರಲ್ಲೂ ವಿಶೇಷವಾಗಿ ನಭೋಮಂಡಲದ (Galaxy) ಹತ್ತಾರು ರಹಸ್ಯಮಯ (Mysterious) ವಿಷಯಗಳನ್ನು ಅನಾವರಣಗೊಳಿಸುವತ್ತ ಇಂದು ಖಗೋಳಶಾಸ್ತ್ರದ (Astronomers) ವಿಜ್ಞಾನಿಗಳು ಹಲವಾರು ಕೆಲಸಗಳಲ್ಲಿ ನಿರತರಾಗಿದ್ದಾರೆ. ಮೊದಲಿನಿಂದಲೂ ಏಲಿಯನ್ (Alien) ಎಂಬ ವಿಷಯ ಮನುಷ್ಯನಲ್ಲಿ ಕುತೂಹಲ ಕೆರಳಿಸುತ್ತಲೇ ಇದೆ. ಅದಕ್ಕಾಗಿ ಹಲವಾರು ರೀತಿಯಲ್ಲಿ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಬಂದಿದ್ದಾರೆ.

ಡಾ. ಆಂಡ್ರಿವ್ ಡಾವಿಸ್ ನೇಮಕ
ಈಗ ಅದೇ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವದ ಶ್ರೇಷ್ಠ ಸ್ಪೇಸ್ ಸಂಸ್ಥೆಯಾಗಿರುವ ನಾಸಾ ಏಲಿಯನ್‌ಗಳನ್ನು ಮನುಷ್ಯರು ಹೇಗೆ ಎದುರಿಸಬೇಕೆಂಬುದರ ಬಗ್ಗೆ ಪಾದ್ರಿಯೊಬ್ಬನನ್ನು ನೇಮಕ ಮಾಡಿರುವಂತಹ ಸುದ್ದಿ ವರದಿಯಾಗಿದೆ. ಏಲಿಯನ್ ಗಳು ಎದುರಾದ ಸಂದರ್ಭದಲ್ಲಿ ಅವುಗಳನ್ನು ಹೇಗೆ ಎದುರಿಸಬೇಕೆಂಬುದರ ಬಗ್ಗೆ ಚಿಂತಿಸಿರುವ ನಾಸಾ ಸಂಸ್ಥೆಯು ಅದಕ್ಕಾಗಿ ಈಗ ಬ್ರಿಟಿಷ್ ಸಮುದಾಯದವರಾದ ದೇವತಾಶಾಸ್ತ್ರಜ್ಞ ಹಾಗೂ ಪಾದ್ರಿಯಾಗಿರುವ ರೆವ್. ಡಾ. ಆಂಡ್ರಿವ್ ಡಾವಿಸ್ ಅವರನ್ನು ನೇಮಕ ಮಾಡಿದೆ ಎಂದು ದಿ ಮಿರರ್ ಸುದ್ದಿಪತ್ರಿಕೆಯು ವರದಿ ಮಾಡಿದೆ.

ಇದನ್ನೂ ಓದಿ: Year Ender 2021: ಈ ವರ್ಷ ಗಮನ ಸೆಳೆದ ನಾಸಾದ ಚಿತ್ರಗಳಿವು

ದಿ ಮಿರರ್ ವರದಿ ಮಾಡಿರುವಂತೆ, ಈಗ ಬೇರೊಂದು ಗ್ರಹದಲ್ಲಿ ಏಲಿಯನ್ ಇರುವುದು ನಿಜವೇ ಎಂಬ ಶೋಧ ಕಾರ್ಯವು ಹೆಚ್ಚಿನ ವಾಸ್ತವಿಕ ರೂಪವನ್ನು ಪಡೆಯುತ್ತಿದ್ದು ಆ ಕುರಿತು ಏಲಿಯನ್ ಗಳಿದ್ದರೆ ಅವರೊಂದಿಗೆ ಮನುಷ್ಯನ ವ್ಯವಹಾರ ಹೇಗಿರಬೇಕು ಎಂಬುದನ್ನು ವಿಶ್ಲೇಷಿಸುವ ಅಡಿಯಲ್ಲಿ ನಾಸಾ, ಕ್ಯಾಂಬ್ರಿಡ್ಜ್ ವಿವಿಯಲ್ಲಿ ದೇವತಾಶಾಸ್ತ್ರಜ್ಞರಾಗಿ ಕೆಲಸ ನಿರ್ವಹಿಸುತ್ತಿರುವ ಡಾ. ಡಾವಿಸ್ ಅವರನ್ನು ನೇಮಕ ಮಾಡಿಕೊಂಡಿದೆ. ಡಾವಿಸ್ ಅವರು ಜೀವರಸಾಯನ ಸಾಸ್ತ್ರದಲ್ಲಿ ಪದವಿಧರರಾಗಿದ್ದು ಈಗ ನಾಸಾದೊಂದಿಗೆ ಕೆಲಸ ಮಾಡುತ್ತಿದ್ದಾರೆ.

ನಾಸಾ ಆಯೋಜಿಸಿದ್ದ ಕಾರ್ಯಕ್ರಮ
ವರದಿಯಲ್ಲಿ ಹೇಳಿರುವಂತೆ, "ಬೇರೊಂದು ಗ್ರಹದಲ್ಲಿ ಜೀವಗಳ ಉಪಸ್ಥಿತಿಗೆ ಸಂಬಂಧಿಸಿದಂತೆ ವಿವಿಧ ಧರ್ಮಗಳು ಹೇಗೆ ಪ್ರತಿಕ್ರಯಿಸುತ್ತವೆ ಎಂಬ ವಿಷಯದ ಮೇಲೆ ನ್ಯೂಜೆರ್ಸಿಯ ಪ್ರಿನ್ಸ್ ಟನ್ ವಿವಿಯ ಸೆಂಟರ್ ಆಫ್ ಥಿಯಾಲಾಜಿಕಲ್ ಎನ್ಕ್ವೈರಿ ಕೇಂದ್ರದಲ್ಲಿ ನಾಸಾ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ 24 ಧಾರ್ಮಿಕ ಪರಿಣಿತ್ರಲ್ಲಿ ಡಾವಿಸ್ ಅವರು ಸಹ ಒಬ್ಬರಾಗಿದ್ದರು" ಎಂದು ಬರೆಯಲಾಗಿದೆ. ಡಾವಿಸ್ ಅವರು ಮುಂದಿನ ವರ್ಷದಲ್ಲಿ ತಾವೇ ಬರೆದಿರುವ ಪುಸ್ತಕವೊಂದನ್ನು ಸಹ ಅನಾವರಣಗೊಳಿಸಲಿದ್ದಾರೆಂದು ತಿಳಿದು ಬಂದಿದೆ.

ಅವರು ತಮ್ಮ ಪುಸ್ತಕವಾದ ಅಸ್ಟ್ರೋಬಯಾಲಾಜಿ ಆಂಡ್ ಕ್ರಿಶ್ಚಿಯನ್ ಡಾಕ್ಟ್ರೈನ್ ನಲ್ಲಿ, ಈ ಸೌರಮಂಡಲದ ಯಾವುದಾದರೂ ಸ್ಥಳದಲ್ಲಿ ಇನ್ನೊಂದು ಜೀವದ ಉಪಸ್ಥಿತಿ ನಿಜಕ್ಕೂ ಇದೆಯೆ? ಭೂಮಿಯ ಹೊರತಾಗಿ ಬೇರೆಡೆ ಎಲ್ಲಾದರೂ ಜೀವಿಗಳ ಉಪಸ್ಥಿತಿ ಇರುವುದು ಗೊತ್ತಾದಾಗ ಆ ವಿಷಯ ನಮ್ಮ ಧಾರ್ಮಿಕತೆಯ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಇದು ನಮ್ಮ ಧಾರ್ಮಿಕ ಪುಸ್ತಕಗಳ ಮೂಲ ತಿರುಳನ್ನು ಬದಲಾಯಿಸಬಹುದೆ? ಎಂಬೆಲ್ಲ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಹೇಳಲಾಗಿದೆ.

24 ಧಾರ್ಮಿಕ ಪರಿಣಿತರ ನೆರವು
ಟೆಕ್ನೋಟ್ರೆಂಜ್ ಪ್ರಕಾರ, ನಾಸಾ, ಭೂಮಿಯ ಹೊರತಾಗಿ ಬೇರೆ ಎಲ್ಲಿಯಾದರೂ ಮತ್ತೊಂದು ಜೀವ ಇರುವಿಕೆ ಸಿದ್ಧವಾದರೆ ಭೂಮಿಯಲ್ಲಿರುವ ವಿವಿಧ ಧರ್ಮಗಳು ಹಾಗೂ ಅದರ ಪ್ರಧಾನ ಅಂಶಗಳು ಆ ಕುರಿತು ಹೇಗೆ ತಮ್ಮ ಪ್ರತಿಕ್ರಿಯೆ ಅಥವಾ ವ್ಯವಹಾರ ಇರಿಸಬಹುದು ಎಂಬುದನ್ನು ಅರಿಯಲು ಹಾಗೂ ದಾಖಲಿಸಲು ನಾಸಾ 24 ಧಾರ್ಮಿಕ ಪರಿಣಿತರ ನೆರವು ಪಡೆಯಲಿದೆ. "ಇಪ್ಪತ್ತನೇ ಅಥವಾ ಇಪ್ಪತ್ತೊಂದನೇ ಪ್ರಾರಂಭದ ಶತಮಾನದಲ್ಲಿ ಲಭ್ಯವಿರುವ ವಿಜ್ಞಾನದ ಎಲ್ಲ ಪರಿಕರಗಳನ್ನು ಉಪಯೋಗಿಸಿ ನಮ್ಮಲ್ಲಿರುವ ನೂರು-ಸಾವಿರಾರು ವರ್ಷಗಳಿಂದ ಧಾರ್ಮಿಕ ಸಂಪ್ರದಾಯಗಳಲ್ಲಿರುವ ಪ್ರಶ್ನೆಗಳಿಗೆ ಅನ್ವಯಿಸಲು ಬಳಸಿದಾಗ ಆಗಬಹುದಾದ ಪರಿಣಾಮಗಳನ್ನೊಮ್ಮೆ ಪರಿಗಣಿಸಿ" ಎಂದು ಹೇಳುತ್ತಾರ ನಾಸಾದ ಅಸ್ಟ್ರೋಬಯಾಲಾಜಿ ಇನ್ಸ್ಟಿಟ್ಯೂಟ್ ನ ಪೂರ್ವ ಮುಖ್ಯಸ್ಥರಾದ ಕಾರ್ಲ್ ಪಿಲ್ಚರ್ ಅವರು.

ಇದನ್ನೂ ಓದಿ: NASA: ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಭಾರತೀಯ ಆಹಾರವನ್ನು ಇಷ್ಟಪಡೋದಂತೆ

ಈಗಾಗಲೇ ನಾಸಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಸಾಕಷ್ಟು ಚರ್ಚೆಯಲ್ಲಿದೆ. ಈ ಮಹತ್ವಾಕಾಂಕ್ಷಿ ಟೆಲಿಸ್ಕೋಪ್ ಮೂಲಕ ಈಗ ಬ್ರಹ್ಮಾಂಡದ ಉದಯದ ಕುರಿತಂತೆ ಹಲವಾರು ರಹಸ್ಯಮಯ ಪ್ರಶ್ನೆಗಳಿಗೆ ಉತ್ತರ ದೊರಕುವ ಆಶಾಭಾವನೆ ವಿಜ್ಞಾನಿಗಳಲ್ಲಿ ವ್ಯಕ್ತವಾಗಿದೆ. ಇದನ್ನು ಈಗಷ್ಟೆ ಲಾಂಚ್ ಮಾಡಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ಲಿಂಕ್ ಹಂಚಿಕೊಳ್ಳುತ್ತ ನಾಸಾದ ಅಡ್ಮಿನಿಸ್ಟ್ರೇಟರ್ ಆಗಿರುವ ಬಿಲ್ ನೆಲ್ಸನ್ ಅವರು ಅಧ್ಯಾತ್ಮಿಕ ಭಾವನೆಯಿಂದ ಬೈಬಲ್ ಉಲ್ಲೇಖ ಮಾಡುತ್ತ ಇದನ್ನು ಒಂದು ಟೈಮ್ ಮಶೀನ್ ಎಂದು ಕರೆದಿದ್ದಾರೆ. ಅಷ್ಟೆ ಅಲ್ಲದೆ ಇದರಿಂದ ಸೃಷ್ಟಿಯ ರಹಸ್ಯದ ಬಗ್ಗೆ ಉತ್ತರ ದೊರಕುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
Published by:vanithasanjevani vanithasanjevani
First published: