New Planet: ಈ ಗ್ರಹದಲ್ಲಿ 16 ಗಂಟೆಗೆ ಒಂದು ವರ್ಷ! NASA ಹುಡುಕಿದ ಹೊಸಾ ಗ್ರಹದಲ್ಲಿ ಇನ್ನೇನಿದೆ?

NASA : ನಮ್ಮ ಭೂಮಿಯಲ್ಲಿ 365 ದಿನಗಳು ಕಳೆದರೆ ಒಂದು ವರ್ಷ ಎಂದು ನಾವು ಕರೆಯುತ್ತೇವೆ.. ನಮ್ಮ ಪ್ರಕಾರ 24 ಗಂಟೆಗಳು ಕಳೆದ್ರೆ ಒಂದು ದಿನ.. ಈಗ ವಿಜ್ಞಾನಿಗಳು ಅನ್ವೇಷಿಸಿ ರುವ ಗ್ರಹದಲ್ಲಿ ಕೇವಲ 16 ಗಂಟೆಗಳು ಕಳೆದ್ರೆ ಒಂದು ವರ್ಷವಂತೆ

ಗ್ರಹ

ಗ್ರಹ

 • Share this:
  ಕೌತುಕದ ಕಣಜವಾಗಿರುವ ಸೌರಮಂಡಲದ(Solar System)ವಿಷಯಗಳು ಬಗೆದಷ್ಟು ಹೊರಗೆ ಬರುತ್ತಲೇ ಇರುತ್ತವೆ.. ಒಮ್ಮೆ ಕೆಳಗಿನಿಂದ ಬಾನಂಗಳಕ್ಕೆ (Sky)ನೋಡಿದ್ರೆ ಅಸಂಖ್ಯಾತ ನಕ್ಷತ್ರಗಳು(Stars) ರಾತ್ರಿಯ(Night) ವೇಳೆಯಲ್ಲಿ ಹೊಳೆಯುತ್ತವೆ.. ಅದೇ ಹಗಲಿನಲ್ಲಿ (Morning)ನಿಂತು ನೋಡಿದ್ರೆ ತಿಳಿ ನೀಲ ಆಕಾಶ ಕಾಣುತ್ತದೆ.. ನಮಗೆ ಗೊತ್ತಿಲ್ಲದ ಅದೆಷ್ಟೋ ಅಗೋಚರ(Invisible) ಘಟನೆಗಳು ಪ್ರತಿದಿನ ನಮ್ಮ ಸೌರ ಮಂಡಲದಲ್ಲಿ ನಡೆಯುತ್ತಲೇ ಇರುತ್ತವೆ.. ಅಲ್ಲದೆ ಭೂಮಿಗೆ(Earth) ಒಬ್ಬ ಚಂದ್ರ(Moon) ಇದ್ರೆ ಸೌರಮಂಡಲದಲ್ಲಿ 50ಕ್ಕೂ ಹೆಚ್ಚು ಜನರಿದ್ದಾರೆ ಅನೇಕ ವಿಷಯಗಳು ಈವರೆಗೂ ಬಯಲಾಗಿವೆ.. ಈಗ ವಿಜ್ಞಾನಿಗಳು( Scientists)ಬಯಲಿಗೆ ತಂದಿರುವ ವಿಷಯ ನಿಮ್ಮಲ್ಲಿ ಅಚ್ಚರಿ ಮೂಡಿಸುವುದಲ್ಲದೆ ಹೀಗೂ ಉಂಟ ಅಂತ ಪ್ರಶ್ನೆ ಮೂಡುವಂತೆ ಮಾಡುತ್ತದೆ..

  16 ಗಂಟೆಗಳಿಗೊಮ್ಮೆ ಒಂದು ವರ್ಷವಾಗುವ ಗ್ರಹ ಅನ್ವೇಷಣೆ..!

  ನಮ್ಮ ಭೂಮಿಯಲ್ಲಿ 365 ದಿನಗಳು ಕಳೆದರೆ ಒಂದು ವರ್ಷ ಎಂದು ನಾವು ಕರೆಯುತ್ತೇವೆ.. ನಮ್ಮ ಪ್ರಕಾರ 24 ಗಂಟೆಗಳು ಕಳೆದ್ರೆ ಒಂದು ದಿನ.. ಈಗ ವಿಜ್ಞಾನಿಗಳು ಅನ್ವೇಷಿಸಿ ರುವ ಗ್ರಹದಲ್ಲಿ ಕೇವಲ 16 ಗಂಟೆಗಳು ಕಳೆದ್ರೆ ಒಂದು ವರ್ಷವಂತೆ..ಹೌದು ನಾಸಾದ ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೆ ಸ್ಯಾಟಲೈಟ್, ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನೇತೃತ್ವದ ಕಾರ್ಯಾಚರಣೆಯ ವಿಜ್ಞಾನಿಗಳು, ಗುರುಗ್ರಹದ ದ್ರವ್ಯರಾಶಿಯ ಐದು ಪಟ್ಟು ಹೆಚ್ಚು ಎಂದು ಅಂದಾಜಿಸಲಾದ ಗುರು ಗ್ರಹದಂತಹದ್ದೇ ಗ್ರಹವನ್ನು ಅನ್ವೇಷಣೆ ಮಾಡಿದ್ದಾರೆ.

  ಇದನ್ನೂ ಓದಿ :ಮಂಗಳ ಗ್ರಹದಲ್ಲಿ ಸೂರ್ಯಾಸ್ತ ಹೇಗಿರುತ್ತೆ ಗೊತ್ತಾ..? ನಾಸಾ ರೋವರ್‌ ತೆಗೆದಿರುವ ಅದ್ಭುತ ಚಿತ್ರ ನೋಡಿ..

  TOI-2109b ಹೆಸರಿನ ಗ್ರಹದಲ್ಲಿ ಇದೆ ಅನೇಕ ಕೌತುಕ..

  ಈ ಗ್ರಹಕ್ಕೆ TOI-2109b ಎಂದು ಹೆಸರು ಇಡಲಾಗಿದ್ದು, ಗ್ರಹದಲ್ಲಿ ಕೇವಲ 16 ಗಂಟೆಗಳು ಕಳೆದ್ರೆ ಒಂದು ವರ್ಷವಾಗಿ ಮತ್ತೊಂದು ವರ್ಷ ಆರಂಭವಾಗುತ್ತದ್ದಂತೆ.. ಅದೇ ಈ ಗ್ರಹವು ಕೇವಲ 16 ಗಂಟೆಗಳಲ್ಲಿ ಅದರ ನಕ್ಷತ್ರದ ಸುತ್ತ ಸುತ್ತುತ್ತದೆ ಎಂದು ನವೆಂಬರ್ 23, 2021 ರಂದು ಅಂತರಾಷ್ಟ್ರೀಯ ವಿಜ್ಞಾನಿಗಳ ತಂಡವು ಮಾಡಿದ ಈ ಕುರಿತ ಸಂಶೋಧನೆಗಳನ್ನು ಆಸ್ಟ್ರೋನಾಮಿಕಲ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದ್ದು ಬರಲಿ ಮಾಹಿತಿ ಬಹಿರಂಗವಾಗಿದೆ.

  ನಾಸಾದ TESS ಉಪಗ್ರಹ ಪತ್ತೆಹಚ್ಚಿದ TOI-2109b ಗ್ರಹ

  ಭೂಮಿಯಿಂದ 855 ಜ್ಯೋತಿರ್​ವರ್ಷಗಳ ದೂರದಲ್ಲಿರುವ ಹರ್ಕ್ಯುಲಸ್ ನಕ್ಷತ್ರಪುಂಜದ ದಕ್ಷಿಣ ಭಾಗದಲ್ಲಿರುವ TOI-2109b ಗ್ರಹದ ಸಂಶೋಧನೆಯನ್ನ ಮೇ.13, 2020 ರಂದು ನಾಸಾದ TESS ಉಪಗ್ರಹವು ಆರಂಭ ಮಾಡಿತ್ತು. ಇದರಲ್ಲಿ ಸಂಶೋಧನೆ ನಡೆಸಿದ್ದ ವಿಜ್ಞಾನಿಗಳು ನಕ್ಷತ್ರದ ಬೆಳಕಿನ ಮಾಪನಗಳನ್ನು ಸಂಗ್ರಹಿಸಿದರು. ಗ್ರಹವು ನಕ್ಷತ್ರದ ಮುಂದೆ ಹಾದುಹೋಗುವಾಗ ನಕ್ಷತ್ರದ ಬೆಳಕಿನ ಪ್ರಮಾಣ ಸ್ವಲ್ಪ ಕಡಿಮೆಯಾಗುತ್ತದೆ. ಅದನ್ನೇ ಆಧಾರವಾಗಿಟ್ಟು ಗ್ರಹದ ಚಲನೆಯ ಅವಧಿಯನ್ನು ಲೆಕ್ಕ ಹಾಕಲಾಗಿದೆ.

  ಇದನ್ನೂ ಓದಿ :ಕೊತಕೊತ ಕುದಿಯುತ್ತಿದೆ ಸೂರ್ಯನ ಮೇಲ್ಮೈ, ಬಹಳ ಹತ್ತಿರದಿಂದ ಸೂರ್ಯನ ವಿಡಿಯೋ ತೆಗೆದಿದೆ ನಾಸಾ.. ನೋಡಿ ಹೇಗಿದೆ !

  ಇನ್ನು ಹೊಸ ಗ್ರಹದ ಅತ್ಯಂತ ಬಿಗಿಯಾದ ಕಕ್ಷೆ ಮತ್ತು ಅದರ ನಕ್ಷತ್ರದ ಸಾಮೀಪ್ಯದಿಂದಾಗಿ,ತಾಪಮಾನವು ಸುಮಾರು 3,500 ಕೆಲ್ವಿನ್ ಅಥವಾ 3227 ಡಿಗ್ರಿ ಸೆಲ್ಸಿಯಸ್‌ಗೆ ಹತ್ತಿರದಲ್ಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ TOI-2109b ಗ್ರಹವು ಇದುವರೆಗೆ ಪತ್ತೆಯಾದ ಗ್ರಹಗಳಲ್ಲಿ ಅತಿ ಹೆಚ್ಚು ತಾಪಮಾನ ಹೊಂದಿರುವ ಎರಡನೇ ಸ್ಥಾನದಲ್ಲಿದೆ

  ಇನ್ನು ಈ ಅಧ್ಯಯನದ ಪ್ರಮುಖ ಲೇಖಕ ಇಯಾನ್ ವಾಂಗ್ ಹೇಳುವ ಪ್ರಕಾರ, ಒಂದು ಅಥವಾ ಎರಡು ವರ್ಷಗಳಲ್ಲಿ ಗ್ರಹವು ತನ್ನ ನಕ್ಷತ್ರದ ಹತ್ತಿರ ಹೇಗೆ ಚಲಿಸುತ್ತದೆ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ ಮತ್ತು ಇನ್ನೊಂದು 10 ಮಿಲಿಯನ್ ವರ್ಷಗಳಲ್ಲಿ ಗ್ರಹವು ತನ್ನ ನಕ್ಷತ್ರಕ್ಕೆ ಬೀಳಬಹುದು ಎಂದು ಎಂದು ಅಂದಾಜಿಸಲಾಗಿದೆ. ಮುಂಬರುವ ಅಧ್ಯಯನಗಳಲ್ಲಿ ಮತ್ತಷ್ಟು ಅಂಶಗಳು ಪತ್ತೆಯಾಗಲಿವೆ ಎಂದು ಸಂಶೋಧಕರು ಭಾವಿಸಿದ್ದಾರೆ.
  First published: