• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • ಬಾಹ್ಯಾಕಾಶದಲ್ಲಿ ವಿಭಿನ್ನವಾಗಿ ತನ್ನ 50ನೇ ಹುಟ್ಟುಹಬ್ಬ ಆಚರಿಸಿಕೊಂಡ ನಾಸಾ ಗಗನಯಾತ್ರಿ!

ಬಾಹ್ಯಾಕಾಶದಲ್ಲಿ ವಿಭಿನ್ನವಾಗಿ ತನ್ನ 50ನೇ ಹುಟ್ಟುಹಬ್ಬ ಆಚರಿಸಿಕೊಂಡ ನಾಸಾ ಗಗನಯಾತ್ರಿ!

NASA Astronaut

NASA Astronaut

ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಗಗನಯಾತ್ರಿ ಮೇಗನ್ ಮೆಕ್‌ಆರ್ಥರ್ ಸೋಮವಾರ ಐಎಸ್‌ಎಸ್‌ನಲ್ಲಿ ತಮ್ಮ 50ನೇ ಹುಟ್ಟುಹಬ್ಬವನ್ನು ಬಾಹ್ಯಾಕಾಶದಲ್ಲಿ ಆಚರಿಸುವ ಮೂಲಕ ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಚಾಲನೆ ನೀಡಿದ್ದಾರೆ.

  • Trending Desk
  • 3-MIN READ
  • Last Updated :
  • Share this:

ಹುಟ್ಟುಹಬ್ಬಗಳನ್ನು ವಿಭಿನ್ನವಾಗಿ ಆಚರಿಸುವುದು ಎಂದರೆ ಜನರಿಗೆ ಏನೋ ಒಂದು ರೀತಿಯ ಸಡಗರ ಸಂಭ್ರಮ ಇದ್ದೇ ಇರುತ್ತದೆ. ನೀರಿನೊಳಗೆ, ಆಕಾಶದಲ್ಲಿ ಹಾರಾಡುತ್ತಾ, ವಿಮಾನದಲ್ಲಿ ಹೀಗೆ ಜನರು ಹುಟ್ಟುಹಬ್ಬಗಳನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವುದು ಇಂದು ಸಾಮಾನ್ಯವಾಗಿದೆ. ಆದರೆ ಹುಟ್ಟುಹಬ್ಬ ಆಚರಿಸಿಕೊಳ್ಳುವವರು ಗಗನಯಾತ್ರಿಗಳಾಗಿದ್ದರೆ ಅವರ ಹುಟ್ಟುಹಬ್ಬ ವಿಶೇಷವಾಗಿ ಇರುತ್ತದೆ ತಾನೇ..? ಹೌದು ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಗಗನಯಾತ್ರಿ ಮೇಗನ್ ಮೆಕ್‌ಆರ್ಥರ್ ಸೋಮವಾರ ಐಎಸ್‌ಎಸ್‌ನಲ್ಲಿ ತಮ್ಮ 50ನೇ ಹುಟ್ಟುಹಬ್ಬವನ್ನು ಬಾಹ್ಯಾಕಾಶದಲ್ಲಿ ಆಚರಿಸುವ ಮೂಲಕ ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಚಾಲನೆ ನೀಡಿದ್ದಾರೆ.


ಮೇಗನ್ ಬಾಹ್ಯಾಕಾಶದಲ್ಲಿ ಆಚರಿಸಿದ ಹುಟ್ಟುಹಬ್ಬದ ಕ್ಷಣಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. “ಅತ್ಯದ್ಭುತ 50” ಎಂದು ಬರೆದಿರುವ ಹಸಿರು ಟಿ ಶರ್ಟ್ ಹಾಗೂ ಖಾಕಿ ಬಣ್ಣದ ಪ್ಯಾಂಟ್ ಧರಿಸಿ ನಾಲ್ಕು ಇತರ ಅಂತಾರಾಷ್ಟ್ರೀಯ ಗಗನ ಯಾತ್ರಿಗಳೊಂದಿಗೆ ಮೆಕ್‌ಅರ್ಥರ್ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ.

ತಮ್ಮ ಹುಟ್ಟುಹಬ್ಬದ ಪಾರ್ಟಿಯನ್ನು ಬಾಹ್ಯಾಕಾಶದಲ್ಲಿ ಆಚರಿಸಿಕೊಂಡರೂ ಮೆಕ್‌ಅರ್ಥರ್ ಆಚರಣೆಯನ್ನು ಅರ್ಥಪೂರ್ಣವನ್ನಾಗಿಸಿದ್ದಾರೆ. ಅವರ ಕೂದಲು ಹಾರಾಡುತ್ತಿತ್ತು ಹಾಗೂ ಬಲೂನ್‌ಗಳು, ಬಗೆ ಬಗೆಯ ತಿಂಡಿಗಳು ಈ ಪಾರ್ಟಿಯಲ್ಲಿತ್ತು. ಮೆಕ್‌ಅರ್ಥರ್ ತನ್ನ ಸಹ ಗಗನಯಾತ್ರಿಗಳ ಪರಿಚಯವನ್ನು ಈ ಸಂದರ್ಭದಲ್ಲಿ ಮಾಡಿದ್ದು ತಿಂಡಿಗಳ ಪರಿಚಯವನ್ನೂ ಮಾಡಿದ್ದಾರೆ. ನನ್ನ ವಿಶೇಷಯಾತ್ರೆಯ ಸಿಬ್ಬಂದಿಯೊಂದಿಗೆ ಅತ್ಯುತ್ತಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೇನೆ. ಹುಟ್ಟುಹಬ್ಬದಲ್ಲಿದ್ದ ತಿಂಡಿಗಳ ಪರಿಚಯ ಮಾಡಿರುವ ಮೆಕ್‌ಅರ್ಥರ್ ಚೀಸ್‌ನೊಂದಿಗೆ ಪಿಜ್ಜಾಗಳು, ಬಗೆ ಬಗೆಯ ಕೇಕ್, ಚಾಕಲೇಟ್, ಮೇಣದ ಬತ್ತಿ, ಬಲೂನ್‌ಗಳ ಅಲಂಕಾರದೊಂದಿಗೆ ವಿಶಿಷ್ಟವಾದ ಹುಟ್ಟುಹಬ್ಬ ಆಚರಿಸಿಕೊಂಡೆ ಎಂದು ಮೆಕ್‌ಅರ್ಥರ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಮೆಕ್‌ಅರ್ಥರ್ ಹಂಚಿಕೊಂಡಿರುವ ಫೋಟೋ ಹಾಗೂ ಹುಟ್ಟುಹಬ್ಬದ ವಿವರಣೆಯ ಟ್ವೀಟ್‌ಗಳನ್ನು ಅವರ ಟ್ವಿಟ್ಟರ್ ಅನುಯಾಯಿಗಳು ಸಂಭ್ರಮಿಸಿದ್ದು ವಿಧವಿಧವಾದ ಕಾಮೆಂಟ್‌ಗಳ ಮೂಲಕ ಗಗನಯಾತ್ರಿಗೆ ಶುಭಾಶಯ ಕೋರಿದ್ದಾರೆ. ಟ್ವಿಟ್ಟರ್ ಬಳಕೆದಾರರು ಗಗನಯಾತ್ರಿಯ ವಿಶಿಷ್ಟ ಹುಟ್ಟುಹಬ್ಬದ ಸಂಭ್ರಮಕ್ಕೆ ಸಂತಸ ವ್ಯಕ್ತಪಡಿಸಿದ್ದು ನಿಮ್ಮ ಹುಟ್ಟುಹಬ್ಬದ ಆಚರಣೆ ಇತರರಿಗೆ ಮಾದರಿ ಎಂಬುದಾಗಿ ಬರೆದುಕೊಂಡಿದ್ದಾರೆ. ನೀವು ಆಚರಿಸಿಕೊಂಡಿರುವ ಹುಟ್ಟುಹಬ್ಬ ಅತ್ಯಂತ ವಿಶಿಷ್ಟವಾಗಿದ್ದು ಈ ಅದ್ಭುತ ಕ್ಷಣಗಳನ್ನು ನೀವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.

ನಿಮ್ಮ ಹುಟ್ಟುಹಬ್ಬ ಈವೆಂಟ್ ಮ್ಯಾನೇಜರ್‌ಗೆ ವಿಶಿಷ್ಟ ಹುಟ್ಟುಹಬ್ಬಗಳನ್ನು ಆಯೋಜಿಸಲು ಯೋಜನೆ ನೀಡುತ್ತಿದೆ ಎಂದು ಇನ್ನೊಬ್ಬ ಟ್ವಿಟ್ಟರ್ ಅನುಯಾಯಿ ಬರೆದಿದ್ದರೆ ಮೆಕ್‌ಅರ್ಥರ್ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು, ಹೀಗೆ ಬಾಹ್ಯಾಕಾಶದಲ್ಲಿ ಎಷ್ಟು ಜನರು ಹುಟ್ಟುಹಬ್ಬವನ್ನು ಹೀಗೆ ಆಚರಿಸಿಕೊಳ್ಳುತ್ತಾರೆ. ಇದೊಂದು ಅತ್ಯದ್ಭುತ ಪ್ರಯತ್ನವಾಗಿದೆ ಎಂದು ಅಭಿನಂದಿಸಿದ್ದಾರೆ.


ಮೆಕ್‌ಅರ್ಥರ್ ತಮ್ಮ ಹುಟ್ಟುಹಬ್ಬವನ್ನು ಹೀಗೆ ವಿಭಿನ್ನವಾಗಿ ಆಚರಿಸಿಕೊಂಡಿದ್ದು, ಈ ಹುಟ್ಟುಹಬ್ಬದ ಆಚರಣೆ ನನ್ನ ಜೀವನದ ಅತ್ಯಮೂಲ್ಯ ಕ್ಷಣವಾಗಿದೆ ಎಂಬುದಾಗಿ ಹೇಳಿದ್ದಾರೆ. ಶೂನ್ಯ ಗುರುತ್ವಾಕರ್ಷಣೆಯ ನಡುವೆಯೂ ಭೂಮಿಯಲ್ಲಿ ಹುಟ್ಟುಹಬ್ಬ ಆಚರಿಸುವ ರೀತಿಯಲ್ಲಿಯೇ ಗಗನಯಾತ್ರಿ ತಮ್ಮ ಇತರ ಗಗನಯಾತ್ರಿಗಳೊಂದಿಗೆ ಅವಿಸ್ಮರಣೀಯವಾದ ಹುಟ್ಟುಹಬ್ಬ ಆಚರಿಸಿದ್ದಾರೆ.First published: