Bengaluru Metro: ಮೆಟ್ರೊ ಪ್ರಯಾಣಕ್ಕೆ ಇನ್ಮೇಲೆ ವಿಶೇಷ ಕಾರ್ಡ್, One Nation One Card ನಲ್ಲಿ QR Code ಮೂಲಕ ಪ್ರಯಾಣ ಸುಲಭ..ಬಳಸೋದು ಹೀಗೆ

Bangalore Metro Ticket QR code: NCMC ಕಾರ್ಡ್ ಪ್ರಾರಂಭವಾದ ನಂತರ ಪ್ರಯಾಣಿಕರು ಎಲ್ಲಾ ನಿಲ್ದಾಣಗಳಲ್ಲಿ ಇದನ್ನು ಬಳಸಲು ಸಾಧ್ಯವಾಗುತ್ತದೆ. ಆದರೆ QR-ಕೋಡ್ ಟಿಕೆಟಿಂಗ್ ವ್ಯವಸ್ಥೆಯು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು BMRCL ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ನಮ್ಮ ಮೆಟ್ರೋ

ನಮ್ಮ ಮೆಟ್ರೋ

  • Share this:

Namma Metro: ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರು ಶೀಘ್ರದಲ್ಲೇ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (National Common Mobility Card) (NCMC) ಜೊತೆಗೆ QR ಕೋಡ್ ಆಧಾರಿತ ಟಿಕೆಟಿಂಗ್ ಅನ್ನು ಬಳಸಬಹುದು. ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) 1ನೇ ಹಂತದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಒಂದು ಅಥವಾ ಎರಡು ಹೊಸ ಸ್ವಯಂಚಾಲಿತ ಶುಲ್ಕ ಸಂಗ್ರಹ (AFC) ಗೇಟ್‌ಗಳನ್ನು ಸ್ಥಾಪಿಸಿದೆ. ಹೊಸ AFC ಗೇಟ್‌ಗಳು QR-Code ಮತ್ತು ಓಪನ್ ಲೂಪ್ NCMC ಎರಡನ್ನೂ ಸ್ವೀಕರಿಸುತ್ತವೆ. ಇನ್ನು, ಹಂತ 2 ಮೆಟ್ರೋ ನಿಲ್ದಾಣಗಳು ಈಗಾಗಲೇ NCMC ಮತ್ತು QR-ಕೋಡ್ ಅನುಸರಣೆ AFC ಗೇಟ್‌ಗಳನ್ನು ಹೊಂದಿವೆ.


ಎಲ್ಲಾ ಸಿದ್ಧತೆ ಮಾಡಿಕೊಂಡಿರುವ ಬಿಎಂಆರ್​ಸಿಎಲ್

NCMC ಪ್ರಾರಂಭಿಸಲು ಸಿದ್ಧರಾಗಿರುವುದಾಗಿ BMRCL ಅಧಿಕಾರಿಗಳು ಹೇಳಿದ್ದಾರೆ. “ನಾವು NCMCಯನ್ನು ಪ್ರಾರಂಭಿಸಲು ಸಿಎಂ ದಿನಾಂಕಕ್ಕಾಗಿ ಕಾಯುತ್ತಿದ್ದೇವೆ. ಇದು ನವೆಂಬರ್ ಮೊದಲ ವಾರದ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಎಲ್ಲಾ ಪರೀಕ್ಷೆಗಳು ಮತ್ತು ಪ್ರಯೋಗಗಳು ಪೂರ್ಣಗೊಂಡಿವೆ. NCMC ಕಾರ್ಡ್ ಪ್ರಾರಂಭವಾದ ನಂತರ ಪ್ರಯಾಣಿಕರು ಎಲ್ಲಾ ನಿಲ್ದಾಣಗಳಲ್ಲಿ ಇದನ್ನು ಬಳಸಲು ಸಾಧ್ಯವಾಗುತ್ತದೆ. ಆದರೆ QR-ಕೋಡ್ ಟಿಕೆಟಿಂಗ್ ವ್ಯವಸ್ಥೆಯು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು BMRCL ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಹಂತ 1 ನಿಲ್ದಾಣಗಳಲ್ಲಿನ ಎಲ್ಲಾ AFC ಗೇಟ್‌ಗಳು QR-ಕೋಡ್ ಮತ್ತು NCMC ಎರಡನ್ನೂ ಹಂತ ಹಂತವಾಗಿ ಸ್ವೀಕರಿಸುತ್ತವೆ ಎಂದೂ ಅವರು ಹೇಳಿದರು.


ಇದನ್ನೂ ಓದಿ: BMRCL Recruitment 2021: ತಿಂಗಳಿಗೆ ₹2,15,000 ಸಂಬಳ, ಬೆಂಗಳೂರು ಮೆಟ್ರೋದಲ್ಲಿ ಹಿರಿಯರಿಗೆ ಉದ್ಯೋಗ

QR ಆಧಾರಿತ ಟಿಕೆಟಿಂಗ್ ಯೋಜನೆಯಡಿ, BMRCL ತನ್ನ ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್‌ಗಳನ್ನು ಖರೀದಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ ಮತ್ತು ಟಿಕೆಟ್ ಕೌಂಟರ್‌ಗಳ ಮೂಲಕ ಪೇಪರ್-ಟಿಕೆಟ್‌ಗಳನ್ನು ಸಹ ನೀಡುತ್ತದೆ. ಅಪ್ಲಿಕೇಶನ್/ಪೇಪರ್ ಟಿಕೆಟ್ QR ಕೋಡ್ ಅನ್ನು ಪ್ರದರ್ಶಿಸುತ್ತದೆ. ಇದನ್ನು ಮೆಟ್ರೋ ನಿಲ್ದಾಣಗಳಲ್ಲಿ QR ಸಕ್ರಿಯಗೊಳಿಸಿದ AFC ಗೇಟ್‌ಗಳಲ್ಲಿ ಟ್ಯಾಪ್ ಮಾಡಬಹುದು. ಇದು ಪ್ರಾರಂಭವಾದ ನಂತರ, ಪ್ರಯಾಣಿಕರು ಇನ್ನು ಮುಂದೆ ಸ್ಮಾರ್ಟ್ ಕಾರ್ಡ್‌ಗಳು ಅಥವಾ ಟೋಕನ್‌ಗಳನ್ನು ಒಯ್ಯುವ ಅಗತ್ಯವಿಲ್ಲ.


ಈ ಕಾರ್ಡ್​ಗಳನ್ನು ಬಳಸಿ ಶಾಪಿಂಗ್ ಕೂಡಾ ಮಾಡಬಹುದು

ಓಪನ್-ಲೂಪ್ ಕಾರ್ಡ್‌ಗಳು ಸಾರ್ವತ್ರಿಕವಾಗಿವೆ ಮತ್ತು ಶಾಪಿಂಗ್ ಮಾಡಲು ಹಾಗೂ ಪಾರ್ಕಿಂಗ್‌ಗೆ ಪಾವತಿಸಲು ಬಳಸಬಹುದು ಮತ್ತು BMTC, ಟ್ಯಾಕ್ಸಿಗಳು ಅಥವಾ ಆಟೋಗಳಂತಹ ಇತರ ಸಾರಿಗೆ ವಿಧಾನಗಳೊಂದಿಗೆ ಸಂಯೋಜಿಸಬಹುದು. ನಮ್ಮ ಮೆಟ್ರೋದಲ್ಲಿ ಪ್ರಸ್ತುತ ಬಳಸುತ್ತಿರುವಂತಹ ಕ್ಲೋಸ್ಡ್-ಲೂಪ್ ಕಾರ್ಡ್‌ಗಳನ್ನು ಇತರ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ.


ಇದನ್ನೂ ಓದಿ: Bengaluru Metro Phase-III: ಮತ್ತಷ್ಟು ಹಿಗ್ಗಲಿದೆ ನಮ್ಮ ಮೆಟ್ರೋ; 42 ಕಿ.ಮೀ ಮಾರ್ಗ,31 ನಿಲ್ದಾಣಗಳು!

ಆದರೆ, BMTC ಇನ್ನೂ NCMC ಅನ್ನು ಸ್ವೀಕರಿಸಲು ಸಿದ್ಧವಾಗಿಲ್ಲ ಎಂದು ತಿಳಿದುಬಂದಿದ್ದು, ಅಸ್ತಿತ್ವದಲ್ಲಿರುವ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರವನ್ನು (ETMs) ಬದಲಾಯಿಸಬೇಕಾಗುತ್ತದೆ.


ಪ್ರಸ್ತುತ, 72% ಮೆಟ್ರೋ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಬಳಸಿದರೆ, ಉಳಿದ 28% ಪ್ರಯಾಣಿಕರು ಟೋಕನ್‌ಗಳನ್ನು ಬಳಸುತ್ತಾರೆ. ಆದರೂ, ಪ್ರವೇಶಕ್ಕಾಗಿ AFC ಗೇಟ್‌ನಲ್ಲಿ ಸ್ಕ್ಯಾನ್ ಮಾಡಬಹುದಾದ ಚಿಪ್ ಒಳಗೊಂಡಿರುವ ಟೋಕನ್‌ಗಳನ್ನು ಖರೀದಿಸುವುದು ದುಬಾರಿಯಾಗಿದೆ ಮತ್ತು ಪ್ರತಿ ಬಳಕೆಯ ನಂತರ ಸ್ಯಾನಿಟೈಸೇಷನ್‌ ಅಗತ್ಯವಿರುತ್ತದೆ. ಅನೇಕ ಪ್ರಯಾಣಿಕರು ತಮ್ಮ ಟೋಕನ್‌ಗಳನ್ನು ಕಳೆದುಕೊಳ್ಳುತ್ತಾರೆ. ಆದರೆ, ಇನ್ಮುಂದೆ ಆ ತಾಪತ್ರಯವಿಲ್ಲ. ಮುದ್ರಿತ QR-ಕೋಡ್ ಟಿಕೆಟ್‌ಗಳು/ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಈ ಪ್ರಕ್ರಿಯೆಯು ಸಂಪರ್ಕರಹಿತವಾಗಿರುತ್ತದೆ ಎಂದು ತಿಳಿದುಬಂದಿದೆ.

Published by:Soumya KN
First published: