HOME » NEWS » Trend » NAKED WOMEN DUBAI POLICE ARRESTED NUDE WOMEN FOR POSING IN BALCONY AFTER VIDEO GOES VIRAL STG SCT

ಅಪಾರ್ಟ್‍ಮೆಂಟ್‍ನ ಬಾಲ್ಕನಿಯಲ್ಲಿ ಬೆತ್ತಲಾಗಿ ನಿಂತ ಮಹಿಳೆಯರ ಬಂಧನ!

Viral News | ಮಹಿಳೆಯರು ಬೆತ್ತಲೆಯಾಗಿ ನಿಂತಿರುವುದನ್ನು ಕಂಡ ಎದುರು ಮನೆಯ ವ್ಯಕ್ತಿಯೊಬ್ಬರು ಇದನ್ನು ವಿಡಿಯೋ ಮಾಡಿ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಅಪ್‍ಲೋಡ್ ಮಾಡಿದ್ದರು. ವಿಡಿಯೋದಲ್ಲಿ ಬಾಲ್ಕನಿಯಲ್ಲಿ ನಿಂತ ಮಹಿಳೆಯರು ವೇಶ್ಯಾವಾಟಿಕೆ ನಡೆಸುತ್ತಿರುವವರು ಎಂಬ ಅನುಮಾನ ಹುಟ್ಟುವ ರೀತಿಯಲ್ಲಿ ವರ್ತಿಸುತ್ತಿದ್ದರು.

news18-kannada
Updated:April 6, 2021, 2:39 PM IST
ಅಪಾರ್ಟ್‍ಮೆಂಟ್‍ನ ಬಾಲ್ಕನಿಯಲ್ಲಿ ಬೆತ್ತಲಾಗಿ ನಿಂತ ಮಹಿಳೆಯರ ಬಂಧನ!
ಸಾಂದರ್ಭಿಕ ಚಿತ್ರ
  • Share this:
ಹಾಡಹಗಲೇ ಬಾಲ್ಕನಿಯಲ್ಲಿ ಬೆತ್ತಲೆಯಾಗಿ ನಿಂತು ಲೈಂಗಿಕ ಚಟುವಟಿಕೆ ಆಹ್ವಾನ ನೀಡುತ್ತಿದ್ದ ಮಹಿಳೆಯರ ಗುಂಪನ್ನು ಪೊಲೀಸರು ಬಂಧಿಸಿದ ಘಟನೆ ಯುಎಇಯ ದುಬೈನ ಮರೀನಾ ಅಪಾರ್ಟ್‍ಮೆಂಟ್‍ನಲ್ಲಿ ಶನಿವಾರ ರಾತ್ರಿ ನಡೆದಿದೆ.

ಮಹಿಳೆಯರು ಬೆತ್ತಲೆಯಾಗಿ ನಿಂತಿರುವುದನ್ನು ಕಂಡ ಎದುರು ಮನೆಯ ವ್ಯಕ್ತಿಯೊಬ್ಬರು ಇದನ್ನು ವಿಡಿಯೋ ಮಾಡಿ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಅಪ್‍ಲೋಡ್ ಮಾಡಿದ್ದರು. ವಿಡಿಯೋದಲ್ಲಿ ಬಾಲ್ಕನಿಯಲ್ಲಿ ನಿಂತ ಮಹಿಳೆಯರು ವೇಶ್ಯಾವಾಟಿಕೆ ನಡೆಸುತ್ತಿರುವವರು ಎಂಬ ಅನುಮಾನ ಹುಟ್ಟುವ ರೀತಿಯಲ್ಲಿ ವರ್ತಿಸುತ್ತಿದ್ದರು. ಖುದ್ದಾಗಿ ಲೈಂಗಿಕ ಚಟುವಟಿಕೆಗಳಿಗೆ ಆಹ್ವಾನ ನೀಡುವಂತೆ ತೋರುತ್ತಿತ್ತು. ಈ ಹಿನ್ನೆಲೆ ಮಹಿಳೆಯರನ್ನು ಬಂಧಿಸಲಾಗಿದೆ ಎಂದು ದುಬೈ ಪೊಲೀಸರು ತಿಳಿಸಿದ್ದಾರೆ.

ಬಂಧಿತ ಮಹಿಳೆಯರು ವೇಶ್ಯಾವಾಟಿಕೆ ನಡೆಸುವವರು. ಸಾರ್ವಜನಿಕರನ್ನು ತಮ್ಮತ್ತ ಸೆಳೆದುಕೊಳ್ಳುವ ಸಲುವಾಗಿ ಬೆತ್ತಲೆಯಾಗಿ ಬಾಲ್ಕನಿಯಲ್ಲಿ ನಿಂತು ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದರು ಎಂದು ದಿ ನ್ಯಾಷನಲ್ ವರದಿ ಮಾಡಿದೆ.

ಮಹಿಳೆಯರನ್ನು ಬಂಧಿಸಿದ ಪೊಲೀಸರು ಇವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು. ಸಮಾಜದ ಮೇಲೆ ದುಷ್ಪರಿಣಾಮ ಬೀರದಂತೆ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಬಾರದ ರೀತಿಯಲ್ಲಿ ವರ್ತಿಸುವಂತೆ ಎಚ್ಚರಿಕೆಯನ್ನು ಸಹ ನೀಡಲಾಗಿದೆ ಎಂದು ಹೇಳಿದರು.

ಯುಎಇ ಕಾನೂನಿನ ಪ್ರಕಾರ ಮಹಿಳೆಯರ ಅಸಭ್ಯ ವರ್ತನೆಗೆ ಆರು ತಿಂಗಳ ಕಾಲ ಸೆರೆ ವಾಸ, 1 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾದ ವಿಡಿಯೋಗಳನ್ನು, ಲೈಂಗಿಕತೆಗೆ ಉತ್ತೇಜನ ನೀಡುವ ವಿಡಿಯೋ ಫೋಟೋ ಬಳಸುವಂತಿಲ್ಲ ಹಾಗೂ ಈ ರೀತಿಯ ಚಟುವಟಿಕೆಗಳಿಗೆ ಆಹ್ವಾನ ನೀಡುವಂತಿಲ್ಲ. ಅಕಸ್ಮಾತ್ ಈ ರೀತಿಯ ವರ್ತನೆಗಳು ಸಾರ್ವಜನಿಕರಲ್ಲಿ ಕಂಡು ಬಂದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಮತ್ತು ಜೈಲು ವಾಸ ಹಾಗೂ 10 ಸಾವಿರಕ್ಕೂ ಹೆಚ್ಚು ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

17ನೇ ವಿಧಿ ಹೇಳುವುದೇನು?:ಯುಎಇಯ ಹೊಸ ಸೈಬರ್ ಅಪರಾಧ ಕಾನೂನಿನ 17ನೇ ವಿಧಿಯ ಪ್ರಕಾರ, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಜೂಜು, ಅಶ್ಲೀಲತೆಗೆ ಸಂಬಂಧಿಸಿದ ಯಾವುದೇ ಪರಿಕರಗಳು ಅಥವಾ ಸಾರ್ವಜನಿಕ ನೈತಿಕತೆಗೆ ಭಂಗವುಂಟು ಮಾಡುವ ಯಾವುದೇ ವಿಚಾರಗಳನ್ನು ಪ್ರಚೋದಿಸುವಂತಿಲ್ಲ, ಪ್ರೋತ್ಸಾಹಿಸುವಂತಿಲ್ಲ ಹಾಗೂ ಶೋಷಿಸುವಂತಿಲ್ಲ. ಇದನ್ನು ಮೀರಿ ವರ್ತಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಈ ಹಿಂದೆ ಯುಎಇಯಲ್ಲಿ ಪರವಾನಿಗೆ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸಿದ ಕಾರಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಚುಂಬಿಸಿದ ಹಿನ್ನೆಲೆ ಜೈಲು ವಾಸ ವಿಧಿಸಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇತಿಮಿತಿಗಳನ್ನು ಮೀರಿ, ನಿಯಮಗಳನ್ನು ಗಾಳಿಗೆ ತೂರಿ ಮನಸ್ಸೋಇಚ್ಛೆ ವರ್ತಿಸುತ್ತಿದ್ದಾರೆ. ಸೈಬರ್ ಕ್ರೈಂ ಅಧಿಕಾರಿಗಳು ಸಾಕಷ್ಟು ಬಾರಿ ಎಚ್ಚರಿಕೆ ಹಾಗೂ ಕಾನೂನು ರೀತ್ಯ ಚಟುವಟಿಕೆ ಕೈಗೊಂಡರೂ ಹತೋಟಿಗೆ ತರುವುದು ಕಷ್ಟಕರವಾಗುತ್ತಿದೆ. ಇರುವ ಕಾನೂನುಗಳನ್ನು ಕಠಿಣವಾಗಿ ಜಾರಿಗೆ ತಂದಲ್ಲಿ ಈ ರೀತಿ ಅಸಭ್ಯ ವಿಡಿಯೋಗಳಿಗೆ ಬ್ರೇಕ್ ಬೀಳಬಹುದು.
Published by: Sushma Chakre
First published: April 6, 2021, 2:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories