Nagpur Lockdown: ಲಾಕ್​ಡೌನ್​ ಸಮಯದಲ್ಲಿ ನೂರಾರು ಬೀದಿ ನಾಯಿಗಳಿಗೆ ಚಿಕನ್ ಬಿರಿಯಾನಿ ಬಡಿಸುತ್ತಿರುವ ಅಪರೂಪದ ವ್ಯಕ್ತಿ..!

ಎಎನ್​ಐ ಜೊತೆಗೆ ಮಾತನಾಡಿದ ರಂಜಿತ್​ ಅವರು, '30 ರಿಂದ 40 ಕಿಲೋಗ್ರಾಂ ಬಿರಿಯಾನಿಯನ್ನು ತಯಾರಿಸಬೇಕಾದ ಕಾರಣ ನಾನು ಬುಧವಾರ, ಭಾನುವಾರ ಮತ್ತು ಶುಕ್ರವಾರ ಸಾಕಷ್ಟು ಬ್ಯುಸಿ ಇರುತ್ತೇನೆ. ಈ ಶ್ವಾನಗಳು ಈಗ ನನ್ನ ಮಕ್ಕಳಂತೆ' ಎಂದಿದ್ದಾರೆ.

ಬೀದಿನಾಯಿಗಳಿಗೆ ಚಿಕನ್ ಬಿರಿಯಾನಿ ಬಡಿಸುವ ವ್ಯಕ್ತಿ

ಬೀದಿನಾಯಿಗಳಿಗೆ ಚಿಕನ್ ಬಿರಿಯಾನಿ ಬಡಿಸುವ ವ್ಯಕ್ತಿ

  • Share this:

ನಾಗ್ಪುರ(ಮೇ 23): ಕೋವಿಡ್-​ 19(COVID-19) ಉಲ್ಬಣಗೊಂಡಿರುವ ಈ ಸಮಯದಲ್ಲಿ ಎಲ್ಲೆಲ್ಲೂ ಲಾಕ್​ಡೌನ್(Lockdown)​​ ಜಾರಿಯಾಗಿದೆ. ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಸಾಕಷ್ಟು ಕಠಿಣವಾಗಿದೆ. ಅದರಲ್ಲೂ ಒಂದು ಹೊತ್ತಿನ ಊಟಕ್ಕೂ ತತ್ವಾರ ಉಂಟಾಗಿದೆ. ಪ್ರತಿದಿನ ಜನರು ಆಹಾರಕ್ಕಾಗಿ ಹವಣಿಸುತ್ತಿದ್ದಾರೆ. ಇನ್ನು ಮೂಕ ಪ್ರಾಣಿಗಳು, ಅದರಲ್ಲೂ ಶ್ವಾನಗಳ(Dogs) ಪರಿಸ್ಥಿತಿ ಊಹೆಗೂ ನಿಲುಕದ್ದು. ಆದರೆ ನಾಗ್ಪುರದಲ್ಲಿ(Nagpura) ವ್ಯಕ್ತಿಯೊಬ್ಬರು ಹಸಿವಿನಿಂದ ಕಂಗೆಟ್ಟಿರುವ 190 ಬೀದಿ ನಾಯಿಗಳಿಗೆ ಪ್ರತಿದಿನ ಚಿಕನ್ ಬಿರಿಯಾನಿ ಮಾಡಿ ಉಣ ಬಡಿಸುತ್ತಿರುವ ಅಪರೂಪದ ಘಟನೆ ವರದಿಯಾಗಿದೆ.


ರಂಜಿತ್​ ನಾಥ್​ ಎನ್ನುವ ವ್ಯಕ್ತಿ ಪ್ರತಿನಿತ್ಯ 40 ಕಿಲೋಗ್ರಾಂನಷ್ಟು ಚಿಕನ್​ ಬಿರಿಯಾನಿಯನ್ನು(Chicken Biriyani) ತಯಾರಿಸುತ್ತಾರೆ. ಮಾಲೀಕರಿಲ್ಲದ ಬೀದಿ ಬದಿಯ ಶ್ವಾನಗಳನ್ನು ತನ್ನ ಮಕ್ಕಳು ಎನ್ನುವಂತೆ ನೋಡಿಕೊಂಡು ಬಿರಿಯಾನಿ ಬಡಿಸುತ್ತಾ ಮಾನವೀಯತೆ ಮೆರೆದಿದ್ದಾರೆ.


ಎಎನ್​ಐ(INA) ಜೊತೆಗೆ ಮಾತನಾಡಿದ ರಂಜಿತ್​ ಅವರು, '30 ರಿಂದ 40 ಕಿಲೋಗ್ರಾಂ ಬಿರಿಯಾನಿಯನ್ನು ತಯಾರಿಸಬೇಕಾದ ಕಾರಣ ನಾನು ಬುಧವಾರ, ಭಾನುವಾರ ಮತ್ತು ಶುಕ್ರವಾರ ಸಾಕಷ್ಟು ಬ್ಯುಸಿ ಇರುತ್ತೇನೆ. ಈ ಶ್ವಾನಗಳು ಈಗ ನನ್ನ ಮಕ್ಕಳಂತೆ' ಎಂದಿದ್ದಾರೆ.


ರಂಜಿತ್​ ಅವರು, ’ನನ್ನ ಕಡೆ ಉಸಿರು ಇರುವ ತನಕ ಈ ಕೆಲಸ ಮಾಡುತ್ತೇನೆ. ಇದು ನನಗೆ ಸಂತೋಷ ನೀಡುತ್ತದೆ' ಎಂದಿದ್ದಾರೆ. ರಂಜಿತ್​ ಅವರು ಶ್ವಾನಗಳಿಗೆ ಆಹಾರ ತಯಾರಿಸಲು ಏನೆಲ್ಲಾ ಸಿದ್ಧತೆ ನಡೆಸುತ್ತಾರೆ ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ.


ಇದನ್ನೂ ಓದಿ:Robin Uthappa: ರಾಬಿನ್ ಉತ್ತಪ್ಪ ಬ್ಯಾಟಿಂಗ್ ವೈಖರಿಯೇ ವೃತ್ತಿಜೀವನಕ್ಕೆ ಮುಳುವಾಯಿತೇ..? ಅವರ ಮಾತುಗಳಲ್ಲೇ ಕೇಳಿ..!

ರಂಜಿತ್ ಪ್ರತಿ ನಿತ್ಯ ಸಂಜೆ 5 ಗಂಟೆಗೆ ಮನೆಯಿಂದ ಹೊರಡುತ್ತಾರೆ. 10 ರಿಂದ 12 ಸ್ಥಳಗಳನ್ನು ಗುರುತಿಸಿಕೊಂಡಿದ್ದಾರೆ. ಅಲ್ಲಿಗೆ ಒಂದರ ನಂತರ ಒಂದು ಏರಿಯಾಗೆ ತಲುಪುತ್ತಾರೆ. ಅವರ ಮಕ್ಕಳಿಗೂ ಆ ಸ್ಥಳಗಳ ಪರಿಚಯವಿದೆ. 'ಈ ಶ್ವಾನಗಳು ನನ್ನನ್ನು ಕಂಡ ಕೂಡಲೇ ನನ್ನ ಬಳಿಗೆ ಓಡಿ ಬರುತ್ತವೆ' ಎಂದು ರಂಜಿತ್ ಹೇಳುತ್ತಾರೆ. ಶ್ವಾನಗಳೊಟ್ಟಿಗೆ ಬೆಕ್ಕು ಮತ್ತು ಇನ್ನಿತರ ಪ್ರಾಣಿಗಳು ಬಂದರೆ ಅವುಗಳ ನಡುವೆ ವ್ಯತ್ಯಾಸವನ್ನು ನೋಡದೇ ಅವುಗಳಿಗೂ ಆಹಾರವನ್ನು ಬಡಿಸುತ್ತಾರೆ.


ಒಂದು ದೊಡ್ಡದಾದ ಬಿರಿಯಾನಿ ಪಾತ್ರೆಯನ್ನು ತಮ್ಮ ಬೈಕ್​ ಮೇಲೆ ಹೇರಿಕೊಂಡು ಬರುತ್ತಾರೆ. ಅದರೊಟ್ಟಿಗೆ ಪ್ಲೇಟ್​ಗಳನ್ನು ಕೂಡ ತಂದಿರುತ್ತಾರೆ. ಅದರಲ್ಲೇ ಬೀದಿ ಬದಿಯ ನಾಯಿಗಳಿಗೆ ಆಹಾರ ನೀಡುತ್ತಾರೆ. ಅಲ್ಲದೇ ಪ್ರತಿ ಶ್ವಾನಗಳಿಗೂ ಹೊಟ್ಟೆ ತುಂಬಾ ಬಿರಿಯಾನಿಯನ್ನು ನೀಡುತ್ತಾರೆ. ಆದ್ದರಿಂದ ಶ್ವಾನಗಳು ಆಹಾರಕ್ಕಾಗಿ ಪರಸ್ಪರ ಜಗಳವಾಡುವುದಿಲ್ಲ.


ಚಿಕನ್​ ಬಿರಿಯಾನಿಯನ್ನು ಬಹಳ ಪ್ರೀತಿಯಿಂದ ಮತ್ತು ಸ್ಚಚ್ಚವಾಗಿ ತಯಾರಿಸುತ್ತೇವೆ. ಬಿರಿಯಾನಿಯಲ್ಲಿ ಕಡಿಮೆ ಮಾಂಸವಿದ್ದು, ಮೂಳೆಗಳು ಹೆಚ್ಚಾಗಿರುತ್ತವೆ. ಮಾಂಸಕ್ಕಿಂತಲೂ ಮೂಳೆಯ ಬೆಲೆ ಕಡಿಮೆ ಇರುವ ಕಾರಣ ಇದನ್ನೇ ಅನುಸರಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಹೆಚ್ಚಿನ ನಾಯಿಗಳಿಗೆ ಆಹಾರವನ್ನು ಪೂರೈಸುವುದು ಸಾಧ್ಯವಾಗಿದೆ. ರಂಜಿತ್​ ಅವರು ಏಪ್ರಿಲ್‌ ತಿಂಗಳ ತನಕ ತಮ್ಮ ಸ್ವಂತ ಖರ್ಚಿನಿಂದಲೇ ಬಿರಿಯಾನಿಯನ್ನು ಪೂರೈಸುತ್ತಿದ್ದರು. ಈಗ ಸಾಕಷ್ಟು ಜನರು ಅವರ ಈ ಕೆಲಸಕ್ಕೆ ಕೈ ಜೋಡಿಸಿದ್ದಾರೆ.




ಮನುಷ್ಯನಿಗಾದರೆ, ಹಸಿವು ಎಂದರೆ ಬಾಯಿ ಬಿಟ್ಟು ನಾಲ್ಕು ಜನರನ್ನು ಕೇಳಿಕೊಂಡು ಹೊಟ್ಟೆ ತುಂಬಿಸಿಕೊಳ್ಳಬಹುದು. ಆದರೆ ಮಾತು ಬಾರದ ಶ್ವಾನಗಳು ಯಾರ ಬಳಿ ಕೇಳುತ್ತವೆ? ಆದ್ದರಿಂದಲೇ ರಂಜಿತ್​ರಂತಹ ಮಾನವೀಯ ಮನಸ್ಸುಗಳಿಗೆ ಒಳ ಕಿವಿ ಸದಾ ತೆರೆದಿರುತ್ತವೆ. ಮೂಕ ಪ್ರಾಣಿಗಳ ಹಸಿವು ತಣಿಸುತ್ತಿರುತ್ತವೆ ಅನ್ನೋದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ.

Published by:Latha CG
First published: