ಇತ್ತೀಚೆಗೆ ಸಿನಿ ರಸಿಕರಷ್ಟೆ ಅಲ್ಲದೆ ಸಾಮಾನ್ಯ ಮನುಷ್ಯನ ಬಾಯಲ್ಲಿ ಹರಿದಾಡಿದ ಒಂದೇ ಒಂದು ಸಿನೆಮಾ ಸುದ್ದಿ (Cinema News) ಎಂದರೆ, ಅದು ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕರಾದ ರಾಜಮೌಳಿ ಅವರು ನಿರ್ದೇಶಿಸಿದ ಆರ್‌ಆರ್‌ಆರ್ ಚಿತ್ರದ ಹಾಡು ‘ನಾಟು ನಾಟು’ (Naatu Naatu) ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡದ್ದು ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಹೌದು.. ಇಡೀ ಭಾರತವೇ ಹೆಮ್ಮೆ ಪಡುವಂತಹ ಸಾಧನೆ ಈ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಮಾಡಿದೆ ಅಂತ ಹೇಳಬಹುದು. ಈಗ ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾದ ಈ ಹಾಡಿಗೆ ಡ್ಯಾನ್ಸ್ ಬಾರದೇ ಇರುವವರು ಸಹ ಒಂದೆರಡು ಸ್ಟೆಪ್ಸ್ ಹಾಕುವ ಹಾಗೆ ಮಾಡಿದೆ ಅಂತ ಹೇಳಬಹುದು. ಮೊನ್ನೆ ತಾನೇ ಯುಎಸ್ ನಲ್ಲಿ ಪೊಲೀಸ್ ಅಧಿಕಾರಿಗಳು ಜನರ ಮಧ್ಯೆ ಈ ನಾಟು ನಾಟು ಹಾಡಿಗೆ ಮನಮೋಹಕವಾಗಿ ಸ್ಟೆಪ್ಸ್ ಹಾಕಿದ್ದು ನಾವೆಲ್ಲಾ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದ ಒಂದು ವೀಡಿಯೋದಲ್ಲಿ ನೋಡಿದ್ದೆವು.
ಅನೇಕ ದಾಖಲೆಗಳನ್ನು ಸರಿಗಟ್ಟಿದ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದಲ್ಲಿ ತೆಲುಗು ಚಿತ್ರೋದ್ಯಮದ ಜನಪ್ರಿಯ ನಟರಾದ ರಾಮ್ ಚರಣ್, ಜೂನಿಯರ್ ಎನ್‌ಟಿಆರ್, ಬಾಲಿವುಡ್ ನಟ ಅಜಯ್ ದೇವಗನ್, ನಟಿ ಆಲಿಯಾ ಭಟ್ ಹೀಗೆ ಅತಿರಥ ಮಹಾರಥ ಕಲಾವಿದರು ನಟಿಸಿದ್ದಾರೆ. ಈ ಚಿತ್ರವನ್ನು 500 ಕೋಟಿ ಬಜೆಟ್‌ನಲ್ಲಿ ತಯಾರಿಸಲಾಗಿದ್ದು ಮತ್ತೊಂದು ವಿಶೇಷವಾದ ಸಂಗತಿಯಾಗಿದೆ.
ಭಾರತದಲ್ಲಿ ಅಷ್ಟೇ ಅಲ್ಲದೆ, ಇಡೀ ವಿಶ್ವದಲ್ಲಿ ಹವಾ ಸೃಷ್ಟಿಸಿದೆ ಈ ಹಾಡು
ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಬರೀ ಭಾರತದಲ್ಲಿ ಕ್ರೇಜ್ ಸೃಷ್ಟಿಸಿದ್ದು ಮಾತ್ರವಲ್ಲದೆ, ಇಡೀ ವಿಶ್ವಾದ್ಯಂತ ವೀಕ್ಷಕರ ಗಮನ ಸೆಳೆದಿದೆ ಅಂತ ಹೇಳಬಹುದು. ಆಸ್ಕರ್ ಪ್ರಶಸ್ತಿ ವಿಜೇತ ಹಾಡನ್ನು ಪ್ರಪಂಚದಾದ್ಯಂತದ ಜನರು ಸ್ಟೆಪ್ಸ್ ಹಾಕಿ ಸಂಭ್ರಮಿಸುತ್ತಿದ್ದಾರೆ ಅಂತ ಹೇಳಿದರೆ ಸುಳ್ಳಲ್ಲ. ಇತಿಹಾಸವನ್ನು ಬರೆದ ಆರ್‌ಆರ್‌ಆರ್ ಚಿತ್ರದ ಈ ಹಾಡಿನ ಉತ್ಸಾಹಭರಿತ ಸಂಗೀತಕ್ಕೆ ಅನೇಕರು ಡ್ಯಾನ್ಸ್ ಮಾಡದೆ ಇರಲು ಸಾಧ್ಯವಾಗುತ್ತಿಲ್ಲ. ಮನುಷ್ಯರು ಡ್ಯಾನ್ಸ್ ಮಾಡಿದ್ದನ್ನು ನಾವು ಈಗಾಗಲೇ ತುಂಬಾ ವೀಡಿಯೋಗಳಲ್ಲಿ ನೋಡಿದ್ದೇವೆ. ಆದರೆ ಇಲ್ಲಿ ಕಾರುಗಳ ಲೈಟ್ ಗಳು ಈ ಹಾಡಿನ ಬಿಟ್ಸ್ ಗೆ ಕುಣಿದಿವೆ ನೋಡಿ. ಹೌದು.. ಇದು ಟೆಸ್ಲಾ ಕಾರುಗಳ ಲೈಟ್ ಶೋ, ನಾಟು ನಾಟು ಹಾಡಿನ ಸಂಗೀತಕ್ಕೆ ತಕ್ಕಂತೆ ಲೈಟ್ ಗಳನ್ನು ಆನ್ ಆಫ್ ಮಾಡುವುದರ ಮೂಲಕ ಮನಮೋಹಕವಾದ ಲೈಟ್ ಶೋವನ್ನು ಮಾಡಿದ್ದಾರೆ ಅಂತ ಹೇಳಬಹುದು.
ನೋಡಿ ಹೇಗಿದೆ ನಾಟು ನಾಟು ಹಾಡಿಗೆ ಟೆಸ್ಲಾ ಕಾರುಗಳ ಲೈಟ್ ಶೋ..
ಯುನೈಟೆಡ್ ಸ್ಟೇಟ್ಸ್ ನಲ್ಲಿ ಟೆಸ್ಲಾ ಕಾರು ಮಾಲೀಕರು ಈ ಹಾಡಿನ ಆಸ್ಕರ್ ಪ್ರಶಸ್ತಿಯ ವಿಜಯೋತ್ಸವವನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ನ್ಯೂಜೆರ್ಸಿಯ ವೀಡಿಯೋದಲ್ಲಿ, ನಾಟು ನಾಟು ಹಾಡಿನ ಬೀಟ್ಸ್ ಮೇಲೆ ನಡೆಸಲಾದ ಲೈಟ್ ಶೋ ಮಾತ್ರ ನೋಡಲು ತುಂಬಾನೇ ಚೆನ್ನಾಗಿತ್ತು ಅಂತ ಹೇಳಬಹುದು.
.@Teslalightshows light sync with the beats of #Oscar Winning Song #NaatuNaatu in New Jersey 🤩😍
Thanks for all the love. #RRRMovie @Tesla @elonmusk pic.twitter.com/wCJIY4sTyr
— RRR Movie (@RRRMovie) March 20, 2023
ಸಖತ್ ವೈರಲ್ ಆಗಿದೆ ಈ ಲೈಟ್ ಶೋ
ಈಗ ವೈರಲ್ ಆಗಿರುವ ವೀಡಿಯೋದ ಆವೃತ್ತಿಯನ್ನು ಆರ್‌ಆರ್‌ಆರ್ ಮೂವಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. "ನ್ಯೂಜೆರ್ಸಿಯಲ್ಲಿ ಆಸ್ಕರ್ ವಿನ್ನಿಂಗ್ ಸಾಂಗ್ ನಾಟು ನಾಟು ಬೀಟ್ ಗಳೊಂದಿಗೆ ಕಾರಿನ ಲೈಟ್ ಸಿಂಕ್ ಮಾಡಿ, ಎಲ್ಲರ ಪ್ರೀತಿಗೆ ಧನ್ಯವಾದಗಳು" ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
ಈ ವೀಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 18 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಇದುವರೆಗೆ ಈ ವೀಡಿಯೋಗೆ 92,000ಕ್ಕಿಂತಲೂ ಹೆಚ್ಚು ಲೈಕ್ ಗಳು ಬಂದಿವೆ ಮತ್ತು ಹಲವಾರು ಬಳಕೆದಾರರು ಟ್ವಿಟರ್ ನಲ್ಲಿ ವೀಡಿಯೋ ಗೆ ಸೂಪರ್ ಅಂತ ಕಾಮೆಂಟ್ ಸಹ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ