Viral News: ಎಲ್ಲರೂ ಏಲಿಯನ್ ಎಂದುಕೊಂಡಿದ್ದ ಅಸ್ಥಿಪಂಜರದ ರಹಸ್ಯ ಬಯಲಾಗಿದೆ, ಏನದು?
ಮೂಲಗಳ ಪ್ರಕಾರ ಹಲವರು ಇದನ್ನು ಏಲಿಯನ್ ಆಗಿರಬಹುದೆಂದು ಸಂದೇಹ ವ್ಯಕ್ತಪಡಿಸಿದ್ದರು ಈ ಅಸ್ಥಿಪಿಂಜರವು ಎಷ್ಟು ಚಿಕ್ಕದಾಗಿತ್ತೆಂದರೆ ಇದನ್ನು ಲೆದರ್ ಪೌಚ್ನಲ್ಲಿ ಹಾಕಿ ಅದನ್ನು ಬಟ್ಟೆಯಿಂದ ಸುತ್ತಿಡಲಾಗಿತ್ತು
ಪ್ರಪಂಚದಲ್ಲಿ ಅಲ್ಲಲ್ಲಿ ಭೂಮಿ ಅಗೆಯುವಾಗ, ಶೋಧಿಸುವ ಕಾರ್ಯ ನಡೆಯುವಾಗ, (Exploration ) ಗಣಿಗಾರಿಕೆಯ ಸಂದರ್ಭದಲ್ಲಿ ಏನಾದರೂ ಒಂದು ವಿಶೇಷ ವಸ್ತು, ಖಜಾನೆ (Treasury) ಸಿಕ್ಕಿರುವ ಹಲವಾರು ಉದಾಹರಣೆಗಳಿವೆ. ಈಗಲೂ ಪ್ರಪಂಚದ ಕೆಲ ಭಾಗಗಳಲ್ಲಿ ಏನಾದರೂ ಒಂದು ವಿಚಿತ್ರ (Strange)ವಸ್ತು ಕಂಡುಬರುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಈ ರೀತಿಯಾಗಿ ಯಾವುದಾದರೂ ವಿಚಿತ್ರ ವಸ್ತುಗಳು ದೊರೆತಾಗ ಅವು ನಮ್ಮಲ್ಲಿ ಸಾಕಷ್ಟು ಕುತೂಹಲ (Curious) ಉಂಟಾಗುವಂತೆ ಮಾಡುವುದರಲ್ಲಿ ಸಂಶಯವೇ ಇಲ್ಲ. ಇದಕ್ಕೊಂದು ಉದಾಹರಣೆಯಾಗಿತ್ತು 6 ಇಂಚುಗಳ, ಕೋನಾಕಾರದ ತಲೆಯುಳ್ಳ ಸಿಕ್ಕ(Skeleton) ಅಸ್ಥಿಪಿಂಜರ.
ಅಸ್ಥಿಪಿಂಜರವೊಂದು ದೊರಕಿತ್ತು
ಈ ಹಿಂದೆ 2003ರಲ್ಲಿ ಅಟಕಾಮಾ ಮರಭೂಮಿಯಲ್ಲಿ ಒಂದು ವಿಚಿತ್ರವಾದ ಅವಶೇಷವೊಂದು ದೊರಕಿತ್ತು. ಈ ಅವಶೇಷ ವಿಜ್ಞನಿಗಳ ಸಮುದಾಯವೇ ಸಾಕಷ್ಟು ಚಕಿತಗೊಳ್ಳುವಂತೆ ಮಾಡಿತ್ತು. ಕೋನಾಕಾರದ ತಲೆಯುಳ್ಳ 6 ಇಂಚಿನ ಒಂದು ಅಸ್ಥಿಪಿಂಜರವೊಂದು ದೊರಕಿತ್ತು. ಈ ಅಸ್ಥಿಪಿಂಜರವು ಕೋನಾಕಾರದ ತಲೆ ಹಾಗೂ ಕೇವಲ 10 ಪಕ್ಕೆಲುಬುಗಳನ್ನು ಹೊಂದುವ ಮೂಲಕ ಅಸಾಮಾನ್ಯವಾದ ಗುಣಲಕ್ಷಣಗಳನ್ನು ಹೊಂದಿತ್ತು ಹಾಗೂ ಈ ಅಸ್ಥಿಪಿಂಜರವು ಆಸ್ಕರ್ ಮುನೋ ಎಂಬ ಖಜಾನೆ ಶೋಧಕನಿಗೆ ನಿರ್ಜನವಾದ ಚರ್ಚ್ವೊಂದರಲ್ಲಿ ದೊರೆತಿತ್ತು.
ರಹಸ್ಯ ಬಹಿರಂಗ
ಮೂಲಗಳ ಪ್ರಕಾರ, ಹಲವರು ಇದನ್ನು ಏಲಿಯನ್ ಆಗಿರಬಹುದೆಂದು ಸಂದೇಹ ವ್ಯಕ್ತಪಡಿಸಿದ್ದರು. ಈ ಅಸ್ಥಿಪಿಂಜರವು ಎಷ್ಟು ಚಿಕ್ಕದಾಗಿತ್ತೆಂದರೆ ಇದನ್ನು ಲೆದರ್ ಪೌಚ್ನಲ್ಲಿ ಹಾಕಿ ಅದನ್ನು ಬಟ್ಟೆಯಿಂದ ಸುತ್ತಿಡಲಾಗಿತ್ತು. ಅಂದಿನಿಂದ ಈ ಅಸ್ಥಿಪಿಂಜರದ ಕುರಿತು ಯಾವ ರಹಸ್ಯವನ್ನು ಭೇದಿಸಲಾಗಿರಲಿಲ್ಲ. ಆದರೆ, ಇತ್ತೀಚೆಗೆ ವರದಿಯಾಗಿರುವಂತೆ, ಈಗ ಇದರ ರಹಸ್ಯ ಭೇದಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆಂದು ತಿಳಿದುಬಂದಿದೆ.
ಅಧಿಕೃತ ಸಾಕ್ಷ್ಯಗಳು ದೊರೆತಿರಲಿಲ್ಲ
ಈ ಮುಂಚೆ ವಿಜ್ಞಾನಿಗಳು ಈ ಅಸ್ಥಿಪಿಂಜರದ ಅಸಾಧಾರಣ ಗುಣಲಕ್ಷಣಗಳ ಬಗ್ಗೆ ಚಕಿತವಗಿದ್ದರು. ಓರೆಯಾದ ಕಣ್ಣುಗಳು, 12ರ ಬದಲು ಕೇವಲ 10 ಪಕ್ಕೆಲುಬುಗಳು ಹಾಗೂ ಅತಿ ಚಿಕ್ಕದಾದ ಗಾತ್ರ ಎಲ್ಲವೂ ಅಚ್ಚರಿಪಡುವಂತಿದ್ದವು. ಇದು ದೊರೆತ ಹಲವು ಸಮಯದ ನಂತರ ಇದರ ಎಲುಬುಗಳನ್ನು ಅಧ್ಯಯನ ಮಾಡಿದಾಗ ಇದು 6-8 ವರ್ಷದ ಜೀವಿಯದ್ದಾಗಿರಬಹುದೆಂದು ಹಾಗೂ ಇದು 1970ರ ಸಮಯದ್ದೆಂದೂ ಪರಿಣಿತರು ಅಂದಾಜಿಸಿದ್ದರು. ಆದಾಗ್ಯೂ ಈ ಅಸ್ಥಿಪಿಂಜರದ ಮೂಲದ ಬಗ್ಗೆ ಯಾವ ಅಧಿಕೃತ ಸಾಕ್ಷ್ಯಗಳು ದೊರೆತಿರಲಿಲ್ಲ.
ಚಿಕ್ಕ ಮಗುವಿನ ಅಸ್ಥಿಪಿಂಜರ
ಇದೊಂದು ರಹಸ್ಯಮಯವ ವಿಚಾರವಾಗಿ ಬಿಟ್ಟಿತ್ತು. ಅದರಲ್ಲೂ ವಿಶೇಷವಾಗಿ ಇದರ ಡಿ.ಎನ್.ಎ ವಿಶ್ಲೇಷಿಸಿದಾಗ ಇದರಲ್ಲಿ 8% ಪ್ರಮಾಣದಷ್ಟು ಡಿ.ಎನ್.ಎ ಮನುಷ್ಯರ ಡಿ.ಎನ್.ಎ ಆಗಿರಲಿಲ್ಲ ಎಂಬುದು ಗೊತ್ತಾದಾಗ ಸಂದೇಹವು ಮತ್ತಷ್ಟು ಬಲವಾಗಿತ್ತು. ಆದರೆ, 2018ರಲ್ಲಿ ಸ್ಟ್ಯಾನ್ಫೋರ್ಡ್ ವಿವಿಯ ವಿಜ್ಞಾನಿಗಳು ಇದರ ಸುದೀರ್ಘ ಅಧ್ಯಯನ ನಡೆಸಿ ಈಗಾಗಲೇ ವ್ಯಕ್ತಪಡಿಸಲಾಗಿದ್ದ ಸಂದೇಹದ ಮೇಲೆ ತೆರೆ ಎಳೆದಿದ್ದರು. ಅವರು, ಇದೊಂದು ಚಿಕ್ಕ ಮಗುವಿನ ಅಸ್ಥಿಪಿಂಜರವಾಗಿದ್ದು ಈ ಮಗು 40 ವರ್ಷಗಳ ಹಿಂದೆ ಮರಣ ಹೊಂದಿತ್ತೆಂದು ಅಧ್ಯಯನದ ಮೂಲಕ ತಿಳಿಸಿದರು.
ಈ ಬಗ್ಗೆ ವಿಜ್ಞಾನಿಗಳು, ಇದೊಂದು ಅವಧಿಗೆ ಮುಂಚಿತವಾಗಿಯೇ ಜನಿಸಿದ ಅಂದರೆ ಅಪಕ್ವವಾಗಿ ರೂಪಗೊಂಡ ಚಿಕ್ಕ ಮಗುವಿನ ಕಳೆಬರವಾಗಿದೆ. ಈ ಚಿಕ್ಕಮಗು ಜನಟ್ಇಕ್ ಡಿಸಾರ್ಡರ್ ಹೊಂದಿದ್ದು ಕುಳ್ಳುತನದ ಲಕ್ಷಣ ಹೊಂದಿತ್ತು. ಇದು ಜನಿಸುವ ಮುಂಚೆಯೇ ಅಥವಾ ಜನಿಸಿದ ನಂತರ ತೀರಿಹೋಗಿತ್ತು ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಟ್ಯಾನ್ಫೋರ್ಡ್ ವಿವಿಯ ಮೈಕ್ರೋಬಯಾಲಾಜಿ ಹಾಗೂ ಇಮ್ಯೂನಾಲಜಿ ವಿಭಾಗದ ಪ್ರೊಫೆಸರ್ ಗ್ಯಾರಿ ನೋಲನ್ "ಈ ಬಗ್ಗೆ ಬಹುತೇಕರು ಅನೇಕ ರೀತಿಯ ಸಂಶಯ ವ್ಯಕ್ತಪಡಿಸಿದ್ದರು. ಇದರ ಸುದೀರ್ಘ ಅಧ್ಯಯನದ ಮೂಲಕ ನಾವು ಈ ಕಳೆಬರಕ್ಕೆ ಅದು ಅರ್ಹವಾಗಿರುವ ಒಂದು ಗೌರವ ಪಡೆಯುವಂತೆ ನಿರ್ಧರಿಸಿ ಈ ಬಗ್ಗೆ ಸಂಶೋಧನೆ ನಡೆಸಿದ್ದೇವೆ. ಇದರಿಂದ ಈ ಹಿಂದೆ ಎದ್ದಿದ್ದ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ