ಈ ಹಿಂದೆ 2019 ರಲ್ಲಿ, ಸೈಬೀರಿಯಾದ ಮಂಜುಗಡ್ಡೆ ಪ್ರದೇಶದಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿದ್ದ ಸುಮಾರು 18,000 ವರ್ಷಗಳಷ್ಟು ಹಳೆಯದಾದ ನಾಯಿಮರಿಯ ಶರೀರವು ದೊರೆತು ವಿಜ್ಞಾನಿಗಳಲ್ಲಿ ಕೌತುಕ ಮೂಡಿಸಿತ್ತು. ಹೀಗೆ ಸಿಕ್ಕ ಈ ಪುಟ್ಟ ಪ್ರಾಣಿಯ ಫ್ರೀಜ್ (Fridge) ಆದ ಶರೀರವು, ಚಿಕ್ಕ ನಾಯಿ ಮರಿಯದ್ದೊ ಇಲ್ಲವೇ ತೋಳಿನ ಮರಿಯದ್ದೋ ಎಂಬ ಗೊಂದಲ ಉಂಟಾಗಿತ್ತು. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಸ್ವಿಡನ್ ವಿಜ್ಞಾನಿಗಳಾದ (Scientist) ಲವ್ ಡೇಲೆನ್ ಮತ್ತು ಡೇವ್ ಸ್ಟಾಂಟನ್ ಅವರು ವಿಶ್ಲೇಷಣೆ ನಡೆಸಿದರಾದರೂ ಅವರಿಗೆ ಶತಪ್ರತಿಶತದಷ್ಟು ಖಚಿತವಾಗಿ ಇದು ಯಾವ ಪ್ರಾಣಿಯ (Animal) ಶರೀರ ಎಂಬುದು ಗೊತ್ತಾಗಿರಲಿಲ್ಲ.
ನಾಯಿ ಅಥವಾ ತೋಳವೇ ಎಂಬ ಪ್ರಶ್ನೆಗೆ ಇದೀಗ ವಿಜ್ಞಾನಿಗಳು ಉತ್ತರ ನೀಡಿದ್ದಾರೆ
ಡಿಸೆಂಬರ್ 2019 ರಲ್ಲಿ ಸೈಬೀರಿಯಾದಲ್ಲಿ ಹಿಮದ ಕೆಳಗೆ 18,000 ವರ್ಷಗಳಷ್ಟು ಹಳೆಯದಾದ ಜೀವಿ ಪತ್ತೆಯಾದಾಗ, ಈ ಜೀವಿ ಸುಮಾರು ಹದಿನೆಂಟು ಸಾವಿರ ವರ್ಷಗಳಷ್ಟು ಹಿಂದೆ ಬದುಕಿದ್ದ ಜೀವಿ ಎಂದು ಯಾರೂ ಊಹಿಸಲು ಸಾಧ್ಯವಿರಲಿಲ್ಲ.
ಅದರ ದೇಹವನ್ನು ಹಾಗೇ ಸಂರಕ್ಷಿಸಲಾಗಿದೆ. ಅದರ ದೇಹದ ಮೇಲಿನ ತುಪ್ಪಳ ಕೂಡ ನಿರ್ಮಲವಾಗಿ ಸ್ವಚ್ಛವಾಗಿದೆ. ಈ ಜೀವಿಯ ಹಲ್ಲುಗಳು ಕೂಡ ಸಹಜವಾಗಿ ಇದ್ದವು. ಇನ್ನ್ಯಾವುದೋ ಪ್ರಾಣಿಯೊಂದಿಗೆ ಜಗಳವಾದ ಸಂದರ್ಭದಲ್ಲಿ ಅದು ಅಸುನಿಗಿದ್ದಂತಹ ಭಂಗಿಯಲ್ಲಿತ್ತು ಅದರ ಶರೀರ.
ವಿಜ್ಞಾನಿಗಳು ಇದನ್ನು ಕಂಡಾಗ, ಒಂದು ಜೀವಿ ಇಷ್ಟು ವರ್ಷಗಳ ಕಾಲ ಬದುಕಬಲ್ಲದು ಮತ್ತು ಸಂಪೂರ್ಣವಾಗಿ ಸುರಕ್ಷಿತವಾಗಿರಬಹುದೆಂದು ಅವರು ಆಶ್ಚರ್ಯಚಕಿತರಾದರು.
ಆದರೆ ಅದು ನಾಯಿಯೇ ಅಥವಾ ಬೇರೆ ಪ್ರಾಣಿಯೇ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿತ್ತು. ಆಗ ಎಲ್ಲ ಜನರು ಇದನ್ನು ನಾಯಿ ಎಂದು ಭಾವಿಸುತ್ತಾರೆ, ಏಕೆಂದರೆ ಅದರ ರಚನೆಯು ನಾಯಿಯಂತಿತ್ತು.
ವಿಜ್ಞಾನಿಗಳಿಗೆ ಈ ಕಳೇಬರದ ಮೂಲದ ಬಗ್ಗೆ ಖಚಿತತೆ ಇಲ್ಲದ ಕಾರಣ, ಅದನ್ನು "ಡೋಗೋರ್" ಎಂದು ಹೆಸರಿಸಿದರು ಹಾಗೂ ಇದನ್ನು ಮಾನವ ಇತಿಹಾಸದಲ್ಲಿ ದಾಖಲಿತ ಮೊದಲ ನಾಯಿಯಾಗಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಈಗ ನಾಲ್ಕು ವರ್ಷಗಳ ನಂತರ, ವಿಜ್ಞಾನಿಗಳು ರಹಸ್ಯವನ್ನು ಭೇದಿಸಿದ್ದಾರೆ.
ಇದನ್ನೂ ಓದಿ: ಎರಡು ಲಿಂಗಗಳೊಂದಿಗೆ ಜನಿಸಿದ ಮಗು, ಆದ್ರೆ ಗುದದ್ವಾರವೇ ಇಲ್ಲ!
"ಇದು ವಿಶೇಷವಾಗಿದೆ ಏಕೆಂದರೆ ಇದು ಇತ್ತೀಚೆಗೆ ಸತ್ತ ಪ್ರಾಣಿಯಂತೆ ಭಾಸವಾಗುತ್ತದೆ. ಆದರೆ ನೀವು ಅದರ ಬಗ್ಗೆ ಯೋಚಿಸಿದಾಗ, ಇದು ಗುಹೆ ಸಿಂಹಗಳು ಮತ್ತು ಬೃಹದ್ಗಜಗಳು ಮತ್ತು ಉಣ್ಣೆಯ ಘೇಂಡಾಮೃಗಗಳೊಂದಿಗೆ ವಾಸಿಸುವ ಪ್ರಾಣಿಯಾಗಿದೆ.
ಆದ್ದರಿಂದ ಇದು ತುಂಬಾ ಅದ್ಭುತವಾಗಿದೆ ಎಂದು" ಡಾ ಡ್ಯಾರೆನ್, ವಿಕಸನೀಯ ತಳಿಶಾಸ್ತ್ರದ ಪ್ರಾಧ್ಯಾಪಕ, 2019 ರಲ್ಲಿ ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ವಿಜ್ಞಾನಿಗಳು ದೇಹವನ್ನು ರೇಡಿಯೊಕಾರ್ಬನ್-ಡೇಟ್ ಮಾಡಿದ ನಂತರ ಪ್ರಾಣಿಯ ವಯಸ್ಸನ್ನು ಕಂಡುಹಿಡಿಯಲಾಯಿತು. ಅದರ ಜೀನೋಮ್ ಅಧ್ಯಯನದ ಆರಂಭಿಕ ಸುತ್ತಿನ ಫಲಿತಾಂಶಗಳು ಅದು ನಾಯಿ ಅಥವಾ ತೋಳವೇ ಎಂದು ಸ್ಪಷ್ಟವಾಗಿ ನಿರ್ಧರಿಸಲು ಸಾಧ್ಯವಿರಲಿಲ್ಲ ಎಂದು ಹೇಳಿದ್ದರು.
ಆದರೆ, ಅದಾದ ನಾಲ್ಕು ವರ್ಷಗಳ ನಂತರ, ವಿಜ್ಞಾನಿಗಳು 18,0000 ವರ್ಷಗಳಷ್ಟು ಹಳೆಯ ಪ್ರಾಣಿಯ ನಿಜವಾದ ಮೂಲವನ್ನು ಕಂಡುಹಿಡಿದಿದ್ದಾರೆ.
ಡೋಗೋರ್ ನಾಯಿಯಾಗಿರಲಿಲ್ಲ. ಇದು ತೋಳವಾಗಿದ್ದು, ಇದು ಆರಂಭಿಕ ನಾಯಿಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ವರದಿಗಳ ಪ್ರಕಾರ, ವಿಜ್ಞಾನಿಗಳು 72 ಪ್ರಾಚೀನ ತೋಳಗಳ ಜೀನೋಮ್‌ಗಳ ಜೊತೆಗೆ ನಾಯಿಯ ಜೀನೋಮ್ ಅನ್ನು ಅಧ್ಯಯನ ಮಾಡಿದರು. ಇತಿಹಾಸದ ಅವಧಿಯಲ್ಲಿ ಮಾನವರು ನಾಯಿ ಸಾಕಣೆಯನ್ನು ಹೇಗೆ ಕರಗತ ಮಾಡಿಕೊಳ್ಳಲು ಸಾಧ್ಯವಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವುದು ಅವರ ಗುರಿಯಾಗಿತ್ತು.
ಪರ್ಮಾಫ್ರಾಸ್ಟ್‌ನಲ್ಲಿ ಕಂಡುಬರುವ ರಕ್ಷಿತ ಜೀವಿಗಳ ಜೀನೋಮ್ ಅನ್ನು ವಿಜ್ಞಾನಿಗಳು ಅನುಕ್ರಮ ಮಾಡಿದಾಗ, ಅದು ಆ ಸಮಯದಲ್ಲಿ 66 ತೋಳ ಜಿನೋಮ್‌ಗಳಲ್ಲಿ ಒಂದಾಗಿದ್ದಾಗಿ ತಿಳಿದುಬಂದಿದೆ.
ಲಂಡನ್‌ನ ಫ್ರಾನ್ಸಿಸ್ ಕ್ರಿಕ್ ಇನ್‌ಸ್ಟಿಟ್ಯೂಟ್‌ನಲ್ಲಿ ಪುರಾತನ ಜೀನೋಮಿಕ್ಸ್‌ನಲ್ಲಿ ಪೋಸ್ಟ್‌ಡಾಕ್ಟರಲ್ ಫೆಲೋ ಆಗಿರುವ ಆಂಡರ್ಸ್ ಬರ್ಗ್‌ಸ್ಟ್ರೋಮ್ ಲೈವ್ ಸೈನ್ಸ್‌ಗೆ ಹೀಗೆ ಹೇಳಿದರು: "ನಾಯಿಗಳು ಹಿಮಯುಗದಲ್ಲಿ ಸಾಕುಪ್ರಾಣಿಗಳಾಗಿದ್ದ ಮೊದಲ ಪ್ರಾಣಿ ಎಂದು ನಮಗೆ ತಿಳಿದಿದೆ. ಆದರೆ ಅವುಗಳ ಸಾಕಣೆಯ ಇತರ ಅಂಶಗಳು ಕೆಲವು ಮಾನವ ಪೂರ್ವ ಇತಿಹಾಸದ ದೊಡ್ಡ ರಹಸ್ಯಗಳು ನಮಗೆ ಗೊತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಮನುಷ್ಯರು ಈ ಭೂಮಿ ಮೇಲೆ ಇಲ್ಲದಿದ್ರೂ ಜಿರಳೆಗಳು ಇರ್ತಾವಂತೆ! ಹೇಗಿದು ಸಾಧ್ಯ?
ಆಧುನಿಕ ತೋಳಗಳ ವಂಶವಾಹಿಗಳು ಕಾಲಾನಂತರದಲ್ಲಿ ತುಂಬಾ ಬದಲಾಗಿರುವುದರಿಂದ ತೋಳಗಳು ನಾಯಿಗಳಾದಾಗ ನಿಖರವಾದ ಸಮಯವನ್ನು ಸ್ಪಷ್ಟವಾಗಿ ನಿರ್ಧರಿಸಲು ತಜ್ಞರಿಗೆ ಕಷ್ಟಕರವಾಗಿದೆ.
ವಿಜ್ಞಾನಿಗಳ ತಂಡವು ನಾಯಿಗಳು ಪಶ್ಚಿಮ ಯುರೇಷಿಯಾದ ಪ್ರಾಚೀನ ತೋಳಗಳಿಗಿಂತ ಪೂರ್ವ ಯುರೇಷಿಯಾದ ಪ್ರಾಚೀನ ತೋಳಗಳಿಗೆ ಹೆಚ್ಚು ನಿಕಟ ಸಂಬಂಧ ಹೊಂದಿದೆ ಎಂದು ಕಂಡುಹಿಡಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ