ನಾವು ಯಾರಾದರೂ ಕಳ್ಳರು(Thieves) ನಮ್ಮ ಮನೆಗೆ ಕಳುವು ಮಾಡಲು ನುಗ್ಗಿದರೆ ಅಥವಾ ರಸ್ತೆಯಲ್ಲಿ ಹೋಗುವಾಗ ನಮ್ಮ ಜೇಬಿನಲ್ಲಿರುವ ಪರ್ಸ್(Purse) ಕದಿಯಲು ಪ್ರಯತ್ನಿಸಿ ಸಿಕ್ಕಿಹಾಕಿಕೊಂಡಾಗ ಅವರನ್ನು ಹಿಗ್ಗಾ ಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸುತ್ತೇವೆ. ಕೆಲವೊಮ್ಮೆ ಕಳ್ಳರನ್ನು ಅಲ್ಲೇ ಅಕ್ಕ ಪಕ್ಕದಲ್ಲಿರುವ ಜನರನ್ನು ಒಟ್ಟುಗೂಡಿಸಿ ಸಿಕ್ಕಿಬಿದ್ದ ಕಳ್ಳನನ್ನು ಚೆನ್ನಾಗಿ ಥಳಿಸುತ್ತೇವೆ ಮತ್ತು ಅವನನ್ನು ಪೊಲೀಸರಿ(Police)ಗೆ ಒಪ್ಪಿಸುವ ಬದಲು ಬುದ್ದಿ ಹೇಳಿ ಬಿಟ್ಟು ಬಿಡುತ್ತೇವೆ. ಆದರೆ ಇಲ್ಲಿ ಸಾಮಾಜಿಕ ಮಾಧ್ಯಮಗಳ(Social Media)ಲ್ಲಿ ಇತ್ತೀಚೆಗೆ ವೈರಲ್(Viral) ಆಗುತ್ತಿರುವ ಫೋಟೋ(Photo)ಗಳನ್ನು ನೋಡಿದರೆ ಇದು ವಿಚಿತ್ರ ಘಟನೆಯನ್ನು ವಿವರಿಸುತ್ತಿರುವ ಹಾಗಿದೆ ಎಂದು ಹೇಳಬಹುದು.
ಮೆಕ್ಸಿಕನ್ ನಗರದಲ್ಲಿ ಕೆಲವು ಜನರ ಗುಂಪು ತಮ್ಮ ಗುರುತನ್ನು ಬಿಟ್ಟುಕೊಡದೆ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದಂತಹ ಕಳ್ಳರನ್ನು ರಸ್ತೆಯ ಬದಿಯಲ್ಲಿರುವ ದೀಪದ ಕಂಬಗಳಿಗೆ ಕಟ್ಟಿಹಾಕಿ ನಂತರ ಅವರ ಮುಖಗಳನ್ನು ಜೋಕರ್ನಂತೆ ಚಿತ್ರಿಸಿ ಹೋಗುತ್ತಿದ್ದಾರೆ. ಒಟ್ಟಿನಲ್ಲಿ ಈ ಸಿಕ್ಕಿಬಿದ್ದ ಕಳ್ಳರನ್ನು ಪೊಲೀಸರಿಗೆ ಒಪ್ಪಿಸದೆ ಅವರೇ ಸ್ವತಃ ತಕ್ಕ ಪಾಠ ಕಲಿಸುತ್ತಿದ್ದಾರೆ ಎಂದು ಹೇಳಬಹುದು. 'ಡಾರ್ಕ್ ನೈಟ್' ಎಂಬ ಪೊಲೀಸರ ಗಸ್ತು ತಿರುಗುವ ವಾಹನವು ಈಶಾನ್ಯ ಮೆಕ್ಸಿಕೋದ ಬೀದಿಗಳಲ್ಲಿ ಗಸ್ತು ತಿರುಗುತ್ತಿದೆಯೇ ಎಂಬುದು ತಿಳಿದಿಲ್ಲವಾದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಫೋಟೋಗಳು ಮತ್ತು ವಿಡಿಯೋಗಳು ಕಳ್ಳರು ದರೋಡೆಗೆ ಪ್ರಯತ್ನಿಸುತ್ತಿದ್ದು ಒಬ್ಬ ವ್ಯಕ್ತಿ ಅಥವಾ ಅಪರಿಚಿತರ ಗುಂಪೊಂದು ಇವರ ಪ್ರಯತ್ನಗಳನ್ನು ವಿಫಲಗೊಳಿಸುತ್ತಿದೆ ಎಂಬುದಂತೂ ಸ್ಪಷ್ಟವಾಗಿ ಸೂಚಿಸುತ್ತವೆ.
ರಿಯೋ ಬ್ರಾವೊ ನಗರದಲ್ಲಿ ಮಹಿಳಾ ಪಾದಚಾರಿಯ ಪರ್ಸ್ ಕದಿಯಲು ಪ್ರಯತ್ನಿಸಿದ್ದಕ್ಕಾಗಿ ಒಬ್ಬ ಪುರುಷ ಮತ್ತು ಮಹಿಳೆ ಕಳ್ಳರನ್ನು ಹಿಡಿಯಲಾಗಿದೆ ಎಂದು ಟ್ವಿಟ್ಟರ್ನಲ್ಲಿ ಹಂಚಿಕೊಂಡಂತಹ ಒಂದು ಫೋಟೋ ತೋರಿಸುತ್ತದೆ. ಈ ಕಳ್ಳರನ್ನು ನಗರದಲ್ಲಿರುವ ದೀಪದ ಕಂಬಕ್ಕೆ ಡಕ್ಟ್ ಟೇಪ್ನಿಂದ ಕಟ್ಟಲಾಗಿತ್ತು. ಇಬ್ಬರ ಮುಖಗಳನ್ನು ಜೋಕರ್ನಂತೆ ಚಿತ್ರಿಸಿ ಹೋಗಿದ್ದಾರೆ. ಒಬ್ಬ ಕಳ್ಳನ ಎದೆಯ ಮೇಲೆ "ಸೋಯ್ ರಾಟಾ (ನಾನು ಕಳ್ಳ)" ಎಂದು ಮತ್ತು ಅದೇ ಮಾತುಗಳು ಮಹಿಳೆಯ ತಲೆಯ ಮೇಲೆ ಸಹ ಬರೆದು ಹೋಗಿದ್ದಾರೆ.
ಪುರುಷರ ಗುಂಪೊಂದು ತಮ್ಮ ಕೈಗಳನ್ನು ಕಟ್ಟಿಕೊಂಡು ಸಾಲಿನಲ್ಲಿ ಅಂಗಿ ಹಾಕಿಕೊಳ್ಳದೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂತು. ಅವರ ಮುಖಗಳು ಸಹ ಜೋಕರ್ನಂತೆ ಚಿತ್ರಿಸಲ್ಪಟ್ಟಿದ್ದವು ಎಂದು ಇನ್ನೊಂದು ಫೋಟೋದಲ್ಲಿ ನೋಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ