ನೀವು ನಂಬ್ತಿರೊ ಬಿಡ್ತಿರೋ! ಫೇಕ್ ಅಂತಿರೋ ನಿಜ ಅಂತಿರೋ! ಆದರೆ ಈ ಮೊಬೈಲ್ ಬಂದ ಮೇಲಂತೂ ಸಿಕ್ಕಾಪಟ್ಟೆ ಚಿತ್ರ ವಿಚಿತ್ರ ಘಟನೆಗಳು ದಾಖಲಾಗ್ತಾನೆ ಇರುತ್ತವೆ. ಅದರಲ್ಲೂ ವಿದೇಶದಲ್ಲಿ ಈ ರೀತಿಯಾದ ಘಟನೆಗಳು ಸ್ವಲ್ಪ ಹೆಚ್ಚಾಗಿಯೇ ನಡೆಯುತ್ತವೆ. ಈಗ ಇಂತಹದ್ದೇ ಒಂದು ಘಟನೆ ಯುನೈಟೈಡ್ ಕಿಂಗ್ಡಮ್ನಲ್ಲಿ ನಡೆದಿದೆ. 33 ವರ್ಷದ ಮಹಿಳೆಯೊಬ್ಬರು ಹುಟ್ಟು ಹಬ್ಬದ ಸರ್ಪ್ರೈಸ್ ವಿಡಿಯೋವನ್ನು ವಿಡಿಯೋ ಕಾಲ್ ಮೂಲಕ ನೋಡುತ್ತಾ ಉದ್ಘಾರ ವ್ಯಕ್ತಪಡಿಸುತ್ತಿದ್ದರು. ಆದರೆ ಆ ವಿಡಿಯೋ ಕೇವಲ ಹುಟ್ಟು ಹಬ್ಬದ ಅಚ್ಚರಿ ಮಾತ್ರವಾಗಿರಲಿಲ್ಲ. ಅಲ್ಲಿ ಬೆನ್ನ ಹಿಂದೆ ಒಂದು ಭಯಾನಕ ರಹಸ್ಯ ಅಡಗಿತ್ತು.
ಹೌದು! ಮರ್ಸಿಸೈಡ್ನ 33 ವರ್ಷದ ಕೇಯ್ಲೀ ಕಾರ್ಬಿ ಎನ್ನುವ ಮಹಿಳೆಯೊಬ್ಬರು ತಮ್ಮ 6 ವರ್ಷದ ಮತ್ತು 7 ವರ್ಷದ ಇಬ್ಬರು ಮಕ್ಕಳನ್ನು ಮೇಲಿನ ಮಹಡಿಯಲ್ಲಿ ಮಲಗಿಸಿದ್ದರು. ಆಕೆ ಮತ್ತು ಮಕ್ಕಳು ಬಿಟ್ಟರೆ ಬೇರೆ ಯಾರೂ ಮನೆಯಲ್ಲಿ ಇರಲಿಲ್ಲ. ಈ ಸಮಯದಲ್ಲಿ ಆಕೆ ತನ್ನ ಗೆಳೆಯನೊಟ್ಟಿಗೆ ವಿಡಿಯೋ ಕಾಲ್ನಲ್ಲಿದ್ದಾರೆ. ಈ ಸಮಯ ಹುಟ್ಟು ಹಬ್ಬಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ನೋಡುತ್ತ ಪ್ರತಿಕ್ರಿಯೆ ನೀಡುತ್ತಿದ್ದರು. ಈ ವೇಳೆ ಮಹಿಳೆಯ ಬೆನ್ನ ಹಿಂದೆ ಆಕೆಗೆ ತಿಳಿಯದಂತೆ ಯಾರೋ ಬಂದು ನಿಂತಿದ್ದಾರೆ. ಆದರೆ ಇದಾವುದರ ಅರಿವಿರದೇ ಮಹಿಳೆ ವೀಡಿಯೊದೊಳಗೆ ಮಗ್ನರಾಗಿದ್ದಾರೆ. ಹಾಗೇ ನಿಂತಿರುವ ವ್ಯಕ್ತಿಯ ದೇಹದ ಆಕಾರ ಕತ್ತಲಿನಲ್ಲಿ ಕಾಣುತ್ತದೆ ವಿನಹ ಅದು ಯಾರು ಎನ್ನುವ ಸ್ಪಷ್ಟ ಚಿತ್ರಣವಿಲ್ಲ.
ಆದರೆ ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ಆಕೆಯ ಸ್ನೇಹಿತ ನಿನ್ನ ಬೆನ್ನ ಹಿಂದೆ ನಿಂತಿರುವುದು ಯಾರು? ಸರಿಯಾಗಿ ನಿನ್ನ ಭುಜದ ನೇರವಾಗಿ ನಿಂತಿರುವ ವ್ಯಕ್ತಿಯ ನೆರಳು ಯಾರದು ಎಂದು ಕೇಳಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಮಹಿಳೆ ಗಾಬರಿಯಾಗಿದ್ದಾಳೆ. ಮನೆಯಲ್ಲಿ ಮಕ್ಕಳು ಮತ್ತು ತನ್ನನ್ನು ಬಿಟ್ಟು ಇನ್ಯಾರು ಇಲ್ಲ. ಆದರೆ ಈ ನೆರಳು ಯಾರದು? ಎಂದು ಭಯಭೀತಳಾಗಿದ್ದಾಳೆ. ನಂತರ ತನ್ನ ಗೆಳೆಯ ರೆಕಾರ್ಡ್ ಮಾಡಿರುವ ವಿಡಿಯೋವನ್ನು ಸರಿಯಾಗಿ ಗಮನಿಸಿದ ಮೇಲೆ ಮಹಿಳೆ ಆತಂಕಕ್ಕೆ ಒಳಗಾಗಿದ್ದಾಳೆ ಎಂದು Mirror online ವರದಿ ಮಾಡಿದೆ.
ಇದನ್ನು ಓದಿ: ತಮಿಳು ನಟನ ಕೈ ಹಿಡಿದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ; ಜ್ವಾಲಾ ಗುಟ್ಟ ಮದುವೆಯ ಚಿತ್ರಗಳು
ಇದೊಂದು ಆಶ್ಚರ್ಯಕರ ಹುಟ್ಟು ಹಬ್ಬದ ವೀಡಿಯೋ ಚಾಟ್ ಕೇಯ್ಲೀ ಮತ್ತು ಆಕೆಯ ಗೆಳೆಯನಿಗೆ ಶಾಕ್ ಕೊಟ್ಟಿದೆ. ಈ ಕಗ್ಗತ್ತಲಲ್ಲಿ ಆ ರೀತಿಯಲ್ಲಿ ಬಂದು ನಿಂತವರು ಯಾರು? ಎಂದು ಲಿವರ್ ಪೂಲ್ ಎಕೋ ನ್ಯೂಸ್ನಲ್ಲಿ ವರದಿ ಮಾಡಲಾಗಿದೆ. ಇನ್ನೂ ಇದೇ ಸಮಯದಲ್ಲಿ ಆಕೆ ತನ್ನ ಹೆತ್ತವರಿಗೆ ಫೋನ್ ಮಾಡಿ ನಡುರಾತ್ರಿಯಲ್ಲಿ ಮನೆಗೆ ಕರೆಸಿಕೊಂಡಿದ್ದಾರೆ. ತನ್ನ ಮತ್ತು ಮಕ್ಕಳ ಬಗ್ಗೆ ಭಯಭೀತರಾಗಿರುವ ಮಗಳನ್ನು ಕಂಡು ಹೆತ್ತವರು ಸಮಾಧಾನ ಹೇಳಿದ್ದಾರೆ. ಅಲ್ಲದೇ ತಾವು ಆಕೆಯನ್ನು ಬಿಟ್ಟು ಹೋಗುವುದಿಲ್ಲ. ಅವಳಿಗೆ ಧೈರ್ಯವನ್ನು ನೀಡುತ್ತೇವೆ ಎಂದಿದ್ದಾರೆ. ಇನ್ನು ಈ ಘಟನೆ ಬಗ್ಗೆ ಪೊಲೀಸರಿಗೆ ವರದಿ ಮಾಡಿಲ್ಲ, ಎಂದು ಮೂಲಗಳು ತಿಳಿಸಿವೆ.
'ಈ ಘಟನೆಯಿಂದ ನಾನು ತುಂಬಾ ಭಯಭೀತಳಾಗಿದ್ದೇನೆ. ನಿರಾಳವಾಗಿಲ್ಲ. ಈಗಲೂ ನನ್ನ ಹಿಂದೆ ನನ್ನನ್ನು ಯಾರೋ ನೋಡುತ್ತಿರುವಂತೆ ಭಾಸವಾಗುತ್ತಿದೆ' ಎಂದು ಹೇಳಿದ್ದಾರೆ. ಸದ್ಯ ಟಿಕ್ ಟಾಕ್ನಲ್ಲಿ ಈ ವಿಡಿಯೋವನ್ನು ಆಕೆಯೇ ಅಪಲೋಡ್ ಮಾಡಿದ್ದು, ವಿಡಿಯೊ ವೈರಲ್ ಆಗ್ತಿದೆ ಜೊತೆಗೆ ಭಾರೀ ಚರ್ಚೆಗೆ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ