ಮನೆ (Home) ಹಾಗೂ ಕಚೇರಿ (Office) ಎರಡನ್ನೂ ನಿಭಾಯಿಸುವ ಛಾತಿ ಮಹಿಳೆಯರಲ್ಲಿದೆ, ಮಹಿಳೆಯರು ತುಂಬಾ ಶಕ್ತಿಶಾಲಿಗಳು ಎಂಬ ಮಾತುಗಳನ್ನು ನಾವು ಸಾಮಾನ್ಯವಾಗಿ ಕೇಳುತ್ತೇವೆ. ಎರಡನ್ನೂ ನಿಭಾಯಿಸಿಕೊಂಡು ಹೋಗಬೇಕು ಎಂಬ ದೃಷ್ಟಿಯಿಂದ ಅದೆಷ್ಟೋ ಮಹಿಳೆಯರು ತಾವು ಅನುಭವಿಸುವ ಕಷ್ಟಗಳನ್ನು ಹೊರಜಗತ್ತಿಗೆ ತೋರ್ಪಡಿಸುವುದಿಲ್ಲ ಬದಲಿಗೆ ಹಲ್ಲು ಕಚ್ಚಿ ಸಹಿಸಿಕೊಂಡೇ ಕೆಲಸ ನಿರ್ವಹಿಸುತ್ತಾರೆ, ಆದರೆ ಸಮಾಜ ಅವರು ಸೂಪರ್ ವುಮನ್ (Super Woman), ವಂಡರ್ ವುಮನ್ ಎಂಬುದಾಗಿ ಹೊಗಳಿಕೆಯ ತೇಪೆ ಹಚ್ಚುತ್ತದೆ. ಸಮಾಜದಲ್ಲಿ ಉದ್ಯೋಗಸ್ಥ ಮಹಿಳೆಯರು (Women) ದಿನಂಪ್ರತಿ ಮನೆ ನಿರ್ವಹಣೆ ಹಾಗೂ ಕಚೇರಿಯ ಒತ್ತಡದಿಂದ ತಮ್ಮ ಆರೋಗ್ಯ ಹಾಗೂ ಸಂತಸದ ಕಡೆಗೆ ಗಮನ ಹರಿಸುತ್ತಿಲ್ಲ ಎಂಬುದಾಗಿ ಹಲವಾರು ಸಮೀಕ್ಷೆಗಳು ತಿಳಿಸಿವೆ. ಒಮ್ಮೊಮ್ಮೆ ಎರಡನ್ನೂ ನಿಭಾಯಿಸಲು ಕಷ್ಟಪಡುವವರು ತಮ್ಮ ವೃತ್ತಿಜೀವನಕ್ಕೆ ಅಂತ್ಯ ಹಾಡುತ್ತಾರೆ. ಇನ್ನು ಕೆಲವರು ಹೇಗೋ ಸಂಭಾಳಿಸಿಕೊಂಡು ಮುಂದುವರಿಯುತ್ತಾರೆ.
ಮನೆಯ ಸ್ವಚ್ಛತೆಯಲ್ಲಿ ಸಹಕಾರ ನೀಡದೇ ಇದ್ದ ಪತಿಗೆ ವಿಚ್ಛೇದನ ನೀಡಿದ ಪತ್ನಿ
ಮನೆಗೆಲಸಲದಲ್ಲಿ ತನ್ನ ಪತಿ ಸಹಕಾರ ನೀಡಲಿಲ್ಲವೆಂದು ಐದು ಮಕ್ಕಳ ತಾಯಿಯಾಗಿರುವ ಲಿನಾಲಿಸ್ ಹೆಸರಿನ ಮಹಿಳೆ ಪತಿಗೆ ವಿಚ್ಛೇದನ ನೀಡಲು ಮುಂದಾದ ಘಟನೆ ವರದಿಯಾಗಿದೆ. ಆರರಿಂದ ಹತ್ತು ಗಂಟೆಗಳ ಕಾಲ ಕಚೇರಿಯಲ್ಲಿ ಕೆಲಸ ಮಾಡಿದ ಲಿನಾಲಿಸ್ ಮನೆಗೆ ಹಿಂತಿರುಗಿದಾಗ ಮನೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿರುವುದು ಕಂಡುಬಂದಿತು.
ಮನೆಯ ಸ್ವಚ್ಛತೆಯಲ್ಲಿ ಪತಿ ತನ್ನೊಂದಿಗೆ ಕೈ ಜೋಡಿಸಿಲ್ಲವೆಂದು ಲಿನಾಲಿಸ್ ನೊಂದು ನುಡಿದಿದ್ದಾರೆ. ಅನಾರೋಗ್ಯದ ದಿನದಂದು ರಜೆ ತೆಗೆದುಕೊಂಡಿರುವುದಕ್ಕಾಗಿ ಸತತವಾಗಿ ಆರರಿಂದ ಹತ್ತು ಗಂಟೆಗಳವರೆಗೆ ಕೆಲಸ ಮಾಡಿ ದಣಿದು ಬಂದಿರುವುದಾಗಿ ತಿಳಿಸಿದ್ದ ಲಿನಾಲಿಸ್ ಮನೆಯ ಪರಿಸ್ಥಿತಿ ನೋಡಿ ಹೈರಾಣಾಗಿದ್ದರು ಎಂದು ತಿಳಿಸಿದ್ದಾರೆ.
ಟಿಕ್‌ಟಾಕ್ ವಿಡಿಯೋದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ ಪತ್ನಿ
ಶಿಫ್ಟ್ ಮುಗಿಸಿ ಬಂದಿದ್ದ ಲಿನಾಲಿಸ್ ಕೊಳಕಾಗಿದ್ದ ಮನೆಯನ್ನು ನೋಡಿ ಶಾಕ್‌ಗೆ ಒಳಗಾಗಿದ್ದರು ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. ಮನೆಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಆಕೆ ಪತಿಗೆ ನೀಡಿದ್ದರು ಆದರೂ ಆತ ಸ್ವಚ್ಛಗೊಳಿಸಲಿಲ್ಲ, ನಾನು ಮನೆಗೆಲಸ ಮಾಡುತ್ತಿದ್ದರೂ ಆತ ಒಂದು ವಸ್ತುವನ್ನು ಆಚೆ ಈಚೆ ಎತ್ತಿಡಲಿಲ್ಲ ಎಂದು ದೂರಿದ್ದಾರೆ.
ಕೊಳಕಾದ ಮನೆಯ ಫೋಟೋವನ್ನು ಲಿನಾಲಿಸ್ ತೆಗೆದುಕೊಂಡಿದ್ದು ಮನೆ ಸ್ವಚ್ಛಗೊಂಡ ನಂತರದ ಫೋಟೋವನ್ನು ತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದಕ್ಕೂ ಓದಿ: ಮನುಕುಲಕ್ಕೆ ವಿನಾಶಕಾರಿಯಾಗಲಿರುವ ಹೊಸ ಅಪಾಯದ ಕುರಿತು ಮುನ್ಸೂಚನೆ ನೀಡಿದ ಖಗೋಳಶಾಸ್ತ್ರಜ್ಞರು! ಏನಿದು ಡೇಂಜರ್?
ಅಡುಗೆ ಕೋಣೆ, ಬೆಡ್ ರೂಮ್, ಲಿವಿಂಗ್ ರೂಮ್ ಹೀಗೆ ಮನೆಯ ಮೂಲೆ ಮೂಲೆಯನ್ನು ಸ್ವಚ್ಛಗೊಳಿಸಿರುವುದಾಗಿ ಲಿನಾಲಿಸ್ ತಿಳಿಸಿದ್ದು, ಯಾವುದೇ ಕೆಲಸದಲ್ಲಿ ತಮಗೆ ಪತಿಯ ಸಹಕಾರ ದೊರೆತಿಲ್ಲ ಎಂದು ತಿಳಿಸಿದ್ದಾರೆ.
ಕನಿಷ್ಠ ಪಕ್ಷ ಮಕ್ಕಳನ್ನು ನೋಡಿಕೊಳ್ಳಲಿಲ್ಲ
ಆಕೆ ಮನೆಯನ್ನು ಸ್ವಚ್ಛಗೊಳಿಸುತ್ತಿರುವ ಸಂದರ್ಭದಲ್ಲಿ ಮಕ್ಕಳು ಆಗಾಗ್ಗೆ ಬಂದು ತೊಂದರೆ ನೀಡುತ್ತಿದ್ದರೂ ಪತಿ ಮಕ್ಕಳನ್ನು ಕೂಡ ನೋಡಿಕೊಳ್ಳಲಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಓದಿ: ಚಂದ್ರನ ರಹಸ್ಯ ಫೋಟೋ ತೆಗೆದ ಯುಎಇ ಮಂಗಳಯಾನ, ಬಹಿರಂಗವಾಯ್ತು ವಿಸ್ಮಯಕಾರಿ ವಿಚಾರಗಳು
ಮಕ್ಕಳ ನಿರ್ವಹಣೆ ಹಾಗೂ ಮನೆಯ ಕೆಲಸ ಜೊತೆಗೆ ಕಚೇರಿಯ ಕೆಲಸ ಎಲ್ಲವನ್ನೂ ನನ್ನಿಂದ ಒಬ್ಬಳೇ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಟಿಕ್‌ಟಾಕ್ ವಿಡಿಯೋದಲ್ಲಿ ಹತಾಶ ತಾಯಿ ತಿಳಿಸಿದ್ದಾಳೆ.
ಮನೆಯನ್ನು ಕೊಳಕಾಗಿಸುವಲ್ಲಿ ಪತಿಯ ಪಾತ್ರವೂ ಇದೆ
ಲಿನಾಲಿಸ್ ವಿಡಿಯೋದಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು ಆಕೆಯ ಪತಿ ಕೂಡ ಮನೆಯನ್ನು ಕೊಳಕು ಮಾಡುವಲ್ಲಿ ಪಾತ್ರವಹಿಸಿದ್ದಾನೆ ಎಂದು ತಿಳಿಸಿದ್ದಾರೆ. ವಾಹನಗಳ ಆಯಿಲ್ ಅನ್ನು ಮನೆಯ ಡೈನಿಂಗ್ ರೂಮ್‌ನಲ್ಲೆಲ್ಲಾ ಪತಿಯೇ ಹರಡಿದ್ದು ಅದನ್ನು ಸ್ವಚ್ಛಗೊಳಿಸುವ ಗೊಡವೆಗೇ ಆತ ಹೋಗಲಿಲ್ಲ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಲಿನಾಲಿಸ್ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ ನೆಟ್ಟಿಗರು
ಲಿನಾಲಿಸ್ ಹಂಚಿಕೊಂಡಿರುವ ವಿಡಿಯೋ 7.8 ಮಿಲಿಯನ್ ವ್ಯೂಗಳನ್ನು ಪಡೆದುಕೊಂಡಿದ್ದು 17 ಸಾವಿರ ಕಾಮೆಂಟ್‌ಗಳನ್ನು ಸ್ವೀಕರಿಸಿದೆ. ಇನ್ನು ಆಕೆಯ ನಿರ್ಧಾರಕ್ಕೆ ಇನ್ನುಳಿದ ನೆಟ್ಟಿಗರು ಬೆಂಬಲ ವ್ಯಕ್ತಪಡಿಸಿದ್ದು ಪತಿಗೆ ವಿಚ್ಛೇದನ ನೀಡುವ ನಿಮ್ಮ ನಿರ್ಧಾರ ಸರಿಯಾದುದು ಎಂದೇ ತಿಳಿಸಿದ್ದಾರೆ.
ಸಂಪೂರ್ಣ ಮನೆಯನ್ನು ಪತ್ನಿಯೊಬ್ಬಳು ನಿಭಾಯಿಸುವುದು ತುಂಬಾ ಕಷ್ಟ ಹಾಗಾಗಿ ಪತಿಯಾದವರು ಈ ವಿಷಯದಲ್ಲಿ ಪತ್ನಿಗೆ ಕೈಜೋಡಿಸಬೇಕು ಎಂದೇ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಪತ್ನಿಗೆ ಮನೆಯ ಸ್ವಚ್ಛತೆಯಲ್ಲಿ ಸಹಕರಿಸದೇ ಇದ್ದ ಪತಿಗೆ ಛೀಮಾರಿ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ