Floating Hotels: ನೀರಿನ ಮೇಲೆ ತೇಲಾಡುವ ಹೋಟೆಲ್‍ ಗಳನ್ನು ಒಮ್ಮೆ ನೋಡಿ ಹೇಗಿವೆ ಅಂತ! ಈ ಅನುಭವ ತುಂಬಾ ವಿಶಿಷ್ಟ..!

ಈ ತೇಲುವ ಹೋಟೆಲ್ ಗಳು ಹೊಸತೇನಲ್ಲ, ದೀರ್ಘಕಾಲದಿಂದ ಭಾರತ(India)ದಲ್ಲಿದ್ದು, ವಿಭಿನ್ನ ಸಮಯಗಳಲ್ಲಿ ವಿಭಿನ್ನ ಉದ್ದೇಶಗಳನ್ನು ಪೂರೈಸುತ್ತಿವೆ ಅಷ್ಟೇ. ಆದರೆ ಇಂದು, ಈ ಹೊಟೇಲ್ ಗಳಿಗಿರುವ ಗುಣಲಕ್ಷಣಗಳು ಐಷಾರಾಮಿ ಪದಕ್ಕೆ ಸಮಾನಾರ್ಥಕವಾಗಿವೆ ಎಂದು ಹೇಳಬಹುದು.

ತೇಲುವ ಹೋಟೆಲ್ ಗಳು

ತೇಲುವ ಹೋಟೆಲ್ ಗಳು

  • Share this:
ಸಾಮಾನ್ಯವಾಗಿ ನಾವೆಲ್ಲಾ ಯಾವುದಾದರೊಂದು ಸ್ಥಳಕ್ಕೆ ಪ್ರವಾಸ(Travel) ಕ್ಕೆಂದು ಹೋಗುತ್ತಿದ್ದರೆ, ಮೊದಲು ಅಲ್ಲಿನ ಹೊಟೇಲ್ (Hotels)ಗಳು ಯಾವ ರೀತಿಯಲ್ಲಿವೆ ಮತ್ತು ಅಲ್ಲಿ ಸುತ್ತಮುತ್ತಲಿನ ಪರಿಸರ (Weather) ಹೇಗಿದೆ ಅಂತ ನೋಡುತ್ತೇವೆ ನಂತರ ಯೋಚನೆ ಮಾಡುವುದು ಅಲ್ಲಿ ಸಿಗುವ ಊಟ(Food)ದ ಬಗ್ಗೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇಲ್ಲಿ ಒಂದು ವಿಶಿಷ್ಟವಾದ ಅನುಭವವನ್ನು ಕಟ್ಟಿಕೊಡುವಂತಹ ಹೋಟೆಲ್ ಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ. ಇವುಗಳು ಸಾಮಾನ್ಯವಾದ ಹೋಟೆಲ್ ಗಳು ಅಲ್ಲವೇ ಅಲ್ಲ, ಇವುಗಳು ನೀರಿನ ಮೇಲೆ ತೇಲಾಡುವ ಹೋಟೆಲ್ ಗಳು ಎಂದು ಕರೆಯಬಹುದು. ಎಂದರೆ, ಈ ಹೋಟೆಲ್ ಗಳನ್ನು ನೀರಿನ ಮೇಲೆ ನಿರ್ಮಿಸಲಾಗಿದೆ ಎಂದು ಹೇಳಬಹುದು.

ಕೇಳಿದರೆ ಮಜಾ ಎನ್ನಿಸುವ ಈ ವಿಷಯ, ಇನ್ನೂ ಇಂತಹ ಹೋಟೆಲ್ ಗಳಲ್ಲಿ ಹೋಗಿ ಇದ್ದು ಬಂದರೆ ಇನ್ನೆಷ್ಟು ಮಜಾ ಇರುತ್ತದೆ ಅಲ್ಲವೇ? ಬನ್ನಿ ಹಾಗಾದರೆ ಭಾರತದಲ್ಲಿ ಈ ರೀತಿಯ ತೇಲುವ ಹೊಟೇಲ್ ಗಳು ಎಲ್ಲೆಲ್ಲಿವೆ ನೋಡೋಣ.

ಈ ತೇಲುವ ಹೋಟೆಲ್ ಗಳು ಹೊಸತೇನಲ್ಲ, ದೀರ್ಘಕಾಲದಿಂದ ಭಾರತ(India)ದಲ್ಲಿದ್ದು, ವಿಭಿನ್ನ ಸಮಯಗಳಲ್ಲಿ ವಿಭಿನ್ನ ಉದ್ದೇಶಗಳನ್ನು ಪೂರೈಸುತ್ತಿವೆ ಅಷ್ಟೇ. ಆದರೆ ಇಂದು, ಈ ಹೊಟೇಲ್ ಗಳಿಗಿರುವ ಗುಣಲಕ್ಷಣಗಳು ಐಷಾರಾಮಿ ಪದಕ್ಕೆ ಸಮಾನಾರ್ಥಕವಾಗಿವೆ ಎಂದು ಹೇಳಬಹುದು. ವಿಶಿಷ್ಟವಾದದ್ದನ್ನು ಅನುಭವಿಸಲು ಬಯಸುವವರಿಗೆ, ಭಾರತದಲ್ಲಿನ ಈ ಅತ್ಯುತ್ತಮ ತೇಲುವ ಹೋಟೆಲ್ ಗಳು ಖಂಡಿತವಾಗಿಯೂ ಜೀವಮಾನದ ಅನುಭವವಾಗಿರುತ್ತದೆ.

ಇದನ್ನೂ ಓದಿ:  Viral News: ಮದುಮಗನ ಪಕ್ಕ ಕೂತು ಹೀಗಾ ಮಾಡೋದು? ಪಾಪ ವರನಿಗೆ ಹೇಗಾಗಿರಬೇಡ..!

1.ಉತ್ತರಾಖಾಂಡ್ ನ ತೆಹ್ರಿಯ ಲೀ ರಾಯ್ ಫ್ಲೋಟಿಂಗ್ ಹಟ್ಸ್ ಮತ್ತು ಇಕೋ ರೂಮ್ಸ್

ಸುಂದರವಾದ, ಮಾನವ ನಿರ್ಮಿತ ತೆಹ್ರಿ ಸರೋವರದ ಮೇಲೆ ಕುಳಿತು, ಲೀ ರಾಯ್ ಫ್ಲೋಟಿಂಗ್ ಹಟ್ ಗಳು ಮತ್ತು ಇಕೋ ರೂಮ್ಸ್ ಉತ್ತರಾಖಂಡದ ಒಂದು ವಿಶಿಷ್ಟ ಸ್ಥಳವಾಗಿದೆ ಎಂದರೆ ತಪ್ಪಾಗುವುದಿಲ್ಲ. ಈ ಆಸ್ತಿಯು ಸರೋವರದ ಹೃದಯ ಭಾಗದಲ್ಲಿರುವ 20 ತೇಲುವ ಗುಡಿಸಲುಗಳಲ್ಲಿ ವಸತಿಯನ್ನು ಒದಗಿಸುತ್ತದೆ. ಇಲ್ಲಿನ ಎಲ್ಲಾ ತೇಲುವ ಗುಡಿಸಲುಗಳು ವೈ-ಫೈ, ಟಿವಿ ಮತ್ತು ಹವಾನಿಯಂತ್ರಣ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಸಹ ಹೊಂದಿವೆ.

2.ಶ್ರೀನಗರದ ಮುಮ್ತಾಜ್ ಪ್ಯಾಲೇಸ್ ಹೌಸ್ ಬೋಟ್

ನೀವು ಕಾಶ್ಮೀರದಲ್ಲಿ ರಾಯಲ್ ಹೌಸ್ ಬೋಟ್ ವಾಸ್ತವ್ಯವನ್ನು ಹುಡುಕುತ್ತಿದ್ದರೆ, ದಾಲ್ ಸರೋವರದ ಮುಮ್ತಾಜ್ ಪ್ಯಾಲೇಸ್ ಹೌಸ್ ಬೋಟ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಈ ಅರಮನೆಯ ಆನಂದವು ಭಾರತದ ಕೆಲವು ಸಾಂಪ್ರದಾಯಿಕ ತೇಲುವ ಹೋಟೆಲ್ ಗಳಲ್ಲಿ ಒಂದಾಗಿದೆ. ಈ ಹೋಟೆಲ್ ಆಧುನಿಕ ಐಷಾರಾಮಿಯಲ್ಲಿ ರಾಜಿ ಮಾಡಿಕೊಳ್ಳದೆ ಕಾಶ್ಮೀರದ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ಬಹಳ ಸುಂದರವಾದ ರೀತಿಯಲ್ಲಿ ಪ್ರದರ್ಶಿಸುತ್ತದೆ.

3.ತಿರುವನಂತಪುರಂನಲ್ಲಿರುವ ಪೂವಾರ್ ಐಲ್ಯಾಂಡ್ ರೆಸಾರ್ಟ್

ಇದು ಹೀಗಿದೆಯೆ ಎಂದು ನಂಬಲೂ ಅಸಾಧ್ಯವಾದಂತಹ ಭಾವನೆ ಈ ಹೋಟೆಲ್ ನೋಡಿದಾಗ ಮೂಡದೆ ಇರಲಾರದು. ಈ ಹೋಟೆಲ್‍ಗೆ ಒಮ್ಮೆಯಾದರೂ ಜೀವಿತಾವಧಿಯಲ್ಲಿ ಭೇಟಿ ನೀಡಲೇಬೇಕು. ತಿರುವನಂತಪುರದ ಪೂವಾರ್ ಐಲ್ಯಾಂಡ್ ರೆಸಾರ್ಟ್ ನೀರಿನ ಮೇಲೆ 12 ತೇಲುವ ಕುಟೀರಗಳಲ್ಲಿ ವಸತಿಯನ್ನು ಒದಗಿಸುತ್ತದೆ. ಈ ಕುಟೀರಗಳು ಸ್ಥಳೀಯ ವಾಸ್ತು ಶಿಲ್ಪದಿಂದ ನಿರ್ಮಿಸಲಾಗಿದೆ ಮತ್ತು ಹುಲ್ಲು ಹಾಸಿನ ಛಾವಣಿಗಳನ್ನು ಹೊಂದಿದ್ದು, ಅದು ಇದರ ಮೋಡಿಯನ್ನು ಹೆಚ್ಚಿಸುತ್ತದೆ ಮತ್ತು ಆಯುರ್ವೇದ ಚಿಕಿತ್ಸೆಗಳನ್ನು ಪಡೆಯಲು ಜನರು ಆಗಾಗ್ಗೆ ಇಲ್ಲಿಗೆ ಬರುತ್ತಾರೆ.

4.ಕೋಲ್ಕತ್ತಾದ ದಿ ಫ್ಲೋಟೆಲ್

ಹೂಗ್ಲಿ ನದಿಯ ಜೆಟ್ಟಿಯ ಮೇಲೆ ನಿರ್ಮಿಸಲಾದ ಕೊಲ್ಕತ್ತಾದ ಈ ತೇಲುವ ಹೋಟೆಲ್ ನಿಮಗೆ ಹಡಗಿನ ಮೇಲೆ ಮಲಗಿದ ಅನುಭವವನ್ನು ನೀಡುತ್ತದೆ. ಹೋಟೆಲ್ ಆಯಕಟ್ಟಿನ ಸ್ಥಳವನ್ನು ಹೊಂದಿದ್ದು, ಅಪ್ರತಿಮ ಹೌರಾ ಸೇತುವೆಯ ಮೋಡಿ ಮಾಡುವ ದೃಶ್ಯಗಳನ್ನು ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ ಎಂದು ಹೇಳಬಹುದು.

ಇದನ್ನೂ ಓದಿ:  Emergency Numberಗೆ ಕರೆ ಮಾಡಿ ಪಿಜ್ಜಾ ಕೇಳಿದ ಮಹಿಳೆ: Smart Operatorಗೆ ಅರ್ಥ ಆಯ್ತು ಆಕೆಯ ಮಾತು!

5.ಉದಯಪುರದ ತಾಜ್ ಲೇಕ್ ಪ್ಯಾಲೇಸ್

ತಾಜ್ ಲೇಕ್ ಪ್ಯಾಲೇಸ್ ಒಂದು ಅಪ್ರತಿಮ ಆಸ್ತಿಯಾಗಿದೆ ಮತ್ತು ಇದು ವಿಶ್ವದ ಅತ್ಯಂತ ಐಷಾರಾಮಿ ಮತ್ತು ಪ್ರಮುಖ ತೇಲುವ ಹೋಟೆಲ್ ಗಳಲ್ಲಿ ಒಂದಾಗಿದೆ. ಮಾನವ ನಿರ್ಮಿತ ಪಿಚೋಲಾ ಸರೋವರದ ನೀರಿನ ಮೇಲೆ ಸುಂದರವಾಗಿ ಕುಳಿತಿರುವ ಈ ಐಷಾರಾಮಿ ಹೋಟೆಲ್ ಕೆಲವು ಶ್ರೀಮಂತ ಮತ್ತು ಗಣ್ಯ ವ್ಯಕ್ತಿಗಳಿಗೆ ಆತಿಥ್ಯ ನೀಡಿದೆ. ನೀವು ಜೇಮ್ಸ್ ಬಾಂಡ್ ಅಭಿಮಾನಿಯಾಗಿದ್ದರೆ, 1983 ರಲ್ಲಿ ಹಾಲಿವುಡ್ ಬ್ಲಾಕ್ ಬಸ್ಟರ್ ‘ಆಕ್ಟೋಪಸ್ಸಿ’ ಚಿತ್ರದ ಚಿತ್ರೀಕರಣಕ್ಕಾಗಿ ಈ ಸ್ಥಳವನ್ನು ಬಳಸಲಾಗಿದೆ ಎಂದು ನಿಮಗೆ ತಿಳಿದಿರುತ್ತದೆ.
Published by:Mahmadrafik K
First published: