ಮಹಾಭಾರತ ಧಾರಾವಾಹಿಯ ಶೀರ್ಷಿಕೆ ಗೀತೆ ಹಾಡಿದ ಮುಸ್ಲಿಂ ವ್ಯಕ್ತಿಯನ್ನು ಕೊಂಡಾಡಿದ ನೆಟ್ಟಿಗರು..!

Viral Video of Muslim Singing Mahabharatha Title Song: ವಿಡಿಯೋದಲ್ಲಿ ಹಿರಿಯ ಮುಸ್ಲಿಂ ವ್ಯಕ್ತಿಯೊಬ್ಬರು ಮಹಾಭಾರತ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಅತ್ಯಂತ ಸ್ಪಷ್ಟ ಉಚ್ಚಾರದೊಂದಿಗೆ ರಾಗವಾಗಿ ಹಾಡುವ ದೃಶ್ಯವಿದೆ

Viral Video of Muslim Singing Mahabharatha Title Song: ವಿಡಿಯೋದಲ್ಲಿ ಹಿರಿಯ ಮುಸ್ಲಿಂ ವ್ಯಕ್ತಿಯೊಬ್ಬರು ಮಹಾಭಾರತ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಅತ್ಯಂತ ಸ್ಪಷ್ಟ ಉಚ್ಚಾರದೊಂದಿಗೆ ರಾಗವಾಗಿ ಹಾಡುವ ದೃಶ್ಯವಿದೆ

Viral Video of Muslim Singing Mahabharatha Title Song: ವಿಡಿಯೋದಲ್ಲಿ ಹಿರಿಯ ಮುಸ್ಲಿಂ ವ್ಯಕ್ತಿಯೊಬ್ಬರು ಮಹಾಭಾರತ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಅತ್ಯಂತ ಸ್ಪಷ್ಟ ಉಚ್ಚಾರದೊಂದಿಗೆ ರಾಗವಾಗಿ ಹಾಡುವ ದೃಶ್ಯವಿದೆ

 • Share this:
  Viral Video of Muslim Singing Mahabharatha Title Song: ಭಾನುವಾರ ಬಂತೆಂದರೆ ಸಾಕು, ಟಿವಿಯ ಮುಂದೆ ಕುಳಿತುಕೊಳ್ಳುವ ಕಾಲವೊಂದಿತ್ತು. 80ರ ದಶಕದ ಕೊನೆಯ ಮತ್ತು 90ರ ದಶಕದ ಆರಂಭದ ಕಾಲವದು. ಆಗ ಈಗಿನಂತೆ ಪ್ರತಿಯೊಬ್ಬರ ಮನೆಯಲ್ಲಿ ಟಿವಿ ಇರುತ್ತಿರಲಿಲ್ಲ, ಆದರೂ ಪ್ರತಿ ಭಾನುವಾರ ಬೇರೆಯವರ ಮನೆಗಾದರೂ ಹೋಗಿ ಟಿವಿ ನೋಡುವುದನ್ನು ತಪ್ಪಿಸುತ್ತಿರಲಿಲ್ಲ ಆಗಿನ ಮಂದಿ. ಕಾರಣ, ಪ್ರತಿ ಭಾನುವಾರ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳ ಮಹತ್ವವೇ ಅಂತದ್ದು.

  ಜಾತಿ, ಧರ್ಮ, ಮತಗಳ ಸೀಮೆಯನ್ನು ಮೀರಿದ ಪ್ರೇಕ್ಷಕ ಬಳಗವನ್ನು ಹೊಂದಿದ್ದ ಧಾರಾವಾಹಿಗಳವು. ಅಂದು ಆ ಧಾರಾವಾಹಿಗಳನ್ನು ವೀಕ್ಷಿಸಿದವರು ಇಂದಿಗೂ ಅದರ ಪಾತ್ರ ವರ್ಗ, ಸಂಭಾಷಣೆ ಮತ್ತು ಹಾಡುಗಳನ್ನು ನೆನಪಿಸಿಕೊಳ್ಳುವುದುಂಟು. ಈ ವಿಷಯಕ್ಕೆ ಅನ್ಯ ಧರ್ಮಿಯರೂ ಹೊರತಾಗಿಲ್ಲ ಎಂಬುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ಗಳಿಸುತ್ತಿರುವ ವಿಡಿಯೋ ಒಂದು ಸಾಬೀತುಪಡಿಸುತ್ತಿದೆ. ಆ ವಿಡಿಯೋದಲ್ಲಿ ಅಂತದ್ದೇನಿದೆ ಎನ್ನುತ್ತೀರಾ? ಆ ವಿಡಿಯೋದಲ್ಲಿ ಹಿರಿಯ ಮುಸ್ಲಿಂ ವ್ಯಕ್ತಿಯೊಬ್ಬರು ಮಹಾಭಾರತ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಅತ್ಯಂತ ಸ್ಪಷ್ಟ ಉಚ್ಚಾರದೊಂದಿಗೆ ರಾಗವಾಗಿ ಹಾಡುವ ದೃಶ್ಯವಿದೆ.

  ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಡಾ. ಎಸ್ ವೈ ಖುರೇಶಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬಿ. ಆರ್ ಚೋಪ್ರಾ ನಿರ್ಮಾಣದ ‘ಮಹಾಭಾರತ’ ಪೌರಾಣಿಕ ಧಾರಾವಾಹಿಗೆ ಮಹೇಂದ್ರ ಕಪೂರ್ ಈ ಶೀರ್ಷಿಕೆ ಗೀತೆಯನ್ನು ಹಾಡಿದ್ದರು.

  ಇದನ್ನೂ ಓದಿ: ಮಂಟಪಕ್ಕೆ ಬರೋ ಮುಂಚೆ ತಲೆ ಬೋಳಿಸಿಕೊಂಡು ಬಂದ ವಧು; ಆಕೆ ಹಾಗೆ ಮಾಡೋಕೆ ಕೊಟ್ಟ ಕಾರಣ ವಿಚಿತ್ರ..!

  ನಮ್ಮ ದೇಶದ ವಿವಿಧತೆಯಲ್ಲಿ ಏಕತೆಯ ಪರಂಪರೆ ಆನಂದಿಸುತ್ತಾ, ಧಾರ್ಮಿಕ ಎಲ್ಲೆಗಳನ್ನು ಮೀರಿ, ಆ ಮುಸ್ಲಿಂ ವ್ಯಕ್ತಿ, ಹಿಂದೂ ಪೌರಾಣಿಕ ಧಾರಾವಾಹಿ ಮಹಾಭಾರತದ ಶೀರ್ಷಿಕೆ ಗೀತೆಯನ್ನು ಸುಶ್ರಾವ್ಯವಾಗಿ ಮತ್ತು ಅಷ್ಟೇ ಸ್ಪಷ್ಟವಾಗಿ ಹಾಡುತ್ತಿರುವುದನ್ನು ಮತ್ತು ಹಾಡಿನ ಮಧ್ಯೆ ಶಂಖದ ವಿರಾಮವನ್ನು ಕೂಡ ಅನುಕರಿಸಿ ತೋರಿಸುವುದನ್ನು ಕಂಡು ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ.

  ಇದನ್ನೂ ಓದಿ: ನಾಸಿಕ್‌ನ ಸ್ವೀಟ್‌ ಅಂಗಡಿಯಲ್ಲಿ ಮಾರಾಟವಾಗ್ತಿದೆ ಚಿನ್ನ, ಬೆಳ್ಳಿಯ ಮೋದಕ; ಬೆಲೆ ಎಷ್ಟು ಗೊತ್ತಾ..?

  “ರೂಢ ಮಾದರಿಗಳನ್ನು ಸೋಲಿಸುತ್ತಾ!” ಎಂಬ ಶೀರ್ಷಿಕೆಯೊಂದಿಗೆ, ಖುರೇಶಿ ಹಂಚಿಕೊಂಡಿರುವ ಈ ಒಂದು ನಿಮಿಷದ ವಿಡಿಯೋ ನೋಡಿ, ಆ ವ್ಯಕ್ತಿಯ ಹಾಡಿನ ಮೋಡಿಗೆ ಒಳಗಾಗಿದ್ದಾರೆ ನೆಟ್ಟಿಗರು. ವಿಡಿಯೋದಲ್ಲಿ ಇರುವ ವ್ಯಕ್ತಿಗಳು, ಆ ಮುಸ್ಲಿಂ ವ್ಯಕ್ತಿಯ ಹಾಡು ಕೇಳಿ ಮೆಚ್ಚುಗೆಯಿಂದ ತಲೆದೂಗುತ್ತಿರುವುದು ಮಾತ್ರವಲ್ಲ, ಬದಲಿಗೆ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋವನ್ನು ನೋಡಿದವರೆಲ್ಲರೂ ಅವರನ್ನು ಕೊಂಡಾಡಿದ್ದಾರೆ. ಬಹಳಷ್ಟು ಮಂದಿ ಸಾಮಾಜಿಕ ಮಾಧ್ಯಮ ಬಳಕೆದಾರರು ‘ಇದು ನಿಜವಾದ ಭಾರತದ ಬಂಧ’ ಇದನ್ನು ಕಾಪಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

  ಟ್ವಿಟ್ಟರ್ ಬಳಕೆದಾರರೊಬ್ಬರು, “ಮಹಾಭಾರತದ ಪ್ರತಿಯೊಂದು ಪದವನ್ನು ಅವರು ಉಚ್ಚರಿಸಿದ ರೀತಿಗೆ ನಾನು ಸೆಲ್ಯೂಟ್ ಹೊಡೆಯುತ್ತೇನೆ. ಬಹಳಷ್ಟು ಹಿಂದೂ ಜನರಿಗೆ ಒಂದು ವಾಕ್ಯವನ್ನು ಕೂಡ ಸರಿಯಾಗಿ ಹೇಳಲು ಆಗುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.

  ಮತ್ತೊಬ್ಬ ಬಳಕೆದಾರ, “ನಮ್ಮ ಮನಸ್ಸುಗಳನ್ನು ಒಗ್ಗೂಡಿಸಲು ಎಲ್ಲಾ ಧರ್ಮಗಳಿಂದಲೂ ಇನ್ನೂ ಇಂತಹ ಹಲವು ವ್ಯಕ್ತಿಗಳ ಅಗತ್ಯ ನಮಗಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬ ನೆಟ್ಟಿಗ, “ಇದು ಅದ್ಭುತ! ಶಂಖದ ಹಾಡಿನ ವಿರಾಮ ನನಗೆ ಇಷ್ಟವಾಯಿತು ಮೌಲಾನಾ ಸಾಹೇಬರೇ” ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಮತ್ತೊಬ್ಬರು “ಇಂತಹ ದೇಶ ನಮ್ಮದು” ಎಂದು ಹೆಮ್ಮೆಯ ಪ್ರತಿಕ್ರಿಯೆ ನೀಡಿದ್ದಾರೆ.
  Published by:Sharath Sharma Kalagaru
  First published: