• Home
 • »
 • News
 • »
 • trend
 • »
 • Viral News: ಮ್ಯೂಸಿಕ್‌ ಕೇಳಿ ರೊಮ್ಯಾಂಟಿಕ್ ಆಗುತ್ತವಂತೆ ಕೋತಿಗಳು! ಈ ಝೂಗಳಲ್ಲಿ ಈಗ ಸಂಗೀತ ಥೆರಪಿ ಆರಂಭ

Viral News: ಮ್ಯೂಸಿಕ್‌ ಕೇಳಿ ರೊಮ್ಯಾಂಟಿಕ್ ಆಗುತ್ತವಂತೆ ಕೋತಿಗಳು! ಈ ಝೂಗಳಲ್ಲಿ ಈಗ ಸಂಗೀತ ಥೆರಪಿ ಆರಂಭ

ಮಂಗಗಳ ಮುಂದೆ ಸಂಗೀತಸುಧೆ

ಮಂಗಗಳ ಮುಂದೆ ಸಂಗೀತಸುಧೆ

"ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ" ಅಂತ ಹಿರಿಯರು ಗಾದೆ ಮಾತು ಹೇಳ್ತಾರೆ! ಆದ್ರೆ ಇಲ್ಲಿ ಮಂಗಗಳ ಮುಂದೆ ಸಂಗೀತ ಸಭೆ ಏರ್ಪಡಿಸಲಾಗುತ್ತದೆ. ಕ್ಲಾಸಿಕ್ ಹಾಡು ಕೇಳುವ ಕೋತಿಗಳು ರೋಮ್ಯಾಂಟಿಕ್ ಆಗುತ್ತವಂತೆ!

 • Share this:

  ಅಳಿವಿನಂಚಿನಲ್ಲಿರುವ ಕೋತಿಗಳ (Monkey) ಸಂಖ್ಯೆಯನ್ನು ಹೆಚ್ಚಿಸಲು ವಿಭಿನ್ನ ಪ್ರಯತ್ನವೊಂದು ಇಂಗ್ಲೆಂಡಿನ (England) ಸಂರಕ್ಷಣಾ ಉದ್ಯಾನವನದಲ್ಲಿ (Conservation Park) ನಡೆದಿದೆ. ಮಂಗಗಳ ಪುನರುಜ್ಜೀವನವನ್ನು ಉತ್ತೇಜಿಸಲು ಮಾಡಿರುವ ಈ ಹೊಸ ಪ್ರಯತ್ನ ಯಾವುದೆಂದು ತಿಳಿದರೆ ನಿಮಗೆ ನಿಜಕ್ಕೂ ಅಚ್ಚರಿ ಆಗುತ್ತದೆ. ಇಂಗ್ಲೆಂಡ್‌ನ ಸ್ಟೋಕ್-ಆನ್-ಟ್ರೆಂಟ್‌ನಲ್ಲಿರುವ ಟ್ರೆನ್ಹ್ಯಾಮ್ ಮಂಕಿ ಫಾರೆಸ್ಟ್‌ನಲ್ಲಿ (Monkey Forest) ವಿಶೇಷವಾದ ಕೋತಿಯ ಪ್ರಭೇದ ಅಳಿವಿನಂಚಿನಲ್ಲಿದೆ. ಹೀಗಾಗಿ ಈ ಪ್ರಾಣಿಗಳನ್ನು ಪರಸ್ಪರ ಸಂಯೋಗ ಮಾಡಿಸಿ ಮತ್ತು ಸಂತಾನೋತ್ಪತ್ತಿಗೆ ನೆರವಾಗಲು ಸಂಗೀತ ಥೆರಪಿಯನ್ನು (Music Therapy) ನೀಡಲು ಝೂ (Zoo) ಮಂಡಳಿ ನಿರ್ಧರಿಸಿ ಅದಕ್ಕೆ ಅಂತ ಮಂಗಗಳನ್ನು ಪ್ರೋತ್ಸಾಹಿಸಲು ಗಾಯಕರೊಬ್ಬರನ್ನು ನೇಮಿಸಿಕೊಂಡಿದ್ದಾರಂತೆ. ಹಾಡಿನ ವಿಡಿಯೋದ ಲೈವ್ ಪ್ರದರ್ಶನವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.


  ಮಂಗಗಳ ಮುಂದೆ ದಿನನಿತ್ಯ ಗಾಯನ!


  ಟ್ರೆನ್ಹ್ಯಾಮ್ ಮಂಕಿ ಫಾರೆಸ್ಟ್ ನಲ್ಲಿ ಮಾರ್ವಿನ್ ಗಯೆ ವೇಷಧಾರಿಯನ್ನು ನೇಮಿಸಿಕೊಂಡಿದೆ. ಮಾರ್ವಿನ್ ಗಯೆ ಒಬ್ಬ ಅಮೆರಿಕನ್ ಗಾಯಕ ಮತ್ತು ಗೀತ ರಚನೆಕಾರರಾಗಿದ್ದರು. ಅವರು ಸಾರ್ವಕಾಲಿಕ ಶ್ರೇಷ್ಠ ಗಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.


  ಅವರ ವೃತ್ತಿಜೀವನದಲ್ಲಿ ಹಲವಾರು ಬಾರಿ ಗ್ರ್ಯಾಮಿ ಹಾಲ್ ಆಫ್ ಫೇಮ್‌ನಲ್ಲಿದ್ದಾರೆ, 1996ರಲ್ಲಿ ಗ್ರ್ಯಾಮಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಗೆದ್ದಿದ್ದಾರೆ ಮತ್ತು ಸಂಗೀತದಲ್ಲಿ ಹಲವಾರು ಇತರ ಪುರಸ್ಕಾರಗಳು ಮತ್ತು ಪ್ರತಿಷ್ಠಿತ ಗೌರವಗಳನ್ನು ಪಡೆದರು. 1984ರಲ್ಲಿ ಎರಡು ಗುಂಡೇಟಿನ ಗಾಯಗಳಿಂದ ಅವರು ನಿಧನರಾದರು.


  ಕ್ಷೀಣಿಸುತ್ತಿರುವ ಕೋತಿ ಸಂತಾನ ಹೆಚ್ಚಿಸಲು ಕ್ರಮ


  ಟ್ರೆಂಥ್ಯಾಮ್ ಮಂಕಿ ಫಾರೆಸ್ಟ್‌ನಲ್ಲಿ ಬಾರ್ಬರಿ ಮಕಾಕ್‌ ಎಂಬ ಕೋತಿಗಳ ಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಅಲ್ಲಿನ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದರು. ಬಾರ್ಬರಿ ಮಕಾಕ್‌ ಕೋತಿಯು ಉತ್ತರ ಆಫ್ರಿಕಾ ಮತ್ತು ಗಿಬ್ರಾಲ್ಟರ್‌ನಲ್ಲಿ ಸಾಮಾನ್ಯವಾಗಿ ಕಂಡುಬರುವ ಕೋತಿಗಳ ಜಾತಿಯಾಗಿದೆ.


  ಆದ್ದರಿಂದ, ಕೋತಿಗಳ ಸಂಖ್ಯೆ ಹೆಚ್ಚಿಸಲು ಮಾರ್ವಿನ್ ಗಯೆನಂತೆ ನಟಿಸಲು ಜನಪ್ರಿಯವಾಗಿರುವ ಗಾಯಕ ಡೇವ್ ಲಾರ್ಗಿಯನ್ನು ಮೃಗಾಲಯದಲ್ಲಿ ಹಾಡು ಹೇಳಲು ನೇಮಿಸಿಕೊಳ್ಳುವ ಮೂಲಕ ಅಸಾಂಪ್ರದಾಯಿಕ ವಿಧಾನವನ್ನು ಮುಂದುವರಿಸಿದ್ದಾರೆ.


  ಇದನ್ನೂ ಓದಿ: Asteroid: ಭೂಮಿಯತ್ತ ಧಾವಿಸುತ್ತಿದೆ ಅಪಾಯಕಾರಿ ಕ್ಷುದ್ರಗ್ರಹ.. ಮಾರ್ಚ್ 4ರಂದು ಏನಾಗುತ್ತೆ?


   ಹಾಡುಗಳಿಂದ ಹೆಚ್ಚಾಗುತ್ತಂತೆ ಸಂತಾನೋತ್ಪತ್ತಿ ಸಾಮರ್ಥ್ಯ


  'ಸೆಕ್ಷುಯಲ್ ಹೀಲಿಂಗ್' ಮತ್ತು 'ಲೆಟ್ಸ್ ಗೆಟ್ ಇಟ್ ಆನ್' ನಂತಹ ಕ್ಲಾಸಿಕ್ ಹಾಡುಗಳು ಮಕಾಕ್‌ಗಳನ್ನು ಸಂತಾನೋತ್ಪತ್ತಿ ಮಾಡಲು ಸಹಾಯ ಮಾಡಬಹುದೇ ಎಂದು ನೋಡುವ ಪ್ರಯತ್ನದಲ್ಲಿ ಗಾಯಕ ಲಾರ್ಗಿ ದಿವಂಗತ ಗಾಯಕ ಮಾರ್ವಿನ್ ಗಯೆ ಹಾಡುಗಳನ್ನು ಝೂನಲ್ಲಿ ಕೋತಿಗಳ ಮುಂದೆ ಹೇಳುತ್ತಿದ್ದಾರೆ.


  ಭಾರೀ ವೈರಲ್ ಆಯ್ತು ವಿಡಿಯೋ


  ಟ್ರೆಂಟಮ್ ಮಂಕಿ ಫಾರೆಸ್ಟ್‌ನ ಟ್ವಿಟ್ಟರ್‌ ಖಾತೆಯಲ್ಲಿ ಇದರ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಲಾರ್ಗಿ ಉದ್ಯಾನವನದ ಆವರಣದೊಳಗೆ 'ಲೆಟ್ಸ್ ಗೆಟ್ ಇಟ್ ಆನ್' ಎಂಬ ಹಾಡನ್ನು ಮಾರ್ವಿನ್ ಗಯೆ ರೀತಿ ವೇಷ ಧರಿಸಿ ಅವರನ್ನು ಅನುಕರಣೆ ಮಾಡುತ್ತಾ ಹಾಡು ಹಾಡಿದ್ದಾರೆ.


  ಇದನ್ನೂ ಓದಿ: ಎಂದೋ ಆಡಿದ ಜೂಜಿನಿಂದ ಈಗ ಕೋಟ್ಯಾಧಿಪತಿಯಾದ ವ್ಯಕ್ತಿ.. ಹುಬ್ಬೇರಿಸುವ Viral Story ಇಲ್ಲಿದೆ ನೋಡಿ..


  ಕಾಡಿನಲ್ಲಿ ಮಂಗಗಳ ಪ್ರೀತಿಯನ್ನು ಹೆಚ್ಚಿಸಲು ಸಹಾಯ ಮಾಡಲು ಪ್ರೇಮಗೀತೆಯ ದಂತಕಥೆಯಾದ ಮಾರ್ವಿನ್ ಗಯೆ ಅವರ ಹಾಡುಗಳನ್ನು ಕೋತಿಗಳಿಗೆ ಲೈವ್ ಪ್ರದರ್ಶನದ ಮೂಲಕ ನೀಡಲಾಗುತ್ತಿದೆ ಎಂದು ಪಾರ್ಕ್ ಸಿಬ್ಬಂದಿ ಟ್ವೀಟ್ ಮಾಡಿದ್ದಾರೆ. ಲಾರ್ಗಿ ಹಾಡಲು ಪ್ರಾರಂಭಿಸಿದಾಗ ಮಂಗಗಳು ತಮ್ಮ ಸಂಗಾತಿ ಅಥವಾ ಇತರೆ ಮಂಗಗಳ ಜೊತೆ ಕೆಲವು ಪ್ರೀತಿಯ ವರ್ತನೆಯನ್ನು ಪ್ರದರ್ಶಿಸುತ್ತವೆ ಎಂದು ಟ್ರೆಂಥಮ್ ಮಂಕಿ ಫಾರೆಸ್ಟ್ ಹೇಳಿಕೆಯಲ್ಲಿ ತಿಳಿಸಿದೆ.


  ಕ್ಲಾಸಿಕ್‌ ಹಾಡುಗಳಿಂದ ಮಂಗಗಳ ಆಕರ್ಷಣೆ


  ಕೆಲವು ಕ್ಲಾಸಿಕ್ ಹಾಡುಗಳು ಬಾರ್ಬರಿ ಮಕಾಕ್ ಕೋತಿಗಳನ್ನು 'ಲವ್ವಿ ಡವ್ವಿ'ಗೆ ಪ್ರಚೋದಿಸುತ್ತಿವೆ. ಅಂದಗೊಳಿಸುವಿಕೆ ಮತ್ತು ಹಲ್ಲುಗಳ ಹರಟೆಯಂತಹ ಪ್ರದರ್ಶನದ ಸಮಯದಲ್ಲಿ ಇದು ಕಂಡುಬಂದಿದೆ. ಬಹುಶಃ ಈ ಪ್ರಯತ್ನದಲ್ಲಿ ಬದಲಾವಣೆಯಾದರೆ ಉದ್ಯಾನವನವು ಬೇಸಿಗೆಯಲ್ಲಿ ದಾಖಲೆ ಸಂಖ್ಯೆಯ ಕೋತಿ ಶಿಶುಗಳನ್ನು ಹೊಂದಿರುತ್ತದೆ ಎಂದು ಪಾರ್ಕ್ ಹೇಳಿಕೆ ನೀಡಿದೆ.


  ಅರಣ್ಯನಾಶದಿಂದ ಅಪಾಯ


  ಅರಣ್ಯನಾಶ ಮತ್ತು ಅಕ್ರಮ ಸಾಕುಪ್ರಾಣಿ ವ್ಯಾಪಾರದಿಂದ ಬಾರ್ಬರಿ ಮಕಾಕ್‌ ಕೋತಿಗಳ ಸಂಖ್ಯೆಯು ಕ್ಷೀಣಿಸಿದೆ. ಸಂಶೋಧನಾ ಗುಂಪುಗಳು ಮಾಡಿದ ಅಂದಾಜಿನ ಪ್ರಕಾರ, ಕಾಡಿನಲ್ಲಿ ಕೇವಲ 8,000 ಬಾರ್ಬರಿ ಮಕಾಕ್‌ಗಳು ಉಳಿದಿವೆ.


  ಬಾರ್ಬರಿ ಮಕಾಕ್‌ಗಳು ಅಳಿವಿನಂಚಿನಲ್ಲಿರುವ ಪ್ರಮುಖ ಪ್ರಭೇದಗಳಾಗಿವೆ. ಜನನದ ಅವಧಿಯು ಪ್ರತಿ ವರ್ಷ ವಸಂತ ಋತುವಿನ ಕೊನೆಯಲ್ಲಿ/ಬೇಸಿಗೆಯ ಆರಂಭದಲ್ಲಿ ಸಂಭವಿಸುತ್ತದೆ, ಆದ್ದರಿಂದ ಆಶಾದಾಯಕವಾಗಿ ಮಾರ್ವಿನ್ ತನ್ನ ಮ್ಯಾಜಿಕ್ ಮಾಡಿದ್ದಾರೆ ಮತ್ತು ನಾವು ಕೆಲವು ಹೊಸ ಶಿಶುಗಳನ್ನು ಸ್ವಾಗತಿಸಬಹುದು ಎಂದು ಪಾರ್ಕ್ ನಿರ್ದೇಶಕ ಮ್ಯಾಟ್ ಲೊವಾಟ್ ಹೇಳಿದರು.

  First published: