• Home
  • »
  • News
  • »
  • trend
  • »
  • Mushrooms: ಅಣಬೆಗಳು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತವೆಯಂತೆ! ಸಂಶೋಧನೆಯಿಂದ ಬಹಿರಂಗ

Mushrooms: ಅಣಬೆಗಳು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತವೆಯಂತೆ! ಸಂಶೋಧನೆಯಿಂದ ಬಹಿರಂಗ

ಅಣಬೆ

ಅಣಬೆ

Mushrooms: ಮನುಷ್ಯ ಮಾತನಾಡುತ್ತಾರೆ. ಆದರೀಗ ಅಣಬೆಗಳು ಕೂಡ ಮಾತನಾಡುತ್ತವೆ ಎಂಬ ಸುದ್ದಿ ನಂಬಲು ಅಸಾಧ್ಯವಾಗಿದೆ. ಅಧ್ಯಯನದ ಪ್ರಕಾರ, ಪ್ರೋಟೀನ್ನ ಶ್ರೀಮಂತ ಮೂಲವೆಂದು ಪರಿಗಣಿಸಲ್ಪಟ್ಟ ಅಣಬೆಗಳು ತಮ್ಮ ನಡುವೆ ಮಾತನಾಡತ್ತವೆಯಂತೆ.

  • Share this:

    Mushrooms: ಅಣಬೆಗಳು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತವೆಯಂತೆ! ಸಂಶೋಧನೆಯಿಂದ ಬಹಿರಂಗಭೂಮಿಯ ಮೇಲಿನ ಕೆಲವೊಂದು ಚಿತ್ರ ವಿಚಿತ್ರಗಳ ಬಗ್ಗೆ ಬೆಳಕಿಗೆ ಬಂದಾಗ ಅಚ್ಚರಿ ಆಗೋದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಎಷ್ಟೋ ವರ್ಷಗಳ ಬಳಿಕ ವಿಜ್ಞಾನಿಗಳು (science) ಸಂಶೋಧನೆ ನಡೆಸಿ ಕೊನೆಗೆ ಸಂಶೋಧನಾ (Research) ಭಾಗವಾಗಿ ತಾವರಿತುಕೊಂಡ ವಿಚಾರಗಳನ್ನು ಬೆಳಕಿಗೆ ತರುತ್ತಾರೆ. ಅದರಂತೆ ಇದೀಗ ಅಣಬೆಗಳ (Mushroom) ಕುರಿತು ಸಂಶೋಧನೆ ನಡೆಸಿದ್ದಾರೆ. ಅಚ್ಚರಿ ವಿಚಾರವೆಂದರೆ ಮಶ್ರೂಮ್ ಮಾತನಾಡುತ್ತದೆಯಂತೆ. ಈ ವಿಚಾರವನ್ನು ಸಂಶೋಧಕರೇ ಕಂಡುಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ, 50 ಅಣಬೆಗಳು ಅದರದೇ ಆದ 50 ಶಬ್ಧಗಳನ್ನು ಹೊಂದಿದೆ ಎಂಬ ಮಾತನ್ನು ಹೇಳಿದ್ದಾರೆ.


    ಮನುಷ್ಯ ಮಾತನಾಡುತ್ತಾರೆ. ಆದರೀಗ ಅಣಬೆಗಳು ಕೂಡ ಮಾತನಾಡುತ್ತವೆ ಎಂಬ ಸುದ್ದಿ ನಂಬಲು ಅಸಾಧ್ಯವಾಗಿದೆ. ಅಧ್ಯಯನದ ಪ್ರಕಾರ, ಪ್ರೋಟೀನ್ನ ಶ್ರೀಮಂತ ಮೂಲವೆಂದು ಪರಿಗಣಿಸಲ್ಪಟ್ಟ ಅಣಬೆಗಳು ತಮ್ಮ ನಡುವೆ ಮಾತನಾಡತ್ತವೆಯಂತೆ. ಅಂದಹಾಗೆಯೇ ನಾಲ್ಕು ಜಾತಿಯ ಶಿಲೀಂಧ್ರಗಳ ವಿದ್ಯುತ್ ಚಟುವಟಿಕೆಯ ಮೇಲೆ ಮಾಡಿದ ಅಧ್ಯಯನದಲ್ಲಿ ಇದನ್ನು ಕಂಡುಕೊಳ್ಳಲಾಗಿದೆ.


    ಅಧ್ಯಯನದ ಪ್ರಕಾರ, ಅಣಬೆಗಳ ವಿದ್ಯುತ್ ಪ್ರಚೋದನೆಗಳು ಮಾನವ ಭಾಷೆಗೆ ಹೋಲುತ್ತವೆ ಮತ್ತು ಅವುಗಳು ಡಜನ್ಗಟ್ಟಲೆ ಪದಗಳ ಸಂಗ್ರಹವನ್ನು ಹೊಂದಿವೆ. ವೆಸ್ಟ್ ಆಫ್ ಇಂಗ್ಲೆಂಡ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಆಂಡ್ರ್ಯೂ ಅಡಮಾಟ್ಜ್ಕಿ ಈ ಸಂಶೋಧನೆಯನ್ನು ಮಾಡಿದ್ದಾರೆ.


    ರಾಯಲ್ ಸೊಸೈಟಿ ಓಪನ್ ಸೈನ್ಸ್ನಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ, ಪ್ರೊಫೆಸರ್ ಆಂಡ್ರ್ಯೂ ಅಣಬೆಗಳ ಸ್ಪೈಕಿಂಗ್ ಮಾದರಿ ಮತ್ತು ಮಾನವರ ಭಾಷೆಯ ನಡುವೆ ಸಂಬಂಧವಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದಿದ್ದಾರೆ. ಆದರೆ ಅಣಬೆಗಳು ಪರಸ್ಪರ ಸಂವಹನ ನಡೆಸಬಹುದು ಎಂದು ಹೇಳಿದ್ದಾರೆ.
    ಅಣಬೆಗಳು ಮೆದುಳು ಮತ್ತು ಪ್ರಜ್ಞೆ ಎರಡನ್ನೂ ಹೊಂದಿವೆ ಎಂದು ಆಂಡ್ರ್ಯೂ ಹೇಳುತ್ತಾರೆ. ಅಣಬೆ ನಿಘಂಟಿನಲ್ಲಿ 50 ಪದಗಳಿರಬಹುದು ಎಂದು ಅವರು ಹೇಳುತ್ತಾರೆ. ಆದರೆ ಅವರು ಈ ಪದಗಳಲ್ಲಿ 15-20 ಕ್ಕಿಂತ ಹೆಚ್ಚು ಬಳಸುತ್ತಾರೆ. ಎನೋಕಿ, ಸ್ಪ್ಲಿಟ್ ಗಿಲ್, ಗೋಸ್ಟ್ ಮತ್ತು ಕ್ಯಾಟರ್ಪಿಲ್ಲರ್ ಅಣಬೆಗಳ ಮೇಲೆ ಅವರು ಈ ಸಂಶೋಧನೆ ಮಾಡಿದ್ದಾರೆ.


    ಆಂಡ್ರ್ಯೂ ಅಡಮಾಟ್ಜ್ಕಿ ಈ ಬಗ್ಗೆ ಮಾತನಾಡಿದ್ದು, ಅಣಬೆಗಳು ಮಾತನಾಡಬಲ್ಲವು. ಫಂಗಸ್ ಎಲೆಕ್ಟ್ರಿಕ್ ಚಟುವಟಿಕೆ, ವಿಜ್ಞಾನ ಸಂಶೋಧನೆ, ಅಣಬೆಗಳು 50 ಪದಗಳ ಶಬ್ದಕೋಶವನ್ನು ಹೊಂದಿವೆ. ವಿಜ್ಞಾನ ಸುದ್ದಿ, ವಿಜ್ಞಾನ ಹೊಸ ಸಂಶೋಧನೆ ರಾಯಲ್ ಸೊಸೈಟಿ ಓಪನ್ ಸೈನ್ಸ್ನಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ, ಪ್ರೊಫೆಸರ್ ಆಂಡ್ರ್ಯೂ ಶಿಲೀಂಧ್ರ ಭಾಷೆ ಎಂದು ಇದನ್ನು ಹೇಳಿಕೊಂಡಿದ್ದಾರೆ.


    ಇದನ್ನೂ ಓದಿ- Viral Story: ಈತ 9 ಪತ್ನಿಯರ ಮುದ್ದಿನ ಗಂಡ! ಆದರೀಗ ಒಬ್ಬಾಕೆಗೆ ವಿಚ್ಛೇದನ​ ಬೇಕಂತೆ!


    ಪ್ರೊಫೆಸರ್ ಆಂಡ್ರ್ಯೂ ಪ್ರಕಾರ, ಪ್ರತಿ ಫಂಗಲ್ ಪದದ ಸರಾಸರಿ ಉದ್ದವು 5.97 ಅಕ್ಷರಗಳು. ಅಂದರೆ ಮನುಷ್ಯರ ಪದಗಳಿಗಿಂತ ಸ್ವಲ್ಪ ದೊಡ್ಡದಾಗಿದೆ. ಅಣಬೆಗಳು ಹವಾಮಾನ ಮತ್ತು ಮುಂಬರುವ ಅಪಾಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತವೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ವಿದ್ಯುತ್ ಚಟುವಟಿಕೆಯ ಮಾದರಿಯನ್ನು ವಿಶ್ಲೇಷಿಸುವ ಮೂಲಕ ಸಂಶೋಧಕರು ಈ ವಿಚಿತ್ರ ತೀರ್ಮಾನವನ್ನು ಮಾಡಿದ್ದಾರೆ. ಆದಾಗ್ಯೂ, ಎಲ್ಲಾ ವಿಜ್ಞಾನಿಗಳು ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದಿಲ್ಲ.


    ಗಾರ್ಡಿಯನ್ ವರದಿಯ ಪ್ರಕಾರ, ಎಕ್ಸೆಟರ್ ವಿಶ್ವವಿದ್ಯಾನಿಲಯದ ಡಾನ್ ಬೆಬರ್ ಅವರು ಈ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದು ಹೇಳಿದ್ದಾರೆ.


    ಇದನ್ನೂ ಓದಿ- Viral Story: ಈತ 9 ಪತ್ನಿಯರ ಮುದ್ದಿನ ಗಂಡ! ಆದರೀಗ ಒಬ್ಬಾಕೆಗೆ ವಿಚ್ಛೇದನ​ ಬೇಕಂತೆ!


    ಸಾಮಾನ್ಯವಾಗಿ ಅಣಬೆ ಆಹಾರಕ್ಕಾಗಿ ಬಳಸುತ್ತಾರೆ. ನಗರಗಳಲ್ಲಿ ಅಣಬೆಯಿಂದ ಹಲವು ಪದಾರ್ಧಗಳನ್ನು ತಯಾರಿಸುತ್ತಿದ್ದಾರೆ. ಪ್ರಾರಂಭದಲ್ಲಿ ಅಣಬೆ ಎಂದರೆ ಏನು ಎಂದು ತಿಳಿಯದ ಮತ್ತು ಅದನ್ನು ಸೇವಿಸಬಹುದು ಎಂಬುದೇ ಬಹುತೇಕರಿಗೆ ತಿಳಿದಿರಲಿಲ್ಲ. ಆದರೀಗ ಹಾಗಲ್ಲ ಅಣಬೆಯನ್ನು ಸೇವಿಸುವ ಬಹುತೇಕ ಮಂದಿ ಇದ್ದಾರೆ. ಅಂದಹಾಗೆಯೇ ಕೆಲವೊಂದಿಷ್ಟು ಅಣಬೆಗಳನನ್ನು ಮಾತ್ರ ಸೇವಿಸಲಾಗುತ್ತದೆ. ಇನ್ನು ಕೆಲವು ವಿಷದಿಂದ ಕೂಡಿರುವ ಅಣಬೆಗಳೂ ಇವೆ.


    ಅಣಬೆ ಕೃಷಿ ಕೂಡ ಜನಪ್ರಿಯವಾಗಿದೆ. ಇದೊಂದು ಬೇಡಿಕೆಯ ವಸ್ತುವಾಗಿದೆ. ಅಣಬೆಯು ಮಳೆ ಬರುವ ಸಮಯದಲ್ಲಿ ಹುಟ್ಟಿಕೊಳ್ಳುತ್ತವೆ. ಅಂದಹಾಗೆಯೇ ಪ್ರಕೃತಿಯ ಮೂನ್ಸೂಚನೆಯೂ ಕೂಡ ಅಣಬೆಗೆ ತಿಳಿಯುತ್ತದೆಯಂತೆ.

    Published by:Harshith AS
    First published: