Compensation: ಬೈಕ್ ಆಕ್ಸಿಡೆಂಟ್‌ನಲ್ಲಿ ಗಾಯಗೊಂಡ ಸವಾರನಿಗೆ 1.1 ಕೋಟಿ ರೂ ಪರಿಹಾರಕ್ಕೆ ನ್ಯಾಯಮಂಡಳಿ ಸೂಚನೆ

ಮಿನಿ ಬಸ್ ಚಾಲಕನ ವಿರುದ್ಧ ವೇಗ ಹಾಗೂ ನಿರ್ಲಕ್ಷ್ಯ ಚಾಲನೆಯ ಆರೋಪ ಹೊರಿಸಿ ದೂರು ನೀಡಲಾಗಿತ್ತು. ಮೋಟಾರ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದ ಮಿನಿ ಬಸ್ ಖಾಸಗಿ ವಿಮಾ ಕಂಪನಿಯಿಂದ ವಿಮೆ ಸೌಲಭ್ಯ ಪಡೆದಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚಿನ ದಿನಗಳಲ್ಲೇ ಮುಂಬೈನ ಮೋಟಾರ್ ಸೈಕಲ್ ಅಪಘಾತ (Motorcycle Accident) ಪರಿಹಾರ ನ್ಯಾಯಮಂಡಳಿಯಿಂದ ಘೋಷಣೆಯಾಗಿರುವ (Compensation Tribunal) ಪರಿಹಾರಗಳ ಪೈಕಿ ಅತ್ಯಧಿಕ ಮೊತ್ತದ ಪರಿಹಾರ ಇದಾಗಿದ್ದು, 2016ರಲ್ಲಿ ಶಾಲಾ ಮಿನಿ ಬಸ್ ಅಪಘಾತವೊಂದರಲ್ಲಿ ಶೇ. 60ರಷ್ಟು ಶಾಶ್ವತ ಅಂಗವಿಕಲರಾಗಿದ್ದ ಬೈಕ್ (Bicyclist) ಸವಾರರೊಬ್ಬರಿಗೆ ಬರೋಬ್ಬರಿ 1.1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆದೇಶಿಸಲಾಗಿದೆ. ಈ ಆದೇಶದಲ್ಲಿ ಮಿನಿ ಬಸ್ ಮಾಲೀಕ ಹಾಗೂ ವಿಮಾದಾರರಿಬ್ಬರೂ ಶೇ. 7.5 ಬಡ್ಡಿ ಸೇರಿಸಿ ಒಂದು ತಿಂಗಳೊಳಗೆ ಪರಿಹಾರ ಮೊತ್ತವನ್ನು ಪಾವತಿಸಬೇಕು (Settlement) ಎಂದು ಸೂಚಿಸಲಾಗಿದೆ.

ನ್ಯಾಯಮಂಡಳಿ ಆದೇಶ
ಸಂಜಯ್ ಚೌಡಂತೆ ನೇತೃತ್ವದ ನ್ಯಾಯಮಂಡಳಿಯು ಅಪಘಾತವಾದಾಗಿನಿಂದ ಈವರೆಗೆ ಮೋಟಾರ್ ಬೈಕ್ ಸವಾರ ವೈದ್ಯಕೀಯ ವೆಚ್ಚವನ್ನಾಗಿ ಭರಿಸಿರುವ 13.61 ಲಕ್ಷ ರೂ. ಹಾಗೂ ಭವಿಷ್ಯದ ದಿನಗಳಲ್ಲಿ ಚಿಕಿತ್ಸೆಗೆ ಅಗತ್ಯ ಬೀಳಲಿರುವ 64.80 ಲಕ್ಷ ರೂ. ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು ಮೇಲಿನಂತೆ ಆದೇಶ ನೀಡಿದೆ.

ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯ ಪ್ರಕಾರ, ಜುಲೈ 4, 2016ರಂದು ದಹಿಸಾರ್‌ನಲ್ಲಿರುವ ತನ್ನ ನಿವಾಸದಿಂದ ಬೊರಿವಿಲಿಯಲ್ಲಿರುವ ಕಚೇರಿಗೆ ಕೆಲಸ ನಿರ್ವಹಿಸಲೆಂದು ತೆರಳುತ್ತಿದ್ದರು. ಈ ಹೊತ್ತು ಅವರಿಗೆ 25 ವರ್ಷ ವಯಸ್ಸಾಗಿತ್ತು. ದಹಿಸಾರ್‌ನ ಜಂಕ್ಷನ್ ಒಂದರಲ್ಲಿ ಮಿನಿ ಬಾಸ್ ಚಾಲಕನೊಬ್ಬ ವಾಹನಗಳ ಕಡೆ ಗಮನಿಸದೆ ಅಥವಾ ತಾನು ತಿರುವು ತೆಗೆದುಕೊಳ್ಳುತ್ತಿರುವ ಬಗ್ಗೆ ಯಾವುದೇ ಸೂಚನೆ ನೀಡದೆ ಬಲಗಡೆಗೆ ವಾಹನ ತಿರುಗಿಸಿದ್ದರಿಂದ ಮಿನಿ ಬಸ್ ಸಂತ್ರಸ್ತ ಸವಾರನಿಗೆ ಡಿಕ್ಕಿ ಹೊಡೆದಿತ್ತು ಎಂದು ನ್ಯಾಯಮಂಡಳಿಗೆ ಸಲ್ಲಿಕೆಯಾಗಿದ್ದ ಅರ್ಜಿಯಲ್ಲಿ ಹೇಳಲಾಗಿತ್ತು.

ಇದನ್ನೂ ಓದಿ: Davanagere Accident: ಸಂಕ್ರಾಂತಿಯಂದು ಭೀಕರ ಅಪಘಾತ; ನಶೆಯಲ್ಲಿ ನಿದ್ದೆಗೆ ಜಾರಿದ ಚಾಲಕ: ಏಳು ಜನರ ದುರ್ಮರಣ

ವಿಮೆ ಸೌಲಭ್ಯ
ಈ ಅಪಘಾತದಲ್ಲಿ ಅರ್ಜಿದಾರ ತೀವ್ರ ಗಾಯಾಳುವಾಗಿದ್ದರಲ್ಲದೆ, ದೇಹದ ಹಲವು ಭಾಗಗಳಲ್ಲಿ ಮೂಳೆ ಮುರಿತಕ್ಕೆ ಒಳಗಾಗಿದ್ದರು. ಇದಾದ ನಂತರ ಮಿನಿ ಬಸ್ ಚಾಲಕನ ವಿರುದ್ಧ ವೇಗ ಹಾಗೂ ನಿರ್ಲಕ್ಷ್ಯ ಚಾಲನೆಯ ಆರೋಪ ಹೊರಿಸಿ ದೂರು ನೀಡಲಾಗಿತ್ತು. ಮೋಟಾರ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದ ಮಿನಿ ಬಸ್ ಖಾಸಗಿ ವಿಮಾ ಕಂಪನಿಯಿಂದ ವಿಮೆ ಸೌಲಭ್ಯ ಪಡೆದಿತ್ತು.

ಪರಿಹಾರ ಅರ್ಜಿ ವಿಲೇವಾರಿ
ಅಪಘಾತಕ್ಕೀಡಾಗಿದ್ದ ಅರ್ಜಿದಾರನು ಒಂದು ತಿಂಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದ ಹಾಗೂ ಚಿಕಿತ್ಸಾ ವೆಚ್ಚವಾಗಿ ₹ 7 ಲಕ್ಷ ಭರಿಸಿದ್ದ. ಮಿನಿ ಬಸ್‌ನ ಮಾಲೀಕ ನ್ಯಾಯಮಂಡಳಿಯಿಂದ ನೋಟಿಸ್ ಜಾರಿಯಾದರೂ ಅದರ ಮುಂದೆ ಹಾಜರಾಗಿರಲಿಲ್ಲ. ಹೀಗಾಗಿ ಆತನ ವಾದಗಳಿಲ್ಲದ ಕಾರಣ ಮಿನಿ ಬಸ್ ಮಾಲೀಕನನ್ನು ಗೈರು ಹಾಜರಿಯಾಗಿದ್ದಾನೆ ಎಂದು ಪರಿಗಣಿಸಿ ನ್ಯಾಯಮಂಡಳಿಯು ಪರಿಹಾರ ಅರ್ಜಿಯನ್ನು ವಿಲೇವಾರಿ ಮಾಡಿದೆ. ಆದರೆ, ಅಪಘಾತವು ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಸಂಭವಿಸಿದೆ ಎಂಬ ಅರ್ಜಿದಾರನ ದೂರನ್ನು ವಿಮಾ ಕಂಪನಿಯು ಬಲವಾಗಿ ವಿರೋಧಿಸಿತು ಮತ್ತು ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಮಿನಿ ಬಸ್ ನಿಲುಗಡೆಗೊಂಡಿತ್ತು ಎಂದು ವಾದಿಸಿತು.

ಈ ಸಂದರ್ಭದಲ್ಲಿ ಸಾಕ್ಷಿಗಳ ದೃಢೀಕರಣ, ವೈದ್ಯಕೀಯ ವೆಚ್ಚದ ಕಾಗದಗಳು ಹಾಗೂ ಅಂಗವೈಕಲ್ಯ ಪ್ರಮಾಣ ಪತ್ರ ಸೇರಿದಂತೆ ದಾಖಲೀಕರಣಗೊಂಡ ಸಾಕ್ಷಿಗಳನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಮಂಡಳಿಯು, ಅರ್ಜಿದಾರರ ದೂರನ್ನು ತಿರಸ್ಕರಿಸಲು ಯಾವುದೇ ಕಾರಣಗಳಿಲ್ಲ ಎಂದು ಅಭಿಪ್ರಾಯ ಪಟ್ಟಿತು. ಇದಕ್ಕೂ ಮುನ್ನ 37 ವರ್ಷದ ಲೆಕ್ಕಿಗರೊಬ್ಬರು ತಮ್ಮ ಮೋಟಾರ್ ಬೈಕ್‌ಗೆ ತ್ಯಾಜ್ಯ ವಿಲೇವಾರಿ ವಾಹನ ಡಿಕ್ಕಿ ಹೊಡೆದಿದ್ದರಿಂದ ಪೊವೈನಲ್ಲಿ ಮೃತಪಟ್ಟಿದ್ದರು. 7 ವರ್ಷಗಳ ವಿಚಾರಣೆಯ ನಂತರ ಮುಂಬೈನ ಅಪಘಾತ ಪರಿಹಾರ ನ್ಯಾಯಮಂಡಳಿಯು ಅಂಧೇರಿ ಮೂಲದ ಅವರ ಕುಟುಂಬದ ಸದಸ್ಯರಿಗೆ ₹ 1.1 ಕೋಟಿ ಮೊತ್ತದ ಕುಟುಂಬ ಪರಿಹಾರವನ್ನು ಘೋಷಿಸಿತ್ತು.

ಇದನ್ನೂ ಓದಿ: Bengaluru ಅಪಘಾತ, ಸಾವುಗಳ ಅಂಕಿ ಅಂಶ ಬಿಡುಗಡೆ: ಈ ವರ್ಗದ ಜನರೇ ಹೆಚ್ಚು ಮೃತರಾಗಿದ್ದು!

ಭವಿಷ್ಯದ ಯೋಜನೆ
ಈ ಸಂದರ್ಭದಲ್ಲಿ ನ್ಯಾಯಮಂಡಳಿಯು ಅಪಘಾತವೆಸಗಿದ ಲಾರಿ ಚಾಲಕನು ಸಂತ್ರಸ್ತ ಸಂತೋಷ್ ಮೋರೆಗೆ ಯಾವುದೇ ವೈದ್ಯಕೀಯ ನೆರವು ಒದಗಿಸದೆ ಪರಾರಿಯಾಗುವ ಮೂಲಕ ತಾನು ತಪ್ಪಿತಸ್ಥ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಸಂತೋಷ್ ಮೋರೆ ಅರೆಕಾಲಿಕ ಬೋಧಕರಾಗಿದ್ದು, ಅವರ ವಾರ್ಷಿಕ ವರಮಾನ ₹ 3.54 ಲಕ್ಷ ಆಗಿದೆ. ಪರಿಹಾರ ಮೊತ್ತವನ್ನು ಹಲವಾರು ಸಂಗತಿಗಳನ್ನು ಗಣನೆಗೆ ತೆಗೆದುಕೊಂಡು ಲೆಕ್ಕ ಮಾಡಲಾಗಿದ್ದು, ಈ ಸಂಗತಿಗಳ ಪೈಕಿ ಭವಿಷ್ಯದ ಯೋಜನೆಗಳು, ಅವರ ಅಕಾಲಿಕ ನಿಧನದಿಂದ ಕುಟುಂಬದ ಹಲವು ಸದಸ್ಯರು ಅನುಭವಿಸಿರುವ ನಷ್ಟ , ಆಸ್ಪತ್ರೆ ಹಾಗೂ ಅಂತಿಮ ಸಂಸ್ಕಾರ ವೆಚ್ಚ ಇತ್ಯಾದಿಗಳೂ ಸೇರಿವೆ ಎಂದು ನ್ಯಾಯಮಂಡಳಿ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು.

2020ರ ಪ್ರಕಟವಾದ ಈ ತೀರ್ಪಿನ ನಂತರ ಮುಂಬೈ ಅಪಘಾತ ಪರಿಹಾರ ನ್ಯಾಯಮಂಡಳಿಯಿಂದ ಘೋಷಣೆಯಾಗಿರುವ ಅತ್ಯಧಿಕ ಪರಿಹಾರ ಮೊತ್ತ ಇದೇ ಆಗಿದೆ.
Published by:vanithasanjevani vanithasanjevani
First published: