Viral News: 8 ದಿನ ಕಾಣೆಯಾಗಿದ್ದ ಬೀದಿನಾಯಿ, ಇಡೀ ಏರಿಯಾದ ಜನ ಸೇರಿ ಹುಡುಕಿದ್ದಾರೆ! ವಿಡಿಯೋ ನೋಡಿ

ಮುಂಬೈನ ಪ್ರಭಾವದೇವಿ ಎಂಬಲ್ಲಿ ಬೀದಿ ನಾಯಿಯೊಂದು ಸ್ವಲ್ಪ ಸಮಯದವರೆಗೆ ಕಾಣೆಯಾಗಿ (missing) ಮತ್ತೆ ಮರಳಿದ ನಂತರ ಅದನ್ನು ಅಲ್ಲಿನ ಜನರು ಭವ್ಯವಾಗಿ ಸ್ವಾಗತಿಸಿದ ವಿಡಿಯೋ ಇದೀಗ ಇನ್ಸ್ಟಾಗ್ರಾಂನಲ್ಲಿ (Instagram) ಸಖತ್​ ವೈರಲ್​ ಆಗುತ್ತಿದೆ.

ಸಾಕುಪ್ರಾಣಿ

ಸಾಕುಪ್ರಾಣಿ

  • Share this:
ಸಮಾಜದಲ್ಲಿ ಸಾಕುಪ್ರಾಣಿಗಳೊಂದಿಗೆ ಮಾನವನು ವಿಶೇಷ ರೀತಿಯ ಸಂಬಂಧವನ್ನು ಹೊಂದಿದ್ದಾನೆ. ಆದರೆ ಆಹಾರವನ್ನರಸಿ ಬರುವ ಬೀದಿ ನಾಯಿ (stray dog), ಬೆಕ್ಕುಗಳೊಂದಿಗೂ ಸಹ ಕೆಲವೊಮ್ಮೆ ಮನುಷ್ಯ ವಿಶೇಷ ಭಾಂದವ್ಯವನ್ನು (Pure love) ಹೊಂದಿರುತ್ತಾನೆ. ಹೌದು, ಇಂತಹ ವಿಶೇಷ ಅನುಬಂಧದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಮುಂಬೈನ ಪ್ರಭಾವದೇವಿ ಎಂಬಲ್ಲಿ ಬೀದಿ ನಾಯಿಯೊಂದು ಸ್ವಲ್ಪ ಸಮಯದವರೆಗೆ ಕಾಣೆಯಾಗಿ (missing) ಮತ್ತೆ ಮರಳಿದ ನಂತರ ಅದನ್ನು ಅಲ್ಲಿನ ಜನರು ಭವ್ಯವಾಗಿ ಸ್ವಾಗತಿಸಿದ ವಿಡಿಯೋ ಇದೀಗ ಇನ್ಸ್ಟಾಗ್ರಾಂನಲ್ಲಿ (Instagram) ಸಖತ್​ ವೈರಲ್​ ಆಗುತ್ತಿದೆ. ಸದ್ಯ ವಿಡಿಯೋ ನೋಡಿದ ನೆಟ್ಟಿಗರು ಅಲ್ಲಿನ ಸ್ಥಳೀಯರ ಶ್ವಾನ (Dog) ಪ್ರಿತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವೈರಲ್​ ವಿಡಿಯೋದಲ್ಲಿ ವಿಸ್ಕಿ ಎಂಬ ನಾಯಿಯು ಸ್ವಲ್ಪ ಸಮಯದವರೆಗೆ ಕಾಣೆಯಾದ ನಂತರ ಮರಳಿ ತಾನು ವಾಸಿಸುತಿದ್ದ ಜಾಗಕ್ಕೆ ಮರಳಿ ಬಂದಿದೆ. ವಿಸ್ಕಿಯ ಆಗಮನವನ್ನು ಅಲ್ಲಿನ ನಿವಾಸಿಗಳು ಅತ್ಯಂತ ಸಂತಸದಿಂದ ಸಂಭ್ರಮಿಸಿದ್ದಾರೆ. ಇನ್ನು, ವೀಡಿಯೊದ ಶೀರ್ಷಿಕೆಯಲ್ಲಿ, ಫೆಬ್ರವರಿ 8 ರಂದು ನಾಪತ್ತೆಯಾಗಿದ್ದ ನಾಯಿ ಅಂತಿಮವಾಗಿ ಫೆಬ್ರವರಿ 15 ರಂದು ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಕಾಣೆಯಾದ ವಿಸ್ಕಿಯು ಅಂತಿಮವಾಗಿ ಮುಂಬೈನ ವಿಲ್ಸನ್ ಕಾಲೇಜ್ ಬಳಿಯ ಆಗಸ್ಟ್ ಕ್ರಾಂತಿಯ ಮೈದಾನದಲ್ಲಿ ಕಾಣಿಸಿಕೊಂಡಿದೆ. ಇದನ್ನು ತಿಳಿದ ಅಲ್ಲಿನ ನಿವಾಸಿಗಳು ನಾಯಿಯನ್ನು ಟ್ಯಾಕ್ಸಿ ಮೂಲಕ ಮರಳಿ ಕರೆತಂದಿದ್ದಾರೆ. ಈ ವೇಳೆ ವಿಸ್ಕಿಗೆ ಪ್ರೀತಿಯಿಂದ ಸಿಹಿಯನ್ನು ನೀಡಿ ವಿಶೇಷವಾಗಿ ಸ್ವಾಗತಿಸಿಕೊಂಡಿದ್ದಾರೆ.






ಬೀದಿನಾಯಿ ಹುಡುಕಾಟಕ್ಕೆ ಅಭಿಯಾನ:

ಸ್ಟ್ರೀಟ್ ಡಾಗ್ಸ್ ಆಫ್ ಬಾಂಬೆಯ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸುದೀರ್ಘವಾದ ಶೀರ್ಷಿಕೆಯನ್ನು ನೀಡಲಾಗಿದೆ. ನೈಗಾಂವ್ ನ (ದಾದರ್) ಹುಡುಗರು ಬೀದಿನಾಯಿ ವಿಸ್ಕಿ ಕಳೆದ ನಂತರ ಭರಸವೆ ಕಳೆದುಕೊಳ್ಳದೆ ಹಗಲು ರಾತ್ರಿ ಅದನ್ನು ಹುಡುಕುತ್ತಿದ್ದರು. ಅದಲ್ಲದೇ ಸಾಮಾಜಿಕ ಜಾಲತಾಣದಲ್ಲಿ 'ಫೈಂಡಿಂಗ್ ವಿಸ್ಕಿ' ಅಭಿಯಾನವನ್ನು ಆರಂಭಿಸುವ ಮೂಲಕ ಸಾಮಾಜಿಕ ಮಾಧ್ಯಮದ ಮೂಲಕ ವಿಸ್ಕಿಯನ್ನು ಹುಡುಕಲಾರಂಭಿಸಿದರು. ಇದರಲ್ಲಿ ಕೆಲವರು ವಿಸ್ಕಿಯನ್ನು ಎಷ್ಟು ಮೆಚ್ಚಿಕೊಂಡಿದ್ದರೆಂದರೆ, ಊಟ, ನಿದ್ರೆಗಳನ್ನೂ ಸಹ ತ್ಯಜಿಸಿ ನಾಯಿಯನ್ನು ಹುಡುಕುತ್ತಿದ್ದರು.

ಇದನ್ನೂ ಓದಿ: Yoga ಅಲ್ಲ ಕಣ್ರೀ ಇದು 'ಡೋಗಾ'! ಯೋಗಾಸನ ಮಾಡುತ್ತೆ ನೋಡಿ ಈ ಶ್ವಾನ, ವೈರಲ್ ಆಗಿದೆ ವಿಡಿಯೋ

ವಿಸ್ಕಿ ಸ್ವಾಗತಕ್ಕೆ ಮೆಚ್ಚುಗೆ:

ಈ ವಿಡಿಯೋ ಸುಮಾರು ಐದು ದಿನಗಳ ಹಿಂದೆ Instagram ನಲ್ಲಿ ಸ್ವಲ್ಪ ಹೆಚ್ಚು ಶೇರ್ ಮಾಡುವುದರ ಜೊತೆಗೆ ಬರೊಬ್ಬರಿ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸುವಷ್ಟು ವೈರಲ್ ಆಗಿದೆ. ಈ ಬೀದಿ ನಾಯಿ ಮತ್ತು ಮನುಷ್ಯರ ನಡುವಿನ ಸಂಭ್ರಮದ ಬಾಂಧವ್ಯದ ಈ ಕ್ಷಣವನ್ನು ಶ್ಲಾಘಿಸಿದ ಜನರು ಜನರು, ಈ ವಿಡಿಯೋ ನನ್ನನ್ನು ಅಳುವಂತೆ ಮಾಡಿತು ಎಂದು ಒಬ್ಬ ಬಳಕೆದಾರ ಹೇಳಿದರೆ ಇನ್ನು ಅನೇಕರು ಇಂತಹ ಜನರು ಎಲ್ಲೆಡೆ ಇರಬೇಕೆಂದು ನಾನು ಬಯಸುತ್ತೇನೆ, ಬಳಕೆದಾರರು ಆಹಾ.. ಎಂತಹ ಪ್ರೀತಿಯ ಆಹ್ವಾನ  ಎಂದೆಲ್ಲಾ ಮೆಚ್ಚುಗೆಯ ಕಾಮೆಂಟ್​ಗಳನ್ನು ಹಾಕಿದ್ದಾರೆ.

ಇದನ್ನೂ ಓದಿ: Dog Love: ಅದ್ಧೂರಿಯಾಗಿ ಶ್ವಾನದ ಬರ್ತ್ ಡೇ ಆಚರಿಸಿ 150 ಜನರಿಗೆ ಬಾಡೂಟ ಹಾಕಿಸಿದ ಯುವಕ

ಇನ್ನು, ಈ ನಾಯಿಯ ವಿಶೇಷವೆಂದರೆ ಇದು ತನ್ನದೇ ಇನ್ಸ್ಟಾಗ್ರಾಂ ಖಾತೆಯನ್ನು ಹೊಂದಿದೆ. ಹೌದು, Whis.key_ ಎಂಬ Instagram ಪುಟವನ್ನುಹೊಂದಿದ್ದು, 488 ಹಿಂಬಾಲಕರಿದ್ದಾರೆ. ಈ ಪೇಜನ್ನು  ಅದಕ್ಕೆ ಮೀಸಲಿಡಲಾಗಿದ್ದು, ವಿಸ್ಕಿಯ ರೀಲ್ಸ್, ಸಾಹಸಮಯ ವಿಡಿಯೋಗಳು ಮತ್ತು ಫೋಟೋಗಳನ್ನು ಇದರಲ್ಲಿ ಹಂಚಿಕೊಳ್ಳಲಾಗುತ್ತದೆ.
Published by:shrikrishna bhat
First published: