ಮುಂಬೈ(ಏಪ್ರಿಲ್ 10): ಮುಂಬೈ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುತ್ತಾರೆ. ಅಲ್ಲದೆ, ಹೆಚ್ಚು ಫಾಲೋವರ್ಸ್‌ಗಳನ್ನೂ ಹೊಂದಿದ್ದಾರೆ. ನಿಜ ಜೀವನದಲ್ಲಿ ಪೊಲೀಸರೊಂದಿಗೆ ವ್ಯವಹರಿಸುವಾಗ ಜನರು ಅನುಭವಿಸಬಹುದಾದ ಅನುಭವದ ಬಗ್ಗೆ ಅನೇಕರು ಇನ್ನೂ ‘ಆತಂಕ’ ಹೊಂದಿದ್ದರೂ, ಮುಂಬೈ ಪೊಲೀಸ್ ಇಲಾಖೆಯ ಆನ್‌ಲೈನ್ ಅವತಾರವು ಸಾರ್ವಜನಿಕರಿಗೆ ಅಂತಹ ಯಾವುದೇ ಅನಿಸಿಕೆಗಳನ್ನು ನೀಡುವುದಿಲ್ಲ.
ಮುಂಬೈ ಪೊಲೀಸರು ಸೋಷಿಯಲ್ ಮೀಡಿಯಾ ಹೊಂದಿರುವುದು ಜನರಿಗೆ ಸುಲಭವಾಗಿದ್ದು, ಸಣ್ಣ ದೂರುಗಳನ್ನು ನೀಡಲು ಸಹ ಸಾಧ್ಯವಾಗಿದೆ. ಅಲ್ಲದೆ, ಅಲ್ಲಿನ ಪೊಲೀಸರು ಸಹ ನಾಗರಿಕರಿಗೆ ಸಹಾಯ ಮಾಡಲು ಮತ್ತು ತಮಗಾಗಿ ಹೆಚ್ಚು ಸ್ನೇಹಪರ ಚಿತ್ರಣವನ್ನು ರಚಿಸಲು ಪ್ರಯತ್ನಿಸುತ್ತಿರುವುದರಿಂದ ಸಾಮಾಜಿಕ ಜಾಲತಾಣದ ವೇದಿಕೆಯನ್ನು ಬಹಳ ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ.
View this post on Instagram
ಇಲಾಖೆ ಹಂಚಿಕೊಂಡಿರುವ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ನಾಲ್ಕು ಚಿತ್ರಗಳಿವೆ. ಮೊದಲ ಮೂರು ಚಿತ್ರಗಳಲ್ಲಿ ಇಂಗ್ಲಿಷ್ ಪದಗಳು ಮತ್ತು ಅವುಗಳ ಸರಿಯಾದ ಉಚ್ಚಾರಣೆ ಇದ್ದರೆ, ನಾಲ್ಕನೆಯದರಲ್ಲಿನ ಗ್ರಾಫಿಕ್ಸ್ ಫೋಟೋದಲ್ಲಿ ಮೂಗು ಮತ್ತು ಬಾಯಿಯನ್ನು ಸರಿಯಾಗಿ ಮುಚ್ಚಿದ ಮಾಸ್ಕ್ ಅನ್ನು ಧರಿಸುವ ಸರಿಯಾದ ವಿಧಾನವನ್ನು ಚಿತ್ರಿಸಲಾಗಿದೆ.
ಮುಂಬೈ ಪೊಲೀಸರ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ಪೋಸ್ಟ್ ಅನ್ನು ಅಪ್ಲೋಡ್ ಮಾಡಲಾಗಿದ್ದು, ಇದಕ್ಕೆ ಈವರೆಗೆ 16 ಸಾವಿರಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಗಳಿಸಿದೆ. ಅಲ್ಲದೆ, ನೆಟ್ಟಿಗರು ಈ ಪೋಸ್ಟ್‌ಗೆ ತಮಾಷೆಯ ಪ್ರತಿಕ್ರಿಯೆಯನ್ನು ನೀಡಿದರು ಹಾಗೂ ಹಲವರು ಪೋಸ್ಟ್‌ಗಳನ್ನು ಕಾಮೆಂಟ್ ಮೂಲಕ ಹೊಗಳಿದ್ದಾರೆ. ಮತ್ತು ಮುಂಬೈ ಪೊಲೀಸರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಹಿಂದಿನ ತಲೆ ಅಥವಾ ಐಡಿಯಾ ಮಾಡುವವರಿಗೆ ಪ್ರಶಸ್ತಿ ನೀಡುವಂತೆಯೂ ಹಲವರು ಒತ್ತಾಯಿಸಿದರು. ಇನ್ನು, ಕೆಲವರು ಈ ಪೋಸ್ಟ್‌ಗಳ ಬಗ್ಗೆ ತಮ್ಮದೇ ರೀತಿಯ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.
ಕೊರೊನಾ ಪ್ರಕರಣಗಳು ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ವ್ಯಾಕ್ಸಿನೇಷನ್ ಪ್ರಕ್ರಿಯೆ ಇನ್ನೂ ನಡೆಯುತ್ತಿರುವಾಗ, ಕೊರೊನಾ ವೈರಸ್‌ನ ಎರಡನೇ ಅಲೆಯನ್ನು ಎದುರಿಸಲು ತಯಾರಿ ನಡೆಸುತ್ತಿರುವಾಗ ನಮ್ಮ ಪೊಲೀಸರನ್ನು ಸಹ ನಾವು ನಿರಾಸೆಗೊಳಿಸಲು ಸಾಧ್ಯವಿಲ್ಲ. ಕೊರೊನಾ ವೈರಸ್ ವಿರುದ್ಧದ ಈ ಯುದ್ಧದಲ್ಲಿ ಮಾಸ್ಕ್ ಅನ್ನು ಸರಿಯಾಗಿ ಧರಿಸುವುದು ಮತ್ತು COVID-19 ಪ್ರೋಟೋಕಾಲ್‌ಗಳನ್ನು ಅನುಸರಿಸುವುದು ಇನ್ನಷ್ಟು ಮುಖ್ಯವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ