ಪರ್ಸ್​ ಕಳ್ಳನ ವಿಡಿಯೋ ವೈರಲ್​!


Updated:August 21, 2018, 4:50 PM IST
ಪರ್ಸ್​ ಕಳ್ಳನ ವಿಡಿಯೋ ವೈರಲ್​!

Updated: August 21, 2018, 4:50 PM IST
ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ ಆಗುವ ವಿಡಿಯೋ ಚಿತ್ರಗಳ ಕುರಿತು ಪೊಲೀಸರು ಕಣ್ಣಿಟ್ಟಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಜನರ ಹಿತಕ್ಕಾಗಿ ಅವರನ್ನು ಬಂಬಲಿಸುವ ಮೆಮೆಗಳು, ವಿಡಿಯೋಗಳು ಪೂರಕ ಕಾರ್ಯಚಟುವಟಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗುತ್ತಲಿರುತ್ತದೆ.

ಇದಕ್ಕೆ ಪೂರಕ ಎಂಬಂತೆ ಮುಂಬೈ ಪೊಲೀಸರು ಕಿಸೆಗಳ್ಳನ ವಿಡಿಯೋವೊಂದನ್ನು ಟ್ವಿಟರ್​ನಲ್ಲಿ ಹರಿಬಿಟ್ಟಿದ್ದಾರೆ, 22 ಸೆಕೆಂಡ್​​ಗಳ ಈ ವಿಡಿಯೋದಲ್ಲಿ ವ್ಯಕ್ತಿ ತನ್ನ ಮುಂದೆ ಇರುವ ಮತ್ತೋರ್ವನ ಕಿಸೆಯಿಂದ ಪರ್ಸ್​​ ಕದಿಯುತ್ತಾನೆ. ಆದರೆ ಆತನ ಕರ್ಮಕ್ಕೆ ಈ ಕೃತ್ಯವವನ್ನು ಸಿಸಿ ಕ್ಯಾಮೆರಾ ಗಮನಿಸುತ್ತಿತ್ತು. ಸಿಸಿಟಿವಿ ಕಂಡ ಆ ವ್ಯಕ್ತಿ ಕೂಡಲೇ ಕದ್ದ ಪರ್ಸನ್ನು ಮತ್ತೆ ಆ ವ್ಯಕ್ತಿಗೇ ಹಿಂತಿರುಗಿಸಿದ್ದಾನೆ. ಅಲ್ಲದೇ ಸಿಸಿಟಿವಿಗೆ ಕೈ ಮುಗಿದಿದ್ದಾನೆ. ಆ ವಿಡಿಯೋ ನೀವೇ ನೋಡಿಇನ್ನು ವಿಡಿಯೋ ಟ್ವಿಟ್​ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹೊಸ ಸಂಚಲನವೇ ಮೂಡಿಬಂದಿತ್ತು. ಸಾಕಷ್ಟು ಮಂದಿ ಈ ಕೃತ್ಯವನ್ನು ಖಂಡಿಸಿದರೆ ಮತ್ತೆ ಕೆಲವರು ಹಾಸ್ಯಾಸ್ಪದವಾಗಿದೆ ಎಂದು ಹೇಳತೊಡಗಿದ್ದಾರೆ.
Loading...


First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...