• Home
  • »
  • News
  • »
  • trend
  • »
  • Raksha Bandhan 2022: ಅಬ್ಬಬ್ಬಾ...! ಸಹೋದರಿ ಬೇಕೆಂದು ಈ ಭೂಪ ಮಾಡಿದ್ದೇನು ಗೊತ್ತಾ?

Raksha Bandhan 2022: ಅಬ್ಬಬ್ಬಾ...! ಸಹೋದರಿ ಬೇಕೆಂದು ಈ ಭೂಪ ಮಾಡಿದ್ದೇನು ಗೊತ್ತಾ?

ರಕ್ಷಾಬಂಧನ 2022

ರಕ್ಷಾಬಂಧನ 2022

ಮುಂಬೈನಲ್ಲಿ ವ್ಯಕ್ತಿಯೊಬ್ಬರು, ರಕ್ಷಾ ಬಂಧನದ ಅಂಗವಾಗಿ ಆನ್‌ಲೈನ್‌ ಡೇಟಿಂಗ್‌ ಅಪ್ಲಿಕೇಶನ್‌ ಆದ ಟಿಂಡರ್‌ ನಲ್ಲಿ ನನಗೆ ಸಹೋದರಿ ಬೇಕು. ಸಹೋದರಿ ಇಲ್ಲದ ನನ್ನ ಜೀವನ ನಿಜಕ್ಕೂ ಸುಂದರವಾಗಿಲ್ಲ. ಅವರನ್ನು ನಾನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ. ಈ ಹಬ್ಬದಂದು ಅದರ ಹ್ಯಾಂಗ್‌ಔಟ್‌ನಿಂದ ನಾನು ಹೊರ ಬರಬೇಕೆಂದರೆ ನನಗೆ ಈ ಕೂಡಲೇ ಸಹೋದರಿ ಬೇಕು ಎಂದು ಪೋಸ್ಟ್‌ ಮಾಡಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಮುಂದೆ ಓದಿ ...
  • Share this:

ಈ ಆನ್‌ಲೈನ್‌ ಸರ್ವವ್ಯಾಪ್ತಿ ಆದ ನಂತರ, ಕೆಲವೊಮ್ಮೆ, ಆನ್‌ಲೈನ್‌ನಲ್ಲಿ (Online) ಬರುವ ಪೋಸ್ಟ್‌ಗಳು ಅಥವಾ ವಿಡಿಯೋಗಳು (Video) ಅತಿರೇಕ ಎನಿಸುತ್ತವೆ. ಅಂತಹ ಅತಿರೇಕ ಆನ್‌ಲೈನ್‌ ಸುದ್ದಿಗೆ ಈ ಸುದ್ದಿ ಬೆಸ್ಟ್‌ ಉದಾಹರಣೆ ಆಗಿದೆ. ಏನಪ್ಪ ಈ ಸುದ್ದಿ ಅಂತ ಕುತೂಹಲ ಆಗ್ತಿದೀಯಾ? ಹೆಚ್ಚು ಆನ್‌ಲೈನ್‌ ಬಳಸುವ ಬಳಕೆದಾರರಿಗೆ ಈ ಸುದ್ದಿ ಏನು ಎಂದು ಈಗಾಗಲೇ ಗೊತ್ತಾಗಿರಬಹುದು. ಗೊತ್ತಾಗಿಲ್ಲ ಅಂದರೆ ಈ ಲೇಖನ ಓದುವುದನ್ನು (Raksha Bandhan) ಮುಂದುವರಿಸಿ. ಮುಂಬೈನಲ್ಲಿ (Mumbai) ವ್ಯಕ್ತಿಯೊಬ್ಬರು, ರಕ್ಷಾ ಬಂಧನದ ಅಂಗವಾಗಿ ಆನ್‌ಲೈನ್‌ ಡೇಟಿಂಗ್‌ ಅಪ್ಲಿಕೇಶನ್‌ (online dating app) ಆದ ಟಿಂಡರ್‌ (Tinder) ನಲ್ಲಿ ನನಗೆ ಸಹೋದರಿ ಬೇಕು ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ ಸದ್ಯ ಈ ಪೋಸ್ಟ್ ಸಕತ್ ವೈರಲ್ ಆಗ್ತಿದೆ.


ಸಹೋದರಿ ಇಲ್ಲದ ನನ್ನ ಜೀವನ ನಿಜಕ್ಕೂ ಸುಂದರವಾಗಿಲ್ಲ. ಅವರನ್ನು ನಾನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ. ಈ ಹಬ್ಬದಂದು ಅದರ ಹ್ಯಾಂಗ್‌ಔಟ್‌ನಿಂದ ನಾನು ಹೊರ ಬರಬೇಕೆಂದರೆ ನನಗೆ ಈ ಕೂಡಲೇ ಸಹೋದರಿ ಬೇಕು ಎಂದು ಪೋಸ್ಟ್‌ ಮಾಡಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ.


ಏನಿದು ಸುದ್ದಿ?


ಮುಂಬೈನ ಅಪರಿಚಿತ ವ್ಯಕ್ತಿಯಾದ ಈತನು ತನ್ನ ಸಂಕಟ ಮತ್ತು ಅದಕ್ಕೆ ಆತನು ಕಂಡುಕೊಂಡ ಪರಿಹಾರವನ್ನು ಹಂಚಿಕೊಳ್ಳಲು ಸಾಮಾಜಿಕ ಜಾಲತಾಣವಾದ ರೆಡ್ಡಿಟ್‌ ನಲ್ಲಿ ಪೋಸ್ಟ್‌ ಮಾಡಿದ್ಧಾನೆ. ಪ್ರತಿ ವರ್ಷ ರಕ್ಷಾ ಬಂಧನದಂದು ಸಹೋದರಿ ಇಲ್ಲ ಎಂದು ಕೊರಗುವ ಮನೋಭಾವವನ್ನು ದೂರ ಮಾಡಿಕೊಳ್ಳಲು, ಅದಕ್ಕಾಗಿ ಈ ವ್ಯಕ್ತಿ ಕಳೆದ ಎರಡು ವರ್ಷಗಳಿಂದ ತನ್ನ ಟಿಂಡರ್ ಬಯೋದಲ್ಲಿ “ರಕ್ಷಾ ಬಂಧನದ ಸಮಯದಲ್ಲಿ ಹ್ಯಾಂಗ್‌ಔಟ್ ನಿಂದ ಹೊರಬರಲು ಸಹೋದರಿಯನ್ನು ಹುಡುಕುತ್ತಿದ್ದೇನೆ” ಎಂದು ಪೋಸ್ಟ್‌ ಮಾಡುತ್ತಾನೆ. ಈ ಕೆಲಸವನ್ನು ಆ ವ್ಯಕ್ತಿ ಪ್ರತಿ ವರ್ಷ ಎರಡು ವಾರಗಳ ಮುಂಚೆ ಮಾಡುತ್ತಾನೆ ಎಂಬುದು ಅವರ ಟಿಂಡರ್‌ ಬಯೋ ದಿಂದ ಗೊತ್ತಾಗುತ್ತದೆ.


ಇದನ್ನೂ ಓದಿ: Raksha Bandhan: ರಾಶಿ ರಾಶಿ ಕಲರ್​ಫುಲ್ ರಾಖಿ! ಅಬ್ಬಾ, ರಕ್ಷಾಬಂಧನದ ಸಡಗರವೇ!


ಟಿಂಡರ್‌ ಬಯೋದಲ್ಲಿ ಏನು ಬರೆದುಕೊಂಡಿದ್ದಾರೆ ?


ಆ ವ್ಯಕ್ತಿಯ ಮಾತುಗಳಲ್ಲಿ ಕೇಳುವುದಾದರೆ “ನನಗೆ ಸಹೋದರಿಯರಿಲ್ಲದ ಕಾರಣ ರಕ್ಷಾ ಬಂಧನದ ಸಮಯದಲ್ಲಿ ನಾನು ನನ್ನ ಜೀವನದ ಸವಿ ಕ್ಷಣಗಳನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ ಎಂದು ನನಗೆ ಅನಿಸುತ್ತದೆ. ನನಗೆ ರಾಖಿ ಕಟ್ಟಲು ಮತ್ತು ನಾನು ಉಡುಗೊರೆ ಕೊಡಲು ನನಗೆ ಯಾರೂ ಇಲ್ಲ. ಅದಕ್ಕೆ, ಕಳೆದ 2 ವರ್ಷಗಳಿಂದ, ನಾನು ರಕ್ಷಾ ಬಂಧನಕ್ಕೆ 2 ವಾರಗಳ ಮುಂಚೆ ಬಯೋವನ್ನು ಈ ಕೆಳಗಿನಂತೆ ಪ್ರಸ್ತುತ ಪಡಿಸುತ್ತೇನೆ. "ರಕ್ಷಾ ಬಂಧನದ ಸಮಯದಲ್ಲಿ ಸಹೋದರಿಯನ್ನು ಮಿಸ್‌ ಮಾಡಿಕೊಳ್ಳುವ ಹ್ಯಾಂಗ್‌ಔಟ್‌ನಿಂದ ಹೊರ ಬರಲು ಸಹೋದರಿಯನ್ನು ಹುಡುಕುತ್ತಿದ್ದೇನೆ" ಎಂದು ರೆಡ್ಡಿಟ್‌ನಲ್ಲಿನ ಪೋಸ್ಟ್‌ನಲ್ಲಿ ಬರೆಯಲಾಗಿದೆ.




ಪೋಸ್ಟ್ ನೋಡಿ ನೆಟ್ಟಿಗರು ಏನು ಹೇಳಿದ್ದಾರೆ ನೋಡಿ  


ಈ ಪೋಸ್ಟ್ ನಿಸ್ಸಂಶಯವಾಗಿ ಆನ್‌ಲೈನ್‌ನಲ್ಲಿ ಕ್ರೇಜಿ ವೈರಲ್ ಪೋಸ್ಟ್‌ ಆಗಿದೆ ಮತ್ತು ನೆಟ್ಟಿಗರಿಂದ ಅತಿ ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಕೆಲವು ಬಳಕೆದಾರರು ಈ ಪೋಸ್ಟ್‌ ನೋಡಿ ʼಅಯ್ಯೋ ಎಂಥ ಕಾಲ ಬಂದಿತುʼ ಎಂದು ನಕ್ಕರೆ, ಇನ್ನು ಕೆಲವರಿಗೆ ʼಇದು ಏನು ಎಂದು ಅರ್ಥವೇ ಆಗುತ್ತಿಲ್ಲʼ ಎಂದು ಕಮೆಂಟ್‌ನಲ್ಲಿ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು "ಇದು ನನ್ನ ಮಗಳಿಗಾಗಿ ಹುಡುಗನನ್ನು ಹುಡುಕುತ್ತಿದ್ದೇನೆ" ಎನ್ನುವ ಬಯೋವನ್ನು ಹಾಕುವ ತಂದೆಯನ್ನು ನೆನಪಿಸುವ ಪ್ರೊಫೈಲ್ ಅನ್ನು ನನಗೆ ನೆನಪಿಸಿತು" ಎಂದು ಕಮೆಂಟ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು, "ನಾನು ಇದನ್ನು ನೋಡಿ ತುಂಬಾ ನಕ್ಕಿದ್ದೇನೆ!" ಎಂದು ಬರೆದುಕೊಂಡಿದ್ಧಾರೆ.


ಇದನ್ನೂ ಓದಿ: Raksha Bandhan 2022: ರಾಖಿ ಕಟ್ಟುವಾಗ ಈ ನಿಯಮಗಳನ್ನು ಮರೆಯಬೇಡಿ


ಇದೆಲ್ಲದಕ್ಕೂ ಪರಿಹಾರವಾಗಿ ಆ ವ್ಯಕ್ತಿಯ ಅದೃಷ್ಟವೇನೋ ಎಂಬಂತೆ ರಕ್ಷಾ ಬಂಧನವನ್ನು ಆಚರಿಸಲು ಒಬ್ಬರಲ್ಲ ಇಬ್ಬರು ಸಹೋದರಿಯರನ್ನು ಹುಡುಕುವಲ್ಲಿ ಆ ವ್ಯಕ್ತಿ ಯಶಸ್ವಿಯಾದರು. ಇದರಿಂದ ಅವರ ಮನಸ್ಸು ತುಂಬಾ ಸಂತಸಗೊಂಡಿದೆ. ಆ ವ್ಯಕ್ತಿ "ಟಿಂಡರ್‌ ಅಪ್ಲಿಕೇಶನ್‌ಗೆ ತುಂಬು ಹೃದಯದ ಧನ್ಯವಾದಗಳು, ಈಗ ನಾನು ಇಬ್ಬರು ಸಹೋದರಿಯರನ್ನು ಹೊಂದಿದ್ದೇನೆ, ಅವರಿಬ್ಬರನ್ನೂ ನಾನು ಟಿಂಡರ್‌ನಲ್ಲಿ ಭೇಟಿಯಾಗಿದ್ದೇನೆ. ಈ ವರ್ಷ ನಾವೆಲ್ಲರೂ ಒಟ್ಟಾಗಿ ರಕ್ಷಾಬಂಧನವನ್ನು ಆಚರಿಸಲು ಮತ್ತು ಉಡುಗೊರೆಗಳನ್ನು ಮತ್ತು ವಸ್ತುಗಳನ್ನು ವಿನಿಮಯ ಮಾಡಿಕೊಳ್ಳಲು ಯೋಜಿಸುತ್ತಿದ್ದೇವೆ. ನಾನು ತುಂಬಾ ಉತ್ಸುಕನಾಗಿದ್ದೇನೆ" ಎಂದು ಧನ್ಯವಾದದ ಕಮೆಂಟ್‌ ಬರೆದು ಕೊಂಡಿದ್ಧಾರೆ.


ಅಂತಿಮವಾಗಿ, ನಿಜಕ್ಕೂ ಇದು ಅಭೂತಪೂರ್ವ ವಿಷಯ ಆಗಿದ್ದು, ಆನ್‌ಲೈನ್‌ ಮೂಲಕ ಸಹೋದರಿಯರನ್ನು ಪಡೆಯಬಹುದು ಎಂಬುದಕ್ಕೆ ಈ ಸುದ್ದಿ ಬೆಸ್ಟ್‌ ಉದಾಹರಣೆ ಎಂದೇ ಹೇಳಬಹುದು.

Published by:Ashwini Prabhu
First published: