Heart Transplant: ಹೃದಯ ಕಸಿ ಮಾಡಿಸಿಕೊಂಡ ಮೊದಲ ವ್ಯಕ್ತಿಗೆ ವಿವಾಹ ಸಂಭ್ರಮ.. ಮದುವೆ ಬ್ಯುಸಿಯಲ್ಲಿ ಹೈದ!

Heart Transplant Patient: ಅನ್ವರ್ (Anwar Khan) ಕುಟುಂಬ ಸದಸ್ಯರು ಮದುವೆಗಾಗಿ ಹುಡುಗಿ ಹುಡುಕಾಡಲು ಶುರುಮಾಡಿದರು. ಆದರೆ ಕಸಿ ಬಗ್ಗೆ ಕೇಳಿದ ಅನೇಕ ಕುಟುಂಬ ಅವರ ಪ್ರಸ್ತಾಪ ತಿರಸ್ಕರಿಸಿದ್ದರಿಂದ ನಿರಾಶೆಗೊಂಡರು.

ಅನ್ವರ್ ಖಾನ್

ಅನ್ವರ್ ಖಾನ್

 • Share this:
  Heart Transplant Patient: ಈ ತಿಂಗಳ ಕೊನೆಯಲ್ಲಿ ಮದುವೆಯಾಗಲಿರುವ ಬದ್ಲಾಪುರ ನಿವಾಸಿ ಅನ್ವರ್ ಖಾನ್ (28) 6 ವರ್ಷಗಳ ಹಿಂದೆ ನಗರದ ಮೊದಲ ಯಶಸ್ವಿ ಹೃದಯ ಕಸಿ (Heart Transplant) ರೋಗಿಯಾಗಿದ್ದರು. ಈ ಮೂಲಕ ದೊಡ್ಡ ಇತಿಹಾಸವನ್ನೇ ನಿರ್ಮಿಸಿದ್ದರು. ಆಗಸ್ಟ್ 3, 2015ರಂದು 42 ವರ್ಷದ ಮೆದುಳು ನಿಷ್ಕ್ರಿಯಗೊಂಡ ಮಹಿಳೆಯ ಕುಟುಂಬವು ಅವರ ಹೃದಯ ದಾನ ಮಾಡಲು ಒಪ್ಪಿಕೊಂಡ ನಂತರ ಅನ್ವರ್ ಖಾನ್ ಆ ಬದಲಿ ಹೃದಯ ಕಸಿಗೆ ಒಳಗಾಗಿದ್ದರು.ಹೃದಯ ಕಸಿಯಾದ 1 ವರ್ಷದವರೆಗೆ, ಅನ್ವರ್ ಮನೆಯಿಂದ ಹೊರಬರಲಿಲ್ಲ. ಸಂಪೂರ್ಣವಾಗಿ ವಿಶ್ರಾಂತಿಗೆ ಒಳಗಾಗಿದ್ದರು ಮತ್ತು ಚೇತರಿಕೆಗಾಗಿಯೇ ಅವರ ಕುಟುಂಬ ಗುತ್ತಿಗೆಗೆ ಪಡೆದ 2ನೇ ಫ್ಲಾಟ್‍ನಲ್ಲಿ ಉಳಿಯಬೇಕಾಯಿತು. ದುರದೃಷ್ಟವಶಾತ್, ಕಸಿ ಸಮಯದಲ್ಲಿ ಅಪಾರ ಬೆಂಬಲ ನೀಡಿದ ಅವರ ಮೊದಲ ಗೆಳತಿ ತನ್ನ ಕುಟುಂಬದ ಒತ್ತಡಕ್ಕೆ ಮಣಿದು ಬೇರೆಡೆ ಮದುವೆಯಾದರು.

  ಅದರ ನಂತರ, ಅನ್ವರ್ (Anwar Khan) ಕುಟುಂಬ ಸದಸ್ಯರು ಮದುವೆಗಾಗಿ ಹುಡುಗಿ ಹುಡುಕಾಡಲು ಶುರುಮಾಡಿದರು. ಆದರೆ ಕಸಿ ಬಗ್ಗೆ ಕೇಳಿದ ಅನೇಕ ಕುಟುಂಬ ಅವರ ಪ್ರಸ್ತಾಪ ತಿರಸ್ಕರಿಸಿದ್ದರಿಂದ ನಿರಾಶೆಗೊಂಡರು.

  "ಹೃದಯ ಕಸಿ ರೋಗಿಯು ದೀರ್ಘಕಾಲ ಬದುಕಲು ಸಾಧ್ಯವಿಲ್ಲ ಎಂದು ಅನೇಕ ಜನರು ನಂಬುತ್ತಾರೆ, ಆದರೆ ಅಂತಹ ಜನರಿಗೆ ಅವರ ಗ್ರಹಿಕೆ ಬದಲಾಯಿಸಲು ನಾನು ಬಯಸುತ್ತೇನೆ" ಎಂದು ಅವರು ಹೇಳಿದರು. ಹೃದಯ ಕಸಿಗಳು ಭಾರತ ಮತ್ತು ಮುಂಬೈನಲ್ಲಿ ತುಲನಾತ್ಮಕವಾಗಿ ಹೊಸದಾಗಿದ್ದರೂ, ಹೆಚ್ಚಿನ ರೋಗಿಗಳು ದೀರ್ಘಕಾಲದವರೆಗೂ ಬದುಕಿ ಜೀವನ ಸಾಗಿಸಿದ ನಿದರ್ಶನಗಳಿವೆ.

  ನಂತರ ಶಾಜಿಯಾ ಎಂಬ ಯುವತಿಯು ಮದುವೆಯಾಗಲು ಒಪ್ಪಿದ್ದು, ಎರಡು ಕುಟುಂಬಗಳ ದೀರ್ಘಕಾಲದ ಮಾತುಕತೆಯ ನಂತರವೇ ಇದು ಸಾಧ್ಯವಾಗಿದೆ. "ನಾವು ಕೆಲಸ ಮಾಡುತ್ತಿದ್ದಾಗ ಶಾಜಿಯಾ ಕುಟುಂಬವು ನನ್ನ ತಂದೆಯವರನ್ನು ಭೇಟಿ ಮಾಡಿದರು.

  Read Also: Health: ನಾಲಗೆ ನೋಡಿದ್ರೆ ಖಾಯಿಲೆ ತಿಳಿಯುತ್ತೆ, ನೀವೂ ತಿಳಿದುಕೊಳ್ಳಬಹುದು!

  ನನ್ನ ಫಿಟ್‍ನೆಸ್ ಬಗ್ಗೆ ಸ್ವಲ್ಪ ವಿಶ್ವಾಸ ಪಡೆಯುವ ಮೊದಲು ನಾನು ಜಿಮ್ನಾಷಿಯಂನಲ್ಲಿ ವರ್ಕೌಟ್ ಮಾಡುವುದನ್ನು ಸಹ ನೋಡಿದೆ" ಎಂದು ಅನ್ವರ್ ಹೇಳಿದರು.

  “ನಾನು ನನ್ನ ಹಿಂದಿನ ಬದುಕನ್ನು ಮರೆತು ಹೊಸ ಜೀವನ ಪ್ರಾರಂಭಿಸಬೇಕು. ಹೃದಯ ಕಸಿಗೆ ಒಳಪಟ್ಟವರಿಗೆ ಭಯವಿಲ್ಲದೆ ಜೀವನ ಆನಂದಿಸಲು ನಾನು ಮನವಿ ಮಾಡುತ್ತೇನೆ'' ಎಂದು ಅನ್ವರ್ ಹೇಳುತ್ತಾರೆ. ಈಗಾಗಲೇ ಪದವಿ ಪೂರ್ಣಗೊಳಿಸಿರುವ ಅನ್ವರ್ ಐಟಿ ಉದ್ಯಮದಲ್ಲಿ ಉದ್ಯೋಗ ಪಡೆದು ಉತ್ತಮ ಜೀವನ ಸಾಗಿಸುವ ಯೋಜನೆಯಲ್ಲಿದ್ದಾರೆ.

  Read Also: Dying is banned: ಸಾವು ನಿಶ್ವಯ! ಆದರೆ ಸಾವನ್ನೇ ನಿಷೇಧಿಸಿರುವ ದೇಶಗಳಿವೆ..ಇಲ್ಲಿ ಯಾರೂ ಸಾಯುವ ಹಾಗಿಲ್ಲ!

  ನವೆಂಬರ್ 30ರಂದು, ಅನ್ವರ್ ವಿವಾಹ ನಡೆಯುತ್ತಿದ್ದು, ಕಸಿ ಶಸ್ತ್ರಚಿಕಿತ್ಸಕ ಅನ್ವೇ ಮುಲಾಯ್ ಸೇರಿದಂತೆ ಸಂಪೂರ್ಣ ಕಸಿ ತಂಡವು ಮದುವೆಗೆ ಹಾಜರಾಗಲು ಮತ್ತು ತನಗೆ ಹಾಗೂ ಶಾಜಿಯಾಗೆ ಆಶೀರ್ವದಿಸಬೇಕೆಂದು ಅನ್ವರ್ ಬಯಸುತ್ತಾರೆ. ಅನ್ವರ್‌ ಅಣ್ಣ ಶೋಬ್ ಕೂಡ ಅದೇ ದಿನ ಮದುವೆಯಾಗುತ್ತಿದ್ದಾರೆ.

  ಅವರ ತಂದೆ, ಜಮೀಲ್ ಖಾನ್, ಟೈಮ್ಸ್ ಆಫ್ ಇಂಡಿಯಾದ ಜೊತೆ ಮಾತನಾಡುತ್ತಾ, ಅನ್ವರ್ ಮದುವೆಯಾಗಿ ಹೊಸ ಜೀವನ ಆರಂಭಿಸಲಿದ್ದಾನೆ. ನನ್ನ ಸಂತೋಷ ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ ಎಂದು ಭಾವುಕರಾದರು.
  First published: