• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Employees: ರಜೆಯಲ್ಲಿದ್ದ ಉದ್ಯೋಗಿಗೆ ಸಹೋದ್ಯೋಗಿಗಳು ಕಾಲ್ ಮಾಡುವಂತಿಲ್ಲ; ಕಾಲ್ ಮಾಡಿದ್ರೆ 1 ಲಕ್ಷ ರೂಪಾಯಿ ದಂಡ!

Employees: ರಜೆಯಲ್ಲಿದ್ದ ಉದ್ಯೋಗಿಗೆ ಸಹೋದ್ಯೋಗಿಗಳು ಕಾಲ್ ಮಾಡುವಂತಿಲ್ಲ; ಕಾಲ್ ಮಾಡಿದ್ರೆ 1 ಲಕ್ಷ ರೂಪಾಯಿ ದಂಡ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉದ್ಯೋಗಿಯು ರಜೆಯಲ್ಲಿದ್ದಾಗ ಕಂಪನಿಯಿಂದ ಕರೆ ಬರುವುದು ತುಂಬಾ ಕಿರಿಕಿರಿ ಉಂಟಾಗಬಹುದು. ರಜೆಯಲ್ಲೂ ಬಿಡುವುದಿಲ್ಲವೇ? ಎಂದು ಆ ಉದ್ಯೋಗಿ ಬೇಸರ ಮಾಡಿಕೊಳ್ಳಬಹುದು. ಇದರಿಂದಾಗಿ ರಜೆಯ ನಂತರ ಅವರ ಪರ್ಮಾಫೆನ್ಸ್​ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ಇದನ್ನು ತಪ್ಪಿಸಲು ಹೊಸದೊಂದು ಕಾನೂನು ತರಲಿದೆ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • Mumbai, India
  • Share this:

ಯಾರಿಗಾದರೂ ಒಂದು ಫೋನ್ ಕರೆ (Phone call) ಮಾಡಬೇಕೆಂದ್ರ ನಮಗೆ ತಗಲುವ ವೆಚ್ಚ ತುಂಬಾ ಕಡಿಮೆ. ಅದರಲ್ಲೂ ಈಗಿನ ದಿನಮಾನಗಳಲ್ಲಿ ಉಚಿತವಾಗಿಯೇ ಸಿಗುತ್ತಿದೆ. ಆದರೆ ಈ ಕಂಪನಿಯಲ್ಲಿ ಮೈಮರೆತು ಒಂದೇ ಒಂದು ಕರೆ ಮಾಡಿದರೆ ಒಂದು ಲಕ್ಷ ರೂಪಾಯಿ ತೆರಬೇಕಾಗುತ್ತದೆ ಅಂದರೆ ನೀವು ನಂಬುತ್ತೀರಾ? ಮುಂಬೈ ಮೂಲದ ಒಂದು ಸ್ಟಾರ್ಟಪ್​​ ಕಂಪನಿಯಲ್ಲಿ  (Startup company) ರಜೆಯಲ್ಲಿರುವ ಉದ್ಯೋಗಿಗಳಿಗೆ (Employees) ಸಹದ್ಯೋಗಿಗಳು ಕಚೇರಿಯ ವಿಷಯವಾಗಿ ಕರೆ ಮಾಡಿದರೆ ಹೀಗೆ ಒಂದು ಲಕ್ಷ ದಂಡ ವಿಧಿಸಲು ನಿರ್ಧರಿಸಿದೆ.


ಆಧುನಿಕ ಕಾಲದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್​ ಫೋನ್ ಇದೆ. ಇಮೇಲ್, ವರ್ಕ್​ ಫ್ರಮ್​ ಹೋಮ್​ ಹಾಗೂ ಎಲ್ಲಿಂದಲಾದರೂ ಕೆಲಸ ಮಾಡುವ ಸೌಲಭ್ಯ ಇರುವುದರಿಂದ ಉದ್ಯೋಗಿಗಳು ಕೆಲಸದ ವಿಚಾರದಲ್ಲಿ ಸಂಸ್ಥೆಯಿಂದ ಅಥವಾ ಮೇಲಿನ ಅಧಿಕಾರಿಗಳ ಕಾಟದಿಂದ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟಕರವಾಗುತ್ತಿದೆ. ಕೋವಿಡ್​ 19 ಸಾಂಕ್ರಾಮಿಕದ ನಂತರ ವರ್ಕ್​ ಫ್ರಮ್​ ಹೋಮ್​ ಹೆಚ್ಚಾಗುತ್ತಿರುವುದರಿಂದ ಉದ್ಯೋಗಿಗಳ ಹೆಚ್ಚಿನ ಸಮಯ ಕೆಲಸದಲ್ಲಿ ತೊಡಗುವಂತಾಗಿದೆ. ಕೆಲಸದ ಸಮಯ ಮುಗಿದ ನಂತರವೂ ಕರೆ ಮತ್ತು ಮಸೇಜ್​ಗಳನ್ನು ಸ್ವೀಕರಿಸುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಹಾಗಾಗಿ ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಹಿತ ದೃಷ್ಟಿಯಿಂದ ಡ್ರೀಮ್ ಸ್ಪೋರ್ಟ್ಸ್ ಕಂಪನಿ ಈ ನಿರ್ಧಾರ ತಗೆದುಕೊಂಡಿದೆ.


ಇದನ್ನೂ ಓದಿ:  Employee Benefits: 2023ರಲ್ಲಿ ಉದ್ಯೋಗಿಗಳು ಪಡೆಯಬಹುದಾದ ಎಲ್ಲಾ ಸೌಲಭ್ಯಗಳ ಮಾಹಿತಿ ಇಲ್ಲಿದೆ


ದಂಡ ವಿಧಿಸಲು ಕಾರಣವೇನು?


ಉದ್ಯೋಗಿಯು ರಜೆಯಲ್ಲಿದ್ದಾಗ ಕಂಪನಿಯಿಂದ ಕರೆ ಬರುವುದು ತುಂಬಾ ಕಿರಿಕಿರಿ. ರಜೆಯಲ್ಲೂ ಬಿಡುವುದಿಲ್ಲವೇ? ಎಂದು ಆ ಉದ್ಯೋಗಿ ಬೇಸರ ಮಾಡಿಕೊಳ್ಳಬಹುದು. ಇದರಿಂದಾಗಿ ರಜೆಯ ನಂತರ ಅವರ ಫರ್ಪಾರ್ಮೆನ್ಸ್​ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಪರಿಣಾಮವಾಗಿ ಆ ಕಂಪನಿಯ ಉತ್ಪಾದಕತೆ ಕಡಿಮೆಯಾಗುವ ಸಾಧ್ಯತೆಯಿದೆ. ನಿಖರವಾಗಿ ಈ ಅಂಶವನ್ನು ಆಧರಿಸಿ ಮುಂಬೈ ಮೂಲದ ಡ್ರೀಮ್ ಸ್ಪೋರ್ಟ್ಸ್ ಕಂಪನಿ ವಿನೂತನ ನಿರ್ಧಾರವನ್ನು ತೆಗೆದುಕೊಂಡಿದೆ. ಉದ್ಯೋಗಿ ರಜೆಯಲ್ಲಿರುವಾಗ ಸಹೋದ್ಯೋಗಿಗಳು ಕೆಲಸಕ್ಕೆ ಅಡ್ಡಿಪಡಿಸಬಾರದು ಮತ್ತು ಒಂದು ವೇಳೆ ಹಾಗೆ ಮಾಡಿದವರೂ 1 ಲಕ್ಷ ರೂಪಾಯಿ ದಂಡವನ್ನು ಪಾವತಿಸಬೇಕು ಎಂದು ಆದೇಶಿಸಿದೆ.


ಸ್ವಾತಂತ್ರ್ಯ ಹರಣವಾಗಬಾರದು


ಬೆಟ್ಟಿಂಗ್ ಫ್ಲಾಟ್​ಫಾರ್ಮ್​ ಡ್ರೀಮ್ 11 ಗೇಮ್​ ನಿರ್ವಹಿಸುತ್ತಿರುವ ಸಂಸ್ಥೆಯೇ ಈ ಡ್ರೀಮ್ ಸ್ಪೋರ್ಟ್ಸ್. ಕಂಪನಿಯೂ ವರ್ಷಕ್ಕೊಮ್ಮೆ ಒಂದು ವಾರ ರಜೆ ನೀಡುತ್ತದೆ. ಈ ರಜೆ ದಿನಗಳಲ್ಲಿ ಉದ್ಯೋಗಿಗೆ ಕಂಪನಿಗೆ ಸಂಬಂಧಿಸಿದ ಯಾವುದೇ ವಿಷಯಗಳ ಬಗ್ಗೆ ಆಲೋಚಿಸುವ ಅಗತ್ಯ ಇರುವುದಿಲ್ಲ. ತಮಗೆ ಇಷ್ಟವಾದ ಸ್ಥಳಗಳಿಗೆ ಭೇಟಿ ನೀಡಿ ಎಂಜಾಯ್ ಮಾಡುವುದಕ್ಕೆ ಸ್ವಾತಂತ್ರ್ಯವನ್ನು ನೀಡಲಾಗಿರುತ್ತದೆ. ಈ ಸಮಯದಲ್ಲಿ, ಸಹೋದ್ಯೋಗಿಗಳು ವೃತ್ತಿಪರ ಉದ್ದೇಶಗಳಿಗಾಗಿ ಉದ್ಯೋಗಿಗಿ ಕರೆದರೆ, ಅದು ಅವರ ಸ್ವಾತಂತ್ರ್ಯ ಹರಣ ಮಾಡಿದಂತಾಗುತ್ತದೆ ಎಂದು ಡ್ರೀಮ್ ಸ್ಪೋರ್ಟ್ಸ್ ಭಾವಿಸುತ್ತಿದೆ.


ರಜೆಯ ಮೂಡ್‌ಗೆ ಧಕ್ಕೆಯಾಗಬಾರದು


ಉದ್ಯೋಗಿಗಳ ರಜೆಯ ಮೂಡ್‌ಗೆ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ಡ್ರೀಮ್ ಸ್ಪೋರ್ಟ್ಸ್ ಸಂಸ್ಥೆ ಈ ನಿಯಮವನ್ನು ಜಾರಿಗೆ ತಂದಿದೆ ಎಂದು ಕಂಪನಿಯ ಸಿಇಒ ಮತ್ತು ಸಹ ಸಂಸ್ಥಾಪಕ ಹರ್ಷ ಜೈನ್ ಹೇಳಿದ್ದಾರೆ. ಉದ್ಯೋಗಿಗಳು ವರ್ಷಕ್ಕೊಮ್ಮೆ ಒಂದು ವಾರದವರೆಗೆ ವೃತ್ತಿಪರ ವ್ಯವಸ್ಥೆಯಿಂದ ಸಂಪೂರ್ಣವಾಗಿ ಮುಕ್ತರಾಗುತ್ತಾರೆ. ಈ ಸಮಯದಲ್ಲಿ ಉದ್ಯೋಗಿಗೆ ಫೋನ್‌ಗಳು, ಇಮೇಲ್‌ಗಳು ಮತ್ತು ಸ್ಲ್ಯಾಕ್ಸ್‌ಗಳ ರೂಪದಲ್ಲಿ ಯಾವುದೇ ಅಡಚಣೆಗಳಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿ:Employees Expectations: ಉದ್ಯೋಗಿಗಳಿಗೆ ಸ್ಯಾಲರಿ ಹೈಕ್ ಕೊಡದಿದ್ದರೂ, ಇವುಗಳನ್ನು ಕೊಟ್ಟರೆ ಸಾಕಂತೆ!


ಎರಡು ರೀತಿಯ ಲಾಭ


ಈ ಯೋಜನೆಯನ್ನು ಜಾರಿಗೆ ತರುವುದರಿಂದ ಸಂಸ್ಥೆಗೆ ಎರಡು ರೀತಿಯಲ್ಲಿ ಪ್ರಯೋಜನವಾಗುತ್ತದೆ. ಉದ್ಯೋಗಿಗಳ ರಜೆಯನ್ನು ಗೌರವಿಸುವುದರ ಜೊತೆಗೆ ಕಂಪನಿಯ ಸ್ಥಿತಿಗತಿಯ ಬಗ್ಗೆ ಸ್ಪಷ್ಟತೆ ಇರುತ್ತದೆ. ಕಂಪನಿಯು ಯಾವ ಉದ್ಯೋಗಿಗಳ ಯಾವ ರೀತಿ ಅವಲಂಬಿತವಾಗಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ರಜಾದಿನಗಳಲ್ಲಿ ಉದ್ಯೋಗಿ ರಿಫ್ರೆಶ್ ಆದ ನಂತರ ಕಚೇರಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲರು ಎಂಬುದು ಜೈನ್ ಹಾಗೂ ಸಂಸ್ಥೆಯ ಸಿಇಒ ಭವಿತ್ ಸೇಠ್​ ವಾದವಾಗಿದೆ.

Published by:Rajesha M B
First published: