Shocking: ಮಷಿನ್​ಗೆ ಕೂದಲು ಸಿಲುಕಿ ನೆತ್ತಿಯೇ ಕಿತ್ತು ಹೋಯ್ತು - ಏಳು ವಾರಗಳ ಗರ್ಭಿಣಿ ಸಾವು

ಇಪ್ಪತ್ತೊಂದು ವರ್ಷದ ಉಮಿದಾ ಏಳು ವಾರಗಳ ಗರ್ಭಿಣಿಯಾಗಿದ್ದಳು. ಹೊಸ ಉದ್ಯೋಗ  ಹುಡುಕಿಕೊಂಡು ಖುಷಿಯಿಂದ ಸಂದರ್ಶನಕ್ಕೆ ತೆರಳಿದ್ದ ಉಮಿದಾ ಸೇರಿದ್ದು ಆಸ್ಪತ್ರೆಯನ್ನ ಅಲ್ಲಿಂದ ಸೀದಾ ಶವವಾಗಿ ಮನೆಗೆ ಬಂದಿದ್ದಳು.

ನತದೃಷ್ಟ ಮಹಿಳೆ

ನತದೃಷ್ಟ ಮಹಿಳೆ

  • Share this:
    ಸಮಯ ಕೆಟ್ಟಿದ್ದರೆ ನಮಗೆ ಅಪಾಯ (Danger), ಅಪಘಾತ (Accident) ಮತ್ತು ಜೀವಕ್ಕೆ (life) ಕುತ್ತು ತರುವ ಸನ್ನಿವೇಶಗಳು (incidents) ಕ್ಷಣಾರ್ಧದಲ್ಲಿ ನಡೆದು ಹೋಗುತ್ತವೆ. ಇಲ್ಲೊಬ್ಬಳು ಗರ್ಭಿಣಿ (mum) ತನ್ನ ಉದ್ದ ಕೂದಲಿನಿಂದಾಗಿ (hair) ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಬಾಳಿ ಬದುಕಬೇಕಿದ್ದ ಮತ್ತು ಮಗುವಿಗೆ ಜನ್ಮ ನೀಡಬೇಕಿದ್ದ ತಾಯಿ ಬಾರದ ಲೋಕಕ್ಕೆ (death) ಹೋಗಿದ್ದಾಳೆ.  ಫೋಟೋದಲ್ಲಿರುವ ಈಕೆಯ ಹೆಸರು ಉಮಿದಾ ನಜರೋವಾ. ಇಪ್ಪತ್ತೊಂದು ವರ್ಷದ ಉಮಿದಾ ಏಳು ವಾರಗಳ ಗರ್ಭಿಣಿಯಾಗಿದ್ದಳು. ಹೊಸ ಉದ್ಯೋಗ  ಹುಡುಕಿಕೊಂಡು, ಖುಷಿಯಿಂದ ಸಂದರ್ಶನಕ್ಕೆ (interview)ತೆರಳಿದ್ದ ಉಮಿದಾ ಸೇರಿದ್ದು ಆಸ್ಪತ್ರೆಯನ್ನ ಅಲ್ಲಿಂದ ಸೀದಾ ಶವವಾಗಿ ಮನೆಗೆ ಬಂದಿದ್ದಳು.

    ಏಳು ವಾರಗಳ ಗರ್ಭಿಣಿ

    ಉಮಿದಾ ಮೊದಲು ಶಾಪ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ಏಳು ವಾರಗಳ ಗರ್ಭಿಣಿಯಾಗಿದ್ದ ಉಮಿದಾ ಹೊಸ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಳು. ಸ್ವಾರ್ಮೆಟ್ ಫ್ಯಾಕ್ಟರಿಯಲ್ಲಿ ಸಂದರ್ಶನಕ್ಕೆ ತೆರಳಿದ್ದಳು. ಸ್ವಾರ್ಮೆಟ್ ವೆಲ್ಡಿಂಗ್ ವೈರ್ ಮತ್ತು ಎಲೆಕ್ಟ್ರೋಕೋಡ್ಸ್ ಫ್ಯಾಕ್ಟರಿಯಾಗಿದೆ.

    ವಿಲಕ್ಷಣ ಅಪಘಾತ

    ಉಮಿದಾ ಫ್ಯಾಕ್ಟರಿಗೆ ಹೋದಾಗ ಹಿರಿಯ ಸ್ಟಾಪ್ ಒಬ್ಬರು ಅವಳಿಗೆ ಫ್ಯಾಕ್ಟರಿಯನ್ನು ಮತ್ತು ಒಳಗೆ ಕೆಲಸ ಹೇಗೆ ನಡೆಯುತ್ತದೆ ಎಂಬುದನ್ನು ತೋರಿಸುತ್ತಿದ್ದರು. ಈ ವೇಳೆ ಉಮಿದಾಳ ಫ್ರೀ ಹೇರ್ ಏಕಾಏಕಿ ಮಷಿನ್ ಒಳಗೆ ಸಿಲುಕಿ ಅವಳ ನೆತ್ತಿಯೆಲ್ಲ ಕಿತ್ತು ಹೋಗುತ್ತದೆ. ಬೆಲಾರಸ್ ನ ಬೋರಿಸೋವ್ ನಲ್ಲಿ ಸಂಭವಿಸಿದ ವಿಲಕ್ಷಣ ಅಪಘಾತದಲ್ಲಿ ಉಮಿದಾ ನಜರೋವಾ ನೆತ್ತಿ ಸಂಪೂರ್ಣವಾಗಿ ಕಿತ್ತು ಹೋಗಿದೆ.

    ಇದನ್ನೂ ಓದಿ: ಇದಪ್ಪಾ ಪುಷ್ಪಾ ಚಿತ್ರದ ಹವಾ ಅಂದ್ರೆ! ಅರಿಶಿನ ಶಾಸ್ತ್ರಕ್ಕೆ ಪುಷ್ಪಾ ಚಿತ್ರದ ಟಚ್

    ಮಗಳು ಅಪಘಾತದಲ್ಲಿ ಮೃತಪಟ್ಟಿದ್ದ ಬಗ್ಗೆ ಮಾತನಾಡಿದ ಉಮಿದಾ ತಾಯಿ ಓಲ್ಗಾ, ವೈದ್ಯರು ಉಮಿದಾ ಗಂಟಲಿಗೆ ಗಾಯವಾಗಿತ್ತು. ಅವಳ ಕೂದಲು ಸಂಪೂರ್ಣವಾಗಿ ಕುತ್ತಿಗೆಗೆ ಸುತ್ತಿಕೊಂಡಿತ್ತು. ಆ ನಂತರ ಅವಳನ್ನು ಹೊರಕ್ಕೆ ಎಳೆಯಲಾಯಿತು. ಒಂದು ವೇಳೆ ಅವಳ ನೆತ್ತಿ ಕಿತ್ತು ಹೋಗದಿದ್ದರೆ ಅವಳನ್ನು ಅಲ್ಲಿಯೇ ಕತ್ತು ಹಿಸುಕಿ ಸಾಯಿಸುತ್ತಿದ್ದರು ಎಂದು ತಾಯಿ ಓಲ್ಗಾ ಕಣ್ಣೀರು ಹಾಕಿದ್ದಾರೆ.

    ಘಟನೆ ನಂತರ ಉಮಿದಾ ಸಂಪೂರ್ಣವಾಗಿ ಗಾಯಗೊಂಡಿದ್ದಳು. ನೋವು ಆಕೆಯ ಪ್ರಜ್ಞೆಯನ್ನೇ ಕಸಿದುಕೊಂಡಿತ್ತು. ಪ್ರಜ್ಞೆಯಿಲ್ಲದೆ ಉಳಿದಿದ್ದ ಉಮಿದಾಗೆ ಮತ್ತೆ ಪ್ರಜ್ಞೆ ಬರಲಿಲ್ಲ.

    ಸುರಕ್ಷತಾ ನಿಯಮಗಳನ್ನು ಕೈಗೊಂಡಿಲ್ಲ

    ಇನ್ನು ಉಮಿದಾ ತಂದೆ ಡಿಮಿಟ್ರಿ ಮಾತನಾಡಿ, ಫ್ಯಾಕ್ಟರಿಯಲ್ಲಿ ಯಾವುದೇ ಸುರಕ್ಷತಾ ನಿಯಮಗಳನ್ನು ಕೈಗೊಂಡಿಲ್ಲ. ನಿಯಮಗಳನ್ನು ಉಲ್ಲಂಘಿಸಿದ್ದಾರೆ. ನನ್ನ ಮಗಳು ಉಮಿದಾ ಫ್ಯಾಕ್ಟರಿಗೆ ಹೋದಾಗ ಅವಳಿಗೆ ತಲೆಗೆ ಕಟ್ಟಲು ಸ್ಕಾರ್ಪ್ ಅಥವಾ ಕೂದಲು ಕಟ್ಟಿಕೊಳ್ಳುವಂತೆ ಹೇಳಬೇಕಿತ್ತು. ಆದರೆ ಯಾರೂ ಸಹ ಸಲಹೆ ನೀಡಿಲ್ಲ. ಮಗಳು ಏಳು ವಾರಗಳ ಗರ್ಭಿಣಿಯಾಗಿದ್ದಳು. ಫ್ಯಾಕ್ಟರಿಯವರ ನಿರ್ಲಕ್ಷ್ಯದಿಂದಾಗಿ ಎರಡು ಜೀವಗಳು ಬಲಿಯಾಗಿವೆ. ಫ್ಯಾಕ್ಟರಿಯವರು ಎರಡು ಜೀವಗಳನ್ನು ಬಲಿ ತೆಗೆದುಕೊಂಡಿದ್ದಾರೆ.

    ಉಮಿದಾ ಉದ್ದ ಕೂದಲು ಹೊಂದಿದ್ದು ಫ್ಯಾಕ್ಟರಿ ಸ್ಟಾಪ್ ಗಳಿಗೆ ಗೊತ್ತಿತ್ತು. ಆದರೂ ಸಹ ಅಲ್ಲಿ ಯಾರೂ ಅವಳಿಗೆ ಕೂದಲು ಮುಚ್ಚಿಕೊಳ್ಳುವಂತೆ ತಲೆಗೆ ಸ್ಕಾರ್ಪ್ ಕೊಟ್ಟಿಲ್ಲ ಎಂದು ಫ್ಯಾಕ್ಟರಿ ವಿರುದ್ಧ ಹರಿಹಾಯ್ದಿದ್ದಾರೆ.

    ಇದನ್ನೂ ಓದಿ:  ಗಂಡನನ್ನೇ ಹರಾಜಿಗಿಟ್ಟ ಮಹಿಳೆ - No Return, No Exchange

    ತನಿಖೆ ನಡೆಸಿದ ಬೆಲಾರಸ್ ನ ತನಿಖಾ ತಂಡ 

    ಇನ್ನು ಘಟನೆ ನಂತರ ಬೆಲಾರಸ್ ನ ತನಿಖಾ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿತು. ಮಷಿನ್ ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ. ಅವುಗಳನ್ನು ಹೇಗೆ ಆಪರೇಟ್ ಮಾಡಬೇಕು ಎಂದು ತೋರಿಸುತ್ತಿದ್ದ ಹಿರಿಯ ಸ್ಟಾಫ್ ರಿಜಿಸ್ಟರ್ನಲ್ಲಿ ದಾಖಲೆ ಮಾಡಲೆಂದು ನಿಂತಿದ್ದರು. ಈ ವೇಳೆ ಅವರು ಹಿಂತಿರುಗಿ ನೋಡಿದಾಗ ಉಮಿದಾ ಮಷಿನ್ ನಲ್ಲಿ ಸಿಲುಕಿದ್ದಳು. ಉಮಿದಾ ಮಷಿನ್ ಬಳಿ ನಿಂತಿದ್ದಳು. ತಲೆಯನ್ನು ಅಳ್ಳಾಡಿಸಿದ ಕೂಡಲೇ ಕೂದಲು ಮಷಿನ್ ನಲ್ಲಿ ಸಿಕ್ಕು ಇಡೀ ತಲೆಯ ನೆತ್ತಿಯೇ ಕಿತ್ತು ಹೋಗಿ ಪ್ರಜ್ಞಾಹೀನಳಾಗಿ ಬಿದ್ದಿದ್ದಳು ಎಂಬುದು ತನಿಖೆಯಲ್ಲಿ ಬಯಲಾಗಿದೆ ಎಂದು ತನಿಖಾ ತಂಡ ತಿಳಿಸಿದೆ.
    Published by:renukadariyannavar
    First published: