ಮೊದಲ ಬಾರಿ ತಾಯಿ ಆಗಿದ್ದನ್ನು ನೆನಪಿಟ್ಟುಕೊಳ್ಳಲು ಎದೆಹಾಲಿನಿಂದ ಉಂಗುರ ಮಾಡಿಸಿಕೊಂಡಳು!

ಅಷ್ಟಕ್ಕೂ ಆ ಮಹಿಳೆ ಮಾಡ ಹೊರಟಿದ್ದೇನು ಗೊತ್ತಾ? ಈಕೆ ತನ್ನ ಎದೆ ಹಾಲನ್ನು ಸಂಸ್ಕರಿಸಿ, ಅದಕ್ಕೆ ಚಿನ್ನದ ಲೇಪನ ಮಾಡಿಸಿ ಉಂಗುರ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದಾರೆ!

Rajesh Duggumane | news18
Updated:May 10, 2019, 2:59 PM IST
ಮೊದಲ ಬಾರಿ ತಾಯಿ ಆಗಿದ್ದನ್ನು ನೆನಪಿಟ್ಟುಕೊಳ್ಳಲು ಎದೆಹಾಲಿನಿಂದ ಉಂಗುರ ಮಾಡಿಸಿಕೊಂಡಳು!
ಮಹೀಲೆ ಮಾಡಿಸಹೊರಟ ಉಂಗುರ
  • News18
  • Last Updated: May 10, 2019, 2:59 PM IST
  • Share this:
ಮೊದಲ ಬಾರಿ ತಾಯಿ ಆಗುವುದು ಮಹಿಳೆಯರಿಗೆ ತುಂಬಾನೇ ವಿಶೇಷ. ಆ ದಿನವನ್ನು ನೆನಪಿನಲ್ಲಿಟ್ಟುಕೊಳ್ಳಲು ಅನೇಕರು ಬೇರೆ ಬೇರೆ ಐಡಿಯಾದ ಮೊರೆ ಹೋಗುತ್ತಾರೆ. ಇಲ್ಲೊಬ್ಬ ಮಹಿಳೆ ಕೂಡ ತಾನು ಮೊದಲ ಬಾರಿಗೆ ತಾಯಿ ಆಗಿದ್ದನ್ನು ನೆನಪಿಟ್ಟುಕೊಳ್ಳಲು ಭಿನ್ನ ಮಾರ್ಗ ಅನುಸರಿಸಿದ್ದಾರೆ.

ಅಷ್ಟಕ್ಕೂ ಆ ಮಹಿಳೆ ಮಾಡ ಹೊರಟಿದ್ದೇನು ಗೊತ್ತಾ? ಈಕೆ ತನ್ನ ಎದೆ ಹಾಲನ್ನು ಸಂಸ್ಕರಿಸಿ, ಅದಕ್ಕೆ ಚಿನ್ನದ ಲೇಪನ ಮಾಡಿಸಿ ಉಂಗುರ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದಾರೆ! ಈ ಬಗ್ಗೆ ಅವರು ಸಾಮಾಜಿಕಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

“ನನಗೆ ವೆಬ್​ಸೈಟ್ ಒಂದರ ಪರಿಚಯವಾಗಿದೆ. ಅಲ್ಲಿ ನಮ್ಮ ಎದೆಹಾಲನ್ನು ಬಳಸಿ ಉಂಗುರ ಮಾಡುತ್ತಾರೆ. ಅದಕ್ಕೆ ಚಿನ್ನದ ಲೇಪನ ಮಾಡುತ್ತಾರೆ. ಎದೆಹಾಲನ್ನು ಸಂಸ್ಕರಿಸಿ ಅದು ಕೆಡದಂತೆ ನೋಡಿಕೊಳ್ಳಲಾಗುತ್ತದೆ. ಹಾಗಾಗಿ ನನ್ನ ತಾಯ್ತನದ ಆನಂದವನ್ನು ನಾನು ಈ ರೀತಿ ಆಚರಿಸಲು ಮುಂದಾಗಿದ್ದೇನೆ. ನನಗೆ ಮೂರು ರಿಂಗ್​ಗಳು ಇಷ್ಟವಾಗಿವೆ. ಇದರಲ್ಲಿ ನಾನು ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ,” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: VIDEO: ಸಮುದ್ರದಲ್ಲಿ ಬಿದ್ದ ಮೊಬೈಲ್ ತಂದುಕೊಟ್ಟಿತ್ತು ಆ ಜೀವಿ; ವಿಡಿಯೋ ವೈರಲ್

ಈ ವಿಚಾರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಅನೇಕರು ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. 'ನೀವು ಏನ ಮಾಡ ಹೊರಟಿದ್ದೀರಿ ಎಂಬುದು ನಿಮಗೆ ಗೊತ್ತಿದೆಯೇ,'  ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ನಿಮಗೆ ತಲೆಕೆಟ್ಟಿದೆ ಎಂದಿದ್ದಾರೆ.

First published:May 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...