ಭರತನಾಟ್ಯ ಕಲಾವಿದೆ (Bharatanatyam artist) ರಾಧಿಕಾ ಮರ್ಚೆಂಟ್ (Radhika Merchant) ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಅವರ ಮನೆ ಸೊಸೆಯಾಗಲಿದ್ದಾರೆ. ಮುಕೇಶ್ ಅಂಬಾನಿ-ನೀತಾ ಅಂಬಾನಿ (Nita Ambani) ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani) ಅವರ ಜೊತೆ ರಾಧಿಕಾ ಮರ್ಚೆಂಟ್ (Radhika Merchant) ನಿಶ್ಚಿತಾರ್ಥ ನೆರವೇರಿದೆ. ಅನಂತ್ ಮತ್ತು ರಾಧಿಕಾ ಬಹಳ ಸಮಯದಿಂದ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ರಾಧಿಕಾ ಅಂಬಾನಿ ಕುಟುಂಬದ ಹಲವಾರು ಕಾರ್ಯಕ್ರಮಗಳಲ್ಲಿ ಕುಟುಂಬದ ಇತರ ಸದಸ್ಯರೊಂದಿಗೆ ಕಾಣಿಸಿಕೊಂಡಿದ್ದರು. ಇದೀಗ ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ರಾಧಿಕಾ ಎಂಬ ಕಲಾ ಸಿರಿವಂತೆ ಶ್ರೀಮಂತ ಉದ್ಯಮಿ ಮನೆ ಸೇರುವುದು ಪಕ್ಕಾ ಆಗಿದೆ. ರಾಧಿಕಾ ಮರ್ಚೆಂಟ್ ಭರತನಾಟ್ಯ (Bharatanatyam) ಅಭ್ಯಾಸ ಮಾಡುತ್ತಿದ್ದು, ಇತ್ತೀಚಿಗಷ್ಟೇ ಕಲಾಲೋಕಕ್ಕೆ ಎಂಟ್ರಿಕೊಟ್ಟಿದ್ದರು. ಅಂದಹಾಗೆ ರಾಧಿಕಾಗೆ ಭರತನಾಟ್ಯದ ಮೇಲೆ ಒಲವು ಮೂಡಿದ್ದು ಹೇಗೆ? ಅವರು ಭರತನಾಟ್ಯ ತರಬೇತಿ ಪಡೆದಿದ್ದು ಹೇಗೆ? ಇಲ್ಲಿದೆ ಓದಿ ಇಂಟ್ರೆಸ್ಟಿಂಗ್ ಮಾಹಿತಿ…
ಬಾಲ್ಯದಿಂದಲೂ ಭರತನಾಟ್ಯದ ಮೇಲೆ ರಾಧಿಕಾಗೆ ಒಲವು
ರಾಧಿಕಾ ಮರ್ಚೆಂಟ್ ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ, ಶ್ರೀಮಂತರ ಮಕ್ಕಳಂತೆ ಪಾರ್ಟಿ, ಎಂಜಾಯ್ಮೆಂಟ್ ಅಂತ ಓಡಾಡಿಲ್ಲ. ಬದಲಾಗಿ ಮೊದಲಿನಿಂದಲೂ ಅವರನ್ನು ಸೆಳೆದಿದ್ದು ಭರತನಾಟ್ಯ ಎಂಬ ದೇಶಿಯ ನೃತ್ಯಕಲೆ. ಬಾಲ್ಯದಿಂದಲೂ ಅವರ ಆಸಕ್ತಿಯನ್ನು ಗಮನಿಸಿದ ತಂದೆ, ತಾಯಿ ಪುಟ್ಟ ರಾಧಿಕಾರನ್ನು ಭರತನಾಟ್ಯ ಕಲಿಕೆಗೆ ಕಳಿಸುತ್ತಾರೆ.
8 ವರ್ಷಗಳ ಕಾಲ ಭರತನಾಟ್ಯ ಅಭ್ಯಾಸ
24 ವರ್ಷ ವಯಸ್ಸಿನ ರಾಧಿಕಾ ಎಂಟು ವರ್ಷಗಳಿಂದ ಭರತನಾಟ್ಯ ನೃತ್ಯಗಾರ್ತಿಯಾಗಿದ್ದು, ಗುರು ಭಾವನಾ ಠಾಕರ್ ಅವರ ಮಾರ್ಗದರ್ಶನದಲ್ಲಿ ಮುಂಬೈನ ಶ್ರೀ ನಿಭಾ ಆರ್ಟ್ಸ್ನಲ್ಲಿ ತರಬೇತಿ ಪಡೆದಿದ್ದಾರೆ.
ಇದನ್ನೂ ಓದಿ: Anant Ambani Engagement: ಅಂಬಾನಿ ಮನೆಯಲ್ಲಿ ಮತ್ತೊಂದು ಸಂಭ್ರಮ, ರಾಧಿಕಾ ಜೊತೆ ಎಂಗೇಜ್ ಆದ ಅನಂತ್ ಅಂಬಾನಿ!
ಕಳೆದ ಜೂನ್ನಲ್ಲಿ ಭರತನಾಟ್ಯ ರಂಗಪ್ರವೇಶ
ವಿಶೇಷ ಅಂದ್ರೆ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಕೂಡ ಭರತನಾಟ್ಯ ಕಲಾವಿದೆ. ಹೀಗಾಗಿ ಭಾವೀ ಸೊಸೆ ರಾಧಿಕಾ ಮರ್ಜೆಂಟ್ ಅವರನ್ನು ನೀತಾ ಅಂಬಾನಿ ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹಿಸಿದರು. ಕಳೆದ ಜೂನ್ 5ರಂದು ಮುಂಬೈನ ಜಿಯೋ ವರ್ಲ್ಡ್ ಸೆಂಟರ್ನಲ್ಲಿ ರಾಧಿಕಾ ಮರ್ಚೆಂಟ್ ಭರತನಾಟ್ಯ ರಂಗಪ್ರವೇಶ ಮಾಡಿದರು.
ಭರತನಾಟ್ಯ ಮೆಚ್ಚಿದ ಗಣ್ಯಾತಿ ಗಣ್ಯರು
ಈ ಅದ್ಧೂರಿ ಕಾರ್ಯಕ್ರಮದ ಆತಿಥ್ಯವನ್ನು ಖುದ್ದು ಅಂಬಾನಿ ಕುಟುಂಬಸ್ಥರೇ ವಹಿಸಿದ್ದರು. ಬಾಲಿವುಡ್ ಸೂಪರ್ ಸ್ಟಾರ್ಗಳಾದ ಸಲ್ಮಾನ್ ಖಾನ್, ಅಮಿರ್ ಖಾನ್, ರಣವೀರ್ ಸಿಂಗ್ ಸೇರಿದಂತೆ ಬಾಲಿವುಡ್ನ ಅನೇಕ ನಟರು ಮತ್ತು ರಾಜಕಾರಣಿಗಳು, ಉದ್ಯಮಿಗಳು, ಹಲವು ಕ್ಷೇತ್ರಗಳ ಖ್ಯಾತನಾಮರು ಹಾಜರಿದ್ದರು.
ರಾಧಿಕಾ ಮರ್ಚೆಂಟ್ ಯಾರು?
ರಾಧಿಕಾ ಮರ್ಚೆಂಟ್ ಎನ್ಕೋರ್ ಹೆಲ್ತ್ಕೇರ್ ಸಿಇಒ ವೀರೆನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ. ರಾಧಿಕಾ ಮರ್ಚೆಂಟ್ ಡಿಸೆಂಬರ್ 18, 1994 ರಂದು ಮುಂಬೈನಲ್ಲಿ ಜನಿಸಿದರು. ಗುಜರಾತ್ನ ಕಚ್ ಮೂಲದ ರಾಧಿಕಾ ಹಲವು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದಾರೆ. ಅವರು ಮುಂಬೈನ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆ ಮತ್ತು ಜುಹುದಲ್ಲಿನ ಎಕೋಲ್ ಮೊಂಡಿಯೇಲ್ ವರ್ಲ್ಡ್ ಸ್ಕೂಲ್ಗೆ ಸೇರಿದರು. ನಂತರ ಅವರು BD ಸೋಮಾನಿ ಇಂಟರ್ನ್ಯಾಶನಲ್ ಸ್ಕೂಲ್ನಿಂದ ಇಂಟರ್ನ್ಯಾಶನಲ್ ಬ್ಯಾಕಲೌರಿಯೇಟ್ ಡಿಪ್ಲೊಮಾವನ್ನು ಪಡೆದರು.
ಪ್ರಾಣಿಪ್ರಿಯೆ ರಾಧಿಕಾ
ರಾಧಿಕಾ ಅವರು 2017 ರಲ್ಲಿ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಿಂದ ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದರು ಮತ್ತು ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರು ಭಾರತಕ್ಕೆ ಮರಳಿದರು. ಬಳಿಕ ಇಲ್ಲಿ ಇಂಡಿಯಾ ಫಸ್ಟ್ ಆರ್ಗನೈಸೇಶನ್ ಮತ್ತು ದೇಸಾಯಿ ಮತ್ತು ದಿವಾಂಜಿಯಂತಹ ಸಲಹೆಗಾರ ಸಂಸ್ಥೆಗಳಲ್ಲಿ ಇಂಟರ್ನ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ, ಅವರು ಕುಟುಂಬ ವ್ಯವಹಾರದಲ್ಲಿ ಪಾಲ್ಗೊಳ್ಳುವ ಮೊದಲು ಮುಂಬೈ ಮೂಲದ ರಿಯಲ್ ಎಸ್ಟೇಟ್ ಕಂಪನಿ ಇಸ್ಪ್ರವಾದಲ್ಲಿ ಜೂನಿಯರ್ ಸೇಲ್ಸ್ ಮ್ಯಾನೇಜರ್ ಆಗಿ ಸೇರಿಕೊಂಡರು. ಇವುಗಳ ಜೊತೆಗೆ ರಾಧಿಕಾರಿಗೆ ಪ್ರಾಣಿಗಳು ಅಂದರೆ ವಿಶೇಷ ಪ್ರೀತಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ