Mukarram Jah: ಹೈದರಾಬಾದಿನ ಕೊನೆಯ ನಿಜಾಮ್ ಮುಕರಮ್ ಜಾಹ್ ಎಷ್ಟು ಶ್ರೀಮಂತ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Mukarram Jah: ಮುಕರಮ್ ಜಾಹ್ 1933ರಲ್ಲಿ ಫ್ರಾನ್ಸ್‌ನಲ್ಲಿ ಜನಿಸಿದರು. ಜಾಹ್ ಒಟ್ಟೋಮನ್ ರಾಜವಂಶದ ಕೊನೆಯ ಖಲೀಫ್ ಮತ್ತು ಟರ್ಕಿ ಗಣರಾಜ್ಯದ ಏಕೈಕ ಖಲೀಫ್ ಅಬ್ದುಲ್ಮೆಜಿದ್ II ರ ಮೊಮ್ಮಗ. ಜಾಹ್‌ ತಾಯಿ ರಾಜಕುಮಾರಿ ದುರ್ರು ಶೆವಾರ್.

  • Trending Desk
  • 5-MIN READ
  • Last Updated :
  • Share this:

ಹೈದರಾಬಾದ್‌ನ (Hyderabad) ಎಂಟನೇ ನಿಜಾಮ್‌ (Nizam), ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕರಮ್ ಜಾಹ್ (Mukarram Jah) ಜನವರಿ 14 ರಂದು ಟರ್ಕಿಯಲ್ಲಿ ನಿಧನರಾಗಿದ್ದು, ಪಾರ್ಥಿವ ಶರೀರವನ್ನು ಭಾರತಕ್ಕೆ ಕರೆತಂದು ಇಲ್ಲಿಯೇ ಅಂತ್ಯಕ್ರಿಯೆ ಮಾಡಲಾಗಿದೆ. ರಾಜಕುಮಾರ (Prince) ಮುಕರಮ್ ಜಾಹ್ ಅವರನ್ನು 1954 ರಲ್ಲಿ ಉತ್ತರಾಧಿಕಾರಿಯಾಗಿ ಅವರ ತಾತ ಮತ್ತು ಹಿಂದಿನ ಹೈದರಾಬಾದ್ ರಾಜಪ್ರಭುತ್ವದ ಏಳನೇ ನಿಜಾಮ್ ಮೀರ್ ಒಸ್ಮಾನ್ ಅಲಿ ಖಾನ್ ಅವರು ಘೋಷಿಸಿದ್ದರು. ಅಂದಿನಿಂದ ಅವರನ್ನು ಹೈದರಾಬಾದ್‌ನ ಎಂಟನೇ ಮತ್ತು ಕೊನೆಯ ನಿಜಾಮ್ ಎಂದು ಗುರುತಿಸಲಾಗಿದೆ.


ರಾಜಮನೆತನದ ಕೊನೆಯ ಕುಡಿ ಜಾಹ್‌ ಓರ್ವ ಅಗರ್ಭ ಶ್ರೀಮಂತ. ಇವನ ಶ್ರೀಮಂತಿಕೆಗೆ ಪಾರವೇ ಇಲ್ಲದಷ್ಟು ನಗ-ನಾಣ್ಯ, ಮುತ್ತು-ರತ್ನ, ವಜ್ರ, ಐಷಾರಾಮಿ ಕಾರು, ಐತಿಹಾಸಿಕ ಅರಮನೆಗಳನ್ನು ಇವರು ಹೊಂದಿದ್ದರು. ಶ್ರೀಮಂತ ವ್ಯಕ್ತಿಯ ಸಂಪತ್ತು ಇಲ್ಲಿಗೆ ಮುಗಿದಿಲ್ಲ, ಇವರ ಬಗ್ಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.


ಮುಕರಮ್ ಜಾಹ್ ಜನನ


ಮುಕರಮ್ ಜಾಹ್ 1933ರಲ್ಲಿ ಫ್ರಾನ್ಸ್‌ನಲ್ಲಿ ಜನಿಸಿದರು. ಜಾಹ್ ಒಟ್ಟೋಮನ್ ರಾಜವಂಶದ ಕೊನೆಯ ಖಲೀಫ್ ಮತ್ತು ಟರ್ಕಿ ಗಣರಾಜ್ಯದ ಏಕೈಕ ಖಲೀಫ್ ಅಬ್ದುಲ್ಮೆಜಿದ್ II ರ ಮೊಮ್ಮಗ. ಜಾಹ್‌ ತಾಯಿ ರಾಜಕುಮಾರಿ ದುರ್ರು ಶೆವಾರ್.


ಒಟ್ಟೋಮನ್ ಕುಟುಂಬವನ್ನು 1924 ರಲ್ಲಿ ಅಟಾತುರ್ಕ್‌ನಿಂದ ಸ್ವಿಟ್ಜರ್‌ಲ್ಯಾಂಡ್‌ಗೆ ಗಡಿಪಾರು ಮಾಡಲಾಯಿತು. ಈ ಸುದ್ದಿ ತಿಳಿದ ಮುಕರಮ್ ಜಾಹ್ ಅವರ ಅಜ್ಜ ನಿಜಾಮ್ ಒಸ್ಮಾನ್ ಅಲಿ ಖಾನ್ ರಾಜಕುಮಾರಿ ದುರ್ಶೆವರ್ ಅವರನ್ನು ತಮ್ಮ ಮಗ ಅಜಮ್‌ ಜೊತೆ ವಿವಾಹ ಮಾಡಲು ನಿರ್ಧರಿಸಿದರು. ಈ ಇಬ್ಬರಿಗೂ ಜನಿಸಿದ ಮಗುವೇ ಮುಕರಮ್ ಜಾಹ್. ‌


1971 ರಲ್ಲಿ ಸರ್ಕಾರವು ಬಿರುದುಗಳು ಮತ್ತು ಖಾಸಗಿ ಖರ್ಚು ವೆಚ್ಚಗಳನ್ನು ರದ್ದುಪಡಿಸುವವರೆಗೂ ಪ್ರಿನ್ಸ್ ಮುಕರಮ್ ಜಾಹ್ ಅವರನ್ನು ಅಧಿಕೃತವಾಗಿ ಹೈದರಾಬಾದ್ ರಾಜಕುಮಾರ ಎಂದು ಕರೆಯಲಾಗುತ್ತಿತ್ತು.


ಆರು ಐತಿಹಾಸಿಕ ಅರಮನೆಗಳು


ಮುಕರಮ್ ಜಾಹ್ ಬಹದ್ದೂರ್ ಆರು ಐತಿಹಾಸಿಕ ಅರಮನೆಗಳ ಒಡೆತನ ಹೊಂದಿದ್ದರು. ಹೈದರಾಬಾದಿನ ಐತಿಹಾಸಿಕ ಫಲಕ್ನುಮಾ ಅರಮನೆ ಇವರ ಹೆಸರಿನಲ್ಲಿತ್ತು, ಇದನ್ನು 1884 ರಿಂದ ಒಂಬತ್ತು ವರ್ಷಗಳ ಕಾಲ ನಿರ್ಮಾಣ ಮಾಡಲಾಗಿದೆ.


ಆಗಿನ ಹೈದರಾಬಾದ್‌ನ ಪ್ರಧಾನ ಮಂತ್ರಿ ನವಾಬ್ ಸರ್ ವಿಕಾರ್-ಉಲ್-ಉಮ್ರಾ ಇದಕ್ಕಾಗಿ 2 ಕೋಟಿ ರೂಪಾಯಿಗಳನ್ನು (ಇಂದಿನ ಮೌಲ್ಯಮಾಪನ) ಖರ್ಚು ಮಾಡಿದ್ದರು. ಬ್ರಿಟಿಷ್ ಕಲಾ ಹರಾಜು ಸಂಸ್ಥೆ ಕ್ರಿಸ್ಟಿ, ಪ್ರಸ್ತುತ ಅರಮನೆಯು £10 ಮಿಲಿಯನ್ ಮೌಲ್ಯ ಹೊಂದಿದೆ ಎಂದು ತಿಳಿಸಿದೆ.
ಅರಮನೆಯನ್ನು ವಿಕಾರ್-ಉಲ್-ಉಮ್ರಾ ತನ್ನ ಸೋದರ ಮಾವ, ಹೈದರಾಬಾದ್‌ನ ಆರನೇ ನಿಜಾಮ್ ಮಹಬೂಬ್ ಅಲಿ ಖಾನ್‌ಗೆ ಮಾರಿದನು. 2000 ರಲ್ಲಿ, ಅರಮನೆಯನ್ನು ತಾಜ್ ಗ್ರೂಪ್ ಆಫ್ ಹೋಟೆಲ್‌ಗಳಿಗೆ ಗುತ್ತಿಗೆ ನೀಡಲಾಯಿತು.


ಇದನ್ನೂ ಓದಿ: ಲೆನ್ಸ್​​ ಹಾಕ್ಕೊಂಡು ಮಲಗೋವಾಗ ಎಚ್ಚರ, ಇಲ್ಲೊಬ್ಬರ ಎರಡೂ ಕಣ್ಣು ಕುರುಡಾಯ್ತು!


ಚೌಮಹಲ್ಲಾ ಅರಮನೆ ಕೂಡ ಇವರ ಸುಪರ್ದಿಯಲ್ಲಿತ್ತು. ಈಗ ಇದು ವಸ್ತುಸಂಗ್ರಹಾಲಯವಾಗಿದೆ. ಜೊತೆಗೆ ಚಿರನ್ ಅರಮನೆ, ನಜ್ರಿ ಬಾಗ್ ಅರಮನೆ ಮತ್ತು ಹೈದರಾಬಾದ್‌ನ ಪುರಾಣಿ ಹವೇಲಿ-ಹಾಗೆಯೇ ಔರಂಗಾಬಾದ್‌ನ ನೌಖಂಡ ಅರಮನೆಯನ್ನು ಜಾಹ್‌ಗೆ ವರ್ಗಾಯಿಸಲಾಗಿತ್ತು..


ಬೆಲೆ ಬಾಳುವ ಚಿನ್ನ, ವಜ್ರ ಹೊಂದಿದ್ದ ಜಾಹ್‌


ಅಷ್ಟೆ ಅಲ್ಲ, ಮುಕರಮ್ ಜಾಹ್ ಅವರು ವಿಶ್ವದ ಅತಿದೊಡ್ಡ ಟಂಕಿತ ಚಿನ್ನದ ನಾಣ್ಯವನ್ನು ಆನುವಂಶಿಕವಾಗಿ ಪಡೆದಿದ್ದಾರೆ. ಇದು ಬರೋಬ್ಬರಿ 12 ಕೆಜಿ ಇದೆ ಎಂದು ವರದಿಯಾಗಿದೆ.


ಪೇಪರ್ ವೇಟ್ ಆಗಿ ಬಳಸುತ್ತಿದ್ದ 1,000 ಕೋಟಿ ಮೌಲ್ಯದ ಜೇಕಬ್ ವಜ್ರವನ್ನೂ ಸಹ ಇವರು ಹೊಂದಿದ್ದರು. ಜಾಹ್‌ ನಿಧನದ ವೇಳೆ ಅವರ ನಿವ್ವಳ ಮೌಲ್ಯ 100 ಕೋಟಿ ಎಂದು ಅಂದಾಜಿಸಲಾಗಿದೆ.


ಪರ್ತ್‌ನಲ್ಲಿ ಮರ್ಚಿಸನ್ ಹೌಸ್ ಸ್ಟೇಷನ್


ಜಾಹ್‌ ಪರ್ತ್‌ನಲ್ಲಿ ಮರ್ಚಿಸನ್ ಹೌಸ್ ಸ್ಟೇಷನ್ ಖರೀದಿಸಿದ್ದರು. ಆದರೆ ನಂತರ 1996 ರಲ್ಲಿ ಮಾರಾಟ ಮಾಡಲಾಯಿತು.


ಸುಮಾರು 60 ಕಾರುಗಳ ಒಡೆಯ


ಮುಕರಮ್ ಜಾಹ್ ಹಲವಾರು ಕಾರುಗಳನ್ನು ಹೊಂದಿದ್ದರು. ಅವರ ಅಜ್ಜನ ಗ್ಯಾರೇಜ್‌ನಲ್ಲಿ ಕೆಟ್ಟ ನಿಂತಿದ್ದ 56 ಕಾರುಗಳನ್ನು ಆಗಾಗ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದರು.


ಜಾಹ್‌ ಕಾರು ಸಂಗ್ರಹಣೆಯಲ್ಲಿ ಬೆಂಟ್ಲಿ, ಜೀಪ್ ಮತ್ತು ಮರ್ಸಿಡಿಸ್ , ಸಿಲ್ವರ್ ಘೋಸ್ಟ್ ಥ್ರೋನ್ ಕಾರನ್ನು ಒಳಗೊಂಡಂತೆ ರೋಲ್ಸ್ ರಾಯ್ಸ್‌ಗಳನ್ನು ಹೊಂದಿದ್ದರು.


ಐದು ಮದುವೆ ಆಗಿದ್ದ ಜಾಹ್‌


ಮುಕರಮ್ ಜಾಹ್ ಐದು ಬಾರಿ ವಿವಾಹವಾಗಿದ್ದಾರೆ. ಅವರ ಮೊದಲ ಪತ್ನಿ ಎಸ್ರಾ ಬರ್ಗಿನ್ ಇಸ್ತಾನ್‌ಬುಲ್‌ನ ಟರ್ಕಿಶ್ ಕುಲೀನ ಮಹಿಳೆ. ಅವರು ನಂತರ 1979 ರಲ್ಲಿ ಆಯ್ಷಾ ಸಿಮನ್ಸ್ ಅವರನ್ನು ವಿವಾಹವಾದರು.


ನಂತರ ಈಕೆ 1989 ರಲ್ಲಿ ಅಕಾಲಿಕ ಮರಣಹೊಂದಿದ ನಂತರ, 1992 ರಲ್ಲಿ ಮಾಜಿ ಮಿಸ್ ಟರ್ಕಿ ಮನೋಲ್ಯಾ ಒನುರ್ ಅವರನ್ನು ವಿವಾಹವಾದರು.


ಇದನ್ನೂ ಓದಿ: ಈ ಥರ ತುಟಿ ಪಡೆಯೋಕೆ ಈಕೆ ಖರ್ಚು ಮಾಡಿರೋದು 8 ಲಕ್ಷ, ಯಾಕ್​ ಬೇಕಿತ್ತೂ ಹೇಳಿ!


ಇವರ ಬಳಿ ವಿಚ್ಛೇದನ ಪಡೆದುಕೊಂಡ ಜಾಹ್ ಜಮೀಲಾ ಬೌಲಾರಸ್ ಎಂಬ ಮೊರೊಕನ್ ಮಹಿಳೆಯನ್ನು ವಿವಾಹವಾದರು. ನಂತರ ಕೊನೆಯದಾಗಿ 1994 ರಲ್ಲಿ ಆಯೇಷಾ ಒರ್ಚೆಡಿ ಜೊತೆ ವಿವಾಹವಾದರು.

Published by:Sandhya M
First published: