FireCrackers Ban: ಪಟಾಕಿ ನಿಷೇಧಕ್ಕೆ 350 ವರ್ಷಗಳ ಇತಿಹಾಸ: ಮೊಘಲ್​ ದೊರೆ ಔರಂಗಜೇಬನೇ ಮೊದಲಿಗ!

Fire Crackers Ban:ಪಟಾಕಿಗಳ ಮೇಲಿನ ನಿಷೇಧ ಕೆಲವು ವರ್ಷಗಳ ಹಿಂದೆ ಆರಂಭವಾಗಿದ್ದರೂ, ಹಾಗೆ ಆಗುತ್ತಿರುವುದು ಇದೇ ಮೊದಲೇನಲ್ಲ. ಪಟಾಕಿಗಳ ಮೇಲಿನ ನಿಷೇಧಕ್ಕೆ ನಮ್ಮ ದೇಶದಲ್ಲಿ 350 ವರ್ಷಗಳ ಹಿಂದಿನ ಇತಿಹಾಸವಿದೆ(History of Over 350 Years).

ಪಟಾಕಿ ನಿಷೇಧಿಸಿ ಆದೇಶ ಹೊರಡಿಸಿದ್ದ ಔರಂಗಜೇಬ್​

ಪಟಾಕಿ ನಿಷೇಧಿಸಿ ಆದೇಶ ಹೊರಡಿಸಿದ್ದ ಔರಂಗಜೇಬ್​

  • Share this:
ದೀಪಾವಳಿಯಂದು ಪಟಾಕಿ(Fire Crackers) ಸಿಡಿಸುವುದು ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಆದರೆ ಕೆಲವು ದಶಕಗಳಿಂದ ಆ ಕುರಿತು ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಈ ಕೆಲವು ವರ್ಷಗಳಿಂದ ನ್ಯಾಯಾಲಯಗಳು ಮತ್ತು ಸರ್ಕಾರ ಪಟಾಕಿ ಸಿಡಿಸುವುದಕ್ಕೆ ಹಲವಾರು ನಿರ್ಬಂಧಗಳನ್ನು(Several restrictions on  Fire Crackers)ವಿಧಿಸುತ್ತಾ ಬಂದಿವೆ. ಸುಪ್ರೀಂ ಕೋರ್ಟ್(Supreme Court) ಪಟಾಕಿಗಳ ಮೇಲಿನ ಸಂಪೂರ್ಣ ನಿಷೇಧ ತಳ್ಳಿ ಹಾಕಿದ್ದರೂ, ಕೋವಿಡ್ -19 ರೋಗಿಗಳ(Covid-19 Patients) ಮೇಲೆ ವಾಯು ಮಾಲಿನ್ಯದಿಂದ ಸಮಸ್ಯೆಗಳಾಗುತ್ತವೆ ಎಂದು ಉಲ್ಲೇಖಿಸಿ, ದೇಶಾದ್ಯಂತ ಹಲವಾರು ನಗರಗಳು ಮತ್ತು ಜಿಲ್ಲೆಗಳಲ್ಲಿ ದೀಪಾವಳಿಯಂದು ಪಟಾಕಿ ಸಿಡಿಸುವುದರ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಆದರೆ ಪಟಾಕಿಗಳ ಮೇಲಿನ ನಿಷೇಧ ಕೆಲವು ವರ್ಷಗಳ ಹಿಂದೆ ಆರಂಭವಾಗಿದ್ದರೂ, ಹಾಗೆ ಆಗುತ್ತಿರುವುದು ಇದೇ ಮೊದಲೇನಲ್ಲ. ಪಟಾಕಿಗಳ ಮೇಲಿನ ನಿಷೇಧಕ್ಕೆ ನಮ್ಮ ದೇಶದಲ್ಲಿ 350 ವರ್ಷಗಳ ಹಿಂದಿನ ಇತಿಹಾಸವಿದೆ(History of Over 350 Years).

17ನೇ ಶತಮಾನದಲ್ಲೂ ಬ್ಯಾನ್​ ಆಗಿತ್ತು ಪಟಾಕಿ!

350 ವರ್ಷಗಳ ಹಿಂದೆ ಅಂದರೆ 17ನೇ ಶತಮಾನದಲ್ಲಿ ಭಾರತದ ಪ್ರಮುಖ ಭಾಗಗಳಲ್ಲಿ ಔರಂಗಜೇಬನ ಆಳ್ವಿಕೆ ಇದ್ದಾಗ, ಪಟಾಕಿಗಳ ಮೇಲೆ ಸಂಪೂರ್ಣವಾಗಿ ನಿಷೇಧ ಹೇರುವ ಆದೇಶವೊಂದನ್ನು ಜಾರಿಗೊಳಿಸಲಾಗಿತ್ತು. ಆ ಆದೇಶವನ್ನು 1667ನೇ ಇಸವಿ, ಏಪ್ರಿಲ್ 8ರಂದು ಜಾರಿಗೊಳಿಸಲಾಗಿತ್ತು, ಮತ್ತು ಆ ಆದೇಶ ಪತ್ರವನ್ನು ಬಿಕನೇರಿನ ರಾಜ್ಯ ದಫ್ತರಖಾನೆಯಲ್ಲಿ ಸೂಕ್ತ ರೀತಿಯಲ್ಲಿ ಸಂರಕ್ಷಿಸಿ ಇಡಲಾಗಿದೆ. ಔರಂಗಜೇಬನ ಆಳ್ವಿಕೆಗೆ ಒಳಪಟ್ಟಿದ್ದ ಎಲ್ಲಾ ರಾಜ್ಯಗಳಲ್ಲಿ, ಪಟಾಕಿ ಮತ್ತು ಸಿಡಿಮದ್ದುಗಳನ್ನು ನಿಷೇಧಿಸಲಾಗಿತ್ತು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.



ಇದನ್ನು ಓದಿ : ಬೈಕ್​ನಲ್ಲಿ ತೆರಳುತ್ತಿದ್ದಾಗಲೇ ಸ್ಫೋಟಗೊಂಡ ಪಟಾಕಿ: ಅಪ್ಪ-ಮಗನ ದೇಹ ಛಿದ್ರ ಛಿದ್ರ!

ಔರಂಗಜೇಬನ ಸಾಮ್ರಾಜ್ಯದ ಅಡಿಯಲ್ಲಿರುವ ಎಲ್ಲಾ ಪ್ರಾಂತ್ಯಗಳಲ್ಲಿ ಪಟಾಕಿಗಳ ಮೇಲೆ ನಿಷೇಧ ಹೇರಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅದು, ನಾಗರೀಕರಿಗೆ ಮಾಹಿತಿ ನೀಡಲು, ಪ್ರಾಂತ್ಯದೆಲ್ಲೆಡೆ ನಿಷೇಧದ ಕುರಿತು ಘೋಷಣೆ ಮಾಡುವಂತೆ ಕೂಡ ಆದೇಶ ಹೊರಡಿಸಲಾಗಿತ್ತು. ಆದರೆ ಎಷ್ಟು ಸಮಯದವರೆಗೆ ಈ ನಿಷೇಧ ಹೇರಲಾಗಿತ್ತು ಎಂಬುವುದರ ಬಗ್ಗೆ ಆದೇಶ ಪ್ರತಿಯಲ್ಲಿ ಉಲ್ಲೇಖವಾಗಿಲ್ಲ.

ಆದೇಶದ ಪ್ರತಿಯಲ್ಲಿ ಇರುವುದೇನು?

“ಪಟಾಕಿಗಳ ಮೇಲೆ ನಿಷೇಧವಿದೆ ಎಂದು ಪ್ರಾಂತ್ಯಗಳಲ್ಲಿನ ಅಧಿಕಾರಿಗಳಿಗೆ ತಿಳಿಸುವಂತೆ ಚಕ್ರವರ್ತಿಗಳು ನಿರ್ದೇಶನ ನೀಡಿದ್ದಾರೆ. ಯಾರೂ ಪಟಾಕಿಗಳನ್ನು ಅಂದರೆ ಸಂತೋಷದ ಮತ್ತು ಹಬ್ಬಗಳ ಸಂದರ್ಭದಲ್ಲಿ ಬಳಸುವ ಗನ್‍ಪೌಡರ್‌ನಿಂದ ಮಾಡಿದ ವಸ್ತುಗಳು ಸಿಡಿಸಬಾರದು ಎಂದು ಘೋಷಣೆ ಮಾಡಿ.” ಎಂದು ರಾಜ ಔಋಂಗಜೇಬ ಆದೇಶ ಹೊರಡಿಸಿದ್ದ.ರಾಜಸ್ಥಾನ ರಾಜ್ಯ ದಫ್ತರಖಾನೆಯ ನಿರ್ದೇಶಕ ಮಹೇಂದ್ರ ಸಿಂಗ್ ಖಡ್ಗಾವತ್ , ಮಾಧ್ಯಮದ ಜೊತೆ ಮಾತನಾಡುತ್ತಾ, ಔರಂಗಜೇಬನ ಕಾಲದಲ್ಲಿ ಪಟಾಕಿಗಳ ಮೇಲೆ ನಿಷೇಧ ಹೇರಲಾಗಿತ್ತು. 1667ರ ಏಪ್ರಿಲ್‌ನ ದಿನಾಂಕವುಳ್ಳ ಆದೇಶ ಪತ್ರವನ್ನು ದಸ್ತಾವೇಜು ವಿಭಾಗದಲ್ಲಿ ಸಂರಕ್ಷಿಸಿ ಇಡಲಾಗಿದೆ. ಆದರೆ ಅದು ನಿರ್ದಿಷ್ಟವಾಗಿ ದೀಪಾವಳಿಯನ್ನು ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ.

‘ದೀಪಾವಳಿ ಹಬ್ಬವನ್ನು ಆಚರಿಸಲು ಅನುಮತಿ ಇರಲಿಲ್ಲ’

ಹಮ್‍ಲೋಗ್‍ಇಂಡಿಯಾ ಎಂಬ ಹೆಸರಿನ ಟ್ವಿಟ್ಟರ್ ಖಾತೆಯ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಈ ಆದೇಶವನ್ನು ಪೋಸ್ಟ್ ಮಾಡಲಾಗಿದೆ. “ಚಕ್ರವರ್ತಿಯು, 1667 ಏಪ್ರಿಲ್ 8ರಂದು, ಹಿಂದಿ ಭಾಷಾಂತರದ ಸಮೇತ ಈ ಆದೇಶ ಜಾರಿಗೊಳಿಸಿದರು. ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸುವುದನ್ನು ನಿಷೇಧಿಸುವ ಕುರಿತು ಈ ಆದೇಶದಲ್ಲಿ ಹೇಳಲಾಗಿದೆ. ಔರಂಗಜೇಬನ ಆಳ್ವಿಕೆಯ ಕಾಲದಲ್ಲಿ ಹಿಂದೂಗಳಿಗೆ ದೀಪಾವಳಿ ಹಬ್ಬವನ್ನು ಆಚರಿಸಲು ಅನುಮತಿ ಇರಲಿಲ್ಲ” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಇದನ್ನು ಓದಿ : ಹಸಿರು ಪಟಾಕಿ ಎಷ್ಟು ಸುರಕ್ಷಿತ? ಬೇರೆ ಪಟಾಕಿಗೂ ಇದಕ್ಕೂ ವ್ಯತ್ಯಾಸವೇನು?

ನಿಯಮ ಮೀರಿದರೆ 10 ವರ್ಷ ಜೈಲು ಶಿಕ್ಷೆ!

ಗಮನಿಸಬೇಕಾದ ಮತ್ತೊಂದು ವಿಷಯವೇನೆಂದರೆ, ಬಿಕನೇರ್‌ನಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಗನ್‍ಪೌಡರ್ ಬಳಕೆಯ ಮೇಲೆ ನಿಷೇಧವಿತ್ತು. ಆಗ ಜಾರಿಯಲ್ಲಿದ್ದ ನಿಯಮಗಳ ಪ್ರಕಾರ, ಯಾರಾದರೂ ಗನ್‍ಪೌಡರ್‌ನಿಂದ ಮಾಡಿದ ವಸ್ತುಗಳನ್ನು ಬಳಸಿದರೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಿತ್ತು. ಪಟಾಕಿಗಳನ್ನು ಸಿಡಿಸುವುದಕ್ಕೂ ಆ ಕಾಲದಲ್ಲಿ ನಿಷೇಧವಿತ್ತು.
Published by:Vasudeva M
First published: