Mughal Throne: ಷಹ ಜಹಾನ್‌ನ ಬಳಿ ಇದ್ದ ನವಿಲಿನ ಸಿಂಹಾಸನ ತಾಜ್‌ಮಹಲ್‌ಗಿಂತ ಕಾಸ್ಟ್ಲಿ!

ಇತಿಹಾಸದಲ್ಲಿ ಅತ್ಯಂತ ದುಬಾರಿ ನಿಧಿಯಾಗಿ ಪರಿಗಣಿತವಾಗಿರುವುದು ಯಾವುದಾದರೂ ಇದ್ದಲ್ಲಿ ಅದು ಮೊಘಲ್ ಚಕ್ರವರ್ತಿ ಷಹಜಹಾನ್ ಚಕ್ರವರ್ತಿಯ ನವಿಲು ಸಿಂಹಾಸ

ನವಿಲಿನ ಸಿಂಹಾಸನ

ನವಿಲಿನ ಸಿಂಹಾಸನ

  • Share this:

ಮೊಘಲ್ ಚಕ್ರವರ್ತಿ ಷಹಜಹಾನ್ ಕಲಾಭಿಮಾನಿ ಹಾಗೂ ಐಷಾರಾಮವನ್ನು ಹೆಚ್ಚು ಇಷ್ಟಪಡುತ್ತಿದ್ದನು. ಇತಿಹಾಸದಲ್ಲಿ ಅತ್ಯಂತ ದುಬಾರಿ ನಿಧಿಯಾಗಿ ಪರಿಗಣಿತವಾಗಿರುವುದು ಯಾವುದಾದರೂ ಇದ್ದಲ್ಲಿ ಅದು ಚಕ್ರವರ್ತಿಯ ನವಿಲು ಸಿಂಹಾಸವಾಗಿದೆ (Throne). ಜಿಲ್ಲೆ-ಐ-ಇಲ್ಲಾಹಿ (Zille-I-Illahi) ಅಥವಾ ಭೂಮಿಯ ಮೇಲಿನ ದೇವರ ನೆರಳು ಆತನಿಗಿರುವ ಬಿರುದುಗಳಾಗಿದ್ದು, ಈ ಬಿರುದಿಗೆ ಸರಿಹೊಂದುವಂತೆ ಆತ ಆಗ್ರಾ ಮತ್ತು ದೆಹಲಿಯ ತಮ್ಮ ಅರಮನೆಗಳಲ್ಲಿ(Palace) ಸ್ವರ್ಗದ ನೆರಳನ್ನು ಭೂಮಿಯ ಮೇಲೆ ಸೃಷ್ಟಿಸಿದನು ಎಂಬ ವದಂತಿಯಿದೆ ಹಾಗೂ ಭೂಮಿಯ ಮೇಲೆ ದೇವರ (God) ಸಿಂಹಾಸವನ್ನು ಮರುಸೃಷ್ಟಿಸಲು ನವಾಬನು ನವಿಲು ಸಿಂಹಾಸವನ್ನು ಸೃಷ್ಟಿಸಿದನು ಎಂಬ ಮಾತಿದೆ. 1,150 ಕೆಜಿ ಚಿನ್ನ ಮತ್ತು 230 ಕೆಜಿ ಅಮೂಲ್ಯ ಹರಳುಗಳಿಂದ (Crystal) ಮಾಡಲಾದ ಈ ಸಿಂಹಾಸನವು ಸುಮಾರು 5.5 ಶತಕೋಟಿ ಮೌಲ್ಯದ್ದಾಗಿದೆ.


ಸಿಂಹಾಸನದಲ್ಲಿದೆ ನವಿಲಿನ ಕೆತ್ತನೆ


ಈ ಸಿಂಹಾಸನಕ್ಕೆ ನವಿಲಿನ ಸಿಂಹಾಸನ ಎಂಬ ಹೆಸರು ಬಂದಿರುವುದು ಸಿಂಹಾಸನದ ಮೇಲ್ಭಾಗದ ಕಂಬದಲ್ಲಿನ ನವಿಲಿನ ಕೆತ್ತನೆಗಳಿಂದಾಗಿದೆ. ಸಿಂಹಾಸನವನ್ನು ತಯಾರಿಸಲು ಬರೋಬ್ಬರಿ ಏಳು ವರ್ಷಗಳು ಹಿಡಿಯಿತು. ಸಿಂಹಾಸನವು ಮುತ್ತು ವಜ್ರಖಚಿತ ಹರಳುಗಳಿಂದ ಶೋಭಿತವಾಗಿದೆ ಸಿಂಹಾಸನದ ಒಳಗಿನ ಭಾಗಗಳು ರೂಬಿ, ಗಾರ್ನೆಟ್ಸ್‌ನಂತಹ ಇತರ ರತ್ನಗಳಿಂದ ದ ಶೋಭಿತವಾಗಿವೆ.
Mughal peacock throne is costlier than taj mahal
ಮೊಘಲ್ ದೊರೆಯ ನವಿಲಿನ ಸಿಂಹಾಸನ


ಪಚ್ಚೆಗಳಿಂದ ಸಮೃದ್ಧವಾಗಿರುವ ಸಿಂಹಾಸನ

ಪಚ್ಚೆಗಳಿಂದ ಸಮೃದ್ಧವಾಗಿರುವ ಹನ್ನೆರಡು ಕಂಬಗಳು ಮೇಲ್ಛಾವಣಿಯನ್ನು ಹೊಂದಿಸಿದೆ. ಮೇಲ್ಭಾಗದಲ್ಲಿ ಗರಿಬಿಚ್ಚಿದ ಎರಡು ನವಿಲಿನ ಆಕೃತಿಗಳು ಎದುರು ಬದುರಾಗಿ ನಿಂತಿವೆ. ಇವುಗಳ ನಡುವೆ ರತ್ನ, ವಜ್ರ, ಪಚ್ಚೆ ಹಾಗೂ ಮುತ್ತುಗಳ ಮರದ ಆಕೃತಿಯನ್ನು ನೋಡಬಹುದು. ಪ್ರತಿಯೊಂದು ನವಿಲು ತನ್ನ ಕೊಕ್ಕಿನಲ್ಲಿ ಅತ್ಯಾಕರ್ಷಕ ಮಾಣಿಕ್ಯವನ್ನು ಹೊಂದಿದ್ದು ಇದರಿಂದ ನವಿಲು ಅಗ್ನಿ ಸೇವಿಸುವ ಹಕ್ಕಿಯಾಗಿ ದೈತ್ಯವಾಗಿ ಕಾಣುತ್ತದೆ. ಪಚ್ಚೆಗಳು ವಜ್ರಕ್ಕಿಂತ 20 ಪಟ್ಟು ಅಪರೂಪದ ಸಂಪತ್ತಾಗಿದ್ದು ತುಂಬಾ ದುಬಾರಿ ಕೂಡ. ನವಾಬನ ಬಳಿ ವೈವಿಧ್ಯಮಯ ಪಚ್ಚೆಗಳ ಸಂಗ್ರಹವೇ ಇತ್ತು.


ಸಿಂಹಾಸನದಲ್ಲಿತ್ತು ಕೊಹಿನೂರ್ ವಜ್ರ


ಸಿಂಹಾಸನದಲ್ಲಿದ್ದ ವಜ್ರಗಳು ಹೆಚ್ಚು ಖ್ಯಾತವಾಗಿದ್ದವು. ವಿಶ್ವದಲ್ಲಿಯೇ ಹೆಚ್ಚು ಖ್ಯಾತಿಯ ಅಂತೆಯೇ ಹೆಸರು ಹೊಂದಿರುವ ಕೊಹಿನೂರ್ ವಜ್ರ ಸಿಂಹಾಸನದಲ್ಲಿತ್ತು. ಈಗ ಇರುವುದಕ್ಕಿಂತಲೂ ಈ ವಜ್ರವು ತುಂಬಾ ಭಾರವಾಗಿತ್ತು ನಂತರ ಬ್ರಿಟೀಷರು ಅದನ್ನು ಕತ್ತರಿಸಿದರು ಎಂದು ಹೇಳಲಾಗುತ್ತಿದೆ. ನವಿಲಿನ ಕಣ್ಣಿನಲ್ಲಿ ಈ ವಜ್ರವನ್ನು ಅಳವಡಿಸಲಾಗಿತ್ತು.ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಶಹಜಹಾನ್‌ನ ಮಗ ಔರಂಗಜೇಬನು 1658 ರಲ್ಲಿ ಸಿಂಹಾಸನವನ್ನು ಆಕ್ರಮಿಸಿಕೊಂಡನು. ದೆಹಲಿಯನ್ನು 1739 ರಲ್ಲಿ ನಾದಿರ್ ಶಾ ಆಕ್ರಮಿಸಿಕೊಳ್ಳುವವರೆಗೆ ಈ ಸಿಂಹಾಸನವು ಮೋಘಲರ ಕೈಯಲ್ಲಿ ಸುರಕ್ಷಿತವಾಗಿತ್ತು.


ಇದನ್ನೂ ಓದಿ: ರಂಗೇರಿದೆ ಮೈಸೂರು ದಸರಾ ಸಡಗರ; ಈ ಬಾರಿ ಇಂಗ್ಲಿಷ್ ನಲ್ಲಿ ಆಹ್ವಾನ ಪತ್ರಿಕೆ

ಪರ್ಷಿಯನ್ನರ ಕೈ ಸೇರಿದ ಸಿಂಹಾಸನ


ಪರ್ಷಿಯನ್ ದೊರೆಯಾದ ನಾದಿರ್ ಶಾನು ಅಧಿಕಾರದ ಹಸಿವನ್ನು ಹೊಂದಿದ್ದನು. ಔರಂಗಜೇಬನ ಉತ್ತರಾಧಿಕಾರಿಯನ್ನು ಸೋಲಿಸುವ ಮೂಲಕ ತನಗೆ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ದರೋಡೆಯನ್ನು ನಾದಿರ್ ಶಾ ಮಾಡುತ್ತಾನೆ. ನವಿಲಿನ ಸಿಂಹಾಸನವನ್ನು ಕೂಡ ನಾದಿರ್ ಶಾ ವಶಪಡಿಸಿಕೊಳ್ಳುತ್ತಾನೆ. ಅಲ್ಲಿಂದೀಚೆಗೆ ಸಿಂಹಾಸನವು ಪರ್ಶಿಯನ್ನರ ಕೈ ಸೇರಿತು.


ಇದನ್ನೂ ಓದಿ: ರಿಯಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಕಬ್ಜ ಗಿಫ್ಟ್! ಖಡಕ್ ಟೀಸರ್‌ಗೆ ಉಪ್ಪಿ ಫ್ಯಾನ್ಸ್ ಫಿದಾ

ಬ್ರಿಟೀಷರ ಕೈ ಸೇರಿದ ವಜ್ರ

ವಶಪಡಿಸಿಕೊಂಡ ಸಿಂಹಾನದ ಮೇಲೆ ಬಹಳಷ್ಟು ಸಮಯ ಕುಳಿತುಕೊಳ್ಳುವ ಭಾಗ್ಯ ನಾದಿರ್ ಶಾನಿಗೆ ದೊರೆಯಲಿಲ್ಲ. ಯುದ್ಧದಲ್ಲಿ ಆತನನ್ನು ಸೋಲಿಸಿದ ಕುರ್ದೀಸ್‌ಗಳು ಸಿಂಹಾಸನವನ್ನು ವಶಪಡಿಸಿಕೊಂಡರು. ಮೂಲ ಸಿಂಹಾಸನದಲ್ಲಿದ್ದ ಅದೇ ವೈಭವೋಪೇತ ಹರಳುಗಳನ್ನು ಪಚ್ಚೆಗಳನ್ನು ಈ ಸಿಂಹಾಸನದ ತಯಾರಿಯಲ್ಲಿ ಬಳಸಿಕೊಂಡರು. ನಕಲಿ ಸಿಂಹಾಸನದಲ್ಲಿ ಅಳಿದುಳಿದಿರುವ ವಜ್ರ ವೈಢೂರ್ಯಗಳು, ಪಚ್ಚೆ, ಮುತ್ತು, ರತ್ನಗಳು ಇರಾನ್‌ನ ಸೆಂಟ್ರಲ್ ಬ್ಯಾಂಕ್‌ನಲ್ಲಿದೆ. ಕೊಹಿನೂರ್ ಹಾಗೂ ತೈಮೂರ್ ವಜ್ರವು ಬ್ರಿಟೀಷರ ಬಳಿ ಇದೆ. ತನ್ನನ್ನು ತಾನು ರಾಜ ಸೊಲೊಮನ್ ಆಗಿ ಕರೆಯಿಸಿಕೊಳ್ಳಬೇಕೆಂಬ ಷಹಜಹಾನ್‌ನ ಕನಸು ಕನಸಾಗಿಯೇ ಉಳಿಯಿತು.

First published: